ಹೊಸ ವರ್ಷವು (New year health formulas) ಅನೇಕ ಜನರಿಗೆ ಹೊಸ ಆರಂಭವನ್ನು ಸೂಚಿಸುತ್ತದೆ.ಇದರರ್ಥ ಕೆಲವರಿಗೆ ತೂಕವನ್ನು ಕಳೆದುಕೊಳ್ಳುವುದು,
ಆರೋಗ್ಯಕರ ಆಹಾರವನ್ನು ಅನುಸರಿಸುವುದು ಮತ್ತು ವ್ಯಾಯಾಮದ ದಿನಚರಿಯನ್ನು ಪ್ರಾರಂಭಿಸುವುದು, (New year health formulas) ಮುಂತಾದ ಆರೋಗ್ಯ ಗುರಿಗಳನ್ನು ಹೊಂದಿರುತ್ತಾರೆ.
https://vijayatimes.com/hidden-number-plates/
ಪ್ರತಿ ವರ್ಷ, ಲಕ್ಷಾಂತರ ಜನರು ಹೊಸ ವರ್ಷದ ಸಂಕಲ್ಪಗಳನ್ನು ಮಾಡುತ್ತಾರೆ, ಧನಾತ್ಮಕ ಬದಲಾವಣೆಯನ್ನು ಬಯಸುತ್ತಾರೆ.

ಹಾಗಾಗಿ ಪಾಲಿಸಬಹುದಾದ ಹೊಸ ಆರೋಗ್ಯಕರ ಕ್ರಮಗಳು ಈ ಕೆಳಗಿನಂತಿವೆ.
- ನೀವು ಮಾಡುವ ಪ್ರತಿಯೊಂದು ಕೆಲಸವನ್ನು ಇಷ್ಟಪಟ್ಟು ಪ್ರೀತಿಯಿಂದ ಮಾಡಿರಿ , ಆಗ ಒತ್ತಡವೆನಿಸುವುದಿಲ್ಲ.
- ಯಾವುದೇ ವಿಷಯದ ಬಗ್ಗೆಯೂ ಹೆಚ್ಚು ಯೋಚಿಸಬೇಡಿ, ತಕ್ಷಣವೇ ನಿರ್ಧಾರ ತೆಗೆದುಕೊಳ್ಳಲು ಮುಂದಾಗಬೇಡಿ.
- ನಾರಿನಾಂಶವಿರುವ ಆಹಾರ ಪದಾರ್ಥಗಳನ್ನು ಹೆಚ್ಚು ಸೇವಿಸಿ.
- ರಾತ್ರಿ ಹೊತ್ತು ಬೇಗ ಊಟ ಮಾಡುವ ಅಭ್ಯಾಸ ರೂಢಿಸಿಕೊಳ್ಳಿ.
- ದಿನಕ್ಕೆ ಮೂರು ಲೀಟರ್ ನೀರನ್ನು ಕುಡಿಯಿರಿ.
- ಋತುಮಾನಕ್ಕನುಗುಣವಾದ ಆಹಾರಕ್ರಮವಿರಲಿ, ಪ್ರತಿದಿನ ಸೊಪ್ಪು, ತರಕಾರಿ, ಹಣ್ಣುಗಳು ಯಥೇಚ್ಛವಾಗಿ ಸೇವಿಸಿ.
- ಸಿಹಿ, ಹುಳಿ, ಉಪ್ಪು, ಖಾರ, ಕಹಿ, ಒಗರು ಈ ಆರು ರುಚಿಗಳನ್ನು ಒಳಗೊಂಡ ಆಹಾರ ಸೇವಿಸಿ
- ಸಕ್ಕರೆ ಮತ್ತು ಮೈದಾ ಬಳಸಲೇಬೇಡಿ.
- ತಿಂಗಳ ಬಜೆಟ್‌ನಲ್ಲಿ ಪುಸ್ತಕ ಖರೀದಿಸಿ.
- ವರುಷಕ್ಕೊಮ್ಮೆ ಆರೋಗ್ಯದ ತಪಾಸಣೆ ಮಾಡಿಸಿಕೊಳ್ಳಿ.
- ಅನಗತ್ಯ ವಸ್ತುಗಳ ಖರೀದಿಯನ್ನು ನಿಲ್ಲಿಸಿ.
- ಮನೆಯಲ್ಲಿ ಒಳಾಂಗಣ ಗಿಡಗಳನ್ನು ಬೆಳೆಸಿ.
- ಎಲ್ಲರನ್ನು ಪ್ರೀತಿಸುವ ಮನೋಭಾವ ನೆಮ್ಮದಿ ನೀಡುತ್ತದೆ.
- ಆಸೆಯಿರಲಿ, ಆದರೆ ದುರಾಸೆ ಬೇಡ.
- ಸಾಹಿತ್ಯ, ಸಂಗೀತ, ಕ್ರೀಡೆ ಹೀಗೆ ಯಾವುದಾದರೊಂದು ಹವ್ಯಾಸ ರೂಢಿಸಿಕೊಳ್ಳಬೇಕು.
- ನಿರೀಕ್ಷೆಗಳನ್ನು ಕಡಿಮೆ ಮಾಡಿಕೊಳ್ಳಬೇಕು.
- ಸಕ್ಕರೆಗೆ ಬದಲು ಬೆಲ್ಲ ಬಳಸಿ.
- ದಿನಕ್ಕೆ ಒಂದು ಗಂಟೆ ನಡಿಗೆ ಮತ್ತು ವ್ಯಾಯಾಮ ಮಾಡುವುದನ್ನು ರೂಢಿಸಿಕೊಳ್ಳಿ.
- 6 ರಿಂದ 8 ಗಂಟೆ ನಿದ್ರೆ ಅವಶ್ಯಕ.
- ಧೂಮಪಾನ, ಮದ್ಯಪಾನಗಳಿಂದ ಮತ್ತು ಮಾದಕ ವಸ್ತುಗಳಿಂದ ದೂರವಿರಿ.
- ನೋವುನಿವಾರಕ ಮಾತ್ರೆಗಳ ಸೇವನೆ ಮಿತಿಗೊಳಿಸಿಕೊಳ್ಳೋಣ.
- ದಪ್ಪಗಿದ್ದಲ್ಲಿ ತೂಕ ಕಡಿಮೆ ಮಾಡಿಕೊಳ್ಳುವ ಕುರಿತು ಯೋಚಿಸಿ, ತೂಕ ತಗ್ಗಿಸಿಕೊಂಡು ಆರೋಗ್ಯಕರ ಜೀವನ ನಡೆಸಿ.
- ದೈಹಿಕ ಸ್ವಚ್ಛತೆ, ಮನೆ ಒಳಗಿನ ಹಾಗೂ ಹೊರಗಿನ ಪರಿಸರದ ಸ್ವಚ್ಛತೆಯ ಕಡೆಗೆ ಗಮನಹರಿಸಿ.
- ಇತರರ ಏಳಿಗೆಯನ್ನು ಕಂಡು ಸಂತೋಷಪಡುವ ಮನೋಭಾವ ಇರಲಿ.
- ಅಂತರಂಗದ ಸೌಂದರ್ಯ ಹೆಚ್ಚಿಸಿಕೊಳ್ಳೋಣ.
- ವಯಸ್ಸಾಗುವಿಕೆ ಪ್ರತಿಯೊಬ್ಬರಿಗೂ ಅನಿವಾರ್ಯ. ಅದನ್ನು ಸ್ವೀಕರಿಸಿ ನೆಮ್ಮದಿಯ ಜೀವನ ನಡೆಸಬೇಕು.