Bengaluru: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮಳೆಗಾಲ ಬಂತೆಂದರೆ ತಗ್ಗು ಪ್ರದೇಶಗಳಲ್ಲಿ ನೀರು ನಿಲ್ಲುವ ಸಮಸ್ಯೆಯಾದರೆ ಬೇಸಿಗೆ ಆರಂಭ ಆಯ್ತು ಎಂದರೇ, ರಾಜಧಾನಿ ಬೆಂಗಳೂರಿನಲ್ಲಿ ನೀರಿನ ಸಮಸ್ಯೆ (Water Crisis) ಉದ್ಭವಿಸುತ್ತದೆ. ಆದರೆ ಮುಂದಿನ ದಿನಗಳಲ್ಲಿ ಈ ಸಮಸ್ಯೆಗೆ ಶಾಶ್ವತವಾಗಿ (Problem) ಬ್ರೇಕ್ ಹಾಕಲು ಮುಂದಾಗಿರುವ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಹೊಸದಾಗಿ ನಿರ್ಮಾಣ ಆಗುವ ಮನೆಗಳಲ್ಲಿ ಗ್ರೇ ವಾಟರ್ ಮರುಬಳಕೆಯನ್ನು ಕಡ್ಡಾಯಗೊಳಿಸಲು ಮುಂದಾಗಿದೆ.
ಬೆಂಗಳೂರಿನಲ್ಲಿ (Bangalore) ನೀರಿನ ಬಳಕೆಯನ್ನು ಕಡಿಮೆ ಮಾಡಲು ಮತ್ತು ಒಳಚರಂಡಿ ಒತ್ತಡವನ್ನು ಸರಾಗಗೊಳಿಸುವ ಉದ್ದೇಶದೊಂದಿಗೆ ಬಿಡಬ್ಲ್ಯೂಎಸ್ಎಸ್ಬಿ (BWSSB) ಮಹತ್ವದ ನಿರ್ಧಾರವನ್ನು ಕೈಗೊಂಡಿದೆ. ಹಾಗಾಗಿ ಬೆಂಗಳೂರಲ್ಲಿ (Bangalore) ಹೊಸದಾಗಿ ನಿರ್ಮಿಸುವ ಇಂಡಿಪೆಂಡೆಂಟ್ ಮನೆಗಳಿಗೆ ಗ್ರೇ ವಾಟರ್ ವ್ಯವಸ್ಥೆ (Gray water system) ಕಡ್ಡಾಯ ಮಾಡಲು ಜಲಮಂಡಳಿ ಹೊಸ ಯೋಜನೆ ಸಿದ್ಧಗೊಳಿಸಿದೆ.ಸ್ವಚ್ಛ ನೀರಿನ ಸಂರಕ್ಷಣೆಯ ದೃಷ್ಟಿಯಿಂದ ಹೊಸ ಮನೆಗಳಿಗೆ ಗ್ರೇ ವಾಟರ್ ರೀಸೈಕ್ಲಿಂಗ್ ಕಡ್ಡಾಯ ಮಾಡಲು ಜಲಮಂಡಳಿ ಚಿಂತನೆ ನಡೆಸಿದೆ.
ಗಮನ ಸೆಳೆಯುತ್ತಿರುವ ಗ್ರೇ ವಾಟರ್ ರೀಸೈಕ್ಲಿಂಗ್ (Gray water system) :
ಅಷ್ಟಕ್ಕೂ ಗ್ರೇ ವಾಟರ್ ರೀಸೈಕ್ಲಿಂಗ್ ಅಂದರೆ ನೀರನ್ನು ಪುನರ್ ಬಳಕೆ (Reuse) ಮಾಡುವುದು.ದಿನನಿತ್ಯ ಬಳಸುವ ಸ್ನಾನ, ಪಾತ್ರೆ ಮತ್ತು ಬಟ್ಟೆ ತೊಳೆದ, ಅಡುಗೆ ಮನೆ ಮತ್ತು ಮನೆ ಬಳಕೆಯ ಇತರೆ ನೀರನ್ನ ಮರುಬಳಕೆ ಮಾಡುವುದು.ಮಲ ಮಿಶ್ರಿತ ಅಲ್ಲದ ತ್ಯಾಜ್ಯ ನೀರನ್ನ ಮರುಬಳಕೆ (Reuse) ವ್ಯವಸ್ಥೆ.ಮನೆಯಲ್ಲಿ ಸ್ಯಾನಿಟರಿ ಮತ್ತು ಗ್ರೇ ವಾಟರ್ ಪ್ರತ್ಯೇಕವಾಗಿ ಹರಿಯಲು ಎರಡು ಪೈಪ್‌ಲೈನ್ (Pipe Line) ಮಾಡಿಸುವುದು.ಈ ಮೂಲಕ ಗ್ರೇವಾಟರ್ ಸಂಗ್ರಹಕ್ಕೆ (Greywater collection) ಪ್ರತ್ಯೇಕವಾದ ಸಿಂಟೆಕ್ಸ್ ಅಥವಾ ಟ್ಯಾಂಕ್ ವ್ಯವಸ್ಥೆ (Tank System) ಮಾಡಿಕೊಳ್ಳುವುದು.ರೀಸೈಕ್ಲಿಂಗ್ ಮಾಡಿದರೆ, ಮನೆಯ ಕೈ-ತೋಟ ಮತ್ತು ಶೌಚಗೃಹದ (Hand-garden and toilet) ಫ್ಲಶ್‌ಗೆ ಬಳಸುವ ಮೂಲಕ ಕಾವೇರಿ ನೀರಿನ ಉಳಿತಾಯವಾಗುತ್ತದೆ.