• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಪ್ರಮುಖ ಸುದ್ದಿ

ಪ್ರಯಾಣಿಕರ ಸುರಕ್ಷತೆಗೆ ಮೊದಲ ಆದ್ಯತೆ: KSRTC ಬಸ್‌ಗಳಲ್ಲಿ ಹೊಸ ಭದ್ರತಾ ತಂತ್ರಜ್ಞಾನ

Teju Srinivas by Teju Srinivas
in ಪ್ರಮುಖ ಸುದ್ದಿ, ರಾಜ್ಯ, ವಿಜಯ ಟೈಮ್ಸ್‌
ಪ್ರಯಾಣಿಕರ ಸುರಕ್ಷತೆಗೆ ಮೊದಲ ಆದ್ಯತೆ: KSRTC ಬಸ್‌ಗಳಲ್ಲಿ ಹೊಸ ಭದ್ರತಾ ತಂತ್ರಜ್ಞಾನ
0
SHARES
2
VIEWS
Share on FacebookShare on Twitter
  • ಸಾಲು ಸಾಲು ಅಗ್ನಿ ದುರಂತಗಳ ಬಳಿಕ KSRTCಯಿಂದ (New security in KSRTC buses) ಭದ್ರತಾ ಕ್ರಾಂತಿ: ಬಸ್ಸುಗಳಲ್ಲಿ ಅತ್ಯಾಧುನಿಕ ಸೇಫ್ಟಿ ವ್ಯವಸ್ಥೆ
  • ಡ್ಯಾಶ್ ಕ್ಯಾಮ್, ಪ್ಯಾನಿಕ್ ಬಟನ್, ಎಮರ್ಜೆನ್ಸಿ ಎಕ್ಸಿಟ್ ಡೋರ್‌ಗಳೊಂದಿಗೆ ಭದ್ರತಾ ವ್ಯವಸ್ಥೆಗೆ ಹೆಚ್ಚಿನ ಬಲ
  • ಕುಡಿದು ಬಂದರೆ ಬಸ್ ಸ್ಟಾರ್ಟ್ ಆಗಲ್ಲ: KSRTCಯ ADAS ಸಿಸ್ಟಂ ವಿಶೇಷತೆ

Bengaluru: ಇತ್ತೀಚಿನ ದಿನಗಳಲ್ಲಿ ಖಾಸಗಿ ನೈಟ್ ಸರ್ವಿಸ್ ಬಸ್‌ಗಳಲ್ಲಿ ಸಂಭವಿಸಿದ ಅಗ್ನಿ (New security in KSRTC buses) ದುರಂತಗಳು ರಾಜ್ಯದ ಜನರಲ್ಲಿ ಭೀತಿಯನ್ನುಂಟುಮಾಡಿವೆ.

ಅನೇಕ ಅಮಾಯಕ ಪ್ರಯಾಣಿಕರು ಪ್ರಾಣ ಕಳೆದುಕೊಂಡ ಈ ದುರ್ಘಟನೆಗಳು ಸಾರಿಗೆ ಭದ್ರತೆಯ ಬಗ್ಗೆ ಗಂಭೀರ ಚರ್ಚೆಗೆ ಕಾರಣವಾಗಿವೆ.

ಈ ಹಿನ್ನೆಲೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ಸಂಪೂರ್ಣ ಎಚ್ಚರಿಕೆಯ ಕ್ರಮಗಳನ್ನು ಕೈಗೊಂಡಿದ್ದು, ತನ್ನ ಪ್ರಮುಖ ಬಸ್‌ಗಳಲ್ಲಿ ಅತ್ಯಾಧುನಿಕ ಸುರಕ್ಷತಾ ತಂತ್ರಜ್ಞಾನಗಳನ್ನು ಅಳವಡಿಸಲು ಮುಂದಾಗಿದೆ.

New security in KSRTC buses

ಮೊದಲ ಹಂತದಲ್ಲಿ ಅಂಬಾರಿ ಉತ್ಸವ ಹಾಗೂ ಅಂಬಾರಿ 2.0 ಮಾದರಿಯ ಎಸಿ ಸ್ಲೀಪರ್ ಬಸ್‌ಗಳಲ್ಲಿ ಈ ಭದ್ರತಾ ವ್ಯವಸ್ಥೆ ಜಾರಿಗೆ ಬರಲಿದೆ.

KSRTC ಬಸ್‌ಗಳಲ್ಲಿ ಅಳವಡಿಸಲಾಗುತ್ತಿರುವ ಪ್ರಮುಖ ಸುರಕ್ಷತಾ ವ್ಯವಸ್ಥೆಗಳಲ್ಲಿ ಡ್ರೈವರ್ ಸೀಟ್ ಬಳಿ ಡ್ಯಾಶ್ ಕ್ಯಾಮೆರಾ ಅಳವಡಿಕೆ ಮುಖ್ಯವಾಗಿದೆ.

ಈ ಕ್ಯಾಮೆರಾ ಮೂಲಕ ಪ್ರಯಾಣದ ವೇಳೆ ನಡೆಯುವ ಎಲ್ಲ ಚಟುವಟಿಕೆಗಳನ್ನು (New security in KSRTC buses) ದಾಖಲಿಸಬಹುದಾಗಿದ್ದು, ಯಾವುದೇ ಅಪಘಾತ ಸಂಭವಿಸಿದರೆ ಕಾರಣ ಪತ್ತೆಹಚ್ಚಲು ಸಹಕಾರಿಯಾಗಲಿದೆ. ಜೊತೆಗೆ, ಬಸ್‌ನ ಇಂಜಿನ್ ಕಂಪಾರ್ಟ್‌ಮೆಂಟ್‌ನಲ್ಲಿ ಫೈರ್ ಡಿಟೆಕ್ಷನ್ ಅಂಡ್ ಸಪ್ರೆಷನ್ ಸಿಸ್ಟಂ (FDSS) ಅಳವಡಿಸಲಾಗುತ್ತಿದೆ.

ಬೆಂಕಿ ಕಾಣಿಸಿಕೊಂಡ ಕ್ಷಣದಲ್ಲೇ 15 ನಾಜಲ್‌ಗಳ ಮೂಲಕ ಸ್ವಯಂಚಾಲಿತವಾಗಿ ಫೋಮ್ ಸ್ಪ್ರೇ ಆಗಿ ಅಗ್ನಿ ವ್ಯಾಪಿಸದಂತೆ ತಡೆಯುವ ವ್ಯವಸ್ಥೆ ಇದಾಗಿದೆ. ಅಗತ್ಯವಿದ್ದರೆ ಚಾಲಕ ಡ್ಯಾಶ್‌ಬೋರ್ಡ್‌ನಲ್ಲಿರುವ (Dashboard) ಬಟನ್ ಒತ್ತುವ ಮೂಲಕ ಕೈಯಾರೆ ಕೂಡ ಈ ವ್ಯವಸ್ಥೆಯನ್ನು ಚಾಲನೆ ಮಾಡಬಹುದು.

ಪ್ರಯಾಣಿಕರ ಸುರಕ್ಷತಿಗೆ ಹೆಚ್ಚಿನ ಆದ್ಯತೆ ನೀಡಿರುವ KSRTC, ಬಸ್ ಒಳಭಾಗದಲ್ಲಿಯೂ ಹಲವು ಎಮರ್ಜೆನ್ಸಿ ವ್ಯವಸ್ಥೆಗಳನ್ನು ಅಳವಡಿಸಿದೆ.

ಬಸ್ ಮುಂಭಾಗ ಮತ್ತು ಹಿಂಭಾಗದಲ್ಲಿ ಪ್ರತ್ಯೇಕವಾಗಿ 4 ಕೆಜಿಯ ಫೈರ್ ಎಕ್ಸ್ಟಿಂಗ್ವಿಷರ್‌ಗಳನ್ನು ಇರಿಸಲಾಗಿದ್ದು, ತುರ್ತು ಸಂದರ್ಭದಲ್ಲಿ

ತಕ್ಷಣ ಬಳಕೆಗೆ ಲಭ್ಯವಾಗಲಿದೆ. ಪ್ರತಿಯೊಂದು ಬರ್ತ್ ಸೀಟ್ ಬಳಿ ಕಿಟಕಿ ಗ್ಲಾಸ್ ಒಡೆಯಲು ಹ್ಯಾಮರ್ ಒದಗಿಸಲಾಗಿದೆ.

ಜೊತೆಗೆ ಚಾಲಕನ ಸೀಟ್ ಹಿಂಭಾಗದಲ್ಲಿ ದೊಡ್ಡ ಹ್ಯಾಮರ್ ಇಟ್ಟುಕೊಳ್ಳಲಾಗಿದೆ. ಬಸ್‌ನ ಮೂರನೇ ಬರ್ತ್ ಬಳಿ ಎಮರ್ಜೆನ್ಸಿ

ಎಕ್ಸಿಟ್ ಡೋರ್ ಅಳವಡಿಸಲಾಗಿದ್ದು, ಈ ಸೀಟ್ ಅನ್ನು ಯಾವುದೇ ಪ್ರಯಾಣಿಕರಿಗೆ ಬುಕ್ ಮಾಡಲಾಗುವುದಿಲ್ಲ.

ಅಗ್ನಿ ಅವಘಡದಂತಹ ಸಂದರ್ಭಗಳಲ್ಲಿ ಪ್ರಯಾಣಿಕರು ಸುರಕ್ಷಿತವಾಗಿ ಹೊರಬರಲು ಇದು ಸಹಾಯ ಮಾಡಲಿದೆ.

ಇನ್ನೊಂದು ಮಹತ್ವದ ಹೆಜ್ಜೆಯಾಗಿ KSRTC ತನ್ನ ಬಸ್‌ಗಳಲ್ಲಿ ಅತ್ಯಾಧುನಿಕ ADAS (Advanced Driver Assistance System) ತಂತ್ರಜ್ಞಾನ ಅಳವಡಿಸುತ್ತಿದೆ.

ಈ ವ್ಯವಸ್ಥೆ ಚಾಲಕ ವಾಹನ ಚಲಾಯಿಸುವಾಗ ಮೊಬೈಲ್ ಬಳಕೆ ಮಾಡಿದರೆ, ನಿದ್ರಾವಸ್ಥೆಗೆ ಜಾರಿದರೆ ಅಥವಾ ಅಸ್ವಸ್ಥತೆಯ ಲಕ್ಷಣಗಳು ಕಂಡುಬಂದರೆ ತಕ್ಷಣ ಎಚ್ಚರಿಕೆ ನೀಡುತ್ತದೆ.

ಮೊದಲಿಗೆ ಬೀಪ್ ಶಬ್ದದ ಮೂಲಕ ಸೂಚನೆ ನೀಡುವ ಈ ಸಿಸ್ಟಂ, ಪರಿಸ್ಥಿತಿ ಗಂಭೀರವಾದರೆ ಕ್ರಿಟಿಕಲ್ ವಾರ್ನಿಂಗ್ ನೀಡಿ ವಾಹನದ ವೇಗವನ್ನು ತಾನಾಗಿಯೇ ಕಡಿಮೆ ಮಾಡುತ್ತದೆ.

ವಿಶೇಷವೆಂದರೆ ಚಾಲಕ ಮದ್ಯಪಾನ ಮಾಡಿಕೊಂಡಿದ್ದರೆ ಬಸ್ ಸ್ಟಾರ್ಟ್ ಆಗದಂತೆ ತಡೆಯುವ ವ್ಯವಸ್ಥೆಯೂ ಇದರಲ್ಲಿ ಸೇರಿದೆ.

ಇದು ದೇಶದಲ್ಲೇ ಮೊದಲ ಬಾರಿಗೆ KSRTC ಬಸ್‌ಗಳಲ್ಲಿ ಜಾರಿಗೆ ಬರುತ್ತಿರುವ ತಂತ್ರಜ್ಞಾನವಾಗಿದೆ.

ಐರಾವತ ಬಸ್‌ಗಳಲ್ಲೂ ವಿಶೇಷ ಸುರಕ್ಷತಾ ಕ್ರಮಗಳನ್ನು ಜಾರಿಗೊಳಿಸಲಾಗಿದ್ದು, ಪ್ರಯಾಣಿಕರ ಸೀಟ್ ಬಳಿ ಸುಮಾರು 30 ಸ್ಪ್ರಿಂಕ್ಲರ್ ನಾಜಲ್‌ಗಳನ್ನು ಅಳವಡಿಸಲಾಗಿದೆ. ಅಗ್ನಿ ಅವಘಡ ಸಂಭವಿಸಿದರೆ ಈ ನಾಜಲ್‌ಗಳ ಮೂಲಕ ತಕ್ಷಣ ನೀರು ಸರಬರಾಜಾಗುತ್ತದೆ.

ಇದಕ್ಕಾಗಿ ಬಸ್ ಲಗೇಜ್ ಕಂಪಾರ್ಟ್‌ಮೆಂಟ್ ಬಳಿ 170 ಲೀಟರ್ ಸಾಮರ್ಥ್ಯದ ಎರಡು ಸ್ಟೇನ್‌ಲೆಸ್ ಸ್ಟೀಲ್ ಟ್ಯಾಂಕ್‌ಗಳನ್ನು (Stainless steel tank) ಅಳವಡಿಸಲಾಗಿದೆ.

KSRTC ಡಿಸಿ ನಾಗರಾಜ್ ಮೂರ್ತಿ ಅವರ ಪ್ರಕಾರ, ಬಸ್ ಹಿಂಭಾಗದಲ್ಲಿ ಎಮರ್ಜೆನ್ಸಿ ಎಕ್ಸಿಟ್ ಡೋರ್ ಹಾಗೂ ಸ್ಟೀಲ್ ಲ್ಯಾಡರ್ ಅಳವಡಿಸಲಾಗಿದ್ದು, ಪ್ರಯಾಣಿಕರು ಸುರಕ್ಷಿತವಾಗಿ ಕೆಳಗೆ ಇಳಿಯಲು ಅನುಕೂಲವಾಗುತ್ತದೆ.

ಇತ್ತೀಚಿನ ದುರ್ಘಟನೆಗಳಿಂದ ಪಾಠ ಕಲಿತಿರುವ KSRTC, ಇಂತಹ ಸಮಗ್ರ ಭದ್ರತಾ ಕ್ರಮಗಳ ಮೂಲಕ ಸಾರ್ವಜನಿಕ ಸಾರಿಗೆಯಲ್ಲಿ ಹೊಸ ಭದ್ರತಾ ಮಾನದಂಡ ಸ್ಥಾಪಿಸಲು ಮುಂದಾಗಿದೆ

Tags: bengaluru

Related News

ಭಾರತೀಯ ಮೂಲದ ಅಮೆರಿಕನ್ ಗಗನಯಾತ್ರಿ ಸುನಿತಾ ವಿಲಿಯಮ್ಸ್‌ ನಿವೃತ್ತಿ: 27 ವರ್ಷಗಳ ಬಾಹ್ಯಾಕಾಶ ಪಯಣಕ್ಕೆ ಗುಡ್ ಬೈ
ದೇಶ-ವಿದೇಶ

ಭಾರತೀಯ ಮೂಲದ ಅಮೆರಿಕನ್ ಗಗನಯಾತ್ರಿ ಸುನಿತಾ ವಿಲಿಯಮ್ಸ್‌ ನಿವೃತ್ತಿ: 27 ವರ್ಷಗಳ ಬಾಹ್ಯಾಕಾಶ ಪಯಣಕ್ಕೆ ಗುಡ್ ಬೈ

January 21, 2026
ಡೀಪ್ ಫೇಕ್ ಹಾವಳಿಗೆ ಬ್ರೇಕ್ ಹಾಕಲು ಮುಂದಾದ ಕೇಂದ್ರ ಸರ್ಕಾರ: AI ಫೋಟೋ–ವೀಡಿಯೋಗಳಿಗೆ ಲೇಬಲ್ ಕಡ್ಡಾಯ
ದೇಶ-ವಿದೇಶ

ಡೀಪ್ ಫೇಕ್ ಹಾವಳಿಗೆ ಬ್ರೇಕ್ ಹಾಕಲು ಮುಂದಾದ ಕೇಂದ್ರ ಸರ್ಕಾರ: AI ಫೋಟೋ–ವೀಡಿಯೋಗಳಿಗೆ ಲೇಬಲ್ ಕಡ್ಡಾಯ

January 21, 2026
ಬ್ಯಾನರ್ ಗಲಾಟೆಗಳ ಬಳಿಕ ಎಚ್ಚೆತ್ತ ಜಿಬಿಎ: ಬೆಂಗಳೂರಿನಾದ್ಯಂತ ಅನಧಿಕೃತ ಫ್ಲೆಕ್ಸ್ , ಬ್ಯಾನರ್ ತೆರವು
ಪ್ರಮುಖ ಸುದ್ದಿ

ಬ್ಯಾನರ್ ಗಲಾಟೆಗಳ ಬಳಿಕ ಎಚ್ಚೆತ್ತ ಜಿಬಿಎ: ಬೆಂಗಳೂರಿನಾದ್ಯಂತ ಅನಧಿಕೃತ ಫ್ಲೆಕ್ಸ್ , ಬ್ಯಾನರ್ ತೆರವು

January 21, 2026
ಜಿಬಿಎ ಚುನಾವಣೆಗೆ ಆಯೋಗ ಸಜ್ಜು : ಬ್ಯಾಲೆಟ್ ಪೇಪರ್ ಮೂಲಕ ಮತದಾನ, ಕರಡು ಮತದಾರರ ಪಟ್ಟಿ ಪ್ರಕಟ
ಪ್ರಮುಖ ಸುದ್ದಿ

ಜಿಬಿಎ ಚುನಾವಣೆಗೆ ಆಯೋಗ ಸಜ್ಜು : ಬ್ಯಾಲೆಟ್ ಪೇಪರ್ ಮೂಲಕ ಮತದಾನ, ಕರಡು ಮತದಾರರ ಪಟ್ಟಿ ಪ್ರಕಟ

January 20, 2026

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.