A new decision by the health department to provide protection to government doctors from now on
Bengaluru: ಇತ್ತೀಚಿನ ದಿನಗಳಲ್ಲಿ ವೈದ್ಯರುಗಳ ಮೇಲೆ ಹಲ್ಲೆ ಹಾಗೂ ದಬ್ಬಾಳಿಕೆ ಪ್ರಕರಣಗಳು ಹೆಚ್ಚಾಗುತ್ತಿವೆ ಹಾಗೂ ಕೋಲ್ಕತ್ತಾದ ವೈದ್ಯೆ (Kolkata doctor) ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಇಡಿ ದೇಶವನ್ನೇ ಬೆಚ್ಚಿ ಬೀಳಿಸುವಂತೆ ಮಾಡಿದ್ದು ಕರ್ತವ್ಯ ನಿರ್ವಹಿಸುವ ಜಾಗದಲ್ಲಿ ಮಹಿಳಾ ವೈದ್ಯರು ಎಷ್ಟು ಸುರಕ್ಷಿತವಾಗಿರುತ್ತಾರೆ ಎಂಬ ಪ್ರಶ್ನೆ ಮೂಡಲಾರಂಭಿಸಿದೆ. ಈಗಾಗಲೇ ಅತ್ಯಾಚಾರ, ಬರ್ಬರವಾಗಿ ಕೊಲೆಗೀಡಾದ ವೈದ್ಯೆಗೆ ನ್ಯಾಯ ನೀಡುವಂತೆ ದೇಶಾದ್ಯಂತ ವೈದ್ಯರು ಪ್ರತಿಭಟನೆಗೆ ಇಳಿದಿದ್ದಾರೆ.
ಇತ್ತ ಕರ್ನಾಟಕ ಸರ್ಕಾರ (Karnataka Government) ಮಹಿಳಾ ವೈದ್ಯರ ಸುರಕ್ಷತೆಗೆ ಮಹತ್ವದ ಸಭೆ ನಡೆಸಿ, ಹಲವು ನಿರ್ಧಾರಗಳನ್ನು ಕೈಗೊಂಡಿದೆ. ಮಹಿಳಾ ವೈದ್ಯರುಗಳ ಸುರಕ್ಷತೆಯ ದೃಷ್ಟಿಯಿಂದ ಹೊಸ ನಿರ್ಣಯಗಳನ್ನು ಜಾರಿ ಮಾಡ ಹೊರಟಿದೆ. ಕೆಲವು ಕಡೆಗಳಲ್ಲಿ ಸಹಜವಾಗಿ ರೋಗಿ ಅಸುನೀಗಿದರೂ ವೈದ್ಯಾಧಿಕಾರಿಗಳ ಮೇಲೆ ಹಲ್ಲೆ ನಡೆಸಲಾಗುತ್ತದೆ. ರೋಗಿಯ ಸಾವಿಗೆ ರೋಗಗಳಾಗಿರಬಹುದು ಇಲ್ಲವೇ ಆಸ್ಪತ್ರೆಗೆ ಕರೆದುಕೊಂಡು ಬಂದ ದ್ದು ಕೂಡ ತಡವಾಗಿರಬಹುದು ಆದರೆ ಅದನ್ನೆಲ್ಲ ಯೋಚಿಸದೇ ರೋಗಿಯ (Patient) ಸಾವಿಗೆ ವೈದ್ಯರುಗಳನ್ನು ನೇರ ಹೊಣೆ ಮಾದಲಾಗುತ್ತಿದೆ.
ವೈದ್ಯರ ಮೇಲಿನ ಹಲ್ಲೆಗೆ ಶಿಕ್ಷೆ ಇದ್ದರೂ ಅದು ಕೇವಲ ಕಾಗದಲ್ಲಿದೆ ಮಾತ್ರ ಇದೆ. ರೋಗಿಗಳ ಸಂಬಂಧಿಕರು ವೈದ್ಯರ ಮೇಲೆ ಹಲ್ಲೆ ನಡೆಸುವ ಕೃತ್ಯ ಈವರೆಗೂ ಕೊನೆಯಾಗಿಲ್ಲ. ಹೀಗಾಗಿ ಪ್ರಸ್ತುತ ಕಾನೂನು ಬಿಗಿಗೊಳಿಸುವ ಜೊತೆಗೆ, ಮಹಿಳಾ ಸಿಬ್ಬಂದಿಗಳ ಸುರಕ್ಷತೆಗೆ ಹೆಚ್ಚಿನ ಆದ್ಯತೆ ಕೊಡಲು ನಿರ್ಧರಿಸಲಾಗಿದೆ.
ಇನ್ನು ಈ ಕುರಿತಾಗಿ ಸಭೆ ನಡೆಸಿರುವ ವೈದ್ಯಕೀಯ ಶಿಕ್ಷಣ ಇಲಾಖೆ (Department of Medical Education) ಭದ್ರತೆ ಕುರಿತು ಐದು ಮಹತ್ವದ ತೀರ್ಮಾನಗಳನ್ನು ಕೈಗೊಳ್ಳಲಾಗಿದೆ.ರೋಗಿ ಅಥವಾ ರೋಗಿಯ ಸಂಬಂಧಿ ರಾತ್ರಿ ಪಾಳೆಯದಲ್ಲಿ ಕಾರ್ಯನಿರ್ವಹಿಸುವ ಮಹಿಳಾ ವೈದ್ಯರನ್ನು ಇನ್ಮುಂದೆ ನೇರವಾಗಿ ಭೇಟಿ ಮಾಡುವಂತಿಲ್ಲ. ಮೊದಲಿಗೆ ವಾರ್ಡ್ ಬಾಯ್ ಅನ್ನು ಭೇಟಿ ಮಾಡಿ, ಅವರ ಜೊತೆ ವೈದ್ಯರನ್ನು ಕಾಣಬೇಕು.
ಸೆಕ್ಯುರಿಟಿ ಏಜೆನ್ಸಿಗಳ ಬಾಕ್ ರೌಂಡ್ ಚೆಕ್ ಮಾಡಿ, ಪೊಲೀಸ್ ವೆರಿಫಿಕೇಷನ್ (Police Verification) ಮಾಡಲು ನಿರ್ಧರಿಸಲಾಗಿದೆ. ಆಸ್ಪತ್ರೆಯ ಕತ್ತಲ ಕೊಠಡಿಗೆ ಬೀಗ ಜಡಿಯಲು ನಿರ್ಧರಿಸಲಾಗಿದೆ. ಆಸ್ಪತ್ರೆಯಲ್ಲಿರುವ ಔಟ್ ಪೋಸ್ಟ್ ಪೊಲೀಸರಿಗೆ ನೈಟ್ ರೌಂಡ್ಸ್ (Night Rounds) ಹಾಕಲು ಸೂಚಿಸಿ ಮಹಿಳಾ ವೈದ್ಯರುಗಳಿಗೆ ರಕ್ಷಣೆ ಒದಗಿಸುವ ಎಲ್ಲ ಯೋಜನೆಗಳನ್ನು ಅಳವಡಿಸಲಾಗುತ್ತಿದೆ.
New Rules for Govt Doctors 2024 In Karnataka
Bengaluru: Cases of assault and harassment on doctors are increasing in recent days and the case of rape and murder of a Kolkata doctor has shocked the country and the question has started to arise as to how safe women doctors are in the workplace. Doctors across the country have protested to give justice to the doctor who was already raped and brutally murdered.
Karnataka Government held an important meeting for the safety of women doctors and took many decisions. In view of the safety of women doctors, new resolutions are going to be implemented. In some places, even if the patient is unconscious, the medical personnel are assaulted. The death of the patient may be due to diseases or the fact that he was brought to the hospital too late, but without thinking about it, the doctors are being held directly responsible for the death of the patient.
Although there is a punishment for assaulting a doctor, it is only in Kaga. The act of assaulting the doctors by the relatives of the patients has not ended till now. So besides tightening the current law, it has been decided to give high priority to the safety of women personnel.
The Department of Medical Education, which has held a meeting on this issue, has taken five important decisions about security. The patient or the patient's relative cannot directly visit the female doctor working in the night camp. First visit the ward boy and see the doctor with him.
It has been decided to do a back round check of the security agencies and Police Verification. It is decided to lock the dark room of the hospital. All the plans are being implemented to provide protection to the women doctors by instructing the out post police in the hospital to put up night rounds