• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಪ್ರಮುಖ ಸುದ್ದಿ

ಸರ್ಕಾರಿ ಕಚೇರಿಗಳಲ್ಲಿ ನೌಕರರು ಹರಿದ ಜೀನ್ಸ್‌, ಸ್ಲೀವ್‌ಲೆಸ್ ಡ್ರೆಸ್‌ ಹಾಕುವಂತಿಲ್ಲ: ನಿಯಮ ಮೀರಿದರೆ ಶಿಸ್ತು ಕ್ರಮ

Teju Srinivas by Teju Srinivas
in ಪ್ರಮುಖ ಸುದ್ದಿ, ರಾಜ್ಯ, ವಿಜಯ ಟೈಮ್ಸ್‌
ಸರ್ಕಾರಿ ಕಚೇರಿಗಳಲ್ಲಿ ನೌಕರರು ಹರಿದ ಜೀನ್ಸ್‌, ಸ್ಲೀವ್‌ಲೆಸ್ ಡ್ರೆಸ್‌ ಹಾಕುವಂತಿಲ್ಲ: ನಿಯಮ ಮೀರಿದರೆ ಶಿಸ್ತು ಕ್ರಮ
0
SHARES
12
VIEWS
Share on FacebookShare on Twitter
  • ಸರ್ಕಾರಿ ನೌಕರರಿಗೆ ಹೊಸ (New rules for government employees) ಎಚ್ಚರಿಕೆ: ಸಭ್ಯ ಉಡುಗೆ ಕಡ್ಡಾಯ
  • ಸಭ್ಯತೆಯಿಲ್ಲದ ಬಟ್ಟೆ ಧರಿಸಿದರೆ ಕ್ರಮ ಅನಿವಾರ್ಯ ಎಂದು ಸರ್ಕಾರದ ಎಚ್ಚರಿಕೆ
  • ನೌಕರರ ಉಡುಗೆ ತೊಡುಗೆಯಲ್ಲೂ ವೃತ್ತಿಪರತೆ ಕಡ್ಡಾಯ ಎಂದ DPAR

Bengaluru: ರಾಜ್ಯ ಸರ್ಕಾರದ ಕಚೇರಿಗಳಲ್ಲಿ ಕಾರ್ಯನಿರ್ವಹಿಸುವ ಸರ್ಕಾರಿ ನೌಕರರು (New rules for government employees) ಇನ್ನುಮುಂದೆ ಕಚೇರಿಗೆ ಹಾಜರಾಗುವಾಗ ತಮ್ಮ ಉಡುಗೆ ತೊಡುಗೆಯಲ್ಲಿ ಹೆಚ್ಚಿನ ಎಚ್ಚರಿಕೆ ವಹಿಸಬೇಕಾಗಿದೆ.

ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (DPAR) ಇತ್ತೀಚೆಗೆ ಹೊರಡಿಸಿರುವ ಕಟ್ಟುನಿಟ್ಟಿನ ಸುತ್ತೋಲೆ ಪ್ರಕಾರ, ಸಭ್ಯತೆ ಮತ್ತು ವೃತ್ತಿಪರತೆ ಕಾಪಾಡುವ ಉದ್ದೇಶದಿಂದ ನೌಕರರ ಉಡುಗೆ ಶೈಲಿಗೆ ಸ್ಪಷ್ಟ ಮಾರ್ಗಸೂಚಿಗಳನ್ನು ನೀಡಲಾಗಿದೆ.

ಸರ್ಕಾರದ ಗೌರವ ಮತ್ತು ಸಾರ್ವಜನಿಕರ ವಿಶ್ವಾಸಕ್ಕೆ ಧಕ್ಕೆ ತರುವಂತಹ ಉಡುಗೆ ಧರಿಸಿ ಕಚೇರಿಗೆ ಬಂದರೆ ಶಿಸ್ತು ಕ್ರಮ ಎದುರಿಸಬೇಕಾಗುತ್ತದೆ ಎಂದು ಇಲಾಖೆ ಎಚ್ಚರಿಕೆ ನೀಡಿದೆ.

ಈ ಸೂಚನೆಗಳನ್ನು ರಾಜ್ಯದ ಎಲ್ಲಾ ಇಲಾಖೆ ಮುಖ್ಯಸ್ಥರು, ಜಿಲ್ಲಾಧಿಕಾರಿಗಳು, ಮುಖ್ಯ ಕಾರ್ಯದರ್ಶಿಗಳು ಮತ್ತು ಇತರ ಉನ್ನತ ಅಧಿಕಾರಿಗಳಿಗೆ ರವಾನಿಸಲಾಗಿದೆ.

New rules for government employees

ಸುತ್ತೋಲೆಯಲ್ಲಿ ಉಲ್ಲೇಖಿಸಿರುವಂತೆ, ಇತ್ತೀಚಿನ ದಿನಗಳಲ್ಲಿ ಕೆಲ ಸರ್ಕಾರಿ ನೌಕರರು (New rules for government employees) ಕಚೇರಿಗಳಿಗೆ ಅಸಭ್ಯ ಅಥವಾ ಅತಿಯಾದ ಕ್ಯಾಜುವಲ್ (Casual) ಉಡುಗೆ ತೊಟ್ಟು ಬರುತ್ತಿರುವ ಬಗ್ಗೆ ಸಾರ್ವಜನಿಕರಿಂದ ಹಾಗೂ ಕೆಲವು ಸಂಘ ಸಂಸ್ಥೆಗಳಿಂದ ದೂರುಗಳು ಬಂದಿವೆ.

ಹರಿದ ಜೀನ್ಸ್, ಸ್ಲೀವ್‌ಲೆಸ್ ಡ್ರೆಸ್ (Sleveless Dress) , ಅತಿಯಾಗಿ ಬಿಗಿಯಾದ ಅಥವಾ ವೃತ್ತಿಪರತೆಯಿಲ್ಲದ ಬಟ್ಟೆಗಳನ್ನು ಧರಿಸಿ ಕೆಲಸ ನಿರ್ವಹಿಸುವುದು ಸರ್ಕಾರಿ ಸೇವೆಗೆ ತಕ್ಕದ್ದಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಇದರಿಂದ ಕಚೇರಿ ಶಿಸ್ತಿಗೆ ಧಕ್ಕೆಯಾಗುವುದಲ್ಲದೆ, ಸರ್ಕಾರದ ಪ್ರತಿಷ್ಠೆಗೆ ಕೂಡ ಹಾನಿಯಾಗುತ್ತದೆ ಎಂದು ಇಲಾಖೆ ಅಭಿಪ್ರಾಯಪಟ್ಟಿದೆ.

ಈ ಹಿನ್ನೆಲೆ, ಈಗಾಗಲೇ ಅನೇಕ ಬಾರಿ ಸೂಚನೆ ನೀಡಿದರೂ ನಿಯಮ ಪಾಲಿಸದಿರುವುದನ್ನು ಗಂಭೀರವಾಗಿ ಪರಿಗಣಿಸಿ ಈ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ.

ಸರ್ಕಾರಿ ನೌಕರರಿಗೆ ಕಾರ್ಪೊರೇಟ್ (Corporation) ಕ್ಷೇತ್ರದಂತೆ ನಿಗದಿತ ಡ್ರೆಸ್ ಕೋಡ್ (Dress Code) ಇಲ್ಲದಿದ್ದರೂ, ಕಚೇರಿಯ ವಾತಾವರಣಕ್ಕೆ ಹೊಂದುವಂತಹ ಸಭ್ಯ ಉಡುಗೆ ಧರಿಸುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಇಲಾಖೆ ಸ್ಪಷ್ಟಪಡಿಸಿದೆ.

ಕಾಲೇಜು ವಿದ್ಯಾರ್ಥಿಗಳು ಅಥವಾ ಅನೌಪಚಾರಿಕ ಕಾರ್ಯಕ್ರಮಗಳಿಗೆ ತಕ್ಕ ಉಡುಗೆ ಶೈಲಿಯನ್ನು ಕಚೇರಿಗೆ ತರುವುದನ್ನು ಸ್ವೀಕರಿಸಲಾಗುವುದಿಲ್ಲ.

ಸಾರ್ವಜನಿಕರೊಂದಿಗೆ ನೇರ ಸಂಪರ್ಕ ಹೊಂದುವ ಸರ್ಕಾರಿ ನೌಕರರು ತಮ್ಮ ವರ್ತನೆ ಮತ್ತು ಉಡುಗೆಯಲ್ಲಿ ಮಾದರಿಯಾಗಿರಬೇಕು ಎಂಬುದು ಸುತ್ತೋಲೆಯ ಆಶಯ.

ನಿಯಮ ಉಲ್ಲಂಘಿಸಿದರೆ ಶಿಸ್ತು ಕ್ರಮ ಜರುಗಿಸುವ ಅಧಿಕಾರವನ್ನು ಮೇಲಧಿಕಾರಿಗಳಿಗೆ ನೀಡಲಾಗಿದೆ.

ಈ ಸುತ್ತೋಲೆಯನ್ನು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಸ್ವಾಗತಿಸಿದ್ದು, ಸಂಘದ ಅಧ್ಯಕ್ಷ ಸಿ.ಎಸ್. ಷಡಕ್ಷರಿ (C.S. Shadakshari) ಅವರು ಈ ನಿರ್ಧಾರವು ಕಚೇರಿ ಸಂಸ್ಕೃತಿ ಮತ್ತು ಶಿಸ್ತನ್ನು ಬಲಪಡಿಸಲು ಸಹಕಾರಿ ಎಂದು ಅಭಿಪ್ರಾಯಪಟ್ಟಿದ್ದಾರೆ.

ಸರ್ಕಾರಿ ನೌಕರರ ಉಡುಗೆ ಇತರರಿಗೆ ಮುಜುಗರ ಉಂಟುಮಾಡಬಾರದು ಮತ್ತು ಕಚೇರಿಯ ಗೌರವ ಕಾಪಾಡುವಂತಿರಬೇಕು ಎಂದು ಅವರು ಹೇಳಿದ್ದಾರೆ.

ಜೊತೆಗೆ, ಕಚೇರಿಯೊಳಗಿನ ಶಿಸ್ತನ್ನು ಬಲಪಡಿಸುವ ನಿಟ್ಟಿನಲ್ಲಿ ನೌಕರರ ಚಲನವಲನಗಳನ್ನು ದಾಖಲಿಸಲು ಲೆಡ್ಜರ್ ಹಾಗೂ ಮೂವ್‌ಮೆಂಟ್ ರಿಜಿಸ್ಟರ್‌ಗಳನ್ನು (Movement Register) ಕಡ್ಡಾಯಗೊಳಿಸಲಾಗಿದೆ.

ನೌಕರರು ಕಚೇರಿಗೆ ಪ್ರವೇಶಿಸುವ ಹಾಗೂ ಹೊರಡುವ ಸಮಯವನ್ನು ದಾಖಲಿಸುವುದು ಅನಿವಾರ್ಯವಾಗಿದೆ.

ಸುತ್ತೋಲೆ ಪ್ರಕಾರ, ಪ್ರತಿಯೊಬ್ಬ ಸರ್ಕಾರಿ ನೌಕರರು ಬೆಳಿಗ್ಗೆ ನಿಗದಿತ ಸಮಯದೊಳಗೆ, ಅಂದರೆ 10:10ರೊಳಗೆ ಕಚೇರಿಯಲ್ಲಿ ಹಾಜರಿರಬೇಕು ಮತ್ತು ಕೆಲಸದ ಅವಧಿ ಮುಗಿಯುವವರೆಗೆ ತಮ್ಮ ಸ್ಥಾನದಲ್ಲೇ ಇರಬೇಕು.

ಅಧಿಕೃತ ಕರ್ತವ್ಯದ ನಿಮಿತ್ತ ಕಚೇರಿಯಿಂದ ಹೊರಗೆ ಹೋಗಬೇಕಾದರೆ, ಅದರ ವಿವರವನ್ನು ಮೂವ್‌ಮೆಂಟ್ ರಿಜಿಸ್ಟರ್‌ನಲ್ಲಿ ನಮೂದಿಸುವುದು ಕಡ್ಡಾಯ. ಈ ನಿಯಮಗಳನ್ನು ಉಲ್ಲಂಘಿಸುವ ನೌಕರರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಇಲಾಖೆ ಸ್ಪಷ್ಟಪಡಿಸಿದೆ.

ಒಟ್ಟಾರೆ, ಈ ಕ್ರಮಗಳು ಸರ್ಕಾರಿ ಕಚೇರಿಗಳಲ್ಲಿ ಶಿಸ್ತಿನ ವಾತಾವರಣ ನಿರ್ಮಿಸಲು ಮತ್ತು ಸಾರ್ವಜನಿಕ ಸೇವೆಯ ಗುಣಮಟ್ಟವನ್ನು ಸುಧಾರಿಸಲು ಕೈಗೊಳ್ಳಲಾದ ಮಹತ್ವದ ಹೆಜ್ಜೆಯಾಗಿದೆ.

ಇದನ್ನು ಓದಿ : https://vijayatimes.com/best-idea-for-long-term-investment/
Tags: DressGovernmentKarnatakanewrulesoffice

Related News

ಇನ್ಮುಂದೆ ದಿನದ 24 ಗಂಟೆಯೂ ಅಂಚೆ ಕಚೇರಿ ಸೇವೆ: ಕೆಲ ಆಯ್ದ ಶಾಖೆಗಳಲ್ಲಿ ಮಾತ್ರವೇ ಈ ಸೇವೆ ಲಭ್ಯ
ದೇಶ-ವಿದೇಶ

ಇನ್ಮುಂದೆ ದಿನದ 24 ಗಂಟೆಯೂ ಅಂಚೆ ಕಚೇರಿ ಸೇವೆ: ಕೆಲ ಆಯ್ದ ಶಾಖೆಗಳಲ್ಲಿ ಮಾತ್ರವೇ ಈ ಸೇವೆ ಲಭ್ಯ

January 24, 2026
ಇನ್ಮುಂದೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದವರಿಗೆ ಲ್ಯಾಪ್‌ಟಾಪ್‌ ಬದಲು ನಗದು ಬಹುಮಾನ
ಪ್ರಮುಖ ಸುದ್ದಿ

ಇನ್ಮುಂದೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದವರಿಗೆ ಲ್ಯಾಪ್‌ಟಾಪ್‌ ಬದಲು ನಗದು ಬಹುಮಾನ

January 24, 2026
ಬಳ್ಳಾರಿ ಮಾಡೆಲ್ ಹೌಸ್ ಬೆಂಕಿ ಪ್ರಕರಣ: ಎಂಟು ಮಂದಿಯ ವಶ, ತನಿಖೆ ತೀವ್ರ
ಪ್ರಮುಖ ಸುದ್ದಿ

ಬಳ್ಳಾರಿ ಮಾಡೆಲ್ ಹೌಸ್ ಬೆಂಕಿ ಪ್ರಕರಣ: ಎಂಟು ಮಂದಿಯ ವಶ, ತನಿಖೆ ತೀವ್ರ

January 24, 2026
ಜ.24ರಿಂದ ನಾಲ್ಕು ದಿನ ಬ್ಯಾಂಕ್ ಶಾಖೆಗಳು ಬಂದ್: ಡಿಜಿಟಲ್ ಸೇವೆಗಳು ಮಾತ್ರ ಲಭ್ಯ
ದೇಶ-ವಿದೇಶ

ಜ.24ರಿಂದ ನಾಲ್ಕು ದಿನ ಬ್ಯಾಂಕ್ ಶಾಖೆಗಳು ಬಂದ್: ಡಿಜಿಟಲ್ ಸೇವೆಗಳು ಮಾತ್ರ ಲಭ್ಯ

January 23, 2026

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.