- ಅಮೆರಿಕದ ಸುಂಕ ಆಘಾತದ ನಡುವೆ ಕೈ ಚಾಚಿದ ಚೀನಾ
- ಭಾರತೀಯ ಔಷಧ ವಲಯಕ್ಕೆ ಹೊಸ ಭರವಸೆ
- ಮುಂದಿನ ದಿನಗಳಲ್ಲಿ ಹೊಸ ಉದ್ಯೋಗ ಮತ್ತು ಹೂಡಿಕೆಗಳ ನಿರೀಕ್ಷೆ
New delhi: ಕೆಲ ದಿನಗಳ ಹಿಂದಷ್ಟೇ ಅಮೆರಿಕ ತನ್ನ ಉದ್ದಟತನದಿಂದಾಗಿ ಭಾರತದಿಂದ ಆಮದು ಮಾಡುವ ಔಷಧಗಳ(medicine) ಮೇಲೆ ನೇರವಾಗಿ ಶೇ.100ರಷ್ಟು ಸುಂಕವನ್ನು ವಿಧಿಸಿದೆ.
ಇದರ ಪರಿಣಾಮವಾಗಿ ಭಾರತೀಯ ಔಷಧ ಮಾರುಕಟ್ಟೆಗೆ(Indian drug market) ದೊಡ್ಡ ಹೊಡೆತ ಬಿದ್ದರೂ, ಇದೇ ಸಂದರ್ಭದಲ್ಲಿ ಚೀನಾ ಕೈಚಾಚಿದ್ದು ಭಾರತದ ಔಷಧ ವಲಯಕ್ಕೆ ಹೊಸ ಆಶಾಕಿರಣವನ್ನು ತೋರಿಸಿದೆ.
ಇತ್ತೀಚೆಗೆ ಚೀನಾ ಸರ್ಕಾರ(Chinese government) ಭಾರತೀಯ ಔಷಧಗಳ ಮೇಲಿನ 30% ಆಮದು ಸುಂಕವನ್ನು ಸಂಪೂರ್ಣವಾಗಿ ಶೂನ್ಯಗೊಳಿಸಿದೆ.
ಅಂದರೆ, ಭಾರತೀಯ ಕಂಪನಿಗಳು ಇದೀಗ ಯಾವುದೇ ಕಸ್ಟಮ್ಸ್ ಸುಂಕವಿಲ್ಲದೆ ಚೀನಾದ ಮಾರುಕಟ್ಟೆಗೆ ತಮ್ಮ ಉತ್ಪನ್ನಗಳನ್ನು ರಫ್ತು ಮಾಡಬಹುದು. ಈ ನಿರ್ಧಾರವು ಭಾರತಕ್ಕೆ ಆರ್ಥಿಕವಾಗಿ ಮಾತ್ರವಲ್ಲ,
ಜಾಗತಿಕ ಆರೋಗ್ಯ ಪೂರೈಕೆ ಸರಪಳಿಯಲ್ಲಿ ತನ್ನ ಸ್ಥಾನವನ್ನು ಬಲಪಡಿಸಲು ಸಹಾಯಕವಾಗಲಿದೆ ಎಂಬುದರಲ್ಲಿ ತಜ್ಞರ ಅಭಿಪ್ರಾಯವಾಗಿದೆ.
ಇನ್ನು ಭಾರತವು “ವಿಶ್ವದ ಔಷಧಾಲಯ” ಎಂದು ಕರೆಯಲ್ಪಡುವುದು ಅಸಾಧಾರಣ ವಿಷಯವಲ್ಲ. ಏಕೆಂದರೆ ಭಾರತದಿಂದ ಹೊರಬರುವ ಜೆನೆರಿಕ್ ಔಷಧಿಗಳು(Generic medicine),

ಲಸಿಕೆಗಳು ಮತ್ತು ಕಡಿಮೆ ಬೆಲೆಯ ಆರೋಗ್ಯ ಉತ್ಪನ್ನಗಳು ವಿಶ್ವಾದ್ಯಂತ ಕೋಟಿ ಜನರಿಗೆ ಪ್ರಾಣಬಳಕೆಯಾಗಿವೆ. ಆದರೆ, ಅಮೆರಿಕ ತನ್ನ ದೇಶೀಯ ಔಷಧ ಕಂಪನಿಗಳಿಗೆ ಬೆಂಬಲ ನೀಡುವ
ಉದ್ದೇಶದಿಂದ ಭಾರತೀಯ ಆಮದು ಉತ್ಪನ್ನಗಳ ಮೇಲೆ ಶೇ.100 ಸುಂಕ ಹೇರಿದೆ. ಇದರ ಪರಿಣಾಮವಾಗಿ ಅಮೆರಿಕ ಮಾರುಕಟ್ಟೆ ಭಾರತೀಯ ಕಂಪನಿಗಳಿಗೆ ಬಹುತೇಕ ಮುಚ್ಚಲ್ಪಟ್ಟಂತಾಗಿದೆ.
ಅಮೆರಿಕ(America) ಮಾರುಕಟ್ಟೆ ಕುಸಿಯುತ್ತಿರುವ ವೇಳೆಯಲ್ಲಿ, ಚೀನಾದ ನಿರ್ಧಾರ ಭಾರತದ ಕೈ ಹಿಡಿದಂತಾಗಿದೆ. ತಜ್ಞರ ಪ್ರಕಾರ, ಒಂದು ಬಾಗಿಲು ಮುಚ್ಚಿದಾಗ ಇನ್ನೊಂದು ಬಾಗಿಲು ತೆರೆದೀತು ಎಂಬ ನಾಣ್ಣುಡಿ ಇಲ್ಲಿ ನಿಜವಾಗಿದೆ.
ಇನ್ನು ಇಲ್ಲಿಯ ತನಕ ಚೀನಾದಲ್ಲಿ ಭಾರತೀಯ ಔಷಧಗಳಿಗೆ 30% ಆಮದು ಸುಂಕ ಇದ್ದುದರಿಂದ ಅಲ್ಲಿ ಉತ್ಪನ್ನಗಳನ್ನು ನೆಲೆಗೊಳಿಸುವುದು ಕಷ್ಟಕರವಾಗಿತ್ತು.
ಬೆಲೆ ಹೆಚ್ಚು ಇರುವುದರಿಂದ ಚೀನಾದ ಸ್ಥಳೀಯ ಉತ್ಪಾದಕರ ಜೊತೆ ಸ್ಪರ್ಧಿಸಲು ಭಾರತೀಯ ಕಂಪನಿಗಳಿಗೆ ಸಾಧ್ಯವಾಗುತ್ತಿರಲಿಲ್ಲ. ಆದರೆ ಈಗ ಶೂನ್ಯ ಸುಂಕದ ನೀತಿಯನ್ನು ಅನುಸರಿಸಿದ ಪರಿಣಾಮ,
ಭಾರತೀಯ ಕಂಪನಿಗಳು ತಮ್ಮ ಉತ್ಪನ್ನಗಳನ್ನು ನೇರವಾಗಿ ಮಾರುಕಟ್ಟೆಗೆ ತಲುಪಿಸಬಹುದು.ಚೀನಾದ ಮಾರುಕಟ್ಟೆ ವಿಶ್ವದ ಅತಿ ದೊಡ್ಡ ಆರೋಗ್ಯ ಉತ್ಪನ್ನ ಬಳಕೆದಾರರಲ್ಲಿ ಒಂದು.
ಅಲ್ಲಿ ಕಡಿಮೆ ಬೆಲೆಯ ಹಾಗೂ ವಿಶ್ವಾಸಾರ್ಹ ಔಷಧಗಳಿಗೆ ಅಪಾರ ಬೇಡಿಕೆ ಇದೆ. ಇದರಿಂದಾಗಿ ಭಾರತೀಯ ಕಂಪನಿಗಳು ಮುಂದಿನ ವರ್ಷಗಳಲ್ಲಿ ಶತಕೋಟಿ ಡಾಲರ್‌ಗಳಷ್ಟು ರಫ್ತು ಮಾಡುವ ಸಾಧ್ಯತೆಗಳಿವೆ.
ಇಲ್ಲಿಯವರೆಗೆ ಭಾರತ-ಚೀನಾ ವ್ಯಾಪಾರವು ಚೀನಾದ ಪರವಾಗಿ ಹೆಚ್ಚು ಇತ್ತು. ಭಾರತ ಚೀನಾದಿಂದ ಎಲೆಕ್ಟ್ರಾನಿಕ್ಸ್, ಯಂತ್ರೋಪಕರಣಗಳು, ಮೂಲಪದಾರ್ಥಗಳನ್ನು ದೊಡ್ಡ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳುತ್ತಿತ್ತು.
ಆದರೆ ರಫ್ತು ಪ್ರಮಾಣ ಕಡಿಮೆ ಇತ್ತು. ಈಗ, ಔಷಧ ರಫ್ತಿನಿಂದ ಈ ಅಸಮತೋಲನವನ್ನು ಸರಿಪಡಿಸುವಲ್ಲಿ ಭಾರತ ಯಶಸ್ವಿಯಾಗುವ ನಿರೀಕ್ಷೆಯಿದೆ.ಉದ್ಯಮ ವಲಯದ ತಜ್ಞರ ಪ್ರಕಾರ,
ಔಷಧ ರಫ್ತುಗಳು ಹೆಚ್ಚಾದರೆ ದೇಶದ ಕಾರ್ಪೊರೇಟ್ ಆದಾಯ, ತೆರಿಗೆ ಸಂಗ್ರಹ ಮತ್ತು ಉದ್ಯೋಗಾವಕಾಶಗಳು ಗಮನಾರ್ಹವಾಗಿ ಏರಿಕೆ ಕಾಣುತ್ತವೆ.
ಇದನ್ನು ಓದಿ : ಔಷಧ ಆಮದು ಮೇಲೆ ಶೇ.100 ಸುಂಕ ಹೇರಿದ ಡೊನಾಲ್ಡ್ ಟ್ರಂಪ್: ಭಾರತಕ್ಕೆ ನೇರ ಹೊಡೆತ
ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಉದ್ಯೋಗ ಸೃಷ್ಟಿಯಾಗುವುದರ ಜೊತೆಗೆ ಆರೋಗ್ಯ ಕ್ಷೇತ್ರದ ಹೂಡಿಕೆಗೂ ಉತ್ತೇಜನ ಸಿಗಲಿದೆ.