- ಪ್ರಯಾಣಿಕರಿಗೆಂದೇ ಹಳದಿ ಮಾರ್ಗದಲ್ಲಿ ಇವತ್ತಿನಿಂದ ಮತ್ತೊಂದು ಟ್ರೈನ್ ಸೇರ್ಪಡೆ
- ಇದುವರೆಗೂ 3 ಮೆಟ್ರೋ ಮಾತ್ರ 25 ನಿಮಿಷಕ್ಕೊಂದರಂತೆ ಸಂಚರಿಸುತ್ತಿದ್ದವು (New train added on Yellow Line)
- ಇದರಿಂದ ಬೊಮ್ಮಸಂದ್ರ, ಅನೇಕಲ್ ಮಾರ್ಗದಲ್ಲಿ ಸಂಚಾರ ಮಾಡುವವರಿಗೆ ಅನುಕೂಲ
Bengaluru: ಬೆಂಗಳೂರು ನಗರದ ಸಾರಿಗೆ ವ್ಯವಸ್ಥೆಯಲ್ಲಿ ಮೆಟ್ರೋ(Metro) ಮಹತ್ವದ ಪಾತ್ರವಹಿಸಿದೆ. ಪ್ರತಿದಿನವೂ ಲಕ್ಷಾಂತರ ಜನರು ತಮ್ಮ ಉದ್ಯೋಗ,
ವಿದ್ಯಾಭ್ಯಾಸ ಹಾಗೂ ವೈಯಕ್ತಿಕ ಕಾರ್ಯಗಳಿಗಾಗಿ ಮೆಟ್ರೋ ಸೇವೆಯನ್ನು ಅವಲಂಬಿಸುತ್ತಿದ್ದಾರೆ. ವಿಶೇಷವಾಗಿ ಆರ್.ವಿ.ರಸ್ತೆಯಿಂದ ಬೊಮ್ಮಸಂದ್ರದವರೆಗಿನ
ಹಳದಿ ಮಾರ್ಗ (Yellow Line) ಐಟಿ ಉದ್ಯೋಗಿಗಳು ಹಾಗೂ ವಿದ್ಯಾರ್ಥಿಗಳಿಗೆ ಪ್ರಮುಖ ಪ್ರಯಾಣ ಮಾರ್ಗವಾಗಿದೆ.
ಈ ಮಾರ್ಗದಲ್ಲಿ ಸಂಚಾರ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಪ್ರಯಾಣಿಕರ ಸೌಕರ್ಯಕ್ಕಾಗಿ ಬಿಎಮ್‌ಆರ್‌ಸಿಎಲ್ (BMRCL) ಇಂದಿನಿಂದ ಮತ್ತೊಂದು ಹೊಸ ರೈಲನ್ನು ಹಳದಿ ಮಾರ್ಗಕ್ಕೆ(yellow line )ಸೇರಿಸಿದೆ.
ಇನ್ನು ಆಗಸ್ಟ್ 10ರಂದು ಉದ್ಘಾಟನೆಯಾದ ನಂತರದಿಂದ ಹಳದಿ ಮಾರ್ಗದಲ್ಲಿ ಕೇವಲ ಮೂರು ರೈಲುಗಳಷ್ಟೇ ಕಾರ್ಯನಿರ್ವಹಿಸುತ್ತಿದ್ದವು.
ಇದರಿಂದ ಪ್ರತಿಯೊಂದು ರೈಲು 25 ನಿಮಿಷಗಳ ಅಂತರದಲ್ಲಿ ಮಾತ್ರ ಲಭ್ಯವಾಗುತ್ತಿತ್ತು. ಪ್ರಯಾಣಿಕರಿಂದ ಅನೇಕ ದೂರುಗಳು ಬಂದಿದ್ದರಿಂದ,

ಇಂದಿನಿಂದ ನಾಲ್ಕನೇ ರೈಲು ಕೂಡ ಸೇವೆಗೆ ಸೇರಿದೆ. ಇದರಿಂದ ಮುಂದೆ ಪ್ರತಿಯೊಂದು ರೈಲು 19 ನಿಮಿಷಕ್ಕೊಮ್ಮೆ ಲಭ್ಯವಾಗಲಿದೆ. ಅಂದರೆ, ಮುಂಚೆಗಿಂತ ಹೆಚ್ಚು ವೇಗವಾಗಿ
ಹಾಗೂ ಸಮಯ ಉಳಿಸಿಕೊಂಡು ಪ್ರಯಾಣ ಮಾಡಲು ಪ್ರಯಾಣಿಕರಿಗೆ ಸಾಧ್ಯವಾಗುತ್ತದೆ.ಹಳದಿ ಮಾರ್ಗದಲ್ಲಿ ಮೆಟ್ರೋ ಸೇವೆ ಆರಂಭವಾಗುವ ಸಮಯದಲ್ಲಿಯೂ
ಬದಲಾವಣೆ ಮಾಡಲಾಗಿದೆ. ಇದುವರೆಗೆ ಸೋಮವಾರದಿಂದ ಶನಿವಾರದವರೆಗೆ ಬೆಳಗ್ಗೆ 6.30ಕ್ಕೆ ಮೊದಲ ರೈಲು ಸಂಚರಿಸುತ್ತಿತ್ತು.
ಆದರೆ ಈಗ ಬೆಳಗ್ಗೆ 6 ಗಂಟೆಗೆ ರೈಲು ಸೇವೆ ಆರಂಭವಾಗಲಿದೆ. ಭಾನುವಾರಗಳ ದಿನ ಇದುವರೆಗೆ ಇದ್ದಂತೆ ಬೆಳಗ್ಗೆ 7 ಗಂಟೆಗೆ ರೈಲು ಸಂಚಾರ ಆರಂಭವಾಗುತ್ತದೆ. ಈ ಬದಲಾವಣೆ ವಿಶೇಷವಾಗಿ ಐಟಿ ಉದ್ಯೋಗಿಗಳಿಗೆ ಹೆಚ್ಚಿನ ಅನುಕೂಲ ತರಲಿದೆ.
ಇನ್ನು ಈ ಸಲ ರಾತ್ರಿ ಸಂಚಾರದ ವೇಳಾಪಟ್ಟಿಯಲ್ಲೂ ಪ್ರಯಾಣಿಕರಿಗೆ ಸಹಾಯವಾಗುವ ರೀತಿಯಲ್ಲಿ ವ್ಯವಸ್ಥೆ ಮಾಡಲಾಗಿದೆ. ಆರ್.ವಿ.ರಸ್ತೆಯಿಂದ
ರಾತ್ರಿ 11:55ಕ್ಕೆ ಕೊನೆಯ ರೈಲು ಹೊರಡುತ್ತದೆ. ಬೊಮ್ಮಸಂದ್ರದಿಂದ ಕೊನೆಯ ರೈಲು ರಾತ್ರಿ 10:42ಕ್ಕೆ ಹೊರಡುವುದು ಎಂದಿನಂತೆ ಮುಂದುವರಿಯಲಿದೆ.
ಹೀಗಾಗಿ ರಾತ್ರಿ ವೇಳೆ ಕೆಲಸ ಮುಗಿಸಿಕೊಂಡು ಮನೆಗೆ ಹಿಂತಿರುಗುವವರಿಗೂ ರೈಲು ಸೌಲಭ್ಯ ದೊರೆಯುತ್ತದೆ.ಆರ್.ವಿ.ರಸ್ತೆಯಿಂದ ಬೊಮ್ಮಸಂದ್ರದವರೆಗಿನ ಹಳದಿ ಮಾರ್ಗವು
ತಂತ್ರಜ್ಞಾನ ಸಂಸ್ಥೆಗಳ ಅಂಚುಗಳಲ್ಲಿ ಹರಡಿಕೊಂಡಿದೆ. ಬೊಮ್ಮಸಂದ್ರ ಹಾಗೂ ಅನೇಕಲ್ ಭಾಗದಲ್ಲಿ ಸಾಕಷ್ಟು ಐಟಿ ಕಂಪನಿಗಳು, ಕೈಗಾರಿಕಾ ವಲಯಗಳು,
ವಸತಿ ಪ್ರದೇಶಗಳು ಇವೆ. ಈ ಮಾರ್ಗದಲ್ಲಿ ಪ್ರತಿದಿನವೂ ಸಾವಿರಾರು ಐಟಿ ಉದ್ಯೋಗಿಗಳು ಸಂಚಾರ ಮಾಡುತ್ತಾರೆ. ಮುಂಚಿನಂತೆ ರೈಲು ಕಡಿಮೆ ಅವಧಿಯಲ್ಲಿ ಮಾತ್ರ
ದೊರೆಯುತ್ತಿದ್ದ ಕಾರಣ ಹಲವರಿಗೆ ಸಮಯ ನಷ್ಟವಾಗುತ್ತಿತ್ತು. ಈಗ ರೈಲುಗಳ ಸಂಖ್ಯೆ ಹೆಚ್ಚುವ ಮೂಲಕ ಜನಸಂದಣಿ ಕಡಿಮೆ ಆಗಿ, ಪ್ರಯಾಣ ಇನ್ನಷ್ಟು
ಆರಾಮದಾಯಕವಾಗಲಿದೆ.ಇನ್ನು ಮೆಟ್ರೋ ರೈಲು ನಿಗಮವು ಅಧಿಕೃತ ಪ್ರಕಟಣೆ ಮೂಲಕ ಈ ಬದಲಾವಣೆಗಳನ್ನು ಘೋಷಿಸಿದೆ.
“ಹಳದಿ ಮಾರ್ಗದಲ್ಲಿ ಪ್ರಯಾಣಿಕರ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದೆ. ಅವರ ಬೇಡಿಕೆ ಮತ್ತು ಅನುಕೂಲಗಳನ್ನು ಪರಿಗಣಿಸಿ,
ಇದನ್ನು ಓದಿ : ಹಳದಿ ಮಾರ್ಗ ಮೆಟ್ರೋ ಪ್ರಯಾಣಿಕರಿಗೆ ಮತ್ತೊಂದು ಸಿಹಿ ಸುದ್ದಿ, ಪ್ರತಿದಿನ ಬೆಳಿಗ್ಗೆ 6.30ರಿಂದ ಮೆಟ್ರೋಗಳು ಓಡಾಟ ಆರಂಭಿಸಲಿದೆ
ಹೆಚ್ಚುವರಿ ರೈಲು ಸೇವೆಯನ್ನು ಪ್ರಾರಂಭಿಸಲಾಗಿದೆ. ಮುಂದಿನ ಹಂತಗಳಲ್ಲಿ ಇನ್ನಷ್ಟು ಸುಧಾರಣೆಗಳನ್ನೂ ಕೈಗೊಳ್ಳುವ ಯೋಜನೆ ಇದೆ” ಎಂದು ತಿಳಿಸಿದೆ. (New train added on Yellow Line)