• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಪ್ರಮುಖ ಸುದ್ದಿ

ಕರ್ನಾಟಕದಲ್ಲಿ ಸ್ಟಾರ್ಟ್‌ಅಪ್‌ಗಳಿಗೆ ಹೊಸ ಅವಕಾಶ: ಮುಂದಿನ 5 ವರ್ಷದಲ್ಲಿ 25,000 ಸ್ಟಾರ್ಟಪ್​ಗಳ ಸ್ಥಾಪನೆಗೆ ಗುರಿ

Teju Srinivas by Teju Srinivas
in ಪ್ರಮುಖ ಸುದ್ದಿ, ಮಾಹಿತಿ, ರಾಜ್ಯ, ವಿಜಯ ಟೈಮ್ಸ್‌
ಕರ್ನಾಟಕದಲ್ಲಿ ಸ್ಟಾರ್ಟ್‌ಅಪ್‌ಗಳಿಗೆ ಹೊಸ ಅವಕಾಶ: ಮುಂದಿನ 5 ವರ್ಷದಲ್ಲಿ 25,000 ಸ್ಟಾರ್ಟಪ್​ಗಳ ಸ್ಥಾಪನೆಗೆ ಗುರಿ
0
SHARES
30
VIEWS
Share on FacebookShare on Twitter
  • ಬೆಂಗಳೂರು ನಗರದಲ್ಲಿ ಮುಂದಿನ ಐದು ವರ್ಷಗಳಲ್ಲಿ ಸ್ಟಾರ್ಟ್‌ಅಪ್‌ಗಳು ದ್ವಿಗುಣಗೊಳಿಸಲು ಹೊಸ ಪ್ಲಾನ್
  • ಹೊಸ ನೀತಿ ಜಾರಿಗೆ ₹518 ಕೋಟಿ ಬಜೆಟ್; ಡೀಪ್-ಟೆಕ್, AI, ಕ್ವಾಂಟಮ್ ತಂತ್ರಜ್ಞಾನಕ್ಕೆ ವಿಶೇಷ ಒತ್ತು
  • ಮಹಿಳಾ ಮತ್ತು ಗ್ರಾಮೀಣ ಉದ್ಯಮಿಗಳಿಗೆ ವಿಶೇಷ ಪ್ಯಾಕೇಜ್

Bengaluru: ಭಾರತದ ಸ್ಟಾರ್ಟ್‌ಅಪ್ (Start Up) ರಾಜಧಾನಿಯಾಗಿ ಹೆಸರು ಮಾಡಿರುವ ಬೆಂಗಳೂರು ಹೊಸಬರ ಕಂಪನಿಗಳಿಗೆ (Company) ಕೈ ಬೀಸಿ ಕರೆಯುತ್ತಿದೆ . (New opportunity for startups in Karnataka)

ಕರ್ನಾಟಕ ಸರ್ಕಾರ ಮುಂದಿನ ಐದು ವರ್ಷಗಳಲ್ಲಿ ಒಟ್ಟು 25,000 ಹೊಸ ಸ್ಟಾರ್ಟ್‌ಅಪ್‌ಗಳನ್ನು ಬೆಳೆಸಲು ನಿರ್ಧರಿಸಿದೆ.

ಈಗಾಗಲೇ ರಾಜ್ಯದಲ್ಲಿ ಸುಮಾರು 18,000 ಸ್ಟಾರ್ಟ್‌ಅಪ್‌ಗಳು ಕಾರ್ಯನಿರ್ವಹಿಸುತ್ತಿದ್ದು, ಹೊಸ ನೀತಿಯೊಂದಿಗೆ ಈ ಸಂಖ್ಯೆಯು ದ್ವಿಗುಣವಾಗುವ ನಿರೀಕ್ಷೆ ಇದೆ.

ಸರ್ಕಾರ ಮುಂದಿನ ಐದು ವರ್ಷಗಳಲ್ಲಿ  ಹೊಸ ನೀತಿಯೊಂದಿಗೆ ಹೊಸ ಸ್ಟಾರ್ಟ್‌ಅಪ್‌ಗಳನ್ನು ಬೆಳೆಸಲು ನಿರ್ಧರಿಸಿದೆ.

2025-2030ರ ಸ್ಟಾರ್ಟ್‌ಅಪ್ ನೀತಿಗೆ ನವೆಂಬರ್ (November) 6ರಂದು ರಾಜ್ಯ ಸಂಪುಟ ಅಧಿಕೃತ ಮಂಜೂರಾತಿ ನೀಡಿದ್ದು, ಇದರ ಜಾರಿಗೆ ಸರ್ಕಾರ ಸುಮಾರು ₹518.27 ಕೋಟಿ ಬಜೆಟ್ ಅನ್ನು ಮೀಸಲಿರಿಸಿದೆ. (New opportunity for startups in Karnataka)

ಈ ಯೋಜನೆಯ ಉದ್ದೇಶ ರಾಜ್ಯದ ಉದ್ಯಮಶೀಲತೆಯನ್ನು ಬಲಪಡಿಸುವುದು, ಉದ್ಯೋಗ ಸೃಷ್ಟಿಗೆ ವೇದಿಕೆ ಕಲ್ಪಿಸುವುದು ಮತ್ತು ಜಾಗತಿಕ ಹೂಡಿಕೆ ಆಕರ್ಷಿಸುವುದಾಗಿದೆ.

ಇನ್ನು ಈ ಹೊಸ ಗುರಿಯಲ್ಲಿ, 15,000 ಸ್ಟಾರ್ಟ್‌ಅಪ್‌ಗಳ ಕೇಂದ್ರ ಬೆಂಗಳೂರಾಗಿದ್ದು, ಉಳಿದ 10,000 ಸಂಸ್ಥೆಗಳು ಜಿಲ್ಲೆಗಳ ಮಟ್ಟಕ್ಕೆ ಹರಡುವಂತೆ ಯೋಜನೆ ಮಾಡಲಾಗಿದೆ.

ಸ್ಟಾರ್ಟ್‌ಅಪ್ ಚಟುವಟಿಕೆಗಳು ಬೆಂಗಳೂರು ಕೇಂದ್ರಿತವಾಗಿರುವ ಸ್ಥಿತಿ ಬದಲಾಗಬೇಕು, ಜಿಲ್ಲೆಗಳಲ್ಲೂ ತಂತ್ರಜ್ಞಾನ ಮತ್ತು ಉದ್ಯಮಶೀಲತೆ ಬೆಳೆದು ಬರಬೇಕು ಎಂಬುದು ಸರ್ಕಾರದ ಉದ್ದೇಶ.

ಇದಕ್ಕಾಗಿ ಜಿಲ್ಲಾ ಮಟ್ಟದ ಇನ್ಕ್ಯುಬೇಶನ್ ಕೇಂದ್ರಗಳು, ತಾಂತ್ರಿಕ ತರಬೇತಿ, ಹಾಗೂ ಹೊಸ ವ್ಯವಹಾರಗಳಿಗೆ ಬೇಕಾದ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲಾಗುತ್ತದೆ.

ಅದರಲ್ಲೂ ವಿಶೇಷವಾಗಿ ಡೀಪ್-ಟೆಕ್ ಕ್ಷೇತ್ರಕ್ಕೆ ಗಮನ ನೀಡಲಾಗಿದೆ. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್, ರೋಬೋಟಿಕ್ಸ್, (Robotics) ಬ್ಲಾಕ್‌ಚೈನ್, ಬಯೋ-ಟೆಕ್ (Bio-Tech) , ಕ್ವಾಂಟಂ ಕಂಪ್ಯೂಟಿಂಗ್ ಮುಂತಾದ ಹೈ-ಟೆಕ್ ಕ್ಷೇತ್ರಗಳಲ್ಲಿ ನವೀನತೆಯನ್ನು ಪ್ರೋತ್ಸಾಹಿಸಲು ಸರ್ಕಾರ ಯೋಜನೆಗಳನ್ನಿಟ್ಟಿದೆ.

ಜೊತೆಗೆ R&D ಕೇಂದ್ರಗಳು, ಎಕ್ಸಲೆನ್ಸ್ ಹಬ್‌ಗಳು (Excellence Hub) ಮತ್ತು ಸ್ಟಾರ್ಟ್‌ಅಪ್‌ಗಳಿಗೆ ಆರಂಭಿಕ ಹಂತದಲ್ಲೇ ಹಣಕಾಸು ನೆರವು ನೀಡುವ ವ್ಯವಸ್ಥೆ ಮಾಡಲಾಗುತ್ತದೆ.

ಇನ್ನೂ, ಉದ್ಯಮಗಳಿಗೆ ಅಗತ್ಯವಿರುವ ಇಂಡಸ್ಟ್ರಿ ಸರ್ಟಿಫಿಕೇಶನ್ ಸಬ್ಸಿಡಿ (Industry Certification Subsidy) , ಕೌಶಲ್ಯ ಅಭಿವೃದ್ಧಿ ತರಬೇತಿಗಳು, ಮೆಂಟರ್‌ಶಿಪ್ ಫಂಡ್ ಹಾಗೂ ಕಾನೂನು ಕ್ರಮಗಳನ್ನು ಸರಳಗೊಳಿಸುವ ಹೆಜ್ಜೆಗಳು ನೀತಿಯ ಭಾಗವಾಗಿದೆ.

ಇನ್ನು ಮಹಿಳೆಯರು ಮುನ್ನಡೆಸುವ ಸ್ಟಾರ್ಟ್‌ಅಪ್‌ಗಳು, ಗ್ರಾಮೀಣ ಪ್ರದೇಶಗಳಲ್ಲಿನ ಹೊಸ ಉದ್ಯಮಗಳು ಮತ್ತು ಸಾಮಾಜಿಕ ಪರಿಣಾಮಕಾರಿ ವ್ಯವಹಾರಗಳಿಗೂ ವಿಶೇಷ ಪ್ರೋತ್ಸಾಹ ನೀಡಲಾಗುತ್ತದೆ ಎಂಬುದು ನೀತಿಯ ಪ್ರಮುಖ ಅಂಶ.

ಈಗಾಗಲೇ ಭಾರತ ಮೂರನೇ ಅತಿದೊಡ್ಡ ಸ್ಟಾರ್ಟ್‌ಅಪ್ ಪರಿಸರ ಹೊಂದಿರುವ ದೇಶವಾಗಿದ್ದು, ಇಲ್ಲಿ ಸುಮಾರು 1.59 ಲಕ್ಷ ಸ್ಟಾರ್ಟ್‌ಅಪ್‌ಗಳು ನೋಂದಾಗಿದೆ.

ಇದರ ಪೈಕಿ ಕರ್ನಾಟಕದ ಪಾಲು ಶೇ.15. ಜೊತೆಗೆ, ಹೂಡಿಕೆ ಪಡೆದ ಸ್ಟಾರ್ಟ್‌ಅಪ್‌ಗಳಲ್ಲಿ ಬಹುಪಾಲು ಬೆಂಗಳೂರಿನಲ್ಲೇ ನೆಲೆಸಿರುವುದು ರಾಷ್ಟ್ರಮಟ್ಟದಲ್ಲಿ ದೊಡ್ಡ ಗುರುತಿನ ಸಂಗತಿ.

ಸರ್ಕಾರದ ಈ ಹೊಸ ಗುರಿ ಪೂರ್ಣಗೊಂಡರೆ, ಕರ್ನಾಟಕ ಮತ್ತೊಂದು ಬಾರಿ ದೇಶದ ಸ್ಟಾರ್ಟ್‌ಅಪ್ ಕೇಂದ್ರವೆಂಬ ಸ್ಥಾನವನ್ನು ಇನ್ನಷ್ಟು ಗಟ್ಟಿಗೊಳಿಸುವ ಸಾಧ್ಯತೆ ಇದೆ.

ಇದನ್ನು ಓದಿ : ಬೆಂಗಳೂರು ಟ್ರಾಫಿಕ್ ನಿಯಂತ್ರಣಕ್ಕೆ ಹೊಸ ಪ್ಲಾನ್‌, ಕೋಬ್ರಾ ಬೀಟ್ ತಂತ್ರ ಅಳವಡಿಕೆ
Tags: bengalurubusinessCompanystartup

Related News

ಸ್ಕ್ವಾಷ್ ವಿಶ್ವಕಪ್; ಹಾಂಗ್‌ಕಾಂಗ್‌ ವಿರುದ್ಧ ಗೆದ್ದು ಬೀಗಿದ ಭಾರತ
Sports

ಸ್ಕ್ವಾಷ್ ವಿಶ್ವಕಪ್; ಹಾಂಗ್‌ಕಾಂಗ್‌ ವಿರುದ್ಧ ಗೆದ್ದು ಬೀಗಿದ ಭಾರತ

December 15, 2025
ಬೆಂಗಳೂರು ಜನತೆಗೆ ಜಲಮಂಡಳಿಯಿಂದ ಗುಡ್ ನ್ಯೂಸ್: ಜನವರಿಯಿಂದ ಒನ್ ಟೈಮ್ ಸೆಟಲ್‌ಮೆಂಟ್ ಜಾರಿ, ಫೈನ್ ಸಂಪೂರ್ಣ ಮನ್ನಾ
ಪ್ರಮುಖ ಸುದ್ದಿ

ಬೆಂಗಳೂರು ಜನತೆಗೆ ಜಲಮಂಡಳಿಯಿಂದ ಗುಡ್ ನ್ಯೂಸ್: ಜನವರಿಯಿಂದ ಒನ್ ಟೈಮ್ ಸೆಟಲ್‌ಮೆಂಟ್ ಜಾರಿ, ಫೈನ್ ಸಂಪೂರ್ಣ ಮನ್ನಾ

December 15, 2025
ಕೋಲ್ಕತ್ತಾ ಸ್ಟೇಡಿಯಂನಲ್ಲಿ ಮೆಸ್ಸಿ ಫ್ಯಾನ್ಸ್ ದಾಂಧಲೆ:ಮೆಸ್ಸಿ ಮೇನಿಯಾ ಅವ್ಯವಸ್ಥೆಯಿಂದ ಅಂತ್ಯ
ದೇಶ-ವಿದೇಶ

ಕೋಲ್ಕತ್ತಾ ಸ್ಟೇಡಿಯಂನಲ್ಲಿ ಮೆಸ್ಸಿ ಫ್ಯಾನ್ಸ್ ದಾಂಧಲೆ:ಮೆಸ್ಸಿ ಮೇನಿಯಾ ಅವ್ಯವಸ್ಥೆಯಿಂದ ಅಂತ್ಯ

December 13, 2025
ಪ್ರತಿ ತಿಂಗಳು ಹೂಡಿಕೆ ಮಾಡುವ SIP ನ ಅಸಲಿ ಸತ್ಯ
ಪ್ರಮುಖ ಸುದ್ದಿ

ಪ್ರತಿ ತಿಂಗಳು ಹೂಡಿಕೆ ಮಾಡುವ SIP ನ ಅಸಲಿ ಸತ್ಯ

December 13, 2025

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.