ಹೋದ್ಯಾ ಪಿಶಾಚಿ ಅಂದ್ರೆ ಬಂದ್ಲು ಗವಾಕ್ಷಿ ಅನೋ ಹಾಗೆ ಮತ್ತೆ ಜನರ ಜೀವಾ ಹಿಂದೊಡಕ್ಕೆ ದೇಶದಲ್ಲಿ ಮತ್ತೊಂದು ಮಹಾಮಾರಿ ವೈರಸ್ (new virus to india) ವಕ್ಕರಿಸಿದೆ. ಈ ಮಾರಿಯ ಹೆಸರು H3N2 ವೈರಸ್.
ಈ ವೈರಸ್ ಬಗ್ಗೆ ಕಟ್ಟೆಚ್ಚರ ವಹಿಸಲು ರಾಜ್ಯ ಆರೋಗ್ಯ ಇಲಾಖೆ ಈಗಾಗಲೇ ಸುರಕ್ಷತಾ ನಿಯಮಗಳನ್ನು (new virus to india) ಜಾರಿಗೊಳಿಸಿದೆ.
2019 ರಲ್ಲಿ ದೇಶಕ್ಕೆ ಅಂಟಿಕೊಂಡಿದ್ದ ಮಹಾಮಾರಿ ಕೋವಿಡ್ (Covid) ಗೆ ಇಡೀ ದೇಶವೆ ತತ್ತರಿಸಿ ಹೋಗಿತ್ತು. ಅದರಲ್ಲೂ ಎರಡನೇ ಅಲೆಯಂತೂ ಮರಣ ಮೃದಂಗವನ್ನೇ ಭಾರಿಸಿತ್ತು.
ಜನ ಜೀವನವೇ ಅಲ್ಲೋಲ ಕಲ್ಲೋಲವಾಗಿತ್ತು. ಈಗ ಅದೇ ಕರೋನಾ ವೈರಸ್ ವಿವಿಧ ರೂಪಾಂತರ ಹೊಂದಿ ಪದೇ ಪದೇ ಜನರಲ್ಲಿ ಅಂತಂಕ ಸೃಷ್ಟಿಸುತ್ತಿದೆ. ಈಗ ಜನರನ್ನು H3N2 ವೈರಸ್ ಆತಂಕಕ್ಕೀಡು ಮಾಡಿದೆ.
ಕೋರೋನದಂತೆಯ (Corona)ಅಪಾಯಕಾರಿ ಆಗಿರುವ ಈ ವೈರಸ್ ಗಾಳಿಯಷ್ಟೇ ವೇಗವಾಗಿ ಹರಡುತ್ತಿದೆ. ಇತ್ತೀಚೆಗೆ ನಿರಂತರ ಕೆಮ್ಮು, ಒಮ್ಮೊಮ್ಮೆ ಜ್ವರ ಅಂತಹ ಪ್ರಕರಣಗಳು ಹೆಚ್ಚಾಗುತ್ತಿದೆ.
ಇದಕ್ಕೆ H3N2 ವೈರಸ್ ಕಾರಣ ಅಂತ ICMR ಹೇಳಿದೆ.
ಇದನ್ನು ಓದಿ: ಶೂನ್ಯ ಬಡ್ಡಿದರದಲ್ಲಿ ರೈತರಿಗೆ ಸಾಲ ಸೌಲಭ್ಯ: ಏಪ್ರಿಲ್ 1ಕ್ಕೆ ಯೋಜನೆ ಜಾರಿ
H3N2 ಲಕ್ಷಣ ಏನು? ಹೇಗೆ ಹರಡುತ್ತೆ? : ಇತ್ತೀಚಿಗೆ ದೇಶದಲ್ಲಿ ನಿರಂತರ ಕೆಮ್ಮು,ಜ್ವರದ ಪ್ರಕರಣಗಳು ಹೆಚ್ಚುತ್ತಿವೆ. ಇದಕ್ಕೆ ಕೊರೋನ ಮಾದರಿಯ ಲಕ್ಷಣಗಳನ್ನು ಹೊಂದಿದ್ದ H3N2 ವೈರಸ್ ದೇಶಾದ್ಯಂತ ವ್ಯಾಪಕವಾಗಿ
ಹರಡುತ್ತಿರುವುದೇ ಕಾರಣ. ಈ ವೈರಸ್ ಮೊದಲಿಗೆ 1968ರಲ್ಲಿ ಅಮೇರಿಕಾದಲ್ಲಿ ಕಂಡು ಬಂದಿತ್ತು.
15 ವರ್ಷಕ್ಕಿಂತ ಕೆಳಗಿನ ಮಕ್ಕಳಲ್ಲಿ ಈ ರೋಗ ಪತ್ತೆಯಾಗಿದೆ. ಸದ್ಯ ದೇಶದಲ್ಲಿ ಕಳೆದ ಒಂದು ವಾರದಿಂದ ಸೋಂಕಿತ ಸಂಖ್ಯೆ ಶೇಕಡಾ 10-15 ರಷ್ಟು ಹೆಚ್ಚಳವಾಗಿದೆ.
H3N2 ವೈರಸ್ ಇನ್ ಪ್ಲುಎಂಜಾ ಎ ವೈರಸ್ ನ ಉಪತಳಿಯಾಗಿದೆ. ಇನ್ನೂ 50 ವರ್ಷ ಮೇಲ್ಪಟ್ಟವರನ್ನು H3N2 ವೈರಸ್ ಕಾಡುತ್ತಿದೆ.
H3N2 ವೈರಸ್ ಗಾಳಿಯಿಂದ ಹರಡಲಿದೆ: ಸೋಂಕಿತ ವ್ಯಕ್ತಿಗಳಿಂದ ಸೋಂಕು ಹರಡಬಹುದು. ಒಬ್ಬರಿಂದ ಒಬ್ಬರಿಗೆ ಬೇಗ ಈ ವೈರಸ್ ಹರಡಲಿದೆ. ಕೊರೊನಾ ಮಾದರಿಯಲ್ಲೇ ಈ ವೈರಸ್ ಇದ್ದು ಒಂದು ವಾರದವರೆಗೆ H3N2 ವೈರಸ್ ಕಾಡಲಿದೆ. ಕೆಲವರಿಗೆ ದೀರ್ಘಕಾಲದವರೆಗೆ ವೈರಸ್ ಕಾಡಲಿದೆ.
ಹೊಸ H3N2 ವೈರಸ್ ಬಂದ್ರೆ ಜ್ವರ, ಕೆಮ್ಮು, ವಾಕರಿಕೆ, ವಾಂತಿ, ಗಂಟಲು ನೋವು, ಸ್ನಾಯು ಸೆಳೆತ, ಅತಿಸಾರ, ಮೈಕೈ ನೋವು, ತಲೆ ನೋವು ಬಾಧಿಸಲಿದೆ.
-ಬಸವರಾಜ್ ಕೆ