ಮನೆ ಮುಂದೆ ವಾಹನ ನಿಲ್ಲಿಸಿದ್ರೂ (New parking rule in Bengaluru) ನೀಡಬೇಕು ಶುಲ್ಕ: ಬೆಂಗಳೂರಿನಲ್ಲಿ ಬರಲಿದೆ ಹೊಸ ಪಾರ್ಕಿಂಗ್ ರೂಲ್ಸ್
GBA ಕರಡು ನಿಯಮ ಜಾರಿಯಾದರೆ ರಸ್ತೆಬದಿ ಪಾರ್ಕಿಂಗ್ ಉಚಿತವಲ್ಲ; ಕಾರು, ಬೈಕ್‌ಗೆ ಪ್ರತ್ಯೇಕ ಶುಲ್ಕ ನಿಗದಿ
ಸಣ್ಣ ಕಾರಿಗೆ ₹15 ಸಾವಿರ, ಸೆಡಾನ್‌ಗೆ ₹20 ಸಾವಿರ, ಎಸ್‌ಯುವಿಗೆ ₹25 ಸಾವಿರ ಪಾರ್ಕಿಂಗ್ ಪರ್ಮಿಟ್ ಶುಲ್ಕದ ಪ್ರಸ್ತಾವನೆ
Bengaluru: ಬೆಂಗಳೂರು ನಗರದಲ್ಲಿ ಹೆಚ್ಚುತ್ತಿರುವ ವಾಹನ ದಟ್ಟಣೆ ಹಾಗೂ ಪಾರ್ಕಿಂಗ್ ಸಮಸ್ಯೆಗೆ (New parking rule in Bengaluru) ಕಡಿವಾಣ ಹಾಕಲು ಗ್ರೇಟರ್ ಬೆಂಗಳೂರು ಅಥಾರಿಟಿ (GBA) ಹೊಸ ಪಾರ್ಕಿಂಗ್ ನಿಯಮಗಳನ್ನು ಜಾರಿಗೆ ತರಲು ಮುಂದಾಗಿದೆ.
ಇದರ ಭಾಗವಾಗಿ ಸಿದ್ಧಪಡಿಸಿರುವ 2026ರ ಕರಡು ನಿಯಮಗಳಲ್ಲಿ ಸಾರ್ವಜನಿಕ ರಸ್ತೆಗಳಲ್ಲಿ ಉಚಿತ ಪಾರ್ಕಿಂಗ್ (Parking) ವ್ಯವಸ್ಥೆಗೆ ಅಂತ್ಯ ಹಾಡುವ ಪ್ರಸ್ತಾವನೆ ಮಾಡಲಾಗಿದೆ.

ಮನೆ ಮುಂದೆ ಅಥವಾ ರಸ್ತೆ ಬದಿಯಲ್ಲಿ ವಾಹನ ನಿಲ್ಲಿಸುವವರಿಗೂ ಶುಲ್ಕ ವಿಧಿಸುವ ವ್ಯವಸ್ಥೆಯನ್ನು (New parking rule in Bengaluru) ತರಲು ಉದ್ದೇಶಿಸಲಾಗಿದೆ. ಸದ್ಯ ಈ ನಿಯಮಗಳು ಕರಡು ಹಂತದಲ್ಲಿದ್ದು, ಸಾರ್ವಜನಿಕರಿಂದ ಆಕ್ಷೇಪಣೆ ಮತ್ತು ಸಲಹೆಗಳನ್ನು ಸ್ವೀಕರಿಸಲಾಗುತ್ತಿದೆ.
ಹೊಸ ನಿಯಮದ ಪ್ರಕಾರ ಬೆಂಗಳೂರಿನ ರಸ್ತೆಗಳನ್ನು ವಾಣಿಜ್ಯ ಸಾಂದ್ರತೆ ಮತ್ತು ಬಳಕೆಯ ಆಧಾರದ ಮೇಲೆ A, B ಹಾಗೂ C ವರ್ಗಗಳಾಗಿ ವಿಂಗಡಿಸಲಾಗುತ್ತದೆ.
A ವರ್ಗದ ಪ್ರಮುಖ ರಸ್ತೆಗಳಲ್ಲಿ ರಸ್ತೆಬದಿ ಪಾರ್ಕಿಂಗ್‌ಗೆ ಬೈಕ್‌ಗೆ ಗಂಟೆಗೆ 40 ರೂ. ಹಾಗೂ ಕಾರಿಗೆ 80 ರೂ. ಶುಲ್ಕ ನಿಗದಿಪಡಿಸುವ ಪ್ರಸ್ತಾವನೆ ಇದೆ. ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆಯಲ್ಲಿ ತಿಂಗಳಿಗೆ ಬೈಕ್‌ಗೆ 2,000 ರೂ. ಮತ್ತು ಕಾರಿಗೆ 4,000 ರೂ. ಶುಲ್ಕ ಇರಲಿದೆ.
B ವರ್ಗದ ಬಡಾವಣೆ ರಸ್ತೆಗಳಲ್ಲಿ ಗಂಟೆಗೆ ಬೈಕ್‌ಗೆ 30 ರೂ. ಮತ್ತು ಕಾರಿಗೆ 60 ರೂ., C ವರ್ಗದ ಸ್ಥಳೀಯ ವಸತಿ ರಸ್ತೆಗಳಲ್ಲಿ ಬೈಕ್‌ಗೆ 20 ರೂ. ಹಾಗೂ ಕಾರಿಗೆ 40 ರೂ. ಶುಲ್ಕ ವಿಧಿಸುವ ಪ್ರಸ್ತಾವನೆ ಮಾಡಲಾಗಿದೆ.
ಮನೆಯೊಳಗಿನ ಕಂಪೌಂಡ್ ಅಥವಾ ಗ್ಯಾರೇಜ್‌ನಲ್ಲಿ ವಾಹನ ನಿಲ್ಲಿಸಲು ಜಾಗವಿಲ್ಲದಿದ್ದರೆ ಮನೆ ಮುಂಭಾಗದ ರಸ್ತೆಯಲ್ಲಿ ಪಾರ್ಕಿಂಗ್ ಮಾಡಲು ರೆಸಿಡೆನ್ಶಿಯಲ್ ಪಾರ್ಕಿಂಗ್ ಪರ್ಮಿಟ್ ಪಡೆಯಬೇಕಾಗುತ್ತದೆ.
ಸಣ್ಣ ಕಾರುಗಳಿಗೆ ವರ್ಷಕ್ಕೆ 15 ಸಾವಿರ ರೂ., ಸೆಡಾನ್ ಕಾರುಗಳಿಗೆ 20 ಸಾವಿರ ರೂ. ಹಾಗೂ ಎಸ್‌ಯುವಿಯಂತಹ ದೊಡ್ಡ ವಾಹನಗಳಿಗೆ 25 ಸಾವಿರ ರೂ. ಶುಲ್ಕ ನಿಗದಿಪಡಿಸುವ ಪ್ರಸ್ತಾವನೆ ಇದೆ. ಇದಕ್ಕೆ ಹೆಚ್ಚುವರಿಯಾಗಿ ಆಡಳಿತಾತ್ಮಕ ಶುಲ್ಕವೂ ಇರಲಿದೆ.
ಆದರೆ ಮನೆ ಮುಂಭಾಗದ ರಸ್ತೆ ಸಾಕಷ್ಟು ಅಗಲವಾಗಿದ್ದು, ವಾಹನ ನಿಲ್ಲಿಸಿದ ನಂತರವೂ ಸಂಚಾರಕ್ಕೆ 4ರಿಂದ 6 ಮೀಟರ್ ಜಾಗ ಉಳಿದಿದ್ದರೆ ಮಾತ್ರ ಪರ್ಮಿಟ್ ನೀಡಲಾಗುತ್ತದೆ.
ಇದರ ಜೊತೆಗೆ ಪಾರ್ಕಿಂಗ್‌ಗೆ ಸಂಬಂಧಿಸಿದಂತೆ ಹಲವು ಕಟ್ಟುನಿಟ್ಟಿನ ನಿಯಮಗಳನ್ನು ಕರಡಿನಲ್ಲಿ ಪ್ರಸ್ತಾಪಿಸಲಾಗಿದೆ. ಮೆಟ್ರೋ ಮತ್ತು ಸಬ್‌ಅರ್ಬನ್ ರೈಲು ನಿಲ್ದಾಣಗಳ ಸುತ್ತ 150
ಮೀಟರ್ ವ್ಯಾಪ್ತಿಯನ್ನು ನೋ-ಪಾರ್ಕಿಂಗ್ ವಲಯವನ್ನಾಗಿ ಮಾಡುವ ಪ್ರಸ್ತಾವನೆ ಇದ್ದು, ಮುಂದಿನ ದಿನಗಳಲ್ಲಿ ಇದನ್ನು 500 ಮೀಟರ್‌ಗೆ ವಿಸ್ತರಿಸುವ ಚಿಂತನೆಯೂ ಇದೆ.
ಸಿಗ್ನಲ್‌ಗಳು ಮತ್ತು ಜಂಕ್ಷನ್‌ಗಳ ಬಳಿ 100 ಮೀಟರ್ ವ್ಯಾಪ್ತಿಯಲ್ಲಿ, ಬಸ್ ನಿಲ್ದಾಣಗಳ ಸುತ್ತ 25 ಮೀಟರ್ ವ್ಯಾಪ್ತಿಯಲ್ಲಿ ವಾಹನ ನಿಲ್ಲಿಸುವುದನ್ನು ನಿಷೇಧಿಸುವ
ಪ್ರಸ್ತಾವನೆ ಮಾಡಲಾಗಿದೆ. ಫುಟ್‌ಪಾತ್ ಮೇಲೆ ವಾಹನ ನಿಲ್ಲಿಸಿದರೆ ಕಾರಿಗೆ 1,000 ರೂ. ಹಾಗೂ ಬೈಕ್‌ಗೆ 600 ರೂ. ದಂಡ ವಿಧಿಸುವ ನಿಯಮವೂ ಕರಡಿನಲ್ಲಿದೆ.
ಇದೇ ವೇಳೆ ನಗರದ ಖಾಲಿ ನಿವೇಶನಗಳನ್ನು ಪಾರ್ಕಿಂಗ್ ತಾಣಗಳಾಗಿ ಬಳಸಲು ಪ್ರೋತ್ಸಾಹ ನೀಡುವ ಪ್ರಸ್ತಾವನೆಯೂ ಇದೆ. ಮಲ್ಟಿ ಲೆವೆಲ್ ಅಥವಾ ಮೆಕ್ಯಾನೈಸ್ಡ್ ಪಾರ್ಕಿಂಗ್
ವ್ಯವಸ್ಥೆಯಲ್ಲಿ 30ರಿಂದ 200 ಕಾರುಗಳ ಸಾಮರ್ಥ್ಯ ಹೊಂದಿರುವ ಜಾಗಗಳಿಗೆ ಆಸ್ತಿ ತೆರಿಗೆ ಮತ್ತು ಸರ್ವಿಸ್ ಚಾರ್ಜ್‌ನಲ್ಲಿ ಸಂಪೂರ್ಣ ವಿನಾಯಿತಿ ನೀಡುವ ಪ್ರಸ್ತಾವನೆ ಮಾಡಲಾಗಿದೆ.
ಕನಿಷ್ಠ 15 ಕಾರುಗಳನ್ನು ನಿಲ್ಲಿಸುವ ಸಾಮರ್ಥ್ಯವಿರುವ ಸಾಮಾನ್ಯ ಸರ್ಫೇಸ್ ಪಾರ್ಕಿಂಗ್‌ಗೆ (Surface parking) ಶೇ.50ರಷ್ಟು ಆಸ್ತಿ ತೆರಿಗೆ ವಿನಾಯಿತಿ ಸಿಗಲಿದೆ.
ಈ ಕರಡು ನಿಯಮಗಳು ಜಾರಿಗೆ ಬರುವ ಮುನ್ನ ಸಾರ್ವಜನಿಕರಿಗೆ ಆಕ್ಷೇಪಣೆ ಹಾಗೂ ಸಲಹೆ ಸಲ್ಲಿಸಲು 30 ದಿನಗಳ ಕಾಲಾವಕಾಶ ನೀಡಲಾಗಿದೆ.
ಹೀಗಾಗಿ ಬೆಂಗಳೂರಿಗರು ಹೊಸ ಪಾರ್ಕಿಂಗ್ ನಿಯಮಗಳ ಬಗ್ಗೆ ಗಮನಹರಿಸುವುದು ಅಗತ್ಯವಾಗಿದೆ.
ಇದನ್ನು ಓದಿ : https://vijayatimes.com/tunnel-collapses-in-uttarakhand/