Cubbon Park model traffic rule enforcement in Jnanabharati University campus.
Bengaluru: ಬೆಂಗಳೂರು ಜ್ಞಾನಭಾರತಿ ವಿಶ್ವವಿದ್ಯಾಲಯ (Bangalore Jnana Bharati University) ಆವರಣದಲ್ಲಿ ಕಳೆದ ಕೆಲವು ದಿನಗಳಿಂದ ವಾಹನಗಳ ಸಂಚಾರ ಹೆಚ್ಚಾಗುತ್ತಿದೆ .ಇದರಿಂದ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಕೈಯಲ್ಲಿ ಜೀವ ಹಿಡಿದುಕೊಂಡೇ ಕ್ಯಾಂಪಸ್ನಲ್ಲಿ ಓಡಾಡಬೇಕಾಗಿದೆ. ಹೀಗಾಗಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಕಳೆದ ಕೆಲ ವರ್ಷಗಳಿಂದ ಸಾರ್ವಜನಿಕ ವಾಹನಗಳ ಓಡಾಟಕ್ಕೆ ಕಡಿವಾಣ ಹಾಕುವಂತೆ ಮನವಿ ಮಾಡಿದ್ದರು. ಸಾರ್ವಜನಿಕ ವಾಹನ ಓಡಾಟಕ್ಕೆ ಬ್ರೇಕ್ (Break) ಹಾಕುವ ಬಗ್ಗೆ ಆಗ್ರಹವೂ ಕೇಳಿಬಂದಿತ್ತು.
ಕಳೆದ ಕೆಲ ವರ್ಷಗಳಿಂದ ಅಪಘಾತಗಳ ಸಂಖ್ಯೆ ಸಹ ಹೆಚ್ಚಾದ ಕಾರಣ ಸರ್ಕಾರಕ್ಕೆ ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಪತ್ರ ಬರೆದು ಮನವಿ ಕೂಡಾ ಮಾಡಿದ್ದರು. ಇದೀಗ ಪೊಲೀಸ್ ಇಲಾಖೆ ಜ್ಞಾನಭಾರತಿ ಕ್ಯಾಂಪಸ್ನಲ್ಲಿ (Campus) ವಾಹಗಳ ಓಡಾಟ ಕುರಿತು ಅಧ್ಯಯನ ಮಾಡಿ ಒಂದು ವರದಿ ಕೂಡಾ ನೀಡಿದ್ದು, ಈಗ ವಿವಿ ಇದರನ್ವಯ ಹೊಸ ನಿಯಮ ಜಾರಿ ಮಾಡಲು ಚಿಂತನೆ ನಡೆಸಿದೆ.ಈಗಾಗಲೇ ಅತಿ ಹೆಚ್ಚು ದಟ್ಟಣೆ ಪ್ರದೇಶವಾಗಿರುವ ಕಬ್ಬನ್ ಪಾರ್ಕ್ನಲ್ಲಿ (Cubbon Park) ಜಾರಿ ಮಾಡಿರುವ ನಿಯಮವನ್ನು ಬೆಂಗಳೂರು ವಿವಿ ಆವರಣದಲ್ಲಿಯೂ ಜಾರಿಗೊಳಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ.
ಶನಿವಾರ, ಭಾನುವಾರ ಹಾಗೂ ಸರ್ಕಾರಿ ರಜೆಗಳ ಸಂದರ್ಭದಲ್ಲಿ ವಾಹನಗಳ ಸಂಚಾರಕ್ಕೆ ಮುಕ್ತ ಅವಕಾಶ ನೀಡಿ, ವಿವಿ ಕಾರ್ಯಚರಣೆಯ ಅವಧಿಯಲ್ಲಿ ವಾಹನಗಳ ಓಡಾಟಕ್ಕೆ ಕಡಿವಾಣ ಹಾಕಲು ಯೋಚಿಸಲಾಗಿದೆ. ಇನ್ನೊಂದು ವಾರದಲ್ಲಿ ಸರ್ಕಾರದ ಹಂತದಲ್ಲಿ ಚರ್ಚೆ ನಡೆದ ಬಳಿಕ ನಿಯಮ ಜಾರಿಯಾಗಲಿದೆ ಎಂದು ಕುಲಪತಿ ಜಯಕರ್ ಶೆಟ್ಟಿ (Jayakar Shetty) ತಿಳಿಸಿದ್ದಾರೆ.ಕಳೆದ ವರ್ಷವಷ್ಟೇ ವಿವಿ ಆವರಣದಲ್ಲಿ ವಿದ್ಯಾರ್ಥಿನಿ ಅಪಘಾತಕ್ಕೆ ಬಲಿಯಾಗಿದ್ದಳು. ಆ ಘಟನೆಯ ನೆನಪು ಮಾಸುವ ಮುನ್ನವೇ ಮತ್ತೆ ವಾಹನಗಳ ಸಂಚಾರ ಹೆಚ್ಚಾಗಿ ಸಮಸ್ಯೆ ತಂದೊಡಿತ್ತು. ಹೀಗಾಗಿ ಸರ್ಕಾರ ಹಾಗೂ ವಿವಿ ಪರ್ಯಾಯ ಕ್ರಮಕ್ಕೆ ಮುಂದಾಗಿದೆ ಎನ್ನಲಾಗುತ್ತಿದೆ.
New Traffic Rules in Jnanabharati University Campus
Bengaluru: The vehicular traffic in the premises of Bangalore Jnana Bharati University has been increasing for the past few days. Due to this, the students and lecturers of the university have to walk around the campus with their lives in their hands. Thus, students and teachers from the past few years He requested to curb the plying of public vehicles. There was also a demand to put brakes on public vehicles.
Since the number of accidents has also increased in the last few years, Legislative Council Chairman Basavaraja had written a letter and appealed to the government. Now the police department has studied the running of boats in the Jnanabharati campus and given a report and now the university is thinking of implementing a new rule based on this. The rule which has already been implemented in Cubbon Park, which is the most congested area, is being considered to be implemented in Bangalore University premises as well.
Allow free vehicular movement on Saturdays, Sundays and government holidays to curtail vehicular movement during university operations. thought of. Chancellor Jayakar Shetty said that the rule will be implemented after the discussion at the government level in another week. Just last year, a student died in an accident in the university premises. Even before the memory of that incident was erased, the vehicular traffic again caused problems. Therefore, it is said that the government and the university have taken an alternative course of action.