Punjab : ಎಲ್ಲಾ ಸರ್ಕಾರಿ ಕಚೇರಿಗಳ (Government office works) ಕೆಲಸದ ಸಮಯದಲ್ಲಿ ಮಹತ್ವದ ಬದಲಾವಣೆಯನ್ನು ತಂದಿದ್ದು ನೌಕರರು ಇನ್ನುಮುಂದೆ 9-5 ಗಂಟೆಯ ಬದಲಾಗಿ ಇನ್ನು ಮುಂದೆ ಬೆಳಗ್ಗೆ 7.30ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಕೆಲಸ ಮಾಡಬೇಕು. ಆದರೆ ಇದು ಕರ್ನಾಟಕದಲ್ಲಿರುವ (New Order from Punjab Govt) ಸರ್ಕಾರಿ ಕಚೇರಿಗಳಿಗೆ ಅನ್ವಯವಾಗುವುದಿಲ್ಲ, ಏಕೆಂದರೆ ಇಂತಹ ಹೊಸ ಆದೇಶವನ್ನು ಹೊರಡಿಸಿರುವುದು ಪಂಜಾಬ್ ಸರ್ಕಾರ (Punjab Govt).

ಪಂಜಾಬ್ ಸರ್ಕಾರವು ವಿದ್ಯುತ್ ವೆಚ್ಚವನ್ನು ಉಳಿಸಲು ಪಂಜಾಬ್ ನ ಭಗವಂತ್ ಮಾನ್ ಆಡಳಿತದಲ್ಲಿ ರಚಿಸಿರುವ ಹೊಸ ವೇಳಾಪಟ್ಟಿಯಲ್ಲಿ,
ಅರ್ಧ ಗಂಟೆ ಊಟದ ವಿರಾಮವನ್ನು ಕೂಡ ತೆಗೆದುಹಾಕಿದ್ದಾರೆ ಆದರೆ ನೌಕರರು ಇನ್ನು ಮುಂದೆ ಮೊದಲಿಗಿಂತ ಒಂದು ಗಂಟೆ ಕಡಿಮೆ ಕೆಲಸ ಮಾಡುತ್ತಾರೆ ಎಂದು ಹೇಳಲಾಗಿದೆ.
ಈ ಹೊಸ ಕೆಲಸದ ಅವಧಿಯು ಜುಲೈ 15 ರವರೆಗೆ ಜಾರಿಯಲ್ಲಿರುತ್ತದೆ ಮತ್ತು ಇದರಿಂದಾಗಿ ಪಂಜಾಬ್ ಸರ್ಕಾರವು (New Order from Punjab Govt) ವಿದ್ಯುತ್ ವೆಚ್ಚವನ್ನು ಉಳಿಸುತ್ತದೆ
ಇದರಿಂದಾಗಿ ಸರಿ ಸುಮಾರು ಅಂದಾಜು 40-42 ಕೋಟಿ ರೂಪಾಯಿ ಉಳಿತಾಯವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದ್ದರಿಂದ ಉದ್ಯೋಗಿಗಳಿಗೆ ಹೊಸ ಕಚೇರಿ ಸಮಯವನ್ನು ಘೋಷಿಸಿದೆ.
ಇದನ್ನೂ ಓದಿ : https://vijayatimes.com/demand-to-ban-the-kerala-story/
ಈ ನಿರ್ಧಾರದ ಬಗ್ಗೆ ಮಾತನಾಡಿದ ಮುಖ್ಯಮಂತ್ರಿ ಭಗವಂತ್ ಮಾನ್ (Chief Minister Bhagwant Mann) ಈ ನಿರ್ಧಾರವನ್ನು ಕಾರ್ಯಗತಗೊಳಿಸುವ ಮೊದಲು,
ನಾವು ಎಲ್ಲಾ ಸರ್ಕಾರಿ ನೌಕರರು ಮತ್ತು ಜನರೊಂದಿಗೆ ಕೂಡ ಮಾತನಾಡಿದ್ದೇವೆ, ಹಾಗೂ ಈ ಬಗ್ಗೆ ಎಲ್ಲರೂ ಒಪ್ಪಿಗೆ ಸೂಚಿಸಿದ್ದಾರೆ. ವಿದ್ಯುತ್ ಒಂದು ದೊಡ್ಡ ಸಮಸ್ಯೆ,
ಹೊಸ ಕೆಲಸದ ಸಮಯದಲ್ಲಿ ಸರ್ಕಾರಿ ಕಚೇರಿಗಳಲ್ಲಿ ವಿದ್ಯುತ್ ಬದಲು ಗರಿಷ್ಠವಾಗಿ ಸೂರ್ಯನ ಬೆಳಕನ್ನು ಬಳಸಬಹುದಾಗಿದೆ.
ಈ ಕ್ರಮವು ವಿದ್ಯುತ್ ಉಳಿಸಲು ಸಹಾಯ ಮಾಡುತ್ತದೆ ಎಂದು ಹೇಳಿದ್ದಾರೆ. ಈಗಾಗಲೇ ಸರ್ಕಾರಿ ನೌಕರರು, ಐಎಎಸ್ (IAS), ಐಪಿಎಸ್ (IPS) ಅಧಿಕಾರಿಗಳು,
ಇದನ್ನೂ ಓದಿ : https://vijayatimes.com/photoshoot-of-divorced-woman/
ಸೂಪರಿಂಟೆಂಡೆಂಟ್‌ಗಳಿಂದ ಪ್ಯೂನ್‌ಗಳವರೆಗೂ ಪಂಜಾಬ್‌ನ ಹಲವು ಸರ್ಕಾರಿ ಕಚೇರಿಗಳಲ್ಲಿ ಬೆಳಿಗ್ಗೆ 7:30 ರ ಅವಧಿಯ ಮೊದಲೇ ತಮ್ಮ ತಮ್ಮ ಕಚೇರಿಗಳಿಗೆ ಹೋಗುತ್ತಿರುವುದು ಕಂಡುಬಂದಿದೆ.
ಅಲ್ಲದೆ ಕ್ಯಾಬಿನೆಟ್ ಮಂತ್ರಿಗಳು ಸಹ ನಿಗದಿಪಡಿಸಿದ ಸಮಯಕ್ಕಿಂತ ಮುಂಚಿತವಾಗಿ ತಮ್ಮ ಕಚೇರಿಗಳನ್ನು ತಲುಪಿದ ಕಾರಣ ಹೊಸ ಟೈಮ್‌ಲೈನ್‌ಗೆ ಅವರೂ ಕೂಡ ಬದ್ಧರಾಗಿದ್ದರು.
- ರಶ್ಮಿತಾ ಅನೀಶ್