• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಪ್ರಮುಖ ಸುದ್ದಿ

ಇಂದಿನಿಂದ UPI ಪಾವತಿಯಲ್ಲಿ ಹೊಸ ನಿಯಮ ಜಾರಿ: ಹಣ ಪಾವತಿ ಮಾಡಲು OTP, ಫಿಂಗರ್‌ಪ್ರಿಂಟ್ ಅಥವಾ ಫೇಸ್ ಐಡಿ ಅಗತ್ಯ

Teju Srinivas by Teju Srinivas
in ಪ್ರಮುಖ ಸುದ್ದಿ, ವಿಜಯ ಟೈಮ್ಸ್‌
ಇಂದಿನಿಂದ UPI ಪಾವತಿಯಲ್ಲಿ ಹೊಸ ನಿಯಮ ಜಾರಿ: ಹಣ ಪಾವತಿ ಮಾಡಲು OTP, ಫಿಂಗರ್‌ಪ್ರಿಂಟ್ ಅಥವಾ ಫೇಸ್ ಐಡಿ ಅಗತ್ಯ
0
SHARES
20
VIEWS
Share on FacebookShare on Twitter

UPI ಪಾವತಿಗೆ ಹೊಸ ಭದ್ರತಾ (New rules for UPI payments ) ನಿಯಮ ಜಾರಿ

ಇನ್ನು ಪಿನ್ ಮಾತ್ರ ಸಾಲದು: OTP ಅಥವಾ ಫಿಂಗರ್‌ಪ್ರಿಂಟ್ ಕಡ್ಡಾಯ

UPI ಮೂಲಕ ಹಣ ಡ್ರಾ ಮಾಡಿದರೂ ಉಚಿತ ಮಿತಿಗೆ ಸೇರಲಿದೆ ವಹಿವಾಟು

ಭಾರತದಲ್ಲಿ ಡಿಜಿಟಲ್ ಪಾವತಿಯನ್ನು ಇನ್ನಷ್ಟು ಸುರಕ್ಷಿತಗೊಳಿಸುವ ಉದ್ದೇಶದಿಂದ (New rules for UPI payments) ಭಾರತೀಯ ರಿಸರ್ವ್ ಬ್ಯಾಂಕ್ (RBI) ಯುಪಿಐ ಪಾವತಿ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಗಳನ್ನು ಜಾರಿಗೆ ತಂದಿದೆ.

ಏಪ್ರಿಲ್ 1, 2026ರಿಂದ ಈ ಹೊಸ ನಿಯಮಗಳು ಜಾರಿಗೆ ಬಂದಿದ್ದು, ದೇಶದ ಕೋಟ್ಯಾಂತರ ಯುಪಿಐ ಬಳಕೆದಾರರ ದೈನಂದಿನ ಹಣಕಾಸು ವಹಿವಾಟಿನ ಮೇಲೆ ಇದರ ನೇರ ಪರಿಣಾಮ ಬೀಳಲಿದೆ.

New rules for UPI payments

ಈಗಾಗಲೇ ಚಹಾ ಅಂಗಡಿ ಸೇರಿಂದತೆ ದೊಡ್ಡ ಶಾಪಿಂಗ್ ಮಾಲ್‌ಗಳವರೆಗೆ ಎಲ್ಲೆಡೆ PhonePe, Google Pay, Paytm ಮುಂತಾದ (New rules for UPI payments)

ಯುಪಿಐ ಆಪ್‌ಗಳ ಬಳಕೆ ಹೆಚ್ಚಾಗಿದ್ದು, ಈ ಹೊಸ ನಿಯಮಗಳು ಬಳಕೆದಾರರ ಹಣದ ಭದ್ರತೆಯನ್ನು ಹೆಚ್ಚಿಸುವ ಉದ್ದೇಶದಿಂದ ಜಾರಿಗೆ ತರಲಾಗಿದೆ.

ಈವರೆಗೆ ಯುಪಿಐ ಮೂಲಕ ಪಾವತಿ ಮಾಡಲು ಕೇವಲ QR ಕೋಡ್ ಸ್ಕ್ಯಾನ್ (Code Scan) ಮಾಡಿ, ಯುಪಿಐ ಪಿನ್ ನಮೂದಿಸಿದರೆ ಹಣ ವರ್ಗಾವಣೆಯಾಗುತ್ತಿತ್ತು.

ಆದರೆ ಈಗ RBI ಎರಡು ಹಂತದ ದೃಢೀಕರಣ ವ್ಯವಸ್ಥೆ (Two-Factor Authentication) ಕಡ್ಡಾಯಗೊಳಿಸಿದೆ. ಹೊಸ ನಿಯಮದ ಪ್ರಕಾರ, ಇನ್ನು ಮುಂದೆ ಕೇವಲ ಪಿನ್ ಹಾಕಿದರೆ ಪಾವತಿ ಪೂರ್ಣಗೊಳ್ಳುವುದಿಲ್ಲ.

ಪಿನ್ ನಮೂದಿಸಿದ ನಂತರ ನಿಮ್ಮ ಮೊಬೈಲ್‌ಗೆ ಬರುವ OTP ಅಥವಾ ಫಿಂಗರ್‌ಪ್ರಿಂಟ್ ಅಥವಾ ಫೇಸ್ ಐಡಿ ಮೂಲಕ ದೃಢೀಕರಣ ಮಾಡಬೇಕಾಗುತ್ತದೆ.

ಈ ಎರಡು ಹಂತಗಳು ಯಶಸ್ವಿಯಾದ ನಂತರ ಮಾತ್ರ ನಿಮ್ಮ ಖಾತೆಯಿಂದ ಹಣ ಕಡಿತವಾಗುತ್ತದೆ. ಇದರಿಂದ ಪಾವತಿಗೆ ಕೆಲವು ಸೆಕೆಂಡುಗಳಷ್ಟು ಹೆಚ್ಚು ಸಮಯ ಬೇಕಾದರೂ, ಹಣದ ಭದ್ರತೆ ಬಹಳಷ್ಟು ಹೆಚ್ಚಾಗಲಿದೆ.

ಈ ಹೊಸ ನಿಯಮದಿಂದ ಆನ್‌ಲೈನ್ ವಂಚನೆ ಮತ್ತು ಸೈಬರ್ ಮೋಸಗಳಿಗೆ ದೊಡ್ಡ ಮಟ್ಟದಲ್ಲಿ ಕಡಿವಾಣ ಬೀಳುವ ನಿರೀಕ್ಷೆಯಿದೆ.

ಒಂದು ವೇಳೆ ವಂಚಕರಿಗೆ ನಿಮ್ಮ ಯುಪಿಐ ಪಿನ್ ತಿಳಿದಿದ್ದರೂ ಸಹ, OTP ಅಥವಾ ಫಿಂಗರ್‌ಪ್ರಿಂಟ್ (Fingerprint) ಇಲ್ಲದೆ ಅವರು ನಿಮ್ಮ ಖಾತೆಯಿಂದ ಹಣ ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ.

ಇತ್ತೀಚಿನ ದಿನಗಳಲ್ಲಿ ಯುಪಿಐ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ, ಈ ಹೊಸ ಭದ್ರತಾ ಕ್ರಮವನ್ನು RBI ಜಾರಿಗೆ ತಂದಿದೆ.

ಇದರಿಂದ ಡಿಜಿಟಲ್ ಪಾವತಿ ವ್ಯವಸ್ಥೆಯ ಮೇಲೆ ಜನರ ವಿಶ್ವಾಸ ಇನ್ನಷ್ಟು ಹೆಚ್ಚಾಗಲಿದೆ ಎಂದು ಬ್ಯಾಂಕಿಂಗ್ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಇದೇ ವೇಳೆ ವಹಿವಾಟಿನ ಮಿತಿಗಳ ಕುರಿತು ಸಹ ಕೆಲವು ನಿಯಮಗಳನ್ನು ಸ್ಪಷ್ಟಪಡಿಸಲಾಗಿದೆ. ಸಾಮಾನ್ಯ ವಹಿವಾಟುಗಳಿಗೆ ದಿನಕ್ಕೆ ಗರಿಷ್ಠ 1 ಲಕ್ಷ ರೂಪಾಯಿ ವರೆಗೆ ಹಣ ಕಳುಹಿಸಲು ಅವಕಾಶ ಇರುತ್ತದೆ.

ಆದರೆ ಆಸ್ಪತ್ರೆ ಬಿಲ್, ಶಿಕ್ಷಣ ಶುಲ್ಕ ಮತ್ತು ಇನ್ಶೂರೆನ್ಸ್ ಪ್ರೀಮಿಯಂ (Insurance Premium) ಮುಂತಾದ ವಿಶೇಷ ಪಾವತಿಗಳಿಗೆ 5 ಲಕ್ಷ ರೂಪಾಯಿ ವರೆಗೆ ಮಿತಿ ನೀಡಲಾಗಿದೆ.

ಹೊಸ ಯುಪಿಐ ಬಳಕೆದಾರರಿಗೆ ಮೊದಲ 24 ಗಂಟೆಗಳಲ್ಲಿ ಕೇವಲ 5,000 ರೂಪಾಯಿ ವರೆಗೆ ಮಾತ್ರ ವಹಿವಾಟು ಮಾಡಲು ಅವಕಾಶ ನೀಡಲಾಗಿದೆ.

ಇದು ವಂಚನೆಗಳನ್ನು ತಡೆಯುವ ಉದ್ದೇಶದಿಂದ ಮಾಡಲಾಗಿದೆ.

ಇನ್ನೊಂದು ಪ್ರಮುಖ ಬದಲಾವಣೆ ಎಂದರೆ, ಡೆಬಿಟ್ ಕಾರ್ಡ್ ಇಲ್ಲದೆ ಯುಪಿಐ ಮೂಲಕ ATM ನಲ್ಲಿ QR ಕೋಡ್ ಸ್ಕ್ಯಾನ್ ಮಾಡಿ ಹಣ ತೆಗೆಯುವ ವ್ಯವಸ್ಥೆಗೆ ಹೊಸ

ನಿಯಮ ಜಾರಿಗೆ ಬಂದಿದೆ. ಹಲವಾರು ಬ್ಯಾಂಕುಗಳು ಈ ವಹಿವಾಟನ್ನು ಡೆಬಿಟ್ ಕಾರ್ಡ್ (Debit Card) ಉಚಿತ ವಹಿವಾಟಿನ ಮಿತಿಗೆ ಸೇರಿಸಿವೆ.

ಉದಾಹರಣೆಗೆ ತಿಂಗಳಿಗೆ 5 ಬಾರಿ ಉಚಿತವಾಗಿ ಹಣ ತೆಗೆಯುವ ಅವಕಾಶ ಇದ್ದರೆ, ಯುಪಿಐ ಮೂಲಕ ಹಣ ತೆಗೆಯುವುದನ್ನೂ ಅದರಲ್ಲಿ ಒಂದು ವಹಿವಾಟು

ಎಂದು ಪರಿಗಣಿಸಲಾಗುತ್ತದೆ. ಉಚಿತ ಮಿತಿ ಮುಗಿದ ನಂತರ ಯುಪಿಐ ಮೂಲಕ ATM ನಲ್ಲಿ ಹಣ ತೆಗೆಯಲು ಶುಲ್ಕ ವಿಧಿಸಲಾಗುತ್ತದೆ.

ಆದ್ದರಿಂದ ಬಳಕೆದಾರರು ತಮ್ಮ ಬ್ಯಾಂಕ್ ನಿಯಮಗಳನ್ನು ಗಮನದಲ್ಲಿಟ್ಟುಕೊಳ್ಳುವುದು ಅಗತ್ಯವಾಗಿದೆ.

ಇದನ್ನು ಓದಿ : https://vijayatimes.com/war-against-iran-to-end/

Tags: DIGITALPAYMENTOTPpaymentUPI

Related News

ಗೌರಿ-ಗಣೇಶ ಹಬ್ಬಕ್ಕೆ KSRTCಯಿಂದ 2,400 ಹೆಚ್ಚುವರಿ ಬಸ್‌ಗಳ ವ್ಯವಸ್ಥೆ
ಪ್ರಮುಖ ಸುದ್ದಿ

ಗೌರಿ-ಗಣೇಶ ಹಬ್ಬಕ್ಕೆ KSRTCಯಿಂದ 2,400 ಹೆಚ್ಚುವರಿ ಬಸ್‌ಗಳ ವ್ಯವಸ್ಥೆ

September 12, 2026
ಬೆಂಗಳೂರಿನಲ್ಲಿ ಬಾಲಕಾರ್ಮಿಕ ಪದ್ಧತಿ ಇನ್ನೂ ಜೀವಂತ: ಸ್ಪೆಷಲ್ ಡ್ರೈವ್‌ನಲ್ಲಿ 17 ಬಾಲಕರ ರಕ್ಷಣೆ
ಪ್ರಮುಖ ಸುದ್ದಿ

ಬೆಂಗಳೂರಿನಲ್ಲಿ ಬಾಲಕಾರ್ಮಿಕ ಪದ್ಧತಿ ಇನ್ನೂ ಜೀವಂತ: ಸ್ಪೆಷಲ್ ಡ್ರೈವ್‌ನಲ್ಲಿ 17 ಬಾಲಕರ ರಕ್ಷಣೆ

September 12, 2026
80ರ ದಶಕದ ಫೋಟೊಗಳಿಗೆ ಮಾರು ಹೋಗುವ ಮುನ್ನ ಎಚ್ಚರ:ಟ್ರೆಂಡ್ ಹಿಂದೆ ಅಡಗಿದೆ ಸೈಬರ್ ಅಪಾಯ!
ಪ್ರಮುಖ ಸುದ್ದಿ

80ರ ದಶಕದ ಫೋಟೊಗಳಿಗೆ ಮಾರು ಹೋಗುವ ಮುನ್ನ ಎಚ್ಚರ:ಟ್ರೆಂಡ್ ಹಿಂದೆ ಅಡಗಿದೆ ಸೈಬರ್ ಅಪಾಯ!

September 12, 2026
ಬೆಂಗಳೂರಿನ ರಸ್ತೆ ಗುಂಡಿಗಳಿಗೆ ಜೆಟ್ ಪ್ಯಾಚರ್ ಟ್ರೀಟ್‌ಮೆಂಟ್: ₹2 ಕೋಟಿ ಯಂತ್ರದ ಪ್ರಾಯೋಗಿಕ ಕಾರ್ಯಾಚರಣೆ
ಪ್ರಮುಖ ಸುದ್ದಿ

ಬೆಂಗಳೂರಿನ ರಸ್ತೆ ಗುಂಡಿಗಳಿಗೆ ಜೆಟ್ ಪ್ಯಾಚರ್ ಟ್ರೀಟ್‌ಮೆಂಟ್: ₹2 ಕೋಟಿ ಯಂತ್ರದ ಪ್ರಾಯೋಗಿಕ ಕಾರ್ಯಾಚರಣೆ

September 12, 2026

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.