• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಆರೋಗ್ಯ

ಸಿಗರೇಟ್, ಗುಟ್ಕಾ ಪ್ರಿಯರಿಗೆ ಶಾಕ್ ನೀಡಿದ ಕೇಂದ್ರ ಸರ್ಕಾರ: ತಂಬಾಕು, ಪಾನ್ ಮಸಾಲೆಗಳ ಮೇಲೆ ಭಾರಿ ತೆರಿಗೆ ಏರಿಕೆ

Teju Srinivas by Teju Srinivas
in ಆರೋಗ್ಯ, ಪ್ರಮುಖ ಸುದ್ದಿ, ಮಾಹಿತಿ, ವಿಜಯ ಟೈಮ್ಸ್‌
ಸಿಗರೇಟ್, ಗುಟ್ಕಾ ಪ್ರಿಯರಿಗೆ ಶಾಕ್ ನೀಡಿದ ಕೇಂದ್ರ ಸರ್ಕಾರ: ತಂಬಾಕು, ಪಾನ್ ಮಸಾಲೆಗಳ ಮೇಲೆ ಭಾರಿ ತೆರಿಗೆ ಏರಿಕೆ
0
SHARES
88
VIEWS
Share on FacebookShare on Twitter
  • ತಂಬಾಕು ಉತ್ಪನ್ನಗಳ ತೆರಿಗೆ ಪದ್ಧತಿಯಲ್ಲಿ ದೊಡ್ಡ (New tax on tobacco products) ಬದಲಾವಣೆ
  • ಉತ್ಪನ್ನಗಳ ಮೇಲ್ವಿಚಾರಣೆ ಬಲಪಡಿಸಲು ಜಿಎಸ್‌ಟಿ ಯಿಂದ ಹೊರಗೆ, ಅಬಕಾರಿ ಕಾಯ್ದೆಗೆ ಮರಳಿ ತರಲು ನಿರ್ಧಾರ
  • ಆರೋಗ್ಯ ಭದ್ರತೆ ಮತ್ತು ರಾಷ್ಟ್ರೀಯ ಭದ್ರತಾ ಸೆಸ್ ಮಸೂದೆ 2025 ಮೂಲಕ ತಂಬಾಕು ಬಳಕೆ ಕಡಿಮೆ ಮಾಡಲು ಕ್ರಮ
New tax on tobacco

New Delhi: ದೇಶದಲ್ಲಿ ತಂಬಾಕು ಉತ್ಪನ್ನಗಳ ಬಳಕೆಯನ್ನು ಕಡಿಮೆ ಮಾಡಲು ಮತ್ತು ತೆರಿಗೆ ಸಂಗ್ರಹ ವ್ಯವಸ್ಥೆಯನ್ನು ಹೆಚ್ಚು ಪಾರದರ್ಶಕವಾಗಿ ಮಾಡಲು ಕೇಂದ್ರ ಸರ್ಕಾರ

ಮತ್ತೊಂದು ಮಹತ್ವದ ಹೆಜ್ಜೆಯನ್ನಿಟ್ಟಿದೆ. ಸಿಗರೇಟ್, ಪಾನ್ ಮಸಾಲಾ, ಗುಟ್ಕಾ (Cigarettes, Pan Masala, Gutka) ಸೇರಿದಂತೆ ವಿವಿಧ ತಂಬಾಕು ಉತ್ಪನ್ನಗಳ ಮೇಲೆ ಹೊಸ ತೆರಿಗೆ ವ್ಯವಸ್ಥೆಯನ್ನು ಜಾರಿಗೆ

ತರಲು ಕೇಂದ್ರ ಸರ್ಕಾರ ಸಜ್ಜಾಗಿದೆ. ಈಗಾಗಲೇ ಜಾರಿಗೆ ಇದ್ದ ಜಿಎಸ್‌ಟಿ (GST) ಪರಿಹಾರ ಸೆಸ್ (Sess) ಶೀಘ್ರದಲ್ಲೇ ಮುಕ್ತಾಯವಾಗುತ್ತಿರುವ ಹಿನ್ನೆಲೆಯಲ್ಲಿ, ಅದೇ ರೀತಿಯ ತೆರಿಗೆಯನ್ನು ಹೊಸ ಹೆಸರಿನಲ್ಲಿ

ಮುಂದುವರೆಸಲು ಸರ್ಕಾರ ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್(Nirmala Sitharaman) ಅವರು ಲೋಕಸಭೆಯಲ್ಲಿ ಎರಡು ಪ್ರಮುಖ ಮಸೂದೆಗಳನ್ನು ಮಂಡಿಸಲು

ಸಿದ್ಧರಾಗಿದ್ದಾರೆ. ಆರೋಗ್ಯ ಭದ್ರತೆ ಮತ್ತು ರಾಷ್ಟ್ರೀಯ ಭದ್ರತಾ ಸೆಸ್ ಮಸೂದೆ 2025 (National Security Cess Bill 2025) ಮತ್ತು ಕೇಂದ್ರ ಅಬಕಾರಿ ಕಾಯ್ದೆ ತಿದ್ದುಪಡಿ ಮಸೂದೆಗಳು (Central Excise Act

Amendment Bill) ಜಾರಿಗೆ ಬಂದರೆ, ತಂಬಾಕು ಮಾರುಕಟ್ಟೆಯಲ್ಲಿ ದೊಡ್ಡ ಬದಲಾವಣೆ ಅನಿವಾರ್ಯ. ಹೊಸದಾಗಿ ತರಲಾಗುತ್ತಿರುವ ಸೆಸ್‌ನ ಪ್ರಮುಖ ಗುರಿ ಆರೋಗ್ಯ ರಕ್ಷಣೆ ಮತ್ತು ರಾಷ್ಟ್ರೀಯ ಭದ್ರತಾ

ಉದ್ದೇಶಗಳಿಗೆ ನಿಧಿ ಸಂಗ್ರಹಿಸುವದು. ಪ್ರಸ್ತುತ ತಂಬಾಕು ಉತ್ಪನ್ನಗಳ ಮೇಲೆ ಜಿಎಸ್‌ಟಿ ಜೊತೆಗೆ ಪರಿಹಾರ ಸೆಸ್ ಕೂಡ ವಿಧಿಸಲಾಗುತ್ತಿದೆ. ಆದರೆ, ಈ ಪರಿಹಾರ ಸೆಸ್ ಅವಧಿ ಮುಗಿಯುತ್ತಿರುವುದರಿಂದ,

ಆ ಆದಾಯ ನಷ್ಟವಾಗದಂತೆ ಅದೇ ರೀತಿಯ ತೆರಿಗೆಯನ್ನು ಹೊಸ ರೂಪದಲ್ಲಿ ಮುಂದುವರೆಸುವ ಯೋಚನೆಯನ್ನು ಕೇಂದ್ರ ಸರ್ಕಾರ ಹೊಂದಿದೆ. ತಜ್ಞರ ಪ್ರಕಾರ, ತೆರಿಗೆ ದರಗಳಲ್ಲಿ ತಕ್ಷಣ ಯಾವುದೇ ಬದಲಾವಣೆ

ಕಾಣದಿದ್ದರೂ, ತಯಾರಕರು ಲೆಕ್ಕಪತ್ರ ನಿರ್ವಹಣೆ, ವ್ಯವಹಾರ ವರದಿ ಮತ್ತು ತೆರಿಗೆ ಅನುಸರಣೆ ವಿಧಾನಗಳಲ್ಲಿ ಹೊಸ ಪರಿಸ್ಥಿತಿಗೆ ಹೊಂದಿಕೊಳ್ಳಬೇಕಾದ ಅವಶ್ಯಕತೆ ಇದೆ. ವಿಶೇಷವಾಗಿ, ಸಿಗರೇಟ್ ಉತ್ಪಾದನಾ

ವಲಯ ಈಗಾಗಲೇ ಹೆಚ್ಚಿನ ತೆರಿಗೆ ಹೊರೆ ಹೊತ್ತಿರುವುದರಿಂದ, ಹೊಸ ಸೆಸ್ ಜಾರಿಗೆ ಬರುವುದರಿಂದ ಮೇಲ್ವಿಚಾರಣೆಯ ವ್ಯಾಪ್ತಿ ಇನ್ನಷ್ಟು ಗಟ್ಟಿಯಾಗಲಿದೆ. ಹೊಸ ಮಸೂದೆಗಳ ಮತ್ತೊಂದು ಪ್ರಮುಖ

ಅಂಶವೇನೆಂದರೆ – ತಂಬಾಕು ಉತ್ಪನ್ನಗಳನ್ನು ಜಿಎಸ್‌ಟಿ (GST) ವ್ಯಾಪ್ತಿಯಿಂದ ಹೊರಗೆ ತೆಗೆದು ಮತ್ತೆ ಕೇಂದ್ರ ಅಬಕಾರಿ ಕಾಯ್ದೆಯಡಿ (Central Excise Act)

ತರುವುದು. ಈ ಕ್ರಮವು ಉತ್ಪನ್ನ ಮಟ್ಟದಲ್ಲಿ ತೆರಿಗೆ ಸಂಗ್ರಹವನ್ನು ನಿಖರವಾಗಿ ಮೇಲ್ವಿಚಾರಣೆ ಮಾಡಲು ಸಹಾಯಕವಾಗಲಿದೆ. ಜಿಎಸ್‌ಟಿ ವ್ಯವಸ್ಥೆಯಲ್ಲಿ ಕೆಲವು ಸಂದರ್ಭಗಳಲ್ಲಿ ಕಳ್ಳಸಾಗಣೆ, ತೆರಿಗೆ ವಂಚನೆ ಮತ್ತು

ಅಕ್ರಮ ಉತ್ಪಾದನೆಗಳು ಪತ್ತೆಯಾಗದೆ ಹೋಗುತ್ತಿರುವುದನ್ನು ಸರ್ಕಾರ ಗಮನಿಸಿದೆ. ಅದನ್ನು ತಡೆಗಟ್ಟಲು, ಅಬಕಾರಿ ವಿಭಾಗದ ನೇರ ಮೇಲ್ವಿಚಾರಣೆ ಅಗತ್ಯವಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಬಕಾರಿ

ತೆರಿಗೆಯು ಉತ್ಪನ್ನಕ್ಕೆ ನೇರವಾಗಿ ಸಂಬಂಧಿಸಿದುದರಿಂದ, ಅದರ ಮೂಲಕ ಉತ್ಪಾದಿತ ಪ್ರಮಾಣ, ವಿತರಣಾ ವ್ಯವಸ್ಥೆ, ಮಾರಾಟ ಚಕ್ರ ಇತ್ಯಾದಿಗಳನ್ನು ನಿಖರವಾಗಿ ಟ್ರ್ಯಾಕ್ (Track) ಮಾಡುವುದು ಸುಲಭವಾಗಲಿದೆ.

ಇದು ಸರ್ಕಾರಕ್ಕೆ ಹೆಚ್ಚಿನ ಆದಾಯ ಸಂಗ್ರಹಿಸಿಕೊಡುವುದಲ್ಲದೆ, ಅಕ್ರಮ ವ್ಯಾಪಾರವನ್ನು ಕಡಿಮೆ ಮಾಡಲು ಸಹ ಸಹಕಾರಿಯಾಗಿದೆ.ಆರೋಗ್ಯ ದೃಷ್ಟಿಕೋನದಲ್ಲಿಯೂ ಈ ಬದಲಾವಣೆಗಳು ಮಹತ್ವದ್ದಾಗಿವೆ. ಪಾನ್

ಮಸಾಲಾ, ಗುಟ್ಕಾ, ಸಿಗರೇಟ್ ಮತ್ತು ಇತರ ತಂಬಾಕು ಉತ್ಪನ್ನಗಳಲ್ಲಿ ಇರುವ ಕೇಡು ಆರೋಗ್ಯಕ್ಕೆ ಅತ್ಯಂತ ಹಾನಿಕಾರಕ ಎಂಬುದು ಎಲ್ಲರಿಗೂ ತಿಳಿದ ವಿಷಯ. ಹೃದಯಸಂಬಂಧಿ ಕಾಯಿಲೆಗಳು, ಕ್ಯಾನ್ಸರ್,(Cancer)

ಉಸಿರಾಟದ ತೊಂದರೆಗಳು ಸೇರಿದಂತೆ ಅನೇಕ ಗಂಭೀರ ಸಮಸ್ಯೆಗಳು ತಂಬಾಕು ಬಳಕೆಯಿಂದ ಉಂಟಾಗುತ್ತಿವೆ. ಹೀಗಾಗಿ, ಜನರನ್ನು ತಂಬಾಕು ಉತ್ಪನ್ನಗಳಿಂದ ದೂರವಿಡಲು ಹೆಚ್ಚಿನ ತೆರಿಗೆ ವಿಧಿಸುವುದು

ಜಾಗತಿಕವಾಗಿ ಮಾನ್ಯತೆ ಪಡೆದ ಕ್ರಮ. ಭಾರತ (New tax on tobacco products) ಕೂಡ ಇದೇ ದಾರಿಯಲ್ಲಿ ಮತ್ತೊಂದು ಹಂತ ಮುಂದಕ್ಕೆ ಸಾಗುತ್ತಿದೆ. ಹೊಸ ಸೆಸ್‌ಗೆ ‘ಆರೋಗ್ಯ ರಕ್ಷಣೆ’ ಎಂಬ ಹೆಸರಿಡುವ

ಯೋಚನೆಯೂ ನಡೆಯುತ್ತಿದ್ದು, ಇದರ ಉದ್ದೇಶ ತಂಬಾಕು ಬಳಕೆ ಕಡಿಮೆ ಮಾಡುವುದು ಮತ್ತು ಸಾರ್ವಜನಿಕ ಆರೋಗ್ಯವನ್ನು ರಕ್ಷಿಸುವುದು. ಒಟ್ಟಾರೆ ನೋಡಿದರೆ, ಕೇಂದ್ರ ಸರ್ಕಾರದ ಈ ಹೊಸ ತೆರಿಗೆ ನೀತಿ ತಂಬಾಕು

ಬಳಕೆದಾರರಿಗೆ ಶಾಕ್ ನೀಡುವಂತಿದ್ದರೂ, ದೀರ್ಘಾವಧಿಯಲ್ಲಿ ದೇಶದ ಆರ್ಥಿಕ ಮತ್ತು ಆರೋಗ್ಯ ರಕ್ಷಣಾ ವ್ಯವಸ್ಥೆಗೆ ಮಹತ್ವದ ಬಲ ನೀಡಲಿದೆ.

ಇದನ್ನು ಓದಿ : ಬೆಂಗಳೂರಿನಲ್ಲಿ ಕಸ ನಿಯಂತ್ರಣಕ್ಕೆ ಜಿಬಿಎ ಹೊಸ ಪ್ರಯೋಗ, ಇನ್ಮುಂದೆ ಏರಿಯಾಗಳಿಗೆ ಡಸ್ಟ್‌ಬಿನ್‌ ಭಾಗ್ಯ

Tags: cancercigarettesGSTgutkaHealthNew DelhiPan Masala

Related News

ಬೆಂಗಳೂರಿನ ಬಳಿ ನಕಲಿ ಕ್ಯಾನ್ಸರ್ ಔಷಧ ದಂಧೆ ಬಯಲು: 6 ಕೋಟಿ ಮೌಲ್ಯದ ನಕಲಿ ಮೆಡಿಸಿನ್ ಜಪ್ತಿ
ಪ್ರಮುಖ ಸುದ್ದಿ

ಬೆಂಗಳೂರಿನ ಬಳಿ ನಕಲಿ ಕ್ಯಾನ್ಸರ್ ಔಷಧ ದಂಧೆ ಬಯಲು: 6 ಕೋಟಿ ಮೌಲ್ಯದ ನಕಲಿ ಮೆಡಿಸಿನ್ ಜಪ್ತಿ

August 19, 2026
ನಕಲಿ ಪಿಂಚಣಿಗೆ ಕಡಿವಾಣ: 23 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳ ಮೇಲೆ ಸರ್ಕಾರದ ನಿಗಾ
ಪ್ರಮುಖ ಸುದ್ದಿ

ನಕಲಿ ಪಿಂಚಣಿಗೆ ಕಡಿವಾಣ: 23 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳ ಮೇಲೆ ಸರ್ಕಾರದ ನಿಗಾ

August 19, 2026
ಹನೂರು ಶೂಟೌಟ್‌ ಪ್ರಕರಣ: ತಮಿಳುನಾಡಿಗೆ ಡಿಕೆಶಿ ಖಡಕ್‌ ಎಚ್ಚರಿಕೆ
ಪ್ರಮುಖ ಸುದ್ದಿ

ಹನೂರು ಶೂಟೌಟ್‌ ಪ್ರಕರಣ: ತಮಿಳುನಾಡಿಗೆ ಡಿಕೆಶಿ ಖಡಕ್‌ ಎಚ್ಚರಿಕೆ

August 18, 2026
ವಿದ್ಯಾರ್ಥಿಗಳ ಪ್ರತಿಭಟನೆಗೆ ಮಣಿದ ಜಾರ್ಖಂಡ್ ಸರ್ಕಾರ: ನೇಮಕಾತಿ ಪರೀಕ್ಷೆಗಳು ರದ್ದು
ದೇಶ-ವಿದೇಶ

ವಿದ್ಯಾರ್ಥಿಗಳ ಪ್ರತಿಭಟನೆಗೆ ಮಣಿದ ಜಾರ್ಖಂಡ್ ಸರ್ಕಾರ: ನೇಮಕಾತಿ ಪರೀಕ್ಷೆಗಳು ರದ್ದು

August 18, 2026

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.