Annadasohah even at night in Chamundi Hill: Ready to implement the new system.
Mysore: ನಾಡದೇವತೆ ಚಾಮುಂಡೇಶ್ವರಿ ನೆಲೆಸಿರುವ ಚಾಮುಂಡಿಬೆಟ್ಟದಲ್ಲಿ (Chamundi Hill) ರಾತ್ರಿ ವೇಳೆಯೂ ಅನ್ನದಾಸೋಹ ನೀಡಲು ತೀರ್ಮಾನಿಸಲಾಗಿದ್ದು, ಇನ್ನೂ ಮುಂದೆ ದಿನದ ಮೂರು ಹೊತ್ತು ಕೂಡಾ ಚಾಮುಂಡಿಬೆಟ್ಟದಲ್ಲಿ ಭಕ್ತರಿಗೆ ಪ್ರಸಾದ ಸೇವೆ ಸಿಗಲಿದೆ.
ಚಾಮುಂಡೇಶ್ವರಿ ದೇವಿ ದರ್ಶನ ಪಡೆಯುವ ಭಕ್ತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದ್ದು, ವರ್ಷದಲ್ಲಿ ಸುಮಾರು 50 ಲಕ್ಷಕ್ಕೂ ಹೆಚ್ಚು ಭಕ್ತರು ಚಾಮುಂಡಿಬೆಟ್ಟಕ್ಕೆ ಭೇಟಿ ನೀಡುತ್ತಾರೆ. ಇಷ್ಟು ದಿನ ಬೆಳಗ್ಗೆ ಮತ್ತು ಮಧ್ಯಾಹ್ನ ಮಾತ್ರ ದಾಸೋಹ ನೀಡಲಾಗುತ್ತಿತ್ತು. ಇದೀಗ ಭಕ್ತರ ಸಂಖ್ಯೆ ಹೆಚ್ಚಾದ ಕಾರಣ ರಾತ್ರಿಯೂ ದಾಸೋಹ (Dasoha)ನೀಡಲು ಶ್ರೀಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ತೀರ್ಮಾನಿಸಿದೆ.
ಧರ್ಮಸ್ಥಳದ ಮಾದರಿ ವ್ಯವಸ್ಥೆ: ಶ್ರೀಕ್ಷೇತ್ರ ಧರ್ಮಸ್ಥಳದ (Dharmasthala) ಮಾದರಿಯಲ್ಲೇ ನಿತ್ಯವೂ ಬೆಳಗ್ಗೆ, ಮಧ್ಯಾಹ್ನ, ರಾತ್ರಿ ದಾಸೋಹ ನೀಡಲು ಶ್ರೀಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ತೀರ್ಮಾನಿಸಿದೆ. ಭಕ್ತರಿಗೆ ಗುಣಮಟ್ಟದ ಸೇವೆ ನೀಡುವ ಕುರಿತು ಸಾಕಷ್ಟು ಚರ್ಚೆಯಾಗಿದ್ದು, ಉತ್ತಮ ವ್ಯವಸ್ಥೆ ರೂಪಿಸಲು ತಜ್ಞರ ಜೊತೆ ಸಮಾಲೋಚನೆ ನಡೆಸಲು ನಿರ್ಧರಿಸಲಾಗಿದೆ. ಇದಕ್ಕೂ ಮುನ್ನ ಸಿಎಂ ಸಿದ್ದರಾಮಯ್ಯ ಅವರು ಪ್ರಾಧಿಕಾರದೊಂದಿಗೆ ಸಭೆ ನಡೆಸಿ ದಾಸೋಹ ಶುರು ಮಾಡಲು ಸೂಚನೆ ನೀಡಿದ್ದರು.
ದಾಸೋಹ ಭವನ ಹಿನ್ನೆಲೆ: ಚಾಮುಂಡಿಬೆಟ್ಟದ ದಾಸೋಹ ಭವನಕ್ಕೆ 2004ರಲ್ಲಿ ಚಾಲನೆ ನೀಡಲಾಯಿತು. ಆರಂಭದಲ್ಲಿ ಮಧ್ಯಾಹ್ನ ಮಾತ್ರ ಭಕ್ತರಿಗೆ ದಾಸೋಹ ನಡೆಯುತ್ತಿತ್ತು. ನಂತರ ಬೆಳಗ್ಗೆಯೂ ದಾಸೋಹ ಆರಂಭಿಸಲಾಯಿತು. ಇದೀಗ ರಾತ್ರಿಯೂ ದಾಸೋಹ ವ್ಯವಸ್ಥೆ ಆರಂಭಿಸಲಾಗಿದೆ
ದಾಸೋಹದ ಸಮಯ :
ಬೆಳಗ್ಗೆ- 7ರಿಂದ 11 ಗಂಟೆ (ಹುಳಿ ಅನ್ನ, ಬಾತು, ಚಿತ್ರಾನ್ನ, ಉಪ್ಪಿಟ್ಟು)
ಮಧ್ಯಾಹ್ನ- 1 ಗಂಟೆಯಿಂದ 3.30 (ಅನ್ನ-ಸಾಂಬಾರು ಅಥವಾ ಬಾತು, ಲಡ್ಡು)
ರಾತ್ರಿ- 7.30ರಿಂದ 10 (ಅನ್ನ ಸಾಂಬಾರು, ಪಾಯಸ)
New System in Chamundi Hills Mysore Karnataka
Mysore: It has been decided to offer Annadasoh at Chamundibetta (Chamundi Hill), where the goddess Chamundeshwari resides, even at night, and devotees will be served prasadam three times a day in Chamundibetta.
The number of devotees visiting Chamundeshwari Devi is increasing day by day and more than 50 lakh devotees visit Chamundihills in a year. Dasoha was given only in the morning and afternoon Due to the increase in the number of devotees, Srichamundeshwari Field Development Authority has decided to offer Dasoha at night as well.
Model System of Dharmasthala: Srichamundeshwari Kshetra Development Authority to provide dasoha daily morning, noon and night on the pattern of Dharmasthala. concluded. There is a lot of discussion about providing quality service to the devotees and it has been decided to consult with experts to make a better system. Earlier, CM Siddaramaiah had held a meeting with the authorities and instructed them to start Dasoha.
Background of Dasoha Bhavan: Dasoha Bhavan at Chamundibetta was inaugurated in 2004. Initially Dasoha was held for devotees only in the afternoon. Later in the morning also Dasoha was started. Now Dasoha system has been started even at night
Time of Dasoha:
Morning- 7 to 11 am (Sour rice, Batu, Chitranna, Uppittu)
Afternoon- 1 pm to 3.30 pm (Rice-Sambaru or Duck, Laddu)
Night- 7.30 to 10 (Rice Sambaru, Payasa)