• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಪ್ರಮುಖ ಸುದ್ದಿ

ಬಿಎಂಟಿಸಿ ಬಸ್‌ಗಳಲ್ಲಿ ಹೊಸ ಸ್ಮಾರ್ಟ್ ಟಿಕೆಟ್ ವ್ಯವಸ್ಥೆ:ಶೀಘ್ರದಲ್ಲೇ ಎಲ್ಲಾ ಬಸ್‌ಗಳಲ್ಲಿ ಎಲೆಕ್ಟ್ರಾನಿಕ್ ಟಿಕೆಟ್ ಯಂತ್ರ (ETM) ಅಳವಡಿಕೆ

Teju Srinivas by Teju Srinivas
in ಪ್ರಮುಖ ಸುದ್ದಿ, ರಾಜ್ಯ, ವಿಜಯ ಟೈಮ್ಸ್‌
ಬಿಎಂಟಿಸಿ ಬಸ್‌ಗಳಲ್ಲಿ ಹೊಸ ಸ್ಮಾರ್ಟ್ ಟಿಕೆಟ್ ವ್ಯವಸ್ಥೆ:ಶೀಘ್ರದಲ್ಲೇ ಎಲ್ಲಾ ಬಸ್‌ಗಳಲ್ಲಿ ಎಲೆಕ್ಟ್ರಾನಿಕ್ ಟಿಕೆಟ್ ಯಂತ್ರ (ETM) ಅಳವಡಿಕೆ
0
SHARES
23
VIEWS
Share on FacebookShare on Twitter
  • 11 ಸಾವಿರ ಹೊಸ ETM ಯಂತ್ರಗಳ (New smart ticket system in BMTC ) ಅಳವಡಿಕೆ – ನಗದು ರಹಿತ ಪಾವತಿಗೆ ಉತ್ತೇಜನ
  • ಡೈನಾಮಿಕ್ QR ಕೋಡ್ ಮೂಲಕ ವೇಗವಾದ ಮತ್ತು ಸುರಕ್ಷಿತ ಟಿಕೆಟ್ ಪಾವತಿ
  • ಗೂಗಲ್ ಪೇ, ಫೋನ್ ಪೇ ಸೇರಿದಂತೆ ಡಿಜಿಟಲ್ ಪಾವತಿಗೆ ಅವಕಾಶ ನೀಡುವ ETM ಯಂತ್ರಗಳು

Bengaluru : ಬೆಂಗಳೂರು ನಗರದ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ ಮಹತ್ವದ (New smart ticket system in BMTC) ಬದಲಾವಣೆ ತರಲು ಬೃಹತ್ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಹೊಸ ಹೆಜ್ಜೆ ಇಟ್ಟಿದೆ.

ಪ್ರಯಾಣಿಕರಿಗೆ ಸುಲಭ ಮತ್ತು ವೇಗವಾದ ಸೇವೆ ಒದಗಿಸುವ ಉದ್ದೇಶದಿಂದ ಬಸ್‌ಗಳಲ್ಲಿ ಅತ್ಯಾಧುನಿಕ ಎಲೆಕ್ಟ್ರಾನಿಕ್ ಟಿಕೆಟ್ ಯಂತ್ರಗಳನ್ನು (ETM) ಅಳವಡಿಸಲು ಸಂಸ್ಥೆ ಮುಂದಾಗಿದೆ.

New smart ticket system in BMTC

ಈ ಹೊಸ ವ್ಯವಸ್ಥೆಯ ಮೂಲಕ ಪ್ರಯಾಣಿಕರು ಮೆಟ್ರೋ ಕಾರ್ಡ್ ಬಳಸಿ ಬಿಎಂಟಿಸಿ ಬಸ್‌ಗಳಲ್ಲಿ ಟಿಕೆಟ್ ಪಡೆಯಲು ಸಾಧ್ಯವಾಗಲಿದೆ. ಇದರಿಂದ ಪ್ರಯಾಣಿಕರು ಬೇರೆ ಬೇರೆ ಕಾರ್ಡ್‌ಗಳನ್ನು ತೆಗೆದುಕೊಂಡು ಹೋಗುವ ಅವಶ್ಯಕತೆ ಇಲ್ಲದೆ, ಒಂದೇ ಕಾರ್ಡ್ ಮೂಲಕ ಮೆಟ್ರೋ ಹಾಗೂ ಬಸ್ ಸೇವೆ ಬಳಸುವ ಅವಕಾಶ ದೊರೆಯಲಿದೆ.

ಶಕ್ತಿ ಯೋಜನೆ ಆರಂಭವಾದ ನಂತರ ಪ್ರತಿದಿನ ಸುಮಾರು ನಾಲ್ವತ್ತು ಲಕ್ಷಕ್ಕೂ (New smart ticket system in BMTC) ಹೆಚ್ಚು ಜನರು ಬಿಎಂಟಿಸಿ ಬಸ್‌ಗಳಲ್ಲಿ ಪ್ರಯಾಣ ಮಾಡುತ್ತಿದ್ದಾರೆ.

ಆದರೆ ಹಳೆಯ ಟಿಕೆಟ್ (Ticket) ಯಂತ್ರಗಳಿಂದ ಟಿಕೆಟ್ ನೀಡುವ ಪ್ರಕ್ರಿಯೆ ನಿಧಾನವಾಗಿರುವ ಕಾರಣ, ಕೆಲವೊಮ್ಮೆ ಪ್ರಯಾಣಿಕರು ಮತ್ತು ಕಂಡಕ್ಟರ್‌ಗಳ ನಡುವೆ ಗಲಾಟೆಗಳು ನಡೆಯುತ್ತಿದ್ದವು. ಈ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯಲು ಸಾರಿಗೆ ಇಲಾಖೆ ಹೊಸ ತಂತ್ರಜ್ಞಾನ ಬಳಕೆಗೆ ಮುಂದಾಗಿದೆ.

ಹೊಸ ಎಲೆಕ್ಟ್ರಾನಿಕ್ (Electronic) ಟಿಕೆಟ್ ಯಂತ್ರಗಳ ಬಳಕೆಯಿಂದ ಟಿಕೆಟ್ ನೀಡುವ ಪ್ರಕ್ರಿಯೆ ಹೆಚ್ಚು ವೇಗವಾಗಲಿದೆ ಹಾಗೂ ಪ್ರಯಾಣಿಕರಿಗೆ ಸುಗಮ ಸೇವೆ ದೊರೆಯಲಿದೆ.

ಬಿಎಂಟಿಸಿ ಸುಮಾರು 40 ಕೋಟಿ ರೂಪಾಯಿ ವೆಚ್ಚದಲ್ಲಿ ಹೊಸ ETM ಯಂತ್ರಗಳನ್ನು ಖರೀದಿಸಲು ಯೋಜನೆ ರೂಪಿಸಿದೆ.

ಮುಂಬೈ ಮೂಲದ “ಚಲೋ” ಕಂಪನಿಗೆ ಈ ಯೋಜನೆಯ ಟೆಂಡರ್ (Tender) ನೀಡಲಾಗಿದೆ. ಐದು ವರ್ಷಗಳ ಗುತ್ತಿಗೆ ಆಧಾರದಲ್ಲಿ ಸುಮಾರು 11 ಸಾವಿರ ಯಂತ್ರಗಳನ್ನು ಬಿಎಂಟಿಸಿ ಪಡೆದುಕೊಳ್ಳಲಿದೆ. ಈಗಾಗಲೇ ಈ ಯಂತ್ರಗಳನ್ನು ಪೂರೈಸಲು ಕಂಪನಿಗೆ ಆದೇಶ ನೀಡಲಾಗಿದ್ದು, ಶೀಘ್ರದಲ್ಲೇ ಎಲ್ಲಾ ಬಸ್‌ಗಳಲ್ಲಿ ಅಳವಡಿಸುವ ಸಾಧ್ಯತೆ ಇದೆ.

ಈ ವ್ಯವಸ್ಥೆಯಿಂದ ಟಿಕೆಟ್ ನೀಡುವ ಪ್ರಕ್ರಿಯೆ ಹೆಚ್ಚು ಪಾರದರ್ಶಕವಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಈ ಹೊಸ ETM ಯಂತ್ರಗಳಲ್ಲಿ ಹಲವು ಡಿಜಿಟಲ್ ಪಾವತಿ ವಿಧಾನಗಳನ್ನು ಬಳಸುವ ಅವಕಾಶ ಇದೆ. ಪ್ರಯಾಣಿಕರು ಗೂಗಲ್ ಪೇ, ಫೋನ್ ಪೇ, ಪೇಟಿಎಂ ಹಾಗೂ ಭೀಮ್ ಯುಪಿಐ ಮೂಲಕ ಹಣ ಪಾವತಿಸಬಹುದು.

ಜೊತೆಗೆ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಮತ್ತು ನ್ಯಾಷನಲ್ ಕಾಮನ್ ಮೊಬಿಲಿಟಿ ಕಾರ್ಡ್ (NCMC) ಬಳಸಿ ಕೂಡ ಟಿಕೆಟ್ ಪಡೆಯಲು ಸಾಧ್ಯವಾಗುತ್ತದೆ. ಈ ಯಂತ್ರಗಳಲ್ಲಿ ಡೈನಾಮಿಕ್ ಕ್ಯೂಆರ್ ಕೋಡ್ ವ್ಯವಸ್ಥೆ ಅಳವಡಿಸಲ್ಪಟ್ಟಿದ್ದು, ಇದರಿಂದ ವಂಚನೆ ಅಥವಾ ತಪ್ಪುಗಳ ಸಾಧ್ಯತೆ ಕಡಿಮೆಯಾಗಲಿದೆ. ಟಿಕೆಟ್ ಮುದ್ರಣವೂ ವೇಗವಾಗಿ ನಡೆಯಲಿದೆ.

ಇದಕ್ಕೂ ಮೊದಲು ಬಿಎಂಟಿಸಿ ಬಸ್‌ಗಳಲ್ಲಿ ಸ್ಟಾಟಿಕ್ ಕ್ಯೂಆರ್ ಕೋಡ್ (Static QR code) ಸ್ಕ್ಯಾನ್ ಮಾಡಿ ಟಿಕೆಟ್ ಪಡೆಯುವ ವ್ಯವಸ್ಥೆ ಜಾರಿಯಲ್ಲಿತ್ತು.

ಆದರೆ ಆ ವ್ಯವಸ್ಥೆಯಲ್ಲಿ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಬಳಸಿ ಪಾವತಿ ಮಾಡುವ ಅವಕಾಶ ಇರಲಿಲ್ಲ. ಈಗ ಮೊದಲ ಬಾರಿಗೆ ಆ್ಯಂಡ್ರಾಯ್ಡ್ ಆಧಾರಿತ ಸ್ಮಾರ್ಟ್ ಎಲೆಕ್ಟ್ರಾನಿಕ್ ಟಿಕೆಟ್ ಯಂತ್ರಗಳನ್ನು ಪರಿಚಯಿಸಲಾಗುತ್ತಿದೆ.

ಟಚ್ ಸ್ಕ್ರೀನ್ ಹಾಗೂ ವೇಗವಾದ ಪ್ರಕ್ರಿಯೆಯೊಂದಿಗೆ ಈ ಯಂತ್ರಗಳು ಕಾರ್ಯನಿರ್ವಹಿಸಲಿವೆ. ಇದರಿಂದ ಪ್ರಯಾಣಿಕರಿಗೆ ಸುಲಭ, ವೇಗ ಮತ್ತು ಸುರಕ್ಷಿತ ಪಾವತಿ ವ್ಯವಸ್ಥೆ ದೊರೆಯಲಿದ್ದು, ಬೆಂಗಳೂರು ನಗರ ಸಾರಿಗೆ ವ್ಯವಸ್ಥೆಗೆ ಮತ್ತೊಂದು ಆಧುನಿಕ ರೂಪ ಸಿಗಲಿದೆ.

Tags: bmtcMetrosmart cards

Related News

CET ಪರೀಕ್ಷಾರ್ಥಿಗಳಿಗೆ ಎಚ್ಚರಿಕೆ: ನಕಲಿ ಲಿಂಕ್‌ಗಳಿಂದ ಸೈಬರ್ ವಂಚನೆ ಹೆಚ್ಚಳ,KEA ಮಹತ್ವದ ಸೂಚನೆ
ಪ್ರಮುಖ ಸುದ್ದಿ

CET ಪರೀಕ್ಷಾರ್ಥಿಗಳಿಗೆ ಎಚ್ಚರಿಕೆ: ನಕಲಿ ಲಿಂಕ್‌ಗಳಿಂದ ಸೈಬರ್ ವಂಚನೆ ಹೆಚ್ಚಳ,KEA ಮಹತ್ವದ ಸೂಚನೆ

April 14, 2026
ಯುಪಿಐ ಪೇಮೆಂಟ್ ತಪ್ಪಾದ ಖಾತೆಗೆ ಮಾಡಿದರೆ ಹಣ ವಾಪಸ್ ಸಿಗುತ್ತದೆಯಾ? ಅಂತಹ ಸಂದರ್ಭದಲ್ಲಿ ಎನ್ ಮಾಡ್ಬೇಕು?ಇಲ್ಲಿದೆ ಸಂಪೂರ್ಣ ಮಾಹಿತಿ
ಡಿಜಿಟಲ್ ಜ್ಞಾನ

ಯುಪಿಐ ಪೇಮೆಂಟ್ ತಪ್ಪಾದ ಖಾತೆಗೆ ಮಾಡಿದರೆ ಹಣ ವಾಪಸ್ ಸಿಗುತ್ತದೆಯಾ? ಅಂತಹ ಸಂದರ್ಭದಲ್ಲಿ ಎನ್ ಮಾಡ್ಬೇಕು?ಇಲ್ಲಿದೆ ಸಂಪೂರ್ಣ ಮಾಹಿತಿ

April 14, 2026
ಬೆಂಗಳೂರಲ್ಲಿ ಹೊಸ ಪಾರ್ಕಿಂಗ್ ರೂಲ್ಸ್: ಜಯನಗರದ 42 ರಸ್ತೆಗಳಲ್ಲಿ ‘ಪೇ ಆಂಡ್ ಪಾರ್ಕ್’ ನಿಯಮ ಜಾರಿ
Vijaya Time

ಬೆಂಗಳೂರಲ್ಲಿ ಹೊಸ ಪಾರ್ಕಿಂಗ್ ರೂಲ್ಸ್: ಜಯನಗರದ 42 ರಸ್ತೆಗಳಲ್ಲಿ ‘ಪೇ ಆಂಡ್ ಪಾರ್ಕ್’ ನಿಯಮ ಜಾರಿ

April 14, 2026
ಹಾರ್ಮುಜ್ ಜಲಸಂಧಿಯಲ್ಲಿ ಉದ್ವಿಗ್ನತೆ: ಇರಾನ್ ವಿರುದ್ಧ ಅಮೆರಿಕ ನೌಕಾ ದಿಗ್ಬಂಧನ ಜಾರಿ
ದೇಶ-ವಿದೇಶ

ಹಾರ್ಮುಜ್ ಜಲಸಂಧಿಯಲ್ಲಿ ಉದ್ವಿಗ್ನತೆ: ಇರಾನ್ ವಿರುದ್ಧ ಅಮೆರಿಕ ನೌಕಾ ದಿಗ್ಬಂಧನ ಜಾರಿ

April 14, 2026

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.