ನವದೆಹಲಿ, ಅ.19: ವಿದ್ಯಾರ್ಥಿಗಳು ಮತ್ತು ಭಾರತೀಯ ತಂತ್ರಜ್ಞಾನ ಸಂಸ್ಥೆಗಳು (ಐಐಟಿಗಳು), ದೆಹಲಿ ವಿಶ್ವವಿದ್ಯಾಲಯ (ಡಿಯು) ಮತ್ತು ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್ (ಟಿಐಎಸ್‌ಎಸ್) ನಂತಹ ವಿದ್ಯಾರ್ಥಿಗಳು ನಡೆಸಿದ ಆಶ್ಚರ್ಯಕರ ತಪಾಸಣೆ ವೇಳೆ ಸಾರ್ವಜನಿಕ ಕಲ್ಯಾಣಕ್ಕಾಗಿ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿಕೊಳ್ಳುವ ಸರ್ಕಾರಿ ಅನುದಾನಿತ ಸಂಸ್ಥೆಗಳ ಬಗ್ಗೆ ಆಘಾತಕಾರಿ ಮಾಹಿತಿಗಳು ಲಭಿಸಿವೆ.
ರಾಷ್ಟ್ರೀಯ ಸಾಮಾಜಿಕ ರಕ್ಷಣಾ ಸಂಸ್ಥೆಯ (ಎನ್‌ಐಎಸ್‌ಡಿ) ಅಧಿಕಾರಿಗಳ ಮಾರ್ಗದರ್ಶನದಲ್ಲಿ ನಡೆಸಿದ ತಪಾಸಣೆಯ ನಂತರ ಬಹಿರಂಗವಾಗಿದ್ದು, ಅಂತಹ 100 ಕ್ಕೂ ಎನ್‌ಜಿಒಗಳು ಕೇಂದ್ರ ಸಾಮಾಜಿಕ ನ್ಯಾಯ ಸಚಿವಾಲಯದ ಗಮನಕ್ಕೆ ಬಂದಿದ್ದು, ಮೇಲೆ ಹದ್ದಿನ ಕಣ್ಣು ಇಡುವುದಕ್ಕೆ ಶುರುಮಾಡಿದೆ.
ಸುಮಾರು 700 ಸಂಸ್ಥೆಗಳ ಸಮೀಕ್ಷೆಯಲ್ಲಿ ಅಂದಾಜು 130 ಅಥವಾ 19% ಕ್ರಿಯಾತ್ಮಕವಲ್ಲದವು, ಹಾಗೂ ನಿಯಂತ್ರಕ ಮಾನದಂಡಗಳನ್ನು ಉಲ್ಲಂಘಿಸಿದ್ದು, ದಾಖಲೆಗಳನ್ನು ಸರಿಯಾಗಿ ನಿರ್ವಹಿಸಲಿಲ್ಲ ಸರ್ಕಾರದ ಅನುದಾನವನ್ನು ಪಡೆದು ದುರ್ಬಳಕೆ ಮಾಡಿದೆ ಅಂತ ತಿಳಿದು ಬಂದಿದೆ. ಸಾಮಾಜಿಕ ನ್ಯಾಯ ಸಚಿವಾಲಯವು ಸರ್ಕಾರದ ಅನುದಾನವನ್ನು ದುರ್ಬಳಕೆ ಮಾಡಿಕೊಂಡ ಸುಮಾರು 130 ಸಂಸ್ಥೆಗಳನ್ನು ಕಪ್ಪುಪಟ್ಟಿಗೆ ಸೇರಿಸಲು ಯೋಜಿಸುತ್ತಿದೆ ಹಾಗೂ ಈ ನಿಯಂತ್ರಕ ಮಾನದಂಡಗಳನ್ನು ಕಟ್ಟುನಿಟ್ಟಾಗಿಸಲು ಮುಂದಾಗಿದೆ ಎಂದು ತಿಳಿಸಿದೆ.
ಸಾಮಾಜಿಕ ನ್ಯಾಯ ಸಚಿವಾಲಯದ ಕಠಿಣಕ್ರಮವನ್ನು ರಾಜ್ಯವಾರು, ಮಹಾರಾಷ್ಟ್ರದಲ್ಲಿ 20 ಕ್ಕೂ ಹೆಚ್ಚು, ಕರ್ನಾಟಕದಲ್ಲಿ 13, ರಾಜಸ್ಥಾನದಲ್ಲಿ 11 ಮತ್ತು ಉತ್ತರಪ್ರದೇಶದಲ್ಲಿ ಎಂಟು ಸಂಸ್ಥೆಗಳು ಎದುರಿಸಲಿವೆ ಎನ್ನಲಾಗುತ್ತಿದೆ.