• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ದೇಶ-ವಿದೇಶ

ಚೀನಾದ ಇನ್‌ಫ್ಲುವೆನ್ಸರ್ ಗಳಿಗೆ ಹೊಸ ನಿಯಮ: ಪದವಿ ಇಲ್ಲವಾದ್ರೆ ಸಮಾಜಿಕ ಜಾಲತಾಣಗಳಲ್ಲಿ ಮಾತಾಡುವಂತಿಲ್ಲ

Shwetha Mohan by Shwetha Mohan
in ದೇಶ-ವಿದೇಶ, ಪ್ರಮುಖ ಸುದ್ದಿ, ವಿಜಯ ಟೈಮ್ಸ್‌
ಚೀನಾದ ಇನ್‌ಫ್ಲುವೆನ್ಸರ್ ಗಳಿಗೆ ಹೊಸ ನಿಯಮ: ಪದವಿ ಇಲ್ಲವಾದ್ರೆ ಸಮಾಜಿಕ ಜಾಲತಾಣಗಳಲ್ಲಿ ಮಾತಾಡುವಂತಿಲ್ಲ
0
SHARES
14
VIEWS
Share on FacebookShare on Twitter
  • ಆನ್‌ಲೈನ್‌ನಲ್ಲಿ ಮಾತಾಡಬೇಕಾದರೆ ವಿದ್ಯಾರ್ಹತೆ ತೋರಿಸಿ
    ಇನ್‌ಫ್ಲುವೆನ್ಸರ್ ಗಳಿಗೆ ಸ್ಟ್ರಿಕ್ಟ್ ವಾರ್ನಿಂಗ್
  • ಸ್ವತಂತ್ರ ಮಾತಿಗೆ ತಡೆಹಾಕಿದ ಚೀನಾದ ಹೊಸ ಇನ್‌ಫ್ಲುವೆನ್ಸರ್ ಕಾನೂನಿಂದ ವಿವಾದ
  • ಸರ್ಕಾರದ ಹೊಸ ನಿಯಮದಿಂದ ಕಂಗೆಟ್ಟ ಸೋಷಿಯಲ್ ಮೀಡಿಯಾ ಇನ್‌ಫ್ಲುವೆನ್ಸರ್ಗಳು

China: ಚೀನಾದಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಅಭಿಪ್ರಾಯ ಹಂಚಿಕೊಳ್ಳಬೇಕೆಂದರೆ ಹೊಸ ನಿಯಮವೊಂದು ಜಾರಿಯಾಗಿದೆ. (New rule for Chinese influencers)

ಸರ್ಕಾರ ಇತ್ತೀಚೆಗೆ ಜಾರಿಗೆ ತಂದಿರುವ ಹೊಸ ನಿಯಮದ ಪ್ರಕಾರ, ಯಾವುದೇ ವಿಷಯದ ಬಗ್ಗೆ ಜನರಿಗೆ ಬೋಧನೆ, ವಿಶ್ಲೇಷಣೆ ಅಥವಾ ಅಭಿಪ್ರಾಯ ನೀಡಲು ಬಯಸುವ ಇನ್‌ಫ್ಲುವೆನ್ಸರ್‌ಗಳು, (Influencer) ಮೊದಲಿಗೆ ಆ ವಿಷಯಕ್ಕೆ ಸಂಬಂಧಿಸಿದ ವಿದ್ಯಾರ್ಹತೆ ಅಥವಾ ಸರ್ಕಾರಿ ಪರವಾನಗಿ ಹೊಂದಿರಬೇಕು.

ಚೀನಾದ ಇನ್‌ಫ್ಲುವೆನ್ಸರ್ ಗಳಿಗೆ ಹೊಸ ನಿಯಮ ಆನ್‌ಲೈನ್‌ನಲ್ಲಿ ಮಾತಾಡಬೇಕಾದರೆ ವಿದ್ಯಾರ್ಹತೆ ತೋರಿಸಿ

ಇಲ್ಲದಿದ್ದರೆ ಅವರ ಪ್ರಸಾರ ತಡೆಗೊಳಿಸಲ್ಪಡಲಿದೆ. (New rule for Chinese influencers)

ಅಷ್ಟಕ್ಕೂ ಚೀನಾ ಕಳೆದ ಕೆಲವು ವರ್ಷಗಳಿಂದ ಇಂಟರ್‌ನೆಟ್ (Internet) ನಿಯಂತ್ರಣವನ್ನು ಹಂತ ಹಂತವಾಗಿ ಬಿಗಿಗೊಳಿಸುತ್ತಿದೆ.

ತಪ್ಪುಮಾಹಿತಿ, ರಾಜಕೀಯ ಟೀಕೆ ಹಾಗೂ ಜನರ ಅಭಿಪ್ರಾಯದ ಸ್ವಾತಂತ್ರ್ಯ ಸರ್ಕಾರದ ದೃಷ್ಟಿಯಲ್ಲಿ “ಸಮಾಜದ ಅಸ್ಥಿರತೆ” ಉಂಟುಮಾಡುವ ಅಂಶವೆಂದು ಪರಿಗಣಿಸಿದೆ.

2025ರ ಅಕ್ಟೋಬರ್‌ನಲ್ಲಿ ಜಾರಿಗೆ ಬಂದಿರುವ ಹೊಸ ನಿಯಮ ಈ ಕ್ರಮಗಳ ಭಾಗವಾಗಿದ್ದು, ಸಮಾಜಿಕ ಜವಾಬ್ದಾರಿ ಮತ್ತು ಮಾಹಿತಿ ನಿಖರತೆ ಕಾಯ್ದುಕೊಳ್ಳಲು ಈ ನಿಯಮ ಅಗತ್ಯ ಎಂದು ಸರ್ಕಾರ ಹೇಳಿಕೊಂಡಿದೆ.

ಇನ್ನು ಹೊಸ ನಿಯಮದ ಪ್ರಕಾರ —

  • ಇನ್‌ಫ್ಲುವೆನ್ಸರ್‌ಗಳು ಆರ್ಥಿಕತೆ, ವೈದ್ಯಕೀಯ, ಕಾನೂನು, ಶಿಕ್ಷಣ, ತಂತ್ರಜ್ಞಾನ, ಸೈನ್ಯ, ರಾಜಕೀಯ ಅಥವಾ ಸಾಮಾಜಿಕ ವಿಷಯಗಳು ಕುರಿತಾಗಿ ಮಾತನಾಡಬೇಕಾದರೆ ಅವರು ಅದಕ್ಕೆ ಸಂಬಂಧಿಸಿದ ಡಿಗ್ರಿ ಅಥವಾ ಪ್ರಮಾಣಪತ್ರ ತೋರಿಸಬೇಕು.
  • ಸ್ಟ್ರೀಮ್‌ಗಳು, ವೀಡಿಯೋಗಳು ಅಥವಾ ಲೈವ್ ಟಾಕ್‌ಗಳು ಎಲ್ಲವೂ ಈ ನಿಯಮಕ್ಕೆ ಒಳಪಡುತ್ತವೆ.
  • ಪ್ರಮಾಣಪತ್ರವಿಲ್ಲದೆ ಮಾತನಾಡಿದರೆ ಅವರ ಖಾತೆ ಸ್ಥಗಿತಗೊಳಿಸಲು ಅಥವಾ ನಿಷೇಧಿಸಲು ಸರ್ಕಾರಕ್ಕೆ ಹಕ್ಕಿದೆ.
  • ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮುಗಳಿಗೂ ಇದನ್ನು ನಿಗಾದಿಂದ ಗಮನಿಸುವ ಜವಾಬ್ದಾರಿ ಇದೆ.

ಚೀನಾದ ಸೈಬರ್ (Cyber) ನಿಯಂತ್ರಣ ಸಂಸ್ಥೆಯಾದ ಸೈಬರ್‌ಸ್ಪೇಸ್ ಅಡ್ಮಿನಿಸ್ಟ್ರೇಶನ್ ಆಫ್ ಚೈನಾ (CAC) ಹೇಳಿಕೆಯ ಪ್ರಕಾರ, ಈ ಕ್ರಮವು ವೈಜ್ಞಾನಿಕ ಮಾಹಿತಿ ಮತ್ತು ನಿಖರವಾದ ಶಿಕ್ಷಣವನ್ನು ಉತ್ತೇಜಿಸಲು ಕೈಗೊಳ್ಳಲಾಗಿದೆ.

ನಕಲಿ ತಜ್ಞರು ಹಾಗೂ ತಪ್ಪು ಸಲಹೆಗಾರರಿಂದ ಜನರನ್ನು ರಕ್ಷಿಸಲು ಇದು ಅಗತ್ಯ ಎಂಬುದು ಸರ್ಕಾರದ ವಾದ.

ಆದರೆ ವಿಶ್ಲೇಷಕರ ಪ್ರಕಾರ, ಇದು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಮತ್ತಷ್ಟು ಕಡಿಮೆ ಮಾಡುವ ಹೆಜ್ಜೆ ಎಂದು ಆಕ್ಷೇಪಿಸಲಾಗಿದೆ.

ಆದರೆ ಅನೇಕ ಯುವ ಇನ್‌ಫ್ಲುವೆನ್ಸರ್‌ಗಳು ಈ ನಿಯಮವನ್ನು ಅನ್ಯಾಯ ಎಂದು ತೀವ್ರವಾಗಿ ಖಂಡಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ “# FreedomTo Speak” ಎಂಬ ಹ್ಯಾಷ್‌ಟ್ಯಾಗ್ (Hashtag) ಟ್ರೆಂಡ್ ಆಗಿದ್ದು, ಜನರು ಜ್ಞಾನವನ್ನು ಹಂಚಿಕೊಳ್ಳಲು ಪದವಿ ಬೇಕೆ? ಎಂದು ಪ್ರಶ್ನಿಸಿದ್ದಾರೆ.

ಕೆಲವರು ಇದನ್ನು ಸರ್ಕಾರದ ಭಯದ ರಾಜಕೀಯ ಎಂದು ಕರೆಯುತ್ತಿದ್ದು, ಕೆಲವರು ಮಾಹಿತಿಯ ನಿಜಾಸತ್ಯ ಕಾಪಾಡಲು ಇದು ಅಗತ್ಯ ಎಂದೂ ಬೆಂಬಲಿಸಿದ್ದಾರೆ.

ಇನ್ನು ಚೀನಾದಲ್ಲಿ ಸುಮಾರು 1 ಕೋಟಿಗೂ ಹೆಚ್ಚು ಆನ್‌ಲೈನ್ (Online) ಇನ್‌ಫ್ಲುವೆನ್ಸರ್‌ಗಳು ಇದ್ದಾರೆ.

ಅವರಲ್ಲಿ ಸಾವಿರಾರು ಜನರು ವೈದ್ಯಕೀಯ ಸಲಹೆ, ಶಿಕ್ಷಣ ಕೋರ್ಸ್‌ಗಳು ಅಥವಾ ಸಾಮಾಜಿಕ ವಿಶ್ಲೇಷಣೆಗಳ ಮೂಲಕ ಜೀವನೋಪಾಯ ನಡೆಸುತ್ತಿದ್ದಾರೆ.

ಹೊಸ ನಿಯಮದಿಂದ ಇವರಲ್ಲಿ ಅನೇಕರು ತಮ್ಮ ಖಾತೆಗಳನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ.

ಇದರಿಂದ ಕಂಟೆಂಟ್ ಕ್ರಿಯೇಟರ್ (Content Creator) ಉದ್ಯಮದ ಮೇಲೆ ದೊಡ್ಡ ಹೊಡೆತ ಬೀಳಲಿದೆ.

Tags: ChinaInfluencersnewrulessocialmedia

Related News

ಸ್ಕ್ವಾಷ್ ವಿಶ್ವಕಪ್; ಹಾಂಗ್‌ಕಾಂಗ್‌ ವಿರುದ್ಧ ಗೆದ್ದು ಬೀಗಿದ ಭಾರತ
Sports

ಸ್ಕ್ವಾಷ್ ವಿಶ್ವಕಪ್; ಹಾಂಗ್‌ಕಾಂಗ್‌ ವಿರುದ್ಧ ಗೆದ್ದು ಬೀಗಿದ ಭಾರತ

December 15, 2025
ಬೆಂಗಳೂರು ಜನತೆಗೆ ಜಲಮಂಡಳಿಯಿಂದ ಗುಡ್ ನ್ಯೂಸ್: ಜನವರಿಯಿಂದ ಒನ್ ಟೈಮ್ ಸೆಟಲ್‌ಮೆಂಟ್ ಜಾರಿ, ಫೈನ್ ಸಂಪೂರ್ಣ ಮನ್ನಾ
ಪ್ರಮುಖ ಸುದ್ದಿ

ಬೆಂಗಳೂರು ಜನತೆಗೆ ಜಲಮಂಡಳಿಯಿಂದ ಗುಡ್ ನ್ಯೂಸ್: ಜನವರಿಯಿಂದ ಒನ್ ಟೈಮ್ ಸೆಟಲ್‌ಮೆಂಟ್ ಜಾರಿ, ಫೈನ್ ಸಂಪೂರ್ಣ ಮನ್ನಾ

December 15, 2025
ಕೋಲ್ಕತ್ತಾ ಸ್ಟೇಡಿಯಂನಲ್ಲಿ ಮೆಸ್ಸಿ ಫ್ಯಾನ್ಸ್ ದಾಂಧಲೆ:ಮೆಸ್ಸಿ ಮೇನಿಯಾ ಅವ್ಯವಸ್ಥೆಯಿಂದ ಅಂತ್ಯ
ದೇಶ-ವಿದೇಶ

ಕೋಲ್ಕತ್ತಾ ಸ್ಟೇಡಿಯಂನಲ್ಲಿ ಮೆಸ್ಸಿ ಫ್ಯಾನ್ಸ್ ದಾಂಧಲೆ:ಮೆಸ್ಸಿ ಮೇನಿಯಾ ಅವ್ಯವಸ್ಥೆಯಿಂದ ಅಂತ್ಯ

December 13, 2025
ಪ್ರತಿ ತಿಂಗಳು ಹೂಡಿಕೆ ಮಾಡುವ SIP ನ ಅಸಲಿ ಸತ್ಯ
ಪ್ರಮುಖ ಸುದ್ದಿ

ಪ್ರತಿ ತಿಂಗಳು ಹೂಡಿಕೆ ಮಾಡುವ SIP ನ ಅಸಲಿ ಸತ್ಯ

December 13, 2025

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.