• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ದೇಶ-ವಿದೇಶ

ಫೆಬ್ರವರಿ 1ರಿಂದ ತಂಬಾಕು ಉತ್ಪನ್ನಗಳ ಬೆಲೆ ಏರಿಕೆ: ಹೊಸ ತೆರಿಗೆ ಮತ್ತು ಸೆಸ್ ಜಾರಿ

Teju Srinivas by Teju Srinivas
in ದೇಶ-ವಿದೇಶ, ಪ್ರಮುಖ ಸುದ್ದಿ, ವಿಜಯ ಟೈಮ್ಸ್‌
ಫೆಬ್ರವರಿ 1ರಿಂದ ತಂಬಾಕು ಉತ್ಪನ್ನಗಳ ಬೆಲೆ ಏರಿಕೆ: ಹೊಸ ತೆರಿಗೆ ಮತ್ತು ಸೆಸ್ ಜಾರಿ
0
SHARES
27
VIEWS
Share on FacebookShare on Twitter
  • ಫೇ 1 ರಿಂದ ಪಾನ್ ಮಸಾಲಾ–ಸಿಗರೇಟ್ (new tax on tobacco products) ದುಬಾರಿ: ಕೇಂದ್ರ ಸರ್ಕಾರದ ಹೊಸ ತೆರಿಗೆ ನೀತಿ
  • ಸಿಗರೇಟ್‌, ಬೀಡಿ, ಪಾನ್ ಮಸಾಲಾ ಮೇಲಿನ ಹೊಸ ಜಿಎಸ್‌ಟಿ ಮತ್ತು ಸೆಸ್ ಜಾರಿಗೆ ಸರ್ಕಾರ ಅಧಿಸೂಚನೆ
  • ತಂಬಾಕು, ಗುಟ್ಕಾ ಉತ್ಪಾದಕರಿಗೆ ಹೊಸ ನಿಯಮ ಜಾರಿ

New Delhi: ದೇಶದಲ್ಲಿ ಸಾರ್ವಜನಿಕ ಆರೋಗ್ಯ ಮತ್ತು ರಾಷ್ಟ್ರೀಯ ಭದ್ರತೆಯನ್ನು (new tax on tobacco products) ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ ತಂಬಾಕು ಮತ್ತು ಪಾನ್ ಮಸಾಲಾ ಉತ್ಪನ್ನಗಳ ಮೇಲೆ ಹೊಸ ತೆರಿಗೆ ವ್ಯವಸ್ಥೆಯನ್ನು ಜಾರಿಗೆ ತರಲು ಮುಂದಾಗಿದೆ.

ಫೆಬ್ರವರಿ 1, 2026ರಿಂದ ಜಾರಿಗೆ ಬರುವಂತೆ ಸಿಗರೇಟ್‌ (Cigarette) , ಬೀಡಿ, ತಂಬಾಕು ಹಾಗೂ ಪಾನ್ ಮಸಾಲಾ (Pan Masala) ಮೇಲಿನ ತೆರಿಗೆ ದರಗಳಲ್ಲಿ ಮಹತ್ವದ ಬದಲಾವಣೆಗಳನ್ನು ಮಾಡುವ ಅಧಿಸೂಚನೆಯನ್ನು ಸರ್ಕಾರ ಹೊರಡಿಸಿದೆ.

new tax on tobacco products

ಈ ಹೊಸ ನಿರ್ಧಾರದಿಂದಾಗಿ ದಿನನಿತ್ಯ ಬಳಕೆಯಾಗುವ ತಂಬಾಕು ಉತ್ಪನ್ನಗಳ ಬೆಲೆ ಗಣನೀಯವಾಗಿ ಹೆಚ್ಚಾಗುವ ಸಾಧ್ಯತೆ ಇದೆ.

ಈಗಾಗಲೇ ಆರೋಗ್ಯ ತಜ್ಞರು ತಂಬಾಕು ಬಳಕೆಯ ಅಪಾಯಗಳ ಕುರಿತು (new tax on tobacco products) ಎಚ್ಚರಿಸುತ್ತಿರುವ ಸಂದರ್ಭದಲ್ಲಿ, ಸರ್ಕಾರದ ಈ ಕ್ರಮವು ಬಳಕೆಯನ್ನು ನಿಯಂತ್ರಿಸುವ ಉದ್ದೇಶವನ್ನೂ ಹೊಂದಿದೆ.

ಸರ್ಕಾರದ ಅಧಿಸೂಚನೆಯ ಪ್ರಕಾರ, ತಂಬಾಕು ಮತ್ತು ಪಾನ್ ಮಸಾಲಾ ಮೇಲಿನ ಹೊಸ ಸುಂಕಗಳು ಈಗಿರುವ ಜಿಎಸ್‌ಟಿ ದರಕ್ಕಿಂತ ಹೆಚ್ಚಾಗಿರಲಿವೆ.

ಪ್ರಸ್ತುತ ವಿಧಿಸಲಾಗುತ್ತಿರುವ ಪರಿಹಾರ ಸೆಸ್ ವ್ಯವಸ್ಥೆಯನ್ನು ಈ ಹೊಸ ತೆರಿಗೆ ವ್ಯವಸ್ಥೆ ಬದಲಾಯಿಸಲಿದೆ. ಫೆಬ್ರವರಿ 1ರಿಂದ

ಪಾನ್ ಮಸಾಲಾ, ಸಿಗರೇಟ್‌, ತಂಬಾಕು ಮತ್ತು ಇತರ ಸಮಾನ ಉತ್ಪನ್ನಗಳಿಗೆ ಶೇ.40 ರಷ್ಟು ಜಿಎಸ್‌ಟಿ ವಿಧಿಸಲಾಗುತ್ತದೆ.

ಇದರಿಂದ ಈ ಉತ್ಪನ್ನಗಳ ಚಿಲ್ಲರೆ ದರಗಳಲ್ಲಿ ಸ್ಪಷ್ಟವಾದ ಏರಿಕೆ ಕಂಡುಬರುವ ನಿರೀಕ್ಷೆಯಿದೆ.

ಆದರೆ ಬೀಡಿಗಳಿಗೆ ಮಾತ್ರ ಶೇ.18 ರಷ್ಟು ಜಿಎಸ್‌ಟಿ ದರವನ್ನು ಮುಂದುವರಿಸಲಾಗುತ್ತದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

ವಿಶೇಷವಾಗಿ ಪಾನ್ ಮಸಾಲಾ ಉತ್ಪನ್ನಗಳ ಮೇಲೆ “ಆರೋಗ್ಯ ಮತ್ತು ರಾಷ್ಟ್ರೀಯ ಭದ್ರತಾ ಸೆಸ್” ಎಂಬ ಹೊಸ ಸೆಸ್ ಅನ್ನು ವಿಧಿಸಲಾಗುತ್ತಿದೆ.

ತಂಬಾಕು ಮತ್ತು ಅದರ ಸಂಬಂಧಿತ ಉತ್ಪನ್ನಗಳ ಮೇಲೆ ಹೆಚ್ಚುವರಿ ಅಬಕಾರಿ ಸುಂಕವನ್ನು ವಿಧಿಸುವ ಮೂಲಕ ಸರ್ಕಾರ

ಆದಾಯವನ್ನು ಹೆಚ್ಚಿಸುವ ಜೊತೆಗೆ ಆರೋಗ್ಯದ ದೃಷ್ಟಿಯಿಂದ ಬಳಕೆಯನ್ನು ಕಡಿಮೆ ಮಾಡುವ ಗುರಿ ಹೊಂದಿದೆ.

ಈ ಕ್ರಮದಿಂದ ಯುವಜನರಲ್ಲಿ ಪಾನ್ ಮಸಾಲಾ ಮತ್ತು ತಂಬಾಕು ಬಳಕೆ ನಿಯಂತ್ರಣಕ್ಕೆ ಬರಬಹುದು ಎಂಬ ನಿರೀಕ್ಷೆಯನ್ನು ಆರೋಗ್ಯ ವಲಯ ವ್ಯಕ್ತಪಡಿಸಿದೆ. ಇನ್ನು ರಾಷ್ಟ್ರೀಯ ಭದ್ರತೆಯ ದೃಷ್ಟಿಯಿಂದ ಅಕ್ರಮ ಉತ್ಪಾದನೆ ಮತ್ತು ಮಾರಾಟವನ್ನು ತಡೆಯುವ ಉದ್ದೇಶವೂ ಇದರಲ್ಲಿ ಅಡಗಿದೆ.

ಇತ್ತೀಚೆಗೆ ಹಣಕಾಸು ಸಚಿವಾಲಯವು ಚೂಯಿಂಗ್ ತಂಬಾಕು, ಜರ್ದಾ, ಸುಗಂಧಿತ ತಂಬಾಕು ಮತ್ತು ಗುಟ್ಕಾ ಪ್ಯಾಕಿಂಗ್ ಯಂತ್ರಗಳಿಗೆ ಸಂಬಂಧಿಸಿದಂತೆ “ಸಾಮರ್ಥ್ಯ ನಿರ್ಣಯ ಮತ್ತು ಸುಂಕ ಸಂಗ್ರಹ ನಿಯಮಗಳು – 2026” ಎಂಬ ಅಧಿಸೂಚನೆಯನ್ನು ಹೊರಡಿಸಿದೆ.

ಈ ನಿಯಮಗಳ ಮೂಲಕ ತಂಬಾಕು ಉತ್ಪನ್ನಗಳ ಉತ್ಪಾದನಾ ಸಾಮರ್ಥ್ಯವನ್ನು ಆಧರಿಸಿ ಸುಂಕವನ್ನು ನಿಗದಿಪಡಿಸುವ ವ್ಯವಸ್ಥೆ ಜಾರಿಗೆ ಬರಲಿದೆ.

ಇದರಿಂದ ತೆರಿಗೆ ತಪ್ಪಿಸುವಿಕೆ ಕಡಿಮೆಯಾಗಲಿದೆ ಹಾಗೂ ಸರ್ಕಾರಕ್ಕೆ ಹೆಚ್ಚು ಪಾರದರ್ಶಕ ಆದಾಯ ಸಿಗಲಿದೆ ಎಂಬ ನಿರೀಕ್ಷೆ ಇದೆ.

ಅಕ್ರಮ ಗುಟ್ಕಾ ಉತ್ಪಾದನೆ ಮತ್ತು ಮಾರಾಟವನ್ನು ನಿಯಂತ್ರಿಸುವಲ್ಲಿ ಈ ನಿಯಮಗಳು ಪ್ರಮುಖ ಪಾತ್ರ ವಹಿಸಲಿದೆ.

ಡಿಸೆಂಬರ್ ತಿಂಗಳಲ್ಲಿ ಸಂಸತ್‌ನಲ್ಲಿ ಪಾನ್ ಮಸಾಲಾ ತಯಾರಿಕೆಯ ಮೇಲೆ ಹೊಸ ಆರೋಗ್ಯ ಮತ್ತು ರಾಷ್ಟ್ರೀಯ ಭದ್ರತಾ ಸೆಸ್ ಹಾಗೂ ತಂಬಾಕು ಉತ್ಪನ್ನಗಳ ಮೇಲೆ ಹೆಚ್ಚುವರಿ ಅಬಕಾರಿ ಸುಂಕ ವಿಧಿಸಲು ಅವಕಾಶ ನೀಡುವ ಎರಡು ಮಹತ್ವದ ಮಸೂದೆಗಳನ್ನು ಅಂಗೀಕರಿಸಲಾಗಿತ್ತು.

ಅದರ ಮುಂದುವರಿದ ಭಾಗವಾಗಿ ಇದೀಗ ಈ ಅಧಿಸೂಚನೆ ಜಾರಿಗೆ ಬಂದಿದೆ. ಸಾರ್ವಜನಿಕ ಆರೋಗ್ಯ ರಕ್ಷಣೆ, ಯುವಜನರ ಭವಿಷ್ಯ ಮತ್ತು

ದೇಶದ ಆರ್ಥಿಕ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಈ ನಿರ್ಧಾರ ಕೈಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮುಂದಿನ ದಿನಗಳಲ್ಲಿ ಈ ಕ್ರಮವು ತಂಬಾಕು ಬಳಕೆಯನ್ನು ಕಡಿಮೆ ಮಾಡಿ, ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಸಹಕಾರಿಯಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಲಾಗಿದೆ.

ಇದನ್ನು ಓದಿ : https://vijayatimes.com/gas-cylinder-prices-increas
Tags: newNewdelhitaxTobacco

Related News

ಇನ್ಮುಂದೆ ದಿನದ 24 ಗಂಟೆಯೂ ಅಂಚೆ ಕಚೇರಿ ಸೇವೆ: ಕೆಲ ಆಯ್ದ ಶಾಖೆಗಳಲ್ಲಿ ಮಾತ್ರವೇ ಈ ಸೇವೆ ಲಭ್ಯ
ದೇಶ-ವಿದೇಶ

ಇನ್ಮುಂದೆ ದಿನದ 24 ಗಂಟೆಯೂ ಅಂಚೆ ಕಚೇರಿ ಸೇವೆ: ಕೆಲ ಆಯ್ದ ಶಾಖೆಗಳಲ್ಲಿ ಮಾತ್ರವೇ ಈ ಸೇವೆ ಲಭ್ಯ

January 24, 2026
ಇನ್ಮುಂದೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದವರಿಗೆ ಲ್ಯಾಪ್‌ಟಾಪ್‌ ಬದಲು ನಗದು ಬಹುಮಾನ
ಪ್ರಮುಖ ಸುದ್ದಿ

ಇನ್ಮುಂದೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದವರಿಗೆ ಲ್ಯಾಪ್‌ಟಾಪ್‌ ಬದಲು ನಗದು ಬಹುಮಾನ

January 24, 2026
ಬಳ್ಳಾರಿ ಮಾಡೆಲ್ ಹೌಸ್ ಬೆಂಕಿ ಪ್ರಕರಣ: ಎಂಟು ಮಂದಿಯ ವಶ, ತನಿಖೆ ತೀವ್ರ
ಪ್ರಮುಖ ಸುದ್ದಿ

ಬಳ್ಳಾರಿ ಮಾಡೆಲ್ ಹೌಸ್ ಬೆಂಕಿ ಪ್ರಕರಣ: ಎಂಟು ಮಂದಿಯ ವಶ, ತನಿಖೆ ತೀವ್ರ

January 24, 2026
ಜ.24ರಿಂದ ನಾಲ್ಕು ದಿನ ಬ್ಯಾಂಕ್ ಶಾಖೆಗಳು ಬಂದ್: ಡಿಜಿಟಲ್ ಸೇವೆಗಳು ಮಾತ್ರ ಲಭ್ಯ
ದೇಶ-ವಿದೇಶ

ಜ.24ರಿಂದ ನಾಲ್ಕು ದಿನ ಬ್ಯಾಂಕ್ ಶಾಖೆಗಳು ಬಂದ್: ಡಿಜಿಟಲ್ ಸೇವೆಗಳು ಮಾತ್ರ ಲಭ್ಯ

January 23, 2026

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.