- ನಾಳೆ ಪ್ರಧಾನಿ ಮೋದಿ ಬೆಂಗಳೂರಿಗೆ ಆಗಮನ
- ನಾಳೆ ವಂದೇ ಮಾತರಂ ರೈಲು ಹಾಗೂ ನಮ್ಮ ಮೆಟ್ರೋ ಹಳದಿ ಮಾರ್ಗ ಉದ್ಘಾಟನೆ
- ವಾಹನ ಸಂಚಾರಕ್ಕೆಂದು ಪರ್ಯಾಯ ಮಾರ್ಗದ ಪಟ್ಟಿ ಬಿಡುಗಡೆ
Bengaluru: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಭಾನುವಾರ (ಆಗಸ್ಟ್ 10) ವಂದೇ ಭಾರತ್ (Vande Bharat) ರೈಲು ಹಾಗೂ ಯಲ್ಲೋ ಮೆಟ್ರೋ ಮಾರ್ಗ ಉದ್ಘಾಟನಾ (new Metro Line inauguration) ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬೆಂಗಳೂರಿಗೆ ಆಗಮಿಸುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಸಂಚಾರ ಪೊಲೀಸರು ನಗರದ ಕೆಲವು ಪ್ರಮುಖ ರಸ್ತೆಗಳಲ್ಲಿ ತಾತ್ಕಾಲಿಕ ಸಂಚಾರ ನಿರ್ಬಂಧ ಹಾಗೂ ಮಾರ್ಗ ಬದಲಾವಣೆಗಳನ್ನು ಜಾರಿಗೊಳಿಸಿದ್ದಾರೆ.

ಸಾರ್ವಜನಿಕರು ತಮ್ಮ ಪ್ರಯಾಣವನ್ನು ಮುಂಚಿತವಾಗಿ ಯೋಜಿಸಿಕೊಂಡು, ಸಾಧ್ಯವಾದಷ್ಟು ಸಾರ್ವಜನಿಕ ಸಾರಿಗೆ ಬಳಸುವಂತೆ ಮನವಿ ಮಾಡಲಾಗಿದೆ.
ಬೆಳಿಗ್ಗೆ 11:00 ರಿಂದ ಮಧ್ಯಾಹ್ನ 12:30ರವರೆಗೆ ಸಂಚಾರ ತಡೆ
ಮಾರೇನಹಳ್ಳಿ (Marenahalli) ಮುಖ್ಯ ರಸ್ತೆಯ ರಾಜಲಕ್ಷ್ಮೀ ಜಂಕ್ಷನ್‌ನಿಂದ (Rajalakshmi Junction) ಮಾರೇನಹಳ್ಳಿ 18ನೇ ಮುಖ್ಯರಸ್ತೆ ಹಾಗೂ ಮಾರೇನಹಳ್ಳಿ ಈಸ್ಟ್ ಎಂಡ್ ಮುಖ್ಯರಸ್ತೆ ಜಂಕ್ಷನ್‌ನಿಂದ ಆರವಿಂದ ಜಂಕ್ಷನ್‌ವರೆಗೆ ಎಲ್ಲಾ ರೀತಿಯ ವಾಹನ ಸಂಚಾರವನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ.
ಬೆಳಿಗ್ಗೆ 11:30 ರಿಂದ ಮಧ್ಯಾಹ್ನ 2:30ರವರೆಗೆ ನಿರ್ಬಂಧ
ಸಿಲ್ಕ್ ಬೋರ್ಡ್ ಕಡೆಯಿಂದ ಎಲೆಕ್ಟ್ರಾನಿಕ್ ಸಿಟಿ (Electronic City) ಎಲಿವೇಟೆಡ್ ಫ್ಲೈಓವರ್ ಮತ್ತು ಹೊಸೂರು ರಸ್ತೆ ಮೂಲಕ ನಗರಕ್ಕೆ ಬರುವ ವಾಹನಗಳು ಹಾಗೂ ಎಲೆಕ್ಟ್ರಾನಿಕ್ ಸಿಟಿ 1ನೇ ಹಂತದ ಇನ್ಫೋಸಿಸ್ ಅವೆನ್ಯೂ, ವೇಲಾಂಕಣಿ ರಸ್ತೆ, ಎಚ್.ಪಿ. ಅವೆನ್ಯೂ ರಸ್ತೆಗಳಲ್ಲಿ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಸಂಚಾರಕ್ಕೆ ಪರ್ಯಾಯ ಮಾರ್ಗಗಳು
ಮಾರೇನಹಳ್ಳಿ ರಾಜಲಕ್ಷ್ಮೀ ಜಂಕ್ಷನ್‌ನಿಂದ ಜಯದೇವ ಕಡೆಗೆ:
ಬನಶಂಕರಿ ಬಸ್ ನಿಲ್ದಾಣದಿಂದ ಸಾರಕ್ಕಿ ಮಾರ್ಕೆಟ್ ರಸ್ತೆ ಅಥವಾ 9ನೇ ಕ್ರಾಸ್ ಮೂಲಕ ಎಡಕ್ಕೆ ತಿರುಗಿ, ಐ.ಜಿ. ಸರ್ಕಲ್ ಮತ್ತು ಆರ್.ವಿ. ಡೆಂಟಲ್ ಜಂಕ್ಷನ್ ಮಾರ್ಗವಾಗಿ 8ನೇ ಮುಖ್ಯರಸ್ತೆ 9ನೇ ಕ್ರಾಸ್ ಜಂಕ್ಷನ್ ಮೂಲಕ ಜಯದೇವ ತಲುಪಬಹುದು.
ಸಾರಕ್ಕಿ ಜಂಕ್ಷನ್‌ನಿಂದ ಔಟರ್ ರಿಂಗ್‌ರೋಡ್ ಮೂಲಕ ಬನ್ನೇರುಘಟ್ಟ (Bannerghatta) ರಸ್ತೆ ತಲುಪುವ ಆಯ್ಕೆಯೂ ಇದೆ.
ನಾಲ್ಕನೇ ಮುಖ್ಯರಸ್ತೆಯಿಂದ ಜಯದೇವ ಕಡೆಗೆ:
ರಾಜಲಕ್ಷ್ಮೀ ಜಂಕ್ಷನ್‌ನಲ್ಲಿ ಬಲಕ್ಕೆ ತಿರುಗಿ, ಸಾರಕ್ಕಿ ಮುಖ್ಯರಸ್ತೆಯಿಂದ ಎಡಕ್ಕೆ ತಿರುಗಿ ಐ.ಜಿ. ಸರ್ಕಲ್, ಆರ್.ವಿ. ಡೆಂಟಲ್ (R.V Dental) ಮಾರ್ಗವಾಗಿ ಜಯದೇವ ಅಥವಾ ಬನ್ನೇರುಘಟ್ಟ ರಸ್ತೆಗೆ ಸಾಗಬಹುದು.
ಈಸ್ಟ್ ಎಂಡ್ ಸರ್ಕಲ್‌ನಿಂದ ಬನಶಂಕರಿ ಕಡೆಗೆ:
29ನೇ ಮುಖ್ಯರಸ್ತೆಯಿಂದ 28ನೇ ಮುಖ್ಯರಸ್ತೆಗೆ ಎಡಕ್ಕೆ ತಿರುಗಿ, 8ನೇ ಮುಖ್ಯರಸ್ತೆ 9ನೇ ಕ್ರಾಸ್ ಮೂಲಕ ದಾಲ್ಮಿಯಾ ಜಂಕ್ಷನ್‌ನಲ್ಲಿ ಬಲಕ್ಕೆ ತಿರುಗಿ ಔಟರ್ ರಿಂಗ್‌ರೋಡ್ ಮೂಲಕ ಸಾರಕ್ಕಿ ಜಂಕ್ಷನ್ ತಲುಪಬಹುದು. ಅಲ್ಲಿಿಂದ ಕನಕಪುರ ರಸ್ತೆ ಅಥವಾ ಬನಶಂಕರಿ ಕಡೆಗೆ ಪ್ರಯಾಣಿಸಬಹುದು.
ಹೊಸೂರು ರಸ್ತೆಯಿಂದ ಕನಕಪುರ, ಮೈಸೂರು, ತುಮಕೂರು ಕಡೆ:
ಬೊಮ್ಮಸಂದ್ರ ಜಂಕ್ಷನ್‌ನಿಂದ (Bommasandra Junction) ಜಿಗಣಿ ರಸ್ತೆ ಮುಖಾಂತರ ಬನ್ನೇರುಘಟ್ಟ ರಸ್ತೆಯ ನೈಸ್ ರಸ್ತೆ ತಲುಪಿ ಅಗತ್ಯ ದಿಕ್ಕಿಗೆ ಹೋಗಬಹುದು.
ನೈಸ್ ರಸ್ತೆಯಿಂದ ಹೊಸೂರು ಕಡೆ:
ಬನ್ನೇರುಘಟ್ಟ ಜಂಕ್ಷನ್‌ನಲ್ಲಿ ಇಳಿದು, ಜಿಗಣಿ ರಸ್ತೆ ಮುಖಾಂತರ ಬೊಮ್ಮಸಂದ್ರ ಜಂಕ್ಷನ್ ತಲುಪಬಹುದು.
ಹೊಸೂರು ರಸ್ತೆಯಿಂದ ಸರ್ಜಾಪುರ, ವರ್ತೂರು, ವೈಟ್‌ಫೀಲ್ಡ್, ಹೊಸಕೋಟೆ ಕಡೆ:
ಚಂದಾಪುರ ಜಂಕ್ಷನ್‌ನಿಂದ ದೊಮ್ಮಸಂದ್ರ ರಸ್ತೆ ಮೂಲಕ ಸರ್ಜಾಪುರ ರಸ್ತೆ ತಲುಪಬಹುದು.
ಎಚ್‌ಎಸ್‌ಆರ್ ಲೇಔಟ್, ಕೋರಮಂಗಲ,ಬೆಳ್ಳಂದೂರು, ವೈಟ್‌ಫೀಲ್ಡ್ ಭಾಗಗಳಿಂದ ಹೊಸೂರು ಕಡೆ:
ಸರ್ಜಾಪುರ ರಸ್ತೆ ಮೂಲಕ ಚಂದಾಪುರ ತಲುಪಿ ಹೊಸೂರು ಕಡೆ ಸಾಗಬಹುದು.
ಎಲೆಕ್ಟ್ರಾನಿಕ್ ಸಿಟಿ 1ನೇ ಹಂತದೊಳಗಿನ ಸಂಚಾರ:
2ನೇ ಕ್ರಾಸ್ ರಸ್ತೆ, ಶಿಕಾರಿಪಾಳ್ಯ ರಸ್ತೆ, ಹುಲಿಮಂಗಲ ರಸ್ತೆ, ಗೊಲ್ಲಹಳ್ಳಿ ರಸ್ತೆಗಳ ಮೂಲಕ ಪ್ರಯಾಣಿಸಬಹುದು.
ಇದನ್ನು ಓದಿ : ಓಲಾ, ಊಬರ್ ಮಾದರಿಯಲ್ಲೇ ಆ್ಯಂಬುಲೆನ್ಸ್ ಬುಕಿಂಗ್ ಜಾರಿ, ರಾಜ್ಯ ಸರ್ಕಾರ ಮಹತ್ವದ ನಿರ್ಧಾರ
ಸಾರ್ವಜನಿಕರಿಗೆ ಮನವಿ
ಸಂಚಾರ ಪೊಲೀಸರು ಕಾರ್ಯಕ್ರಮ ನಡೆಯುವ ಅವಧಿಯಲ್ಲಿ ಸಮಯ ವ್ಯರ್ಥವಾಗದಂತೆ ಮುಂಚಿತವಾಗಿ ಮಾರ್ಗ ಯೋಜನೆ ಮಾಡಿಕೊಳ್ಳಲು, ಅನಗತ್ಯ ಪ್ರಯಾಣಗಳನ್ನು ತಪ್ಪಿಸಲು ಹಾಗೂ ಸಾರ್ವಜನಿಕ ಸಾರಿಗೆ ಬಳಕೆ ಮಾಡಲು ಮನವಿ ಮಾಡಿದ್ದಾರೆ.