Bengaluru: ತಂಗಳು ಅನ್ನ ಜಾಸ್ತಿ ಇದೆ ಎಂದು ಇನ್ಮುಂದೆ ಎಲ್ಲೆಂದರಲ್ಲಿ ನಾಯಿಗಳಿಗೆ (new rule to feed stray dogs) ಅನ್ನ ಹಾಕುವಂತಿಲ್ಲ. ಬೀದಿ ನಾಯಿಗಳಿಗೆ ಊಟ ಹಾಕಲು ವೇಳಾಪಟ್ಟಿ (schedule)

ನಿಗದಿ ಮಾಡಲು ಬಿಬಿಎಂಪಿ (BBMP) ಉದ್ದೇಶಿಸಿದೆ. ನಿಯಮ ಉಲ್ಲಂಘಿಸುವವರಿಗೆ ದಂಡ ವಿಧಿಸುವುದರ ಬಗ್ಗೆಯೂ ಪಾಲಿಕೆ ಚಿಂತನೆ ನಡೆಸಿದೆ. ಬೀದಿ ನಾಯಿಗಳಿಗೆ ಊಟ ಹಾಕುವ ವಿಚಾರದಲ್ಲಿ ನಿಯಮ
ರೂಪಿಸುವಂತೆ ಅಪಾರ್ಟ್‌ಮೆಂಟ್ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು (Apartment Residents Welfare Associations) ಒತ್ತಾಯಿಸಿದ್ದವು. ಅಪಾರ್ಟ್‌ಮೆಂಟ್ ನಿವಾಸಿಗಳು ನಾಯಿಗಳಿಗೆ ಊಟ
ಹಾಕುವ ವಿಚಾರ ಹಲವು ಬಾರಿ ವಿವಾದಕ್ಕೆ ಕಾರಣವಾಗಿದ್ದವು. ಅಪಾರ್ಟ್‌ಮೆಂಟ್ ಎದುರು ಆಹಾರ ಹಾಕುವುದರಿಂದ ಬೀದಿ ನಾಯಿಗಳು ಅಲ್ಲೇ ಸುತ್ತಾಡುವುದು, ಆಹಾರಕ್ಕಾಗಿ ಕಿತ್ತಾಡುವುದು ಮತ್ತಿತರ ವಿಚಾರದಲ್ಲಿ
ವಿವಾದಗಳು ಉದ್ಭವಿಸಿದ್ದ ಕಾರಣದಿಂದ ಬಿಬಿಎಂಪಿ ಈ ಕುರಿತಾಗಿ ಹೊಸ ನಿಯಮ ರೂಪಿಸುತ್ತಿದೆ.ಇನ್ನು ಈ ಹಿಂದೆ ಬೆಂಗಳೂರಿನಲ್ಲಿ 3.10 ಲಕ್ಷ ಬೀದಿ ನಾಯಿಗಳಿದ್ದವು. ಈಗ ಬೀದಿನಾಯಿಗಳ ಸಂಖ್ಯೆ ಇಳಿಕೆಯಾಗಿದ್ದು,
ಸದ್ಯ 2,79,335 ಶ್ವಾನಗಳಿವೆ. ಈ ಪೈಕಿ 1,65,341 ಗಂಡು ನಾಯಿಗಳು ಹಾಗೂ 82,757 ಹೆಣ್ಣು ನಾಯಿಗಳಿವೆ. ಪಾಲಿಕೆಯು ಏಪ್ರಿಲ್‌ನಿಂದ ಸೆಪ್ಟೆಂಬರ್‌ವರೆಗೆ 77,555 ಶ್ವಾನಗಳಿಗೆ ಆ್ಯಂಟಿ ರೇಬಿಸ್ ವ್ಯಾಕ್ಸಿನೇಷನ್
(Anti-rabies vaccination) (ಎಆರ್‌ವಿ) (ARV) ಹಾಕಿದೆ. ಈ ಪೈಕಿ ಶೇ.70ರಷ್ಟು ಶ್ವಾನಗಳಿಗೆ ಸಂತಾನಶಕ್ತಿಹರಣ ಶಸ್ತ್ರ ಚಿಕಿತ್ಸೆ ನಡೆಸಿದೆ.ಎಲ್ಲೆಂದರಲ್ಲಿ ಬೀದಿ ನಾಯಿಗಳಿಗೆ ಆಹಾರ ಹಾಕುವುದುರಿಂದ ನಗರದ
ಸೌಂಧರ್ಯಕ್ಕೂ ಧಕ್ಕೆ ತರುತ್ತಿದೆ. ಈ ಹಿನ್ನೆಲೆಯಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಪಶು (new rule to feed stray dogs) ಸಂಗೋಪನೆ ಇಲಾಖೆ ನಿಯಮ ರೂಪಿಸಲು ಮುಂದಾಗಿರುತ್ತದೆ.
ಕೆಲ ದಿನಗಳ ಹಿಂದಷ್ಟೇ ಬೀದಿ ನಾಯಿಗಳ ಕಾದಾಟದಲ್ಲಿ ಮಗುವೊಂದು ಗಾಯಗೊಂಡ ಕಾರಣದಿಂದ ಹಾಗೂ ಬೀದಿ ನಾಯಿಗಳ ಕುರಿತು ಹಲವಾರು ದೂರುಗಳು ಕೇಳಿ ಬಂದಿರುವುದರಿಂದ ಈ ಕುರಿತಾಗಿ ಹೊಸ
ನಿಯಮ ರೂಪಿಸಲು ಬಿಬಿಎಂಪಿಯು ಯೋಚಿಸುತ್ತಿದೆ.ರಾತ್ರಿ 10 ಗಂಟೆ ನಂತರ ಹಲವೆಡೆ ಜನಸಂದಣಿ ಕಡಿಮೆಯಿರುತ್ತದೆ. ಹೀಗಾಗಿ, ಬೀದಿ ನಾಯಿಗಳಿಗೆ ರಾತ್ರಿ 10 ಗಂಟೆಗೆ (Night 10pm) ಊಟ ಹಾಕುವಂತೆ
ಅಪಾರ್ಟ್‌ಮೆಂಟ್‌ಗಳ ಆವರಣದಲ್ಲಿ ಸೂಚನಾ ಫಲಕಗಳನ್ನು (Notice board in premises of apartments)ಅಳವಡಿಸಲಾಗುವುದು. ಅದೇ ರೀತಿ ಸಾರ್ವಜನಿಕ ಸ್ಥಳಗಳಲ್ಲಿ ಅಲ್ಲಿನ ಸ್ಥಿತಿ-ಗತಿಗಳನ್ನು ಅರಿತು ಸೂಕ್ತ
ಸ್ಥಳ ಆಯ್ಕೆ ಮಾಡಿಕೊಂಡು ಅಲ್ಲಿಯೇ ಊಟ, ತಿಂಡಿ ಹಾಕುವಂತೆ ಫಲಕಗಳನ್ನು ಅಳವಡಿಸಲಾಗುವುದು ಎಂದು ಬಿಬಿಎಂಪಿ ಹೊಸ ಯೋಜನೆಯ ಕುರಿತು ಮಾಹಿತಿ ನೀಡಿದೆ.
ಇದನ್ನು ಓದಿ: ದೇಶದ ಪ್ರತಿಷ್ಠಿತ DRDOದಲ್ಲಿ ಉದ್ಯೋಗಾವಕಾಶ: ಇಂದೇ ಅರ್ಜಿ ಸಲ್ಲಿಸಿ