ಡಿಜಿಟಲ್ ಚಿನ್ನದತ್ತ (New way to invest in gold) ಜನರ ಆಸಕ್ತಿ ಹೆಚ್ಚಳ
ಇಜಿಆರ್ ಮೂಲಕ ಸುರಕ್ಷಿತ ಹಾಗೂ ಸುಲಭ ಹೂಡಿಕೆಗೆ ಹೊಸ ಅವಕಾಶ
ಒಂದು ಗ್ರಾಂನಿಂದ ಆರಂಭವಾಗುವ ಇಜಿಆರ್ ಯೋಜನೆಗೆ ಮನಸೋತ ಗ್ರಾಹಕರು
ಭಾರತೀಯರ ಬದುಕಿನಲ್ಲಿ ಚಿನ್ನಕ್ಕೆ ವಿಶೇಷ ಸ್ಥಾನಮಾನವಿದೆ. ಹೂಡಿಕೆ, ಭದ್ರತೆ ಮತ್ತು ಭಾವನಾತ್ಮಕ (New way to invest in gold) ಮೌಲ್ಯದ ಸಂಕೇತವಾಗಿರುವ ಚಿನ್ನವನ್ನು ಜನರು ವರ್ಷಗಳಿಂದ ಭೌತಿಕ ರೂಪದಲ್ಲೇ ಖರೀದಿಸಿ ಸಂಗ್ರಹಿಸುತ್ತಿದ್ದರು.
ಆದರೆ ಡಿಜಿಟಲ್ ಯುಗದಲ್ಲಿ ಚಿನ್ನದ ಹೂಡಿಕೆ ವಿಧಾನವೂ ಆಧುನಿಕ ರೂಪ ಪಡೆದುಕೊಂಡಿದೆ. ರಾಷ್ಟ್ರೀಯ ಷೇರುಪೇಟೆ (NSE) ಪರಿಚಯಿಸಿರುವ ಎಲೆಕ್ಟ್ರಾನಿಕ್ ಗೋಲ್ಡ್ ರಿಸಿಪ್ಟ್ಸ್ (EGR) ಇದೀಗ ಹೂಡಿಕೆದಾರರ ಗಮನ ಸೆಳೆಯುತ್ತಿರುವ ಹೊಸ ಆಯ್ಕೆಯಾಗಿದೆ.

ಸುರಕ್ಷತೆ, ಪಾರದರ್ಶಕತೆ ಮತ್ತು ಸುಲಭ ವಹಿವಾಟಿನ (New way to invest in gold) ಕಾರಣದಿಂದ ಇದು ಚಿನ್ನದ ಹೂಡಿಕೆಯಲ್ಲಿ ಹೊಸ ಅಧ್ಯಾಯ ಆರಂಭಿಸಿದೆ.
ಇಜಿಆರ್ ಎಂದರೆ ಡಿಜಿಟಲ್ ರೂಪದಲ್ಲಿರುವ ಚಿನ್ನದ ಹಕ್ಕುಪತ್ರ. ಷೇರುಗಳನ್ನು ಡಿಮ್ಯಾಟ್ (Demat) ಖಾತೆಯಲ್ಲಿ ಇಟ್ಟುಕೊಳ್ಳುವ ರೀತಿಯಲ್ಲೇ ಚಿನ್ನವನ್ನು ಕೂಡ
ಡಿಜಿಟಲ್ ರೂಪದಲ್ಲಿ ಸಂಗ್ರಹಿಸಬಹುದು. ಹೂಡಿಕೆದಾರರು ಖರೀದಿಸುವ ಪ್ರತಿಯೊಂದು ಇಜಿಆರ್ ಯೂನಿಟ್ ನಿಜವಾದ ಚಿನ್ನಕ್ಕೆ ಸಮಾನ ಮೌಲ್ಯ ಹೊಂದಿರುತ್ತದೆ.
ಈ ಚಿನ್ನವನ್ನು ಸೆಬಿ ಅನುಮೋದಿತ ಸುರಕ್ಷಿತ ವಾಲ್ಟ್‌ಗಳಲ್ಲಿ ಸಂಗ್ರಹಿಸಲಾಗುತ್ತದೆ. ಚಿನ್ನದ ಶುದ್ಧತೆಯನ್ನು ಪರಿಶೀಲಿಸಿದ ಬಳಿಕ ಅದರ ಆಧಾರದ ಮೇಲೆ ಡಿಜಿಟಲ್ ರಸೀದಿಗಳನ್ನು ಸೃಷ್ಟಿಸಲಾಗುತ್ತದೆ. ನಂತರ ಈ ರಸೀದಿಗಳು ಎನ್‌ಎಸ್‌ಇ ಮೂಲಕ ಖರೀದಿ ಮತ್ತು ಮಾರಾಟಕ್ಕೆ ಲಭ್ಯವಾಗುತ್ತವೆ.
ಈ ವ್ಯವಸ್ಥೆಯ ಪ್ರಮುಖ ವೈಶಿಷ್ಟ್ಯವೆಂದರೆ, ಡಿಜಿಟಲ್ ರೂಪದಲ್ಲಿರುವ ಚಿನ್ನವನ್ನು ಅಗತ್ಯವಿದ್ದರೆ ಭೌತಿಕ ರೂಪದಲ್ಲೂ ಪಡೆಯಬಹುದಾಗಿದೆ.
ನಿರ್ದಿಷ್ಟ ಪ್ರಮಾಣದ ಇಜಿಆರ್ ಯೂನಿಟ್‌ಗಳನ್ನು ಸಂಗ್ರಹಿಸಿದ ಬಳಿಕ ಹೂಡಿಕೆದಾರರು ಅವುಗಳನ್ನು ವಿನಿಮಯ ಮಾಡಿಕೊಂಡು ನಿಜವಾದ ಚಿನ್ನದ ನಾಣ್ಯ ಅಥವಾ ಬಾರ್‌ಗಳನ್ನು ಪಡೆದುಕೊಳ್ಳಬಹುದು.
ಹೀಗಾಗಿ ಇದು ಕೇವಲ ಕಾಗದದ ಹೂಡಿಕೆ ಆಗದೇ, ನಿಜವಾದ ಚಿನ್ನದ ಮೇಲಿನ ಹಕ್ಕನ್ನು ನೀಡುವ ವ್ಯವಸ್ಥೆಯಾಗಿದೆ. ಈ ಕಾರಣದಿಂದ ಜನರಲ್ಲಿ ಇದರ ಮೇಲೆ ವಿಶ್ವಾಸವೂ ಹೆಚ್ಚುತ್ತಿದೆ.
ಭಾರತದ ಯಾವುದೇ ಪ್ರಜೆ ವೈಯಕ್ತಿಕವಾಗಿ ಅಥವಾ ಹಿಂದೂ ಅವಿಭಕ್ತ ಕುಟುಂಬದ ಹೆಸರಿನಲ್ಲಿ ಇಜಿಆರ್‌ನಲ್ಲಿ ಹೂಡಿಕೆ ಮಾಡಬಹುದು. ಟ್ರಸ್ಟ್‌ಗಳು ಹಾಗೂ ಕಂಪನಿಗಳಿಗೂ ಈ ವ್ಯವಸ್ಥೆಯಲ್ಲಿ ಪಾಲ್ಗೊಳ್ಳಲು ಅವಕಾಶ ಇದೆ. ಹೂಡಿಕೆ ಮಾಡಲು ಡಿಮ್ಯಾಟ್ ಖಾತೆ ಮತ್ತು ಟ್ರೇಡಿಂಗ್ ಖಾತೆ ಇರಬೇಕು.
ದೊಡ್ಡ ಮೊತ್ತದ ಹಣ ಹೂಡಿಕೆ ಮಾಡುವ ಅಗತ್ಯ ಇಲ್ಲದಿರುವುದು ಸಣ್ಣ ಹೂಡಿಕೆದಾರರಿಗೆ ದೊಡ್ಡ ಅನುಕೂಲವಾಗಿದೆ. ಕೇವಲ ಒಂದು ಗ್ರಾಂ ಚಿನ್ನದ ಮೌಲ್ಯದಿಂದಲೇ
ಹೂಡಿಕೆ ಆರಂಭಿಸಬಹುದಾದ ಕಾರಣ ಮಧ್ಯಮ ವರ್ಗದ ಜನರೂ ಇದನ್ನು ಸುಲಭವಾಗಿ ಬಳಸಬಹುದು.
ಇಜಿಆರ್ ಹೂಡಿಕೆಯ ಮತ್ತೊಂದು ಪ್ರಮುಖ ಲಾಭ ಸುರಕ್ಷತೆ ಮತ್ತು ಪಾರದರ್ಶಕತೆ. ಮನೆಯಲ್ಲಿ ಚಿನ್ನ ಇಡುವಾಗ ಕಳ್ಳತನ ಅಥವಾ ನಷ್ಟದ ಭಯ ಇರುತ್ತದೆ.
ಬ್ಯಾಂಕ್ ಲಾಕರ್‌ಗಳಿಗೆ ಹೆಚ್ಚುವರಿ ವೆಚ್ಚವೂ ಬೇಕಾಗುತ್ತದೆ. ಆದರೆ ಇಜಿಆರ್‌ನಲ್ಲಿ ಚಿನ್ನ ಸುರಕ್ಷಿತ ವಾಲ್ಟ್‌ಗಳಲ್ಲಿ ಸಂಗ್ರಹವಾಗಿರುವುದರಿಂದ ಹೂಡಿಕೆದಾರರಿಗೆ ಆತಂಕ ಇರುವುದಿಲ್ಲ.
ಜೊತೆಗೆ ದೇಶಾದ್ಯಂತ ಒಂದೇ ಮಾರುಕಟ್ಟೆ ಬೆಲೆ ಅನ್ವಯವಾಗುವುದರಿಂದ ಬೆಲೆ ವ್ಯತ್ಯಾಸ ಸಮಸ್ಯೆಯೂ ಇಲ್ಲ. ಆಭರಣ ಖರೀದಿಯಲ್ಲಿ ಇರುವ ಮೇಕಿಂಗ್ ಚಾರ್ಜ್
ಇಲ್ಲದಿರುವುದು ಮತ್ತೊಂದು ಲಾಭವಾಗಿದೆ. ಅಗತ್ಯವಿದ್ದಾಗ ಮಾರುಕಟ್ಟೆಯಲ್ಲಿ ತಕ್ಷಣ ಮಾರಾಟ ಮಾಡಿ ಹಣವನ್ನು ಬ್ಯಾಂಕ್ ಖಾತೆಗೆ ಪಡೆಯುವ ಸೌಲಭ್ಯವೂ ಇದರಲ್ಲಿ ಇದೆ.
ತೆರಿಗೆ ದೃಷ್ಟಿಯಿಂದಲೂ ಇದು ಲಿಸ್ಟೆಡ್ ಸೆಕ್ಯೂರಿಟಿಯಾಗಿ ಪರಿಗಣಿಸಲ್ಪಡುವುದರಿಂದ ದೀರ್ಘಾವಧಿ ಹೂಡಿಕೆದಾರರಿಗೆ ಕೆಲವು ರಿಯಾಯಿತಿಗಳು ಲಭ್ಯವಾಗುತ್ತವೆ.