• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಪ್ರಮುಖ ಸುದ್ದಿ

ಆನ್ಲೈನ್ ಗ್ರಾಹಕರಿಗೆ ಹೊಸ ಟೆನ್ಶನ್: ಗಿಗ್ ನೌಕರರ ಮುಷ್ಕರದಿಂದ ಡೆಲಿವರಿ ಸೇವೆಗಳಲ್ಲಿ ವ್ಯತ್ಯಯ

Teju Srinivas by Teju Srinivas
in ಪ್ರಮುಖ ಸುದ್ದಿ, ರಾಜ್ಯ, ವಿಜಯ ಟೈಮ್ಸ್‌
ಆನ್ಲೈನ್ ಗ್ರಾಹಕರಿಗೆ ಹೊಸ ಟೆನ್ಶನ್: ಗಿಗ್ ನೌಕರರ ಮುಷ್ಕರದಿಂದ ಡೆಲಿವರಿ ಸೇವೆಗಳಲ್ಲಿ ವ್ಯತ್ಯಯ
0
SHARES
2
VIEWS
Share on FacebookShare on Twitter
  • ಹೊಸ ವರ್ಷದ ಮೊದಲ ದಿನವೇ ಕೈ ಕೊಟ್ಟ (new tension for online customers) ಆನ್‌ಲೈನ್ ಡೆಲಿವರಿ ಸೇವೆ
  • ಗಿಗ್ ನೌಕರರ ಮುಷ್ಕರದಿಂದ ಕೇಕ್, ಬಿರಿಯಾನಿ, ತಂಪು ಪಾನೀಯ ಪೂರೈಕೆಗೆ ಸಂಕಷ್ಟ
  • ಕನಿಷ್ಠ ಆದಾಯ, ಸುರಕ್ಷತೆ ಮತ್ತು ಕಾರ್ಮಿಕ ಹಕ್ಕುಗಳಿಗಾಗಿ ದೇಶವ್ಯಾಪಿ ಹೋರಾಟ

Bengaluru: ಏನೇ ಬೇಕಿದ್ರೂ ತಟ್ಟನೆ ಆರ್ಡರ್ ಮಾಡಿ (new tension for online customers) ತರಿಸಿಕೊಳ್ಳುತ್ತಿದ್ದ ಆನ್ಲೈನ್ (Online) ಗ್ರಾಹಕರಿಗೆ ಹೊಸವರ್ಷದ ಮೊದಲ ದಿನವೇ ಹೊಸ ಟೆನ್ಶನ್ ಎದುರಾಗಿದೆ.

ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಡಿಸೆಂಬರ್ 31ರ ರಾತ್ರಿ ಗಿಗ್ ನೌಕರರು ದೇಶವ್ಯಾಪಿ ಮುಷ್ಕರಕ್ಕೆ ಕರೆ ನೀಡಿದ ಪರಿಣಾಮ, ಆಹಾರ ಹಾಗೂ ದಿನಸಿ ವಿತರಣೆ ಸೇವೆಗಳಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಹೆಚ್ಚಾಗಿದೆ.

new tension for online customers

ವಿಶೇಷವಾಗಿ ಸ್ವಿಗ್ಗಿ, ಜೊಮಾಟೊ (Zomato) , ಜೆಪ್ಟೊ ಮತ್ತು ಬ್ಲಿಂಕಿಟ್‌ನಂತಹ ಜನಪ್ರಿಯ (new tension for online customers) ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳ (Platform) ಮೂಲಕ ಸೇವೆ ಪಡೆಯುವ ಗ್ರಾಹಕರು ತೀವ್ರ ವಿಳಂಬ ಅಥವಾ ಸೇವಾ ಸ್ಥಗಿತವನ್ನು ಎದುರಿಸಬೇಕಾಗಬಹುದು.

ಹೊಸ ವರ್ಷದ ಸಂಭ್ರಮದ ಸಂದರ್ಭದಲ್ಲೇ ಈ ಮುಷ್ಕರ ನಡೆಯುತ್ತಿರುವುದರಿಂದ, ನಗರದಲ್ಲಿ ಸಾಮಾನ್ಯವಾಗಿ ಕಂಡುಬರುವ ಭಾರೀ ಆರ್ಡರ್ (Order) ಪ್ರಮಾಣಕ್ಕೆ ಈ ಬಾರಿ ಅಡ್ಡಿಯಾಗುವ ಸಾಧ್ಯತೆ ಇದೆ ಎಂದು ವ್ಯಾಪಾರ ವಲಯ ಅಂದಾಜಿಸಿದೆ.

ಇನ್ನು ಗಿಗ್ ಮತ್ತು ಪ್ಲಾಟ್‌ಫಾರ್ಮ್ ಕಾರ್ಮಿಕರ ಸಂಘಟನೆಗಳು 10–20 ನಿಮಿಷಗಳಲ್ಲಿ ವಿತರಣೆ ಮಾಡುವ ವ್ಯವಸ್ಥೆಯನ್ನು

ರದ್ದುಪಡಿಸಬೇಕು ಎಂಬುದನ್ನು ಪ್ರಮುಖ ಬೇಡಿಕೆಯಾಗಿಸಿಕೊಂಡಿವೆ.

ಭಾರೀ ಟ್ರಾಫಿಕ್, ರಸ್ತೆ ಸುರಕ್ಷತೆ ಸಮಸ್ಯೆಗಳು ಮತ್ತು ಕೆಲಸದ ಒತ್ತಡದ ನಡುವೆ ಅತೀ ಕಡಿಮೆ ಸಮಯದಲ್ಲಿ ವಿತರಣೆ ಮಾಡುವುದು ಅಪಾಯಕಾರಿಯಾಗಿದೆ ಎಂದು ಕಾರ್ಮಿಕರು ಆರೋಪಿಸುತ್ತಿದ್ದಾರೆ.

ಇದರ ಜೊತೆಗೆ ಮಾಸಿಕ ಕನಿಷ್ಠ 40,000 ರೂ. ಆದಾಯ ಭದ್ರತೆ, ಮಹಿಳಾ ಕಾರ್ಮಿಕರಿಗೆ ಕೆಲಸದ ಸ್ಥಳದಲ್ಲಿ ಸುರಕ್ಷತೆ, ತುರ್ತು ರಜೆ

ವ್ಯವಸ್ಥೆ ಹಾಗೂ ಸಮಗ್ರ ಮಾತೃತ್ವ ರಕ್ಷಣೆ ಸೇರಿದಂತೆ ಹಲವು ಕಾರ್ಮಿಕ ಹಕ್ಕುಗಳನ್ನು ಒದಗಿಸಬೇಕು ಎಂಬ ಒತ್ತಾಯವೂ ಇದೆ.

ಈ ಬೇಡಿಕೆಗಳು ಈಡೇರದಿದ್ದರೆ ಕೆಲಸಕ್ಕೆ ಹಾಜರಾಗುವುದಿಲ್ಲ ಎಂದು ಸಂಘಟನೆಗಳು ಸ್ಪಷ್ಟಪಡಿಸಿವೆ.

ಹೊಸ ವರ್ಷದ ಮುನ್ನಾದಿನವು ಫುಡ್ ಡೆಲಿವರಿ (Food Delivery) ಮತ್ತು ಕ್ವಿಕ್ ಕಾಮರ್ಸ್ (Quick Commerce) ಕಂಪನಿಗಳಿಗೆ ಅತ್ಯಂತ ಲಾಭದ ದಿನವೆಂದು ಪರಿಗಣಿಸಲಾಗುತ್ತದೆ.

ಕಳೆದ ವರ್ಷ ಈ ದಿನಗಳಲ್ಲಿ ಸಾಮಾನ್ಯ ದಿನಗಳಿಗಿಂತ ಎರಡು ರಿಂದ ನಾಲ್ಕು ಪಟ್ಟು ಹೆಚ್ಚು ಆರ್ಡರ್‌ಗಳು ದಾಖಲಾಗಿದ್ದವು.

ಬಿರಿಯಾನಿ (Biryani) , ಕೇಕ್, ಬೇಕರಿ ಪದಾರ್ಥಗಳು, ತಂಪು ಪಾನೀಯಗಳು ಸೇರಿದಂತೆ ಕೆಲವು ನಿರ್ದಿಷ್ಟ ವಸ್ತುಗಳ ಮಾರಾಟದಿಂದಲೇ ಕೋಟ್ಯಾಂತರ

ರೂಪಾಯಿಗಳ ವ್ಯವಹಾರ ನಡೆಯುತ್ತದೆ. ಆದರೆ ಈ ಬಾರಿ ಮುಷ್ಕರದ ಕಾರಣದಿಂದಾಗಿ ನಿರೀಕ್ಷಿತ ಭಾರೀ ಸೇಲ್ ಕುಸಿತ ಕಾಣುವ ಸಾಧ್ಯತೆ ಇದೆ.

ಇದರಿಂದ ಕಂಪನಿಗಳಿಗೆ ಮಾತ್ರವಲ್ಲ, ಗ್ರಾಹಕರಿಗೂ ಅಸೌಕರ್ಯ ಉಂಟಾಗಲಿದೆ ಎಂಬ ಆತಂಕ ವ್ಯಕ್ತವಾಗಿದೆ.

ಗಿಗ್ ಕಾರ್ಮಿಕರು ಅಪ್ಲಿಕೇಶನ್ (Application) ಆಧಾರಿತ ಕಂಪನಿಗಳು ಮೂಲಭೂತ ಕಾರ್ಮಿಕ ಹಕ್ಕುಗಳಿಂದ ವ್ಯವಸ್ಥಿತವಾಗಿ ಹೊರಗಿಡುತ್ತಿವೆ ಎಂದು ಆರೋಪಿಸಿದ್ದಾರೆ.

ಆಹಾರ ವಿತರಣೆ ಮತ್ತು ಟ್ಯಾಕ್ಸಿ (Taxi) ಸೇವೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ, ಆರೋಗ್ಯ ರಕ್ಷಣೆ ಮತ್ತು

ಕಾನೂನು ಮಾನ್ಯತೆ ಇಲ್ಲದಿರುವುದು ದೊಡ್ಡ ಸಮಸ್ಯೆಯಾಗಿದೆ ಎಂದು ಅವರು ಹೇಳುತ್ತಾರೆ.

ಈ ಕುರಿತು ಕೇಂದ್ರ ಕಾರ್ಮಿಕ ಸಚಿವರಿಗೆ ಸಲ್ಲಿಸಲಾದ ಮನವಿಯಲ್ಲಿ, ಗಿಗ್ ಕಾರ್ಮಿಕರಿಗೆ ಸಂವಿಧಾನಾತ್ಮಕ ಹಕ್ಕುಗಳ ರಕ್ಷಣೆ ನೀಡಬೇಕು ಮತ್ತು ಕೆಲಸದ ಪರಿಸ್ಥಿತಿಗಳನ್ನು ಮಾನವೀಯವಾಗಿಸಬೇಕು ಎಂದು ಒತ್ತಾಯಿಸಲಾಗಿದೆ.

ಬೆಂಗಳೂರು ಸೇರಿದಂತೆ ಮಹಾನಗರಗಳಲ್ಲಿ ವೇಗದ ವಿತರಣೆಯ ಒತ್ತಡದಿಂದ ಅಪಘಾತಗಳ ಅಪಾಯ ಹೆಚ್ಚುತ್ತಿದೆ ಎಂಬುದನ್ನೂ ಅವರು ಉಲ್ಲೇಖಿಸಿದ್ದಾರೆ.

ಮುಷ್ಕರದ ಪರಿಣಾಮವಾಗಿ ಡಿಸೆಂಬರ್ 31ರ ರಾತ್ರಿ ಮತ್ತು 2026 ಜನವರಿ 1ರಂದು ನಗರದಲ್ಲಿ ಆನ್‌ಲೈನ್ ಡೆಲಿವರಿ ಸೇವೆಗಳು ಕೈ ಕೊಟ್ಟಿವೆ.

ಕೆಲ ಕಂಪನಿಗಳು ಪರ್ಯಾಯ ವ್ಯವಸ್ಥೆಗಳನ್ನು ಜಾರಿಗೆ ತರಬಹುದೇ ಅಥವಾ ಸೇವೆಗಳನ್ನು ತಾತ್ಕಾಲಿಕವಾಗಿ ಕಡಿತಗೊಳಿಸಬಹುದೇ ಎಂಬುದರ ಬಗ್ಗೆ ಗ್ರಾಹಕರು ಕಾದು ನೋಡಬೇಕಾಗಿದೆ.

ಒಟ್ಟಾರೆ, ಹೊಸ ವರ್ಷದ ಸಂಭ್ರಮದ ನಡುವೆಯೇ ಈ ಮುಷ್ಕರ ಗಿಗ್ ಆರ್ಥಿಕತೆಯಲ್ಲಿನ ಕಾರ್ಮಿಕ ಸಮಸ್ಯೆಗಳತ್ತ ದೇಶದ ಗಮನ

ಸೆಳೆದಿದ್ದು, ಮುಂದಿನ ದಿನಗಳಲ್ಲಿ ಸರ್ಕಾರ ಮತ್ತು ಕಂಪನಿಗಳು ಯಾವ ರೀತಿಯ ತೀರ್ಮಾನ ಕೈಗೊಳ್ಳುತ್ತವೆ ಎಂಬುದು ಪ್ರಮುಖವಾಗಲಿದೆ.

Tags: bengalurudelivery apponline

Related News

ನಂದಿನಿ ಸೇರಿದಂತೆ ಹಲವು ಬ್ರ್ಯಾಂಡ್‌ಗಳ ಹೆಸರಿನಲ್ಲಿ ಕಲೆಬೆರಕೆ ಹಾಲು ಮಾರಾಟ: 8 ಆರೋಪಿಗಳ ಬಂಧನ
ಪ್ರಮುಖ ಸುದ್ದಿ

ನಂದಿನಿ ಸೇರಿದಂತೆ ಹಲವು ಬ್ರ್ಯಾಂಡ್‌ಗಳ ಹೆಸರಿನಲ್ಲಿ ಕಲೆಬೆರಕೆ ಹಾಲು ಮಾರಾಟ: 8 ಆರೋಪಿಗಳ ಬಂಧನ

January 21, 2026
ಭಾರತೀಯ ಮೂಲದ ಅಮೆರಿಕನ್ ಗಗನಯಾತ್ರಿ ಸುನಿತಾ ವಿಲಿಯಮ್ಸ್‌ ನಿವೃತ್ತಿ: 27 ವರ್ಷಗಳ ಬಾಹ್ಯಾಕಾಶ ಪಯಣಕ್ಕೆ ಗುಡ್ ಬೈ
ದೇಶ-ವಿದೇಶ

ಭಾರತೀಯ ಮೂಲದ ಅಮೆರಿಕನ್ ಗಗನಯಾತ್ರಿ ಸುನಿತಾ ವಿಲಿಯಮ್ಸ್‌ ನಿವೃತ್ತಿ: 27 ವರ್ಷಗಳ ಬಾಹ್ಯಾಕಾಶ ಪಯಣಕ್ಕೆ ಗುಡ್ ಬೈ

January 21, 2026
ಡೀಪ್ ಫೇಕ್ ಹಾವಳಿಗೆ ಬ್ರೇಕ್ ಹಾಕಲು ಮುಂದಾದ ಕೇಂದ್ರ ಸರ್ಕಾರ: AI ಫೋಟೋ–ವೀಡಿಯೋಗಳಿಗೆ ಲೇಬಲ್ ಕಡ್ಡಾಯ
ದೇಶ-ವಿದೇಶ

ಡೀಪ್ ಫೇಕ್ ಹಾವಳಿಗೆ ಬ್ರೇಕ್ ಹಾಕಲು ಮುಂದಾದ ಕೇಂದ್ರ ಸರ್ಕಾರ: AI ಫೋಟೋ–ವೀಡಿಯೋಗಳಿಗೆ ಲೇಬಲ್ ಕಡ್ಡಾಯ

January 21, 2026
ಬ್ಯಾನರ್ ಗಲಾಟೆಗಳ ಬಳಿಕ ಎಚ್ಚೆತ್ತ ಜಿಬಿಎ: ಬೆಂಗಳೂರಿನಾದ್ಯಂತ ಅನಧಿಕೃತ ಫ್ಲೆಕ್ಸ್ , ಬ್ಯಾನರ್ ತೆರವು
ಪ್ರಮುಖ ಸುದ್ದಿ

ಬ್ಯಾನರ್ ಗಲಾಟೆಗಳ ಬಳಿಕ ಎಚ್ಚೆತ್ತ ಜಿಬಿಎ: ಬೆಂಗಳೂರಿನಾದ್ಯಂತ ಅನಧಿಕೃತ ಫ್ಲೆಕ್ಸ್ , ಬ್ಯಾನರ್ ತೆರವು

January 21, 2026

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.