• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಪ್ರಮುಖ ಸುದ್ದಿ

ಫಾಸ್ಟ್ಯಾಗ್ ಬಳಕೆದಾರರಿಗೆ ಹೊಸ ರೂಲ್ಸ್ : ಈ ನಿಯಮ ಉಲ್ಲಂಘಿಸಿದರೆ ಫಾಸ್ಟ್ ಟ್ಯಾಗ್ ಬ್ಲಾಕ್!

Teju Srinivas by Teju Srinivas
in ಪ್ರಮುಖ ಸುದ್ದಿ, ವಿಜಯ ಟೈಮ್ಸ್‌
ಫಾಸ್ಟ್ಯಾಗ್ ಬಳಕೆದಾರರಿಗೆ ಹೊಸ ರೂಲ್ಸ್ : ಈ ನಿಯಮ ಉಲ್ಲಂಘಿಸಿದರೆ ಫಾಸ್ಟ್ ಟ್ಯಾಗ್ ಬ್ಲಾಕ್!
0
SHARES
7
VIEWS
Share on FacebookShare on Twitter

ಕೈಯಲ್ಲಿ ಹಿಡಿದು ಫಾಸ್ಟ್ಯಾಗ್ (New rules for FASTag users) ತೋರಿಸುವುದು ಇನ್ಮುಂದೆ ನಡೆಯಲ್ಲ

ವಿಂಡ್‌ಸ್ಕ್ರೀನ್‌ಗೆ ಅಂಟಿಸುವುದು ಕಡ್ಡಾಯ

ವಾಹನ ಸವಾರರಿಗೆ NHAI ಹೊಸ ಮಾರ್ಗಸೂಚಿ

ದೇಶಾದ್ಯಂತ ಟೋಲ್ ಸಂಗ್ರಹ ವ್ಯವಸ್ಥೆಯನ್ನು ಇನ್ನಷ್ಟು ಸುಗಮ ಹಾಗೂ ಪಾರದರ್ಶಕಗೊಳಿಸುವ (New rules for FASTag users) ಉದ್ದೇಶದಿಂದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಫಾಸ್ಟ್ಯಾಗ್ ಬಳಕೆಗೆ ಸಂಬಂಧಿಸಿದಂತೆ ಹೊಸ ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ಜಾರಿಗೆ ತಂದಿದೆ.

ಇತ್ತೀಚಿನ ದಿನಗಳಲ್ಲಿ ಕೆಲವು ವಾಹನ ಸವಾರರು ನಿಯಮಗಳನ್ನು ಉಲ್ಲಂಘಿಸಿ ಫಾಸ್ಟ್ಯಾಗ್ (Fastag) ಅನ್ನು ದುರುಪಯೋಗಪಡಿಸಿಕೊಳ್ಳುತ್ತಿರುವುದು ಗಮನಕ್ಕೆ ಬಂದ ಹಿನ್ನೆಲೆ, ಇದೀಗ ಪ್ರಾಧಿಕಾರ ಕಠಿಣ ಕ್ರಮಕ್ಕೆ ಮುಂದಾಗಿದೆ.

ವಿಶೇಷವಾಗಿ ಫಾಸ್ಟ್ಯಾಗ್ ಅನ್ನು ವಾಹನದ ಗಾಜಿಗೆ ಅಂಟಿಸದೇ ಕೈಯಲ್ಲಿ ಹಿಡಿದು ಸ್ಕ್ಯಾನರ್‌ಗೆ ತೋರಿಸುವ ಕ್ರಮವನ್ನು ಗಂಭೀರ ಉಲ್ಲಂಘನೆ ಎಂದು ಪರಿಗಣಿಸಲಾಗಿದೆ.

New rules for FASTag users

ಟೋಲ್ ಪ್ಲಾಜಾಗಳಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡಲು ಮತ್ತು ವಾಹನಗಳು (New rules for FASTag users) ತಡೆರಹಿತವಾಗಿ ಸಂಚರಿಸಲು ಫಾಸ್ಟ್ಯಾಗ್ ವ್ಯವಸ್ಥೆ ಮಹತ್ವದ ಪಾತ್ರ ವಹಿಸುತ್ತದೆ.

ಆದರೆ ಕೆಲವು ವಾಹನ ಚಾಲಕರು ನಿಯಮಬಾಹಿರವಾಗಿ ಟ್ಯಾಗ್ ಅನ್ನು ಕೈಯಲ್ಲಿ ಹಿಡಿದು ಬಳಸುತ್ತಿರುವುದರಿಂದ RFID ಸ್ಕ್ಯಾನಿಂಗ್ ಪ್ರಕ್ರಿಯೆಯಲ್ಲಿ ತೊಂದರೆ ಉಂಟಾಗುತ್ತಿದೆ.

ಇದರಿಂದ ಟೋಲ್ ಪ್ಲಾಜಾಗಳಲ್ಲಿ ಅನಗತ್ಯ ವಿಳಂಬವಾಗುವುದಲ್ಲದೆ, ವ್ಯವಸ್ಥೆಯ ವಿಶ್ವಾಸಾರ್ಹತೆಗೂ ಧಕ್ಕೆಯಾಗುತ್ತಿದೆ ಎಂದು NHAI ತಿಳಿಸಿದೆ. ಈ ರೀತಿಯ ವರ್ತನೆ ಕಂಡುಬಂದರೆ ಸಂಬಂಧಿತ ಫಾಸ್ಟ್ಯಾಗ್ ಅನ್ನು ತಕ್ಷಣವೇ ಬ್ಲಾಕ್‌ಲಿಸ್ಟ್ ಮಾಡುವ ಎಚ್ಚರಿಕೆಯನ್ನು ಕೂಡ ನೀಡಲಾಗಿದೆ.

ಪ್ರಾಧಿಕಾರದ ಹೊಸ ನಿಯಮಗಳ ಪ್ರಕಾರ, ಪ್ರತಿಯೊಂದು ಫಾಸ್ಟ್ಯಾಗ್ ಕೂಡ ವಾಹನದ ಮುಂಭಾಗದ ವಿಂಡ್‌ಸ್ಕ್ರೀನ್ (Windscreen) ಮೇಲೆ ಸರಿಯಾಗಿ ಅಂಟಿಸಿರಬೇಕು. ಗಾಜಿನ ಮೇಲೆಯೇ ಟ್ಯಾಗ್ ಸ್ಥಿರವಾಗಿದ್ದರೆ RFID ರೀಡರ್‌ಗಳು ಸುಲಭವಾಗಿ ಸ್ಕ್ಯಾನ್ ಮಾಡಬಲ್ಲವು.

ಇದರಿಂದ ವಾಹನಗಳು ಟೋಲ್ ಬಳಿ ನಿಲ್ಲದೆ ವೇಗವಾಗಿ ಸಾಗಲು ಅನುಕೂಲವಾಗುತ್ತದೆ. ಅಲ್ಲದೆ, ಒಂದೇ ಫಾಸ್ಟ್ಯಾಗ್ ಅನ್ನು ಹಲವು ವಾಹನಗಳಿಗೆ ಬಳಸುವ ವಂಚನೆಗೂ ತಡೆ ಬೀಳುತ್ತದೆ. ಇಂತಹ ಅಕ್ರಮಗಳನ್ನು ನಿಯಂತ್ರಿಸಲು ಈ ಕ್ರಮ ಅಗತ್ಯವಾಗಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಇದರ ಜೊತೆಗೆ, ಫಾಸ್ಟ್ಯಾಗ್ ಸೇವೆಗಳ ಹೆಸರಿನಲ್ಲಿ ಸಕ್ರಿಯವಾಗಿರುವ ನಕಲಿ ವೆಬ್‌ಸೈಟ್‌ಗಳು ಹಾಗೂ ಮೋಸದ ಲಿಂಕ್‌ಗಳ ಬಗ್ಗೆ ಸಹ NHAI ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದೆ.

ಕೆಲವರು ವಾರ್ಷಿಕ ಪಾಸ್‌, ರೀಚಾರ್ಜ್ ಹಾಗೂ ಅಪ್‌ಡೇಟ್ ಸೇವೆಗಳ ಹೆಸರಿನಲ್ಲಿ ನಕಲಿ ತಾಣಗಳನ್ನು ಸೃಷ್ಟಿಸಿ ಜನರ ಬ್ಯಾಂಕಿಂಗ್ ಮಾಹಿತಿಯನ್ನು ಕಳವು ಮಾಡಲು ಯತ್ನಿಸುತ್ತಿದ್ದಾರೆ. ಹೀಗಾಗಿ ಯಾವುದೇ ‘ಸ್ಪಾನ್ಸರ್ಡ್’ ಅಥವಾ ಅನುಮಾನಾಸ್ಪದ ಲಿಂಕ್‌ಗಳ ಮೇಲೆ ಕ್ಲಿಕ್ ಮಾಡಬಾರದು ಎಂದು ಮನವಿ ಮಾಡಲಾಗಿದೆ.

ಫಾಸ್ಟ್ಯಾಗ್ ಸಂಬಂಧಿತ ಸೇವೆಗಳಿಗೆ ಕೇವಲ ಅಧಿಕೃತ ‘ರಾಜಮಾರ್ಗಯಾತ್ರಾ’ (Rajmargyatra) ಆ್ಯಪ್‌ನ್ನು ಮಾತ್ರ ಬಳಸುವಂತೆ ಸೂಚಿಸಲಾಗಿದೆ.

ಇನ್ನೊಂದೆಡೆ, ದೇಶಾದ್ಯಂತ ಶೀಘ್ರದಲ್ಲೇ ಬ್ಯಾರಿಯರ್‌ರಹಿತ ಟೋಲ್ ವ್ಯವಸ್ಥೆಯನ್ನು ಜಾರಿಗೆ ತರಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದೆ. ಈ ವ್ಯವಸ್ಥೆಯಲ್ಲಿ ವಾಹನಗಳು ಟೋಲ್ ಪ್ಲಾಜಾಗಳಲ್ಲಿ ನಿಲ್ಲದೇ ನೇರವಾಗಿ ಸಂಚರಿಸಲಿದ್ದು, ಫಾಸ್ಟ್ಯಾಗ್ ಸ್ಕ್ಯಾನಿಂಗ್ ಸಂಪೂರ್ಣವಾಗಿ ಸ್ವಯಂಚಾಲಿತವಾಗಿರುತ್ತದೆ.

ಆದ್ದರಿಂದ ಪ್ರತಿಯೊಂದು ವಾಹನದಲ್ಲೂ ಫಾಸ್ಟ್ಯಾಗ್ ಸರಿಯಾಗಿ ಅಳವಡಿಸಿರುವುದು ಅತ್ಯಂತ ಮುಖ್ಯವಾಗಿದೆ. ವಾಹನ ಸವಾರರು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದರೆ ಮಾತ್ರ ಸುಗಮ ಸಂಚಾರ ಮತ್ತು ಡಿಜಿಟಲ್ ಟೋಲ್ ವ್ಯವಸ್ಥೆಯ ಯಶಸ್ಸು ಸಾಧ್ಯವಾಗಲಿದೆ ಎಂದು NHAI ತಿಳಿಸಿದೆ.

Tags: fastagsnationalhighwaynew rukesNHAIRoads

Related News

ಮೇ 20ರಿಂದ ಸಾರಿಗೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರ: ನೋ ವರ್ಕ್ ನೋ ಪೇ ನಿಯಮ ಜಾರಿಗೆ ತರಲು ಮುಂದಾದ ಸರ್ಕಾರ
ಪ್ರಮುಖ ಸುದ್ದಿ

ಮೇ 20ರಿಂದ ಸಾರಿಗೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರ: ನೋ ವರ್ಕ್ ನೋ ಪೇ ನಿಯಮ ಜಾರಿಗೆ ತರಲು ಮುಂದಾದ ಸರ್ಕಾರ

May 18, 2026
ಯುದ್ಧದ ಪರಿಣಾಮ ಜನಜೀವನದ ಮೇಲೆ ಬರೆ: ಮಾತ್ರೆ, ಸಿರಪ್, ವೈದ್ಯಕೀಯ ಉತ್ಪನ್ನಗಳಿಗೂ ದುಬಾರಿ ಸ್ಪರ್ಶ
ದೇಶ-ವಿದೇಶ

ಯುದ್ಧದ ಪರಿಣಾಮ ಜನಜೀವನದ ಮೇಲೆ ಬರೆ: ಮಾತ್ರೆ, ಸಿರಪ್, ವೈದ್ಯಕೀಯ ಉತ್ಪನ್ನಗಳಿಗೂ ದುಬಾರಿ ಸ್ಪರ್ಶ

May 18, 2026
ಚಿನ್ನದ ಹೂಡಿಕೆಗೆ ಹೊಸ ದಾರಿ: ಇಜಿಆರ್‌ ಮೂಲಕ ಡಿಜಿಟಲ್ ಬಂಗಾರಕ್ಕೆ ಹೆಚ್ಚಿದ ಬೇಡಿಕೆ
ದೇಶ-ವಿದೇಶ

ಚಿನ್ನದ ಹೂಡಿಕೆಗೆ ಹೊಸ ದಾರಿ: ಇಜಿಆರ್‌ ಮೂಲಕ ಡಿಜಿಟಲ್ ಬಂಗಾರಕ್ಕೆ ಹೆಚ್ಚಿದ ಬೇಡಿಕೆ

May 18, 2026
ಪೊಲೀಸ್ ಕಸ್ಟಡಿ ದೌರ್ಜನ್ಯಕ್ಕೆ ಬ್ರೇಕ್ : ರಾಜ್ಯದಲ್ಲಿ ‘ಸ್ಟ್ಯಾಂಡಿಂಗ್ ಆರ್ಡರ್-1060’ ಜಾರಿ
ಪ್ರಮುಖ ಸುದ್ದಿ

ಪೊಲೀಸ್ ಕಸ್ಟಡಿ ದೌರ್ಜನ್ಯಕ್ಕೆ ಬ್ರೇಕ್ : ರಾಜ್ಯದಲ್ಲಿ ‘ಸ್ಟ್ಯಾಂಡಿಂಗ್ ಆರ್ಡರ್-1060’ ಜಾರಿ

May 18, 2026

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.