• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಪ್ರಮುಖ ಸುದ್ದಿ

ಬೆಂಗಳೂರಿನಲ್ಲಿ ಪಾರ್ಕಿಂಗ್‌ಗೆ ಹೊಸ ನಿಯಮ: ಉಚಿತ ಪಾರ್ಕಿಂಗ್‌ಗೆ ಬ್ರೇಕ್

Teju Srinivas by Teju Srinivas
in ಪ್ರಮುಖ ಸುದ್ದಿ, ರಾಜ್ಯ, ವಿಜಯ ಟೈಮ್ಸ್‌
ಬೆಂಗಳೂರಿನಲ್ಲಿ ಪಾರ್ಕಿಂಗ್‌ಗೆ ಹೊಸ ನಿಯಮ: ಉಚಿತ ಪಾರ್ಕಿಂಗ್‌ಗೆ ಬ್ರೇಕ್
0
SHARES
13
VIEWS
Share on FacebookShare on Twitter

ಬೆಂಗಳೂರು ವಾಹನ ಸವಾರರೇ (New parking rules in Bengaluru) ಗಮನಿಸಿ: ಪಾರ್ಕಿಂಗ್‌ಗೆ ಹೊಸ ರೂಲ್ಸ್

GBA ಹೊಸ ನೀತಿಯಲ್ಲಿ ಗಂಟೆ ಲೆಕ್ಕದಲ್ಲಿ ಪಾರ್ಕಿಂಗ್ ದರ; ಮಾಸಿಕ ಪಾಸ್ ವ್ಯವಸ್ಥೆಗೂ ಪ್ರಸ್ತಾವನೆ

ಮೆಟ್ರೋ, ಬಸ್‌ ನಿಲ್ದಾಣದ ಸುತ್ತ ಪಾರ್ಕಿಂಗ್‌ಗೆ ಬ್ರೇಕ್; ರಾತ್ರಿ ವೇಳೆ ಮಾತ್ರ ಕೆಲವು ಕಡೆ ಅವಕಾಶ

Bengaluru : ನಗರದಲ್ಲಿ ಹೆಚ್ಚುತ್ತಿರುವ ವಾಹನ ದಟ್ಟಣೆ ಹಾಗೂ ಪಾರ್ಕಿಂಗ್ ಸಮಸ್ಯೆಗೆ ಕಡಿವಾಣ (New parking rules in Bengaluru) ಹಾಕುವ ಉದ್ದೇಶದಿಂದ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಹೊಸ ಪಾರ್ಕಿಂಗ್ ನೀತಿ ಜಾರಿಗೆ ತರಲು ಮುಂದಾಗಿದೆ.

ಈ ಸಂಬಂಧ ಸರ್ಕಾರ ಕರಡು ಅಧಿಸೂಚನೆ ಹೊರಡಿಸಿದ್ದು, ನಗರದ ರಸ್ತೆಗಳಲ್ಲಿ ಇನ್ನು ಮುಂದೆ ಉಚಿತವಾಗಿ ವಾಹನ ನಿಲುಗಡೆ ಮಾಡುವ ವ್ಯವಸ್ಥೆಗೆ ಬ್ರೇಕ್ ಬೀಳುವ ಸಾಧ್ಯತೆ ಇದೆ.

New parking rules in Bengaluru

ಹೊಸ ನೀತಿಯಡಿ ರಸ್ತೆಗಳನ್ನು ಎ, ಬಿ ಮತ್ತು ಸಿ ಎಂಬ ಮೂರು ವರ್ಗಗಳಾಗಿ ವಿಂಗಡಿಸಿ, ವಾಹನಗಳ ಪ್ರಕಾರ ಪಾರ್ಕಿಂಗ್ ಶುಲ್ಕ ನಿಗದಿ ಮಾಡಲು ಉದ್ದೇಶಿಸಲಾಗಿದೆ.

ಆನ್-ಸ್ಟ್ರೀಟ್ ಪಾರ್ಕಿಂಗ್, ಆಫ್-ಸ್ಟ್ರೀಟ್ ಪಾರ್ಕಿಂಗ್ ಹಾಗೂ ಮಾಸಿಕ ಪಾರ್ಕಿಂಗ್ ಪಾಸ್ (Parking Pass) ವ್ಯವಸ್ಥೆ ಜಾರಿಗೆ ಬರಲಿದೆ. ಇದರಿಂದ ಬೆಂಗಳೂರಿನಲ್ಲಿ ವಾಹನ ನಿಲುಗಡೆ ವ್ಯವಸ್ಥೆ ಮತ್ತಷ್ಟು ನಿಯಮಬದ್ಧವಾಗಲಿದೆ.

ಹೊಸ ಪಾರ್ಕಿಂಗ್ ನೀತಿಯಡಿ ನಗರದ ಹಲವು ಪ್ರಮುಖ ರಸ್ತೆಗಳಲ್ಲಿ ವಾಹನ (New parking rules in Bengaluru) ನಿಲುಗಡೆಗೆ ಸಂಪೂರ್ಣ ನಿರ್ಬಂಧ ವಿಧಿಸಲು

ಉದ್ದೇಶಿಸಲಾಗಿದೆ. ಮೆಟ್ರೋ ನಿಲ್ದಾಣಗಳು ಮತ್ತು ಬಸ್ ನಿಲ್ದಾಣಗಳ ಸುತ್ತಮುತ್ತ, ಪ್ರಮುಖ ಆರ್ಟಿರಿಯಲ್ ರಸ್ತೆಗಳಲ್ಲಿ ಪಾರ್ಕಿಂಗ್‌ಗೆ ಅವಕಾಶ ಇರುವುದಿಲ್ಲ.

ಸಿಗ್ನಲ್‌ಗಳಿಂದ 50 ಮೀಟರ್ ವ್ಯಾಪ್ತಿಯವರೆಗೆ ಹಾಗೂ ಉಪಮುಖ್ಯ ರಸ್ತೆಗಳಿಂದ 25 ಮೀಟರ್‌ವರೆಗೆ ವಾಹನ ನಿಲುಗಡೆ ಮಾಡುವಂತಿಲ್ಲ.

ಇದರಿಂದ ಸಂಚಾರ ದಟ್ಟಣೆ ಕಡಿಮೆಯಾಗುವುದರ ಜೊತೆಗೆ ರಸ್ತೆಗಳಲ್ಲಿ ವಾಹನಗಳ ಓಡಾಟ ಸುಗಮಗೊಳಿಸುವುದು ಸರ್ಕಾರದ ಉದ್ದೇಶವಾಗಿದೆ.

ಮತ್ತೊಂದೆಡೆ, ಕೆಲವು ಪ್ರದೇಶಗಳಲ್ಲಿ ರಾತ್ರಿ 8 ಗಂಟೆಯಿಂದ ಬೆಳಗ್ಗೆ 8 ಗಂಟೆಯವರೆಗೆ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸುವ ಪ್ರಸ್ತಾವನೆಯೂ ಇದೆ.

ಆಫ್-ಸ್ಟ್ರೀಟ್ ಪಾರ್ಕಿಂಗ್ ಬಳಸುವವರಿಗೆ ಮಾಸಿಕ ಪಾಸ್ ಪಡೆಯುವ ವ್ಯವಸ್ಥೆಯನ್ನೂ ಪರಿಚಯಿಸಲಾಗುತ್ತಿದೆ.

ಪಾರ್ಕಿಂಗ್ ಶುಲ್ಕದ ವಿಚಾರದಲ್ಲೂ ಹೊಸ ನೀತಿಯಲ್ಲಿ ಸ್ಪಷ್ಟ ನಿಯಮಗಳನ್ನು ರೂಪಿಸಲಾಗಿದೆ. ಎ ವರ್ಗದ ರಸ್ತೆಯಲ್ಲಿ ಆನ್-ಸ್ಟ್ರೀಟ್ (On-Street) ಪಾರ್ಕಿಂಗ್‌ಗೆ ದ್ವಿಚಕ್ರ ವಾಹನಗಳಿಗೆ ಪ್ರತಿ ಗಂಟೆಗೆ ಕನಿಷ್ಠ 40 ರೂ. ಹಾಗೂ ಲಘು ವಾಹನಗಳಿಗೆ 80 ರೂ. ಶುಲ್ಕ ನಿಗದಿಪಡಿಸುವ ಪ್ರಸ್ತಾವನೆ ಇದೆ.

ಬಿ ವರ್ಗದ ರಸ್ತೆಯಲ್ಲಿ ದ್ವಿಚಕ್ರ ವಾಹನಗಳಿಗೆ 30 ರೂ. ಮತ್ತು ಲಘು ವಾಹನಗಳಿಗೆ 60 ರೂ. ಶುಲ್ಕ ಇರಲಿದೆ. ಸಿ ವರ್ಗದ ರಸ್ತೆಯಲ್ಲಿ ದ್ವಿಚಕ್ರ ವಾಹನಗಳಿಗೆ 20 ರೂ. ಹಾಗೂ ಲಘು

ವಾಹನಗಳಿಗೆ 40ರಿಂದ 60 ರೂ.ವರೆಗೆ ಶುಲ್ಕ ನಿಗದಿಪಡಿಸುವ ಪ್ರಸ್ತಾವನೆ ಇದೆ. ಆಫ್-ಸ್ಟ್ರೀಟ್ ಪಾರ್ಕಿಂಗ್ ದರಗಳು ಇದಕ್ಕಿಂತ ಕಡಿಮೆ ಇರಲಿದ್ದು, ಸಿ ವರ್ಗದಲ್ಲಿ ದ್ವಿಚಕ್ರ ವಾಹನಕ್ಕೆ

10 ರೂ. ಮತ್ತು ಲಘು ವಾಹನಕ್ಕೆ 20 ರೂ., ಬಿ ವರ್ಗದಲ್ಲಿ ಕ್ರಮವಾಗಿ 15 ರೂ. ಮತ್ತು 30 ರೂ., ಎ ವರ್ಗದಲ್ಲಿ 20 ರೂ. ಮತ್ತು 40 ರೂ. ಶುಲ್ಕ ವಿಧಿಸುವ ಉದ್ದೇಶವಿದೆ.

ಮಾಸಿಕ ಪಾರ್ಕಿಂಗ್ ಪಾಸ್ ವ್ಯವಸ್ಥೆಯೂ ವಾಹನ ಸವಾರರಿಗೆ ಪ್ರಮುಖ ಬದಲಾವಣೆಯಾಗಲಿದೆ. ಸಿ ವರ್ಗದ ಪ್ರದೇಶಗಳಲ್ಲಿ ದ್ವಿಚಕ್ರ ವಾಹನಗಳಿಗೆ ತಿಂಗಳಿಗೆ 1,000 ರೂ. ಹಾಗೂ ಲಘು

ವಾಹನಗಳಿಗೆ 2,000 ರೂ. ಪಾಸ್ ದರ ನಿಗದಿಪಡಿಸುವ ಪ್ರಸ್ತಾವನೆ ಇದೆ. ಬಿ ವರ್ಗದಲ್ಲಿ ದ್ವಿಚಕ್ರ ವಾಹನಗಳಿಗೆ 1,500 ರೂ. ಮತ್ತು ಲಘು ವಾಹನಗಳಿಗೆ 3,000 ರೂ. ಪಾಸ್ ಶುಲ್ಕ ಇರಲಿದೆ.

ಎ ವರ್ಗದ ಪ್ರದೇಶಗಳಲ್ಲಿ ದ್ವಿಚಕ್ರ ವಾಹನಗಳಿಗೆ ತಿಂಗಳಿಗೆ 2,000 ರೂ. ಹಾಗೂ ಲಘು ವಾಹನಗಳಿಗೆ 40,000 ರೂ.ವರೆಗೆ ಮಾಸಿಕ ಪಾಸ್ ದರ ನಿಗದಿಪಡಿಸುವ ಪ್ರಸ್ತಾವನೆ ಮಾಡಲಾಗಿದೆ.

ಇನ್ನು ಬೈಸಿಕಲ್‌ಗಳ ನಿಲುಗಡೆ ಹಾಗೂ ಆಟೋ ನಿಲ್ದಾಣಗಳಲ್ಲಿ ಪಾರ್ಕಿಂಗ್‌ಗೆ ಶುಲ್ಕ ವಿಧಿಸದಿರಲು ನಿರ್ಧರಿಸಲಾಗಿದೆ. ಖಾಲಿ ನಿವೇಶನಗಳನ್ನು ಪಾರ್ಕಿಂಗ್ ಸ್ಥಳಗಳಾಗಿ ಬಳಸಲು ನೀಡುವ ಮಾಲೀಕರಿಗೆ ಆಸ್ತಿ ತೆರಿಗೆಯಲ್ಲಿ ವಿನಾಯಿತಿ ನೀಡುವ ಪ್ರಸ್ತಾವನೆಯೂ ಇದೆ.

ಇದರ ಜೊತೆಗೆ ಬಾಡಿಗೆ ಮನೆಗಳಲ್ಲಿ ವಾಸಿಸುವವರ ಪಾರ್ಕಿಂಗ್ ಸಮಸ್ಯೆಗೂ ಹೊಸ ನೀತಿಯಲ್ಲಿ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಲಾಗಿದೆ. ಮನೆ ಮಾಲೀಕರು ಬಾಡಿಗೆದಾರರಿಗೆ ಅಗತ್ಯವಾದ ವಾಹನ ನಿಲುಗಡೆ ಜಾಗ ಕಲ್ಪಿಸಿಕೊಡಬೇಕು ಎಂಬ ನಿಯಮ ಜಾರಿಗೆ ತರಲು ಉದ್ದೇಶಿಸಲಾಗಿದೆ.

ಪಾರ್ಕಿಂಗ್ ಜಾಗ ಒದಗಿಸದೆ ಬಾಡಿಗೆದಾರರು ಮನೆ ಮುಂದೆ ವಾಹನ ನಿಲ್ಲಿಸುವ ಪರಿಸ್ಥಿತಿ ಉಂಟಾದರೆ, ಅದರ ಶುಲ್ಕವನ್ನು ಮನೆ ಮಾಲೀಕರೇ ಭರಿಸಬೇಕಾಗಬಹುದು.

ನಿಯಮ ಉಲ್ಲಂಘಿಸಿದರೆ ದಂಡ ವಿಧಿಸುವ ಪ್ರಸ್ತಾವನೆಯೂ ಇದೆ. ಸರ್ಕಾರಿ ನಿಗಮಗಳ ಜಾಗವನ್ನು ಬಳಸಿಕೊಂಡು ಹೆಚ್ಚಿನ ಪಾರ್ಕಿಂಗ್ ಸ್ಥಳಗಳನ್ನು ನಿರ್ಮಿಸುವ ಯೋಜನೆಯೂ ರೂಪುಗೊಳ್ಳುತ್ತಿದೆ.

ಒಟ್ಟಿನಲ್ಲಿ, ಬೆಂಗಳೂರಿನ ಪಾರ್ಕಿಂಗ್ ವ್ಯವಸ್ಥೆಯನ್ನು ವೈಜ್ಞಾನಿಕವಾಗಿ ಹಾಗೂ ಕ್ರಮಬದ್ಧವಾಗಿ ನಿರ್ವಹಿಸುವ ಉದ್ದೇಶದಿಂದ GBA ಈ ಹೊಸ ನೀತಿಯನ್ನು ರೂಪಿಸುತ್ತಿದೆ. ಕರಡು ಅಧಿಸೂಚನೆಯ ಮೇಲಿನ ಮುಂದಿನ ಕ್ರಮಗಳ ಬಳಿಕ ನಿಯಮಗಳು ಅಂತಿಮ ರೂಪ ಪಡೆಯಲಿವೆ.

ಇದನ್ನು ಓದಿ : https://vijayatimes.com/showcause-notices-ola-uber-rapido/

Tags: bengalurunewparkingrules

Related News

ಸ್ಟಿಂಗ್ ಆಪರೇಷನ್ ಪ್ರಕರಣದ ತನಿಖೆಗೆ ಕುಮಾರಸ್ವಾಮಿ ಪಟ್ಟು: ಪೊಲೀಸ್ ಆಯುಕ್ತರ ಕಚೇರಿ ಮೆಟ್ಟಿಲ ಮೇಲೆ ಧರಣಿ
ರಾಜಕೀಯ

ಸ್ಟಿಂಗ್ ಆಪರೇಷನ್ ಪ್ರಕರಣದ ತನಿಖೆಗೆ ಕುಮಾರಸ್ವಾಮಿ ಪಟ್ಟು: ಪೊಲೀಸ್ ಆಯುಕ್ತರ ಕಚೇರಿ ಮೆಟ್ಟಿಲ ಮೇಲೆ ಧರಣಿ

October 15, 2026
ಕರ್ನಾಟಕದಲ್ಲಿ ಶೇ. 32ರಷ್ಟು ಮಳೆ ಕೊರತೆ: 1918ರ ಬಳಿಕ ಈ ಸಲ ತೀವ್ರ ಮಳೆ ಅಭಾವ
ಪ್ರಮುಖ ಸುದ್ದಿ

ಕರ್ನಾಟಕದಲ್ಲಿ ಶೇ. 32ರಷ್ಟು ಮಳೆ ಕೊರತೆ: 1918ರ ಬಳಿಕ ಈ ಸಲ ತೀವ್ರ ಮಳೆ ಅಭಾವ

October 15, 2026
ಗ್ರಾಮ ಪಂಚಾಯಿತಿಗಳ ಆರ್ಥಿಕ ಬಲವರ್ಧನೆಗೆ ಮುಂದಾದ ಸರ್ಕಾರ : ಸಿಎಂ ಡಿಕೆ ಶಿವಕುಮಾರ್ ಮಹತ್ವದ ಘೋಷಣೆ
ಪ್ರಮುಖ ಸುದ್ದಿ

ಗ್ರಾಮ ಪಂಚಾಯಿತಿಗಳ ಆರ್ಥಿಕ ಬಲವರ್ಧನೆಗೆ ಮುಂದಾದ ಸರ್ಕಾರ : ಸಿಎಂ ಡಿಕೆ ಶಿವಕುಮಾರ್ ಮಹತ್ವದ ಘೋಷಣೆ

October 15, 2026
ಸಿದ್ದರಾಮಯ್ಯ ನಕಲಿ ವಿಡಿಯೋ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಇಬ್ಬರು ಶಂಕಿತರು ಪೊಲೀಸ್ ವಶಕ್ಕೆ
ಪ್ರಮುಖ ಸುದ್ದಿ

ಸಿದ್ದರಾಮಯ್ಯ ನಕಲಿ ವಿಡಿಯೋ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಇಬ್ಬರು ಶಂಕಿತರು ಪೊಲೀಸ್ ವಶಕ್ಕೆ

October 14, 2026

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.