ನಮ್ಮ ಮೆಟ್ರೋ ಗ್ರೀನ್ ಲೈನ್ (new green line metro train) ಪ್ರಯಾಣಿಕರಿಗೆ ಗುಡ್ ನ್ಯೂಸ್
ಆಗಸ್ಟ್ ನಿಂದ ಗ್ರೀನ್ ಮಾರ್ಗದಲ್ಲಿ 3 ಹೊಸ ಮೆಟ್ರೋ ರೈಲುಗಳ ಸಂಚಾರ
ರಶ್ ಹಾಗೂ ಪ್ರಯಾಣಿಕರ ದಟ್ಟಣೆಯನ್ನು ನಿಯಂತ್ರಿಸಲು ಪ್ಲಾನ್
Bengaluru: ಬೆಂಗಳೂರು ಮೆಟ್ರೋ ಪ್ರಯಾಣಿಕರಿಗೆ ಶೀಘ್ರದಲ್ಲೇ ಮತ್ತೊಂದು ಸಂತಸದ ಸುದ್ದಿ (new green line metro train) ಸಿಗಲಿದ್ದು, ಹಸಿರು ಮಾರ್ಗದಲ್ಲಿ (ಗ್ರೀನ್ ಲೈನ್) ಸಂಚಾರದ ವೇಳೆ ಎದುರಾಗುತ್ತಿರುವ ಜನದಟ್ಟಣೆಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್‌ಸಿಎಲ್) ಮಹತ್ವದ ಕ್ರಮ ಕೈಗೊಂಡಿದೆ.
ಆಗಸ್ಟ್ ವೇಳೆಗೆ ಆರು ಬೋಗಿಗಳ ಮೂರು ಹೊಸ ಅತ್ಯಾಧುನಿಕ ಮೆಟ್ರೋ ರೈಲುಗಳನ್ನು ಸಾರ್ವಜನಿಕ ಸೇವೆಗೆ ಸೇರಿಸುವ ಸಿದ್ಧತೆ ನಡೆಯುತ್ತಿದೆ.

ಪ್ರತಿದಿನ ಲಕ್ಷಾಂತರ ಪ್ರಯಾಣಿಕರು ಬಳಸುವ ಗ್ರೀನ್ ಲೈನ್‌ನಲ್ಲಿ (Green Line) ಪೀಕ್ ಅವಧಿಯಲ್ಲಿ ಉಂಟಾಗುವ ನೂಕುನುಗ್ಗಲು ಕಡಿಮೆ ಮಾಡುವುದು ಮತ್ತು ರೈಲುಗಳ ಸಂಚಾರವನ್ನು
ಮತ್ತಷ್ಟು ಸುಗಮಗೊಳಿಸುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ. ಹೊಸ ರೈಲುಗಳ ಸೇರ್ಪಡೆಯಿಂದ ಪ್ರಯಾಣಿಕರಿಗೆ ಹೆಚ್ಚು ಆರಾಮದಾಯಕ ಹಾಗೂ ವೇಗವಾದ ಸೇವೆ
ದೊರೆಯುವ ನಿರೀಕ್ಷೆಯಿದೆ. ನಗರದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಮೆಟ್ರೋ ಬಳಕೆಯನ್ನು ಗಮನದಲ್ಲಿಟ್ಟುಕೊಂಡು ಈ ಕ್ರಮವನ್ನು ಬಿಎಂಆರ್‌ಸಿಎಲ್ ಕೈಗೊಂಡಿದೆ.
ಈ ಹೊಸ ರೈಲುಗಳನ್ನು ಚೀನಾ ರೈಲ್ವೇ ರೋಲಿಂಗ್ ಸ್ಟಾಕ್ ಕಾರ್ಪೊರೇಷನ್ (CRRC) ಮತ್ತು ತಿತಾಗಢ್ ರೈಲ್ ಸಿಸ್ಟಮ್ಸ್ ಲಿಮಿಟೆಡ್ (TRSL) ಸಹಭಾಗಿತ್ವದಲ್ಲಿ ನಿರ್ಮಿಸಲಾಗಿದೆ.
ಮೊದಲ ಮಾದರಿ ರೈಲು ಹಲವು ತಾಂತ್ರಿಕ ಹಾಗೂ ಆಡಳಿತಾತ್ಮಕ ಕಾರಣಗಳಿಂದ (new green line metro train) ವಿಳಂಬವಾಗಿ ಬೆಂಗಳೂರಿಗೆ ತಲುಪಿದ್ದರೂ, ಇದೀಗ ಅದರ
ಪರೀಕ್ಷಾ ಪ್ರಕ್ರಿಯೆಗಳು ಬಹುತೇಕ ಪೂರ್ಣಗೊಂಡಿವೆ. ಆರಂಭದಲ್ಲಿ ಈ ರೈಲುಗಳನ್ನು ಪರ್ಪಲ್ ಲೈನ್‌ನಲ್ಲಿ (Purple Line) ಕಾರ್ಯಾಚರಣೆಗೆ ತರಲು ಉದ್ದೇಶಿಸಲಾಗಿತ್ತು.
ಆದರೆ ಇತ್ತೀಚಿನ ಕಾರ್ಯತಂತ್ರದ ಬದಲಾವಣೆಯ ಹಿನ್ನೆಲೆಯಲ್ಲಿ, ಗ್ರೀನ್ ಲೈನ್‌ನಲ್ಲಿ ಉಂಟಾಗುತ್ತಿರುವ ಹೆಚ್ಚಿನ ಪ್ರಯಾಣಿಕರ ಒತ್ತಡವನ್ನು ಗಮನಿಸಿ, ಮೊದಲ ಹಂತದಲ್ಲೇ ಅವುಗಳನ್ನು ಹಸಿರು ಮಾರ್ಗಕ್ಕೆ ನಿಯೋಜಿಸಲು ಬಿಎಂಆರ್‌ಸಿಎಲ್ ನಿರ್ಧರಿಸಿದೆ.
ಇದರಿಂದ ಗ್ರೀನ್ ಲೈನ್‌ನ ಸೇವಾ ಸಾಮರ್ಥ್ಯ ಹೆಚ್ಚಳವಾಗಲಿದ್ದು, ರೈಲುಗಳ ನಡುವಿನ ಅಂತರವೂ ಕಡಿಮೆಯಾಗುವ ಸಾಧ್ಯತೆಯಿದೆ.
ಹೊಸ ರೈಲುಗಳನ್ನು ಸಾರ್ವಜನಿಕ ಸೇವೆಗೆ ಬಿಡುಗಡೆ ಮಾಡುವ ಮೊದಲು ಕಡ್ಡಾಯವಾಗಿ ಹಲವು ಹಂತದ ಸುರಕ್ಷತಾ ಮತ್ತು ತಾಂತ್ರಿಕ ಪರೀಕ್ಷೆಗಳನ್ನು ಪೂರ್ಣಗೊಳಿಸಬೇಕಾಗುತ್ತದೆ.
ಗ್ರೀನ್ ಲೈನ್ ಈಗಾಗಲೇ ಕಾರ್ಯಾಚರಣೆಯಲ್ಲಿರುವುದರಿಂದ, ಸಾಮಾನ್ಯ ಮೆಟ್ರೋ ಸೇವೆ ಮುಗಿದ ನಂತರ ತಡರಾತ್ರಿ ವೇಳೆಯಲ್ಲೇ ಪರೀಕ್ಷಾ ಓಟ ನಡೆಸಬೇಕಾಗಿತ್ತು.
ಇದರಿಂದ ಪರೀಕ್ಷಾ ಕಾರ್ಯಕ್ಕೆ ಸಮಯದ ಮಿತಿ ಎದುರಾದರೂ, ಅಧಿಕಾರಿಗಳ ಪ್ರಕಾರ ಬಹುತೇಕ ಎಲ್ಲಾ ಪ್ರಮುಖ ಪರೀಕ್ಷೆಗಳು ಯಶಸ್ವಿಯಾಗಿ ಪೂರ್ಣಗೊಂಡಿವೆ.
ಈಗಾಗಲೇ ಪ್ರೊಟೊಟೈಪ್ ಸೇರಿ ಮೂರು ಅತ್ಯಾಧುನಿಕ ಡಿಟಿಜಿ (Distance-To-Go) ತಂತ್ರಜ್ಞಾನ ಹೊಂದಿರುವ ರೈಲುಗಳನ್ನು ಬಿಎಂಆರ್‌ಸಿಎಲ್ ಸ್ವೀಕರಿಸಿದೆ.
ರೈಲುಗಳ ಕಾರ್ಯಕ್ಷಮತೆ, ಸಿಗ್ನಲಿಂಗ್ ವ್ಯವಸ್ಥೆ, ಸುರಕ್ಷತಾ ಮಾನದಂಡಗಳು ಹಾಗೂ ಇತರೆ ತಾಂತ್ರಿಕ ಅಂಶಗಳನ್ನು ಸಮರ್ಪಕವಾಗಿ ಪರಿಶೀಲಿಸಲಾಗಿದ್ದು, ವಾಣಿಜ್ಯ ಸೇವೆಗೆ ಅಗತ್ಯವಾದ ಬಹುತೇಕ ಅನುಮೋದನೆಗಳು ದೊರೆತಿವೆ.
ವಾಣಿಜ್ಯ ಕಾರ್ಯಾಚರಣೆಗೆ ಮುನ್ನ ರೈಲುಗಳು 37ಕ್ಕೂ ಹೆಚ್ಚು ಸುರಕ್ಷತಾ ಅನುಮತಿಗಳನ್ನು ಪಡೆಯುವುದು ಕಡ್ಡಾಯವಾಗಿದೆ. ಈ ಪೈಕಿ ರೋಲಿಂಗ್ ಸ್ಟಾಕ್ ಅನುಮೋದನೆ, ಸಿಗ್ನಲಿಂಗ್ ಇಂಟಿಗ್ರೇಷನ್ ಪರೀಕ್ಷೆ ಸೇರಿದಂತೆ ಪ್ರಮುಖ ಹಂತಗಳು ಯಶಸ್ವಿಯಾಗಿ ಪೂರ್ಣಗೊಂಡಿವೆ.
ಇದೀಗ ಮೆಟ್ರೋ ರೈಲ್ವೆ ಸುರಕ್ಷತಾ ಆಯುಕ್ತರ (CMRS) ಅಂತಿಮ ಪರಿಶೀಲನೆ ಮತ್ತು ಅನುಮೋದನೆ ಮಾತ್ರ ಬಾಕಿಯಿದೆ. ಈ ಪ್ರಕ್ರಿಯೆಯೂ ಯಶಸ್ವಿಯಾಗಿ ಪೂರ್ಣಗೊಂಡರೆ, ಆಗಸ್ಟ್ ತಿಂಗಳಲ್ಲೇ ಮೂರು ಹೊಸ ರೈಲುಗಳು ಪ್ರಯಾಣಿಕರ ಸೇವೆಗೆ ಲಭ್ಯವಾಗಲಿವೆ.
ಹೊಸ ರೈಲುಗಳ ಸೇರ್ಪಡೆಯಿಂದ ಪೀಕ್ ಅವಧಿಯಲ್ಲಿ ಹೆಚ್ಚಿನ ಸಂಖ್ಯೆಯ ರೈಲುಗಳನ್ನು ಸಂಚಾರಕ್ಕೆ ಇಳಿಸಲು ಸಾಧ್ಯವಾಗಲಿದ್ದು, ನಿಲ್ದಾಣಗಳಲ್ಲಿ ಉಂಟಾಗುವ ದಟ್ಟಣೆ ಮತ್ತು ನಿರೀಕ್ಷೆಯ ಸಮಯ ಕಡಿಮೆಯಾಗುವ ನಿರೀಕ್ಷೆಯಿದೆ.
ಬಿಎಂಆರ್‌ಸಿಎಲ್ ಒಟ್ಟು 23 ಹೊಸ ಸಿಆರ್‌ಆರ್‌ಸಿ–ತಿತಾಗಢ್ ರೈಲುಗಳನ್ನು ಗ್ರೀನ್ ಲೈನ್‌ಗೆ ಮೀಸಲಿಡುವ ಯೋಜನೆ ರೂಪಿಸಿದೆ. ಪ್ರಸ್ತುತ ಮೂರು ರೈಲುಗಳು ಸಿದ್ಧವಾಗಿದ್ದು, ಉಳಿದ ರೈಲುಗಳ ನಿರ್ಮಾಣ ಕಾರ್ಯ ಪಶ್ಚಿಮ ಬಂಗಾಳದ ಉತ್ತರಪಾಡಾ ಘಟಕದಲ್ಲಿ ವೇಗವಾಗಿ ನಡೆಯುತ್ತಿದೆ.
ಈ ಹೊಸ ರೈಲುಗಳು ಹಸಿರು ಮಾರ್ಗದಲ್ಲಿ ಕಾರ್ಯಾಚರಣೆ ಆರಂಭಿಸಿದ ಬಳಿಕ, ಈಗ ಗ್ರೀನ್ ಲೈನ್‌ನಲ್ಲಿ ಓಡುತ್ತಿರುವ ಕೆಲವು ಹಳೆಯ ರೈಲುಗಳನ್ನು ಪರ್ಪಲ್ ಲೈನ್‌ಗೆ ವರ್ಗಾಯಿಸಲಾಗುತ್ತದೆ.
ಇದರಿಂದ ಬೆಂಗಳೂರು ಮೆಟ್ರೋದ ಅತ್ಯಂತ ಬ್ಯುಸಿ ಮಾರ್ಗವಾದ ಪರ್ಪಲ್ ಲೈನ್‌ನಲ್ಲೂ ರೈಲುಗಳ ಸಂಖ್ಯೆ ಹೆಚ್ಚಳವಾಗಲಿದ್ದು, ಎರಡೂ ಮಾರ್ಗಗಳ ಪ್ರಯಾಣಿಕರಿಗೆ ಸಮಾನವಾಗಿ ಅನುಕೂಲವಾಗಲಿದೆ.
ನಗರದಲ್ಲಿ ಮೆಟ್ರೋ ಪ್ರಯಾಣಿಕರ ಸಂಖ್ಯೆ ನಿರಂತರವಾಗಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ, ಈ ಹೊಸ ರೈಲುಗಳ ಸೇರ್ಪಡೆ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸುವ ಮಹತ್ವದ ಹೆಜ್ಜೆಯಾಗಿ ಪರಿಗಣಿಸಲಾಗುತ್ತಿದೆ.
ಇದನ್ನು ಓದಿ : https://vijayatimes.com/misuse-of-government-vehicles/