• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ರಾಜಕೀಯ

ಡ್ರಗ್ಸ್ ಜಾಲದ ವಿರುದ್ಧ ರಾಜ್ಯ ಸರ್ಕಾರದ ಹೊಸ ಅಸ್ತ್ರ: ANTF ಕಾರ್ಯಪಡೆ ರಚನೆ

Shwetha Mohan by Shwetha Mohan
in ರಾಜಕೀಯ, ರಾಜ್ಯ, ವಿಜಯ ಟೈಮ್ಸ್‌
ಡ್ರಗ್ಸ್ ಜಾಲದ ವಿರುದ್ಧ ರಾಜ್ಯ ಸರ್ಕಾರದ ಹೊಸ ಅಸ್ತ್ರ: ANTF ಕಾರ್ಯಪಡೆ ರಚನೆ
0
SHARES
15
VIEWS
Share on FacebookShare on Twitter
  • ಮಾದಕದ್ರವ್ಯ ಜಾಲ ಭೇದಿಸಲು ಸರ್ಕಾರದ ಹೊಸ ಸ್ಟ್ರೈಕ್ ಫೋರ್ಸ್
  • 66 ಮಂದಿ ಪೊಲೀಸ್ ಅಧಿಕಾರಿಗಳನ್ನೊಳಗೊಂಡ ಹೊಸ ಟೀಮ್ ರಚನೆ (New weapon against drug gangs)
  • ಮಾದಕವಸ್ತು ನಿರ್ಮೂಲನೆ ಆಗಸ್ಟ್ 1 ರಿಂದ ಹೊಸ ಯೋಜನೆ ರೂಪಿಸಿದ ಸರ್ಕಾರ

Bengaluru: ಕೆಲ ದಿನಗಳ ಹಿಂದಷ್ಟೇ ಮೈಸೂರಿನಲ್ಲಿ(Mysore) ಪತ್ತೆ ಹಚ್ಚಿದ ಮಾದಕ ದ್ರವ್ಯ ತಯಾರಿಕಾ ಘಟಕ ಒಂದರಲ್ಲಿ 390 ಕೋಟಿ ಮೌಲ್ಯದ ಎಂಡಿಎಂಎ (MDMA) ಎಂಬ ಭಯಾನಕ ಡ್ರಗ್ಸ್ ತಯಾರಿಸಲಾಗುತ್ತಿತ್ತು.

ಅದರ ಬೆನ್ನಲ್ಲೇ ಇದೀಗ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಮಾದಕವಸ್ತುಗಳ ಜಾಲ(Drug network) ವಿಸ್ತರಿಸುತ್ತಿರುವ ಹಿನ್ನೆಲೆಯಲ್ಲಿ, ಸರ್ಕಾರ ಗಂಭೀರ ಕ್ರಮಕ್ಕೆ ಮುಂದಾಗಿದೆ.

ಈ ಹಿನ್ನೆಲೆಯಲ್ಲಿ, ಮೊದಲ ಬಾರಿಗೆ ನಶೆಪದಾರ್ಥಗಳ ವಿರುದ್ಧದ ಕಾರ್ಯಾಚರಣೆಯನ್ನು‘ಆಂಟಿ ನಾರ್ಕೋಟಿಕ್ಸ್ ಟಾಸ್ಕ್ ಫೋರ್ಸ್’ (ANTF) ಎನ್ನುವ ವಿಶೇಷ ಪಡೆಗೆ ಜನ್ಮ ನೀಡಲಾಗಿದೆ.

ಈ ಹೊಸ ಘಟಕವು ಮಾದಕವಸ್ತುಗಳ(drugs) ವಹಿವಾಟು, ಕಳ್ಳಸಾಗಣೆ ಹಾಗೂ ಬಳಕೆಯನ್ನು ಕಡಿವಾಣ ಹಾಕುವ ಉದ್ದೇಶ ಹೊಂದಿದೆ.2025ರ ಆಗಸ್ಟ್ 1ರಂದು ರಾಜ್ಯ ಸರ್ಕಾರದಿಂದ(State Govt) ಹೊರಬಿದ್ದ ಆದೇಶದಂತೆ,

Drug network
Drug network

ಈ ಘಟಕವು ಪೊಲೀಸ್ ಮಹಾನಿರ್ದೇಶಕರಾದ ಪ್ರಣವ್ ಮೊಹಂತಿ(Pranav Mohanty) ಅವರಿಗೆ ನೇರವಾಗಿ ಲೆಕ್ಕಪತ್ರ ಸಲ್ಲಿಸಲಿದೆ.

ಟಾಸ್ಕ್ ಫೋರ್ಸ್‌ಗಾಗಿ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ADGP) ಹುದ್ದೆಯೂ ನಿರ್ಮಾಣಗೊಂಡಿದೆ, ಇದು ಘಟಕದ ನಿರ್ವಹಣೆಗೆ ಹೆಚ್ಚುವರಿ ಶಕ್ತಿ ನೀಡಲಿದೆ.

ಇನ್ನು ಈ ತಂಡದಲ್ಲಿ ಒಟ್ಟು 66 ಮಂದಿ ಅಧಿಕಾರಿಗಳನ್ನೊಳಗೊಂಡ ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ.

ಈ ಪೈಕಿ 56 ಮಂದಿ ನಕ್ಸಲ್ ವಿರೋಧಿ ಪಡೆ (ANF) ಯಿಂದ ಸ್ಥಳಾಂತರಗೊಂಡಿದ್ದು, ಇವರು ಈಗ ಮಾದಕವಸ್ತು ವಿರುದ್ಧದ ಕಾರ್ಯಪಡೆಗೆ ಸೇರ್ಪಡೆಯಾಗಿದ್ದಾರೆ.

ಉಳಿದ 10 ಹೊಸ ಹುದ್ದೆಗಳಿಗಾಗಿ ಕಛೇರಿ ಸಿಬ್ಬಂದಿಯ ನೇಮಕಾತಿ ಮಾಡಲಾಗಿದೆ.ವಿಶೇಷ ಪಡೆಯಲ್ಲಿ ಇಬ್ಬರು ಹೆಚ್ಚುವರಿ ಎಸ್‌ಪಿಗಳು(SP), ಒಬ್ಬ ಡಿಸಿಪಿ(DCP), ಸಹಾಯಕ ಆಡಳಿತಾಧಿಕಾರಿ,

ವಿವಿಧ ಮಟ್ಟದ ಅಧಿಕಾರಿ ವರ್ಗದ ಸಿಬ್ಬಂದಿ ಇದ್ದಾರೆ. ನಕ್ಸಲ್ ಪಡೆ ಯಿಂದ ವರ್ಗಾಯಿಸಲಾದ ಸಿಬ್ಬಂದಿಯ ಪೈಕಿ ಇಬ್ಬರು ಇನ್ಸ್‌ಪೆಕ್ಟರ್‌ಗಳು,

ನಾಲ್ವರು ಎಸ್‌ಐಗಳು, 20 ಹೆಡ್ ಕಾನ್‌ಸ್ಟೆಬಲ್‌ಗಳು ಹಾಗೂ 30 ಕಾನ್‌ಸ್ಟೆಬಲ್‌ಗಳು ಸೇರಿದ್ದಾರೆ.

ಈ ಹೊಸ ಪಡೆ, ರಾಜ್ಯದ ಎಲ್ಲ ಜಿಲ್ಲೆಗಳ ಮಧ್ಯೆ ಸಮನ್ವಯ ಸಾಧಿಸುವ ಮೂಲಕ ಸಂಘಟಿತ ಮಾದಕವಸ್ತು ಚಟುವಟಿಕೆಗಳನ್ನು ಪತ್ತೆಹಚ್ಚುವ ಗುರಿಯನ್ನು ಹೊಂದಿದೆ.

ಕೇಂದ್ರ ಮತ್ತು ಗುಪ್ತಚರ ವಿಭಾಗಗಳೊಂದಿಗೆ ಸಕಾಲಿಕ ಮಾಹಿತಿ ವಿನಿಮಯ ನಡೆಯುವಂತೆ ವ್ಯವಸ್ಥೆ ರೂಪಿಸಲಾಗುತ್ತದೆ. ಈ ಮೂಲಕ ಮಾದಕವಸ್ತು ವ್ಯಸನದ ಚಕ್ರವ್ಯೂಹವನ್ನು ಭೇದಿಸಲು ಸಾಧ್ಯವಾಗಲಿದೆ.

ಇನ್ನು ಹೆಚ್ಚುತ್ತಿರುವ ಮಾದಕ ವ್ಯಸನ ಮತ್ತು ಯುವ ಸಮುದಾಯದ ಮೇಲೆ ಅದರ ಬೀರುತ್ತಿರುವ ದುಷ್ಪರಿಣಾಮಗಳನ್ನು ಅರಿತ ರಾಜ್ಯ ಸರ್ಕಾರ,

ಇದೀಗ ಕ್ರಮಬದ್ಧವಾಗಿ ಮುನ್ನಡೆಯುತ್ತಿದೆ. ಈ ಕಾರ್ಯಪಡೆಯ ಸ್ಥಾಪನೆಯೊಂದಿಗೆ, ಮಾದಕದ್ರವ್ಯ ಜಾಲವನ್ನುಬುಡ ಸಮೇತ ಕಿತ್ತುಹಾಕುವ ಹೋರಾಟಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ.

ಇದನ್ನು ಓದಿ : ಡ್ರಗ್ಸ್ ಜಾಲದ ಬೆನ್ನುಬಿದ್ದ ಮಂಗಳೂರು ಪೊಲೀಸರು: ಬೀದರ್ ಮೂಲದ ವೈದ್ಯನ ಬಂಧನ

ಇನ್ನು ಈ ಕುರಿತಾಗಿ ಹೆಚ್ಚುವರಿ ಪೊಲೀಸ್ ಅಧಿಕಾರಿಯೊಬ್ಬರು ANTF ನ ಉದ್ದೇಶವು ಕೇವಲ ಪ್ರಕರಣಗಳನ್ನು ದಾಖಲಿಸುವುದಲ್ಲ, ಬದಲಾಗಿ ಮಾದಕವಸ್ತು ಜಾಲವನ್ನು ಬೇರು ಸಹಿತ ನಾಶಮಾಡುವುದು ಎಂದು ಹೇಳಿದ್ದಾರೆ. (New weapon against drug gangs)

Tags: CM siddaramaiahDrug networkDRUGSMysorepolicePranav MohantyState Govtvijaya times

Related News

ಕರಾವಳಿ ಕರ್ನಾಟಕದ ಜನರೇ ಎಚ್ಚರ, ಮತ್ತೆ ಅಬ್ಬರಿಸಲಿದೆ ಮುಂಗಾರು ಮಳೆ, ಹವಾಮಾನ ಇಲಾಖೆ ಎಚ್ಚರಿಕೆ
ಪ್ರಮುಖ ಸುದ್ದಿ

ಕರಾವಳಿ ಕರ್ನಾಟಕದ ಜನರೇ ಎಚ್ಚರ, ಮತ್ತೆ ಅಬ್ಬರಿಸಲಿದೆ ಮುಂಗಾರು ಮಳೆ, ಹವಾಮಾನ ಇಲಾಖೆ ಎಚ್ಚರಿಕೆ

July 18, 2026
ಆಂಧ್ರದಲ್ಲಿ ಮತ್ತೆ ಕೋವಿಡ್ ಆತಂಕ; ಕರ್ನಾಟಕ ಗಡಿಯಲ್ಲಿ ಹೈ ಅಲರ್ಟ್, 8 ಮಾರ್ಗಗಳಲ್ಲಿ ತೀವ್ರ ತಪಾಸಣೆ
ದೇಶ-ವಿದೇಶ

ಆಂಧ್ರದಲ್ಲಿ ಮತ್ತೆ ಕೋವಿಡ್ ಆತಂಕ; ಕರ್ನಾಟಕ ಗಡಿಯಲ್ಲಿ ಹೈ ಅಲರ್ಟ್, 8 ಮಾರ್ಗಗಳಲ್ಲಿ ತೀವ್ರ ತಪಾಸಣೆ

July 18, 2026
ಸಿದ್ದರಾಮಯ್ಯ ಜೊತೆ ಯಾವುದೇ ಭಿನ್ನಾಭಿಪ್ರಾಯವಿಲ್ಲ: ರಾಜಕೀಯ ಲಾಭಕ್ಕಾಗಿ ಸುಳ್ಳು ಸುದ್ದಿಗಳು ಹರಿದಾಡುತ್ತಿವೆ ಎಂದ ಸತೀಶ್ ಜಾರಕಿಹೊಳಿ
ಪ್ರಮುಖ ಸುದ್ದಿ

ಸಿದ್ದರಾಮಯ್ಯ ಜೊತೆ ಯಾವುದೇ ಭಿನ್ನಾಭಿಪ್ರಾಯವಿಲ್ಲ: ರಾಜಕೀಯ ಲಾಭಕ್ಕಾಗಿ ಸುಳ್ಳು ಸುದ್ದಿಗಳು ಹರಿದಾಡುತ್ತಿವೆ ಎಂದ ಸತೀಶ್ ಜಾರಕಿಹೊಳಿ

July 18, 2026
ಮನೆಬಾಗಿಲಿಗೇ ಇ-ಸ್ವತ್ತು ಸೇವೆ: ಗ್ರಾಮಸ್ಥರ ಅಲೆದಾಟಕ್ಕೆ ಬ್ರೇಕ್, ಸಮಸ್ಯೆ ಪರಿಹಾರಕ್ಕೆ ಪಂಚ ಸದಸ್ಯರ ಸಮಿತಿ ರಚನೆ
ಪ್ರಮುಖ ಸುದ್ದಿ

ಮನೆಬಾಗಿಲಿಗೇ ಇ-ಸ್ವತ್ತು ಸೇವೆ: ಗ್ರಾಮಸ್ಥರ ಅಲೆದಾಟಕ್ಕೆ ಬ್ರೇಕ್, ಸಮಸ್ಯೆ ಪರಿಹಾರಕ್ಕೆ ಪಂಚ ಸದಸ್ಯರ ಸಮಿತಿ ರಚನೆ

July 17, 2026

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.