ಬೆಂಗಳೂರು ಸೆ 22 : ಡಿ.ಜೆ.ಹಳ್ಳಿ ಮತ್ತು ಕೆ.ಜಿ.ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯನ್ನು ಎನ್ಐಎ ಹಾಗೂ ಬೆಂಗಳೂರು ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ತಬ್ರೇಜ್ (35) ಎಂದು ಗುರುತಿಸಲಾಗಿದೆ. ಈತ ಸಾಮಾಜಿಕ ಜಾಲತಾಣಗ ವಾಟ್ಸಾಪ್ ಮುಖೇನ ಬೆಂಗಳೂರು ಗಲಭೆಗೆ ಪ್ರಚೋದನೆ ನೀಡಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಲಭೆಯ ಸಂದರ್ಭದಲ್ಲಿ ಪೊಲೀಸ್ ಠಾಣೆ, ವಾಹನಗಳು ಸೇರಿದಂತೆ ಸಾರ್ವಜನಿಕ ಆಸ್ತಾ ಪಾಸ್ತಿಗಳು ನಾಶವಾಗಿದ್ದವು. ಪೊಲೀಸ್ ವಾಹನಗಳಿಗೂ ಬೆಂಕಿ ಹಚ್ಚಲಾಗಿತ್ತು. ಈ ಆರೋಪಿಯ ಹೆಸರು ಚಾರ್ಜ್ ಶೀಟ್‌ನಲ್ಲಿಯೂ ಉಲ್ಲೇಖವಾಗಿತ್ತು. ಆದರೆ ಘಟನೆಯ ಬಳಿಕ ಈತ ತಲೆಮರೆಸಿಕೊಂಡಿದ್ದನು.
ಈತನ ಬಗ್ಗೆ ದೊರೆತ ತಾಂತ್ರಿಕ ಮಾಹಿತಿಯನ್ನು ಆಧರಿಸಿ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು ಈತನನ್ನು ಬಂಧಿಸಿದ್ದಾರೆ. ಈತ ಸಂಗಾಯ್‌ಪುರ ವಾರ್ಡ್‌ನ ಎಸ್‌ಡಿಪಿಐನ ಸಕ್ರಿಯ ಸದಸ್ಯನಾಗಿದ್ದ ಎಂಬುದಾಗಿಯೂ ಅಧಿಕಾರಿಗಳು ತಿಳಿಸಿದ್ದಾರೆ.
ಆರೋಪಿ ಸಂಗಾಯ್ ಪುರ ವಾರ್ಡ್ ನಲ್ಲಿ ಸಕ್ರಿಯ ಎಸ್’ಡಿಪಿಐ ಸದಸ್ಯನಾಗಿದ್ದ ಎಂದು ಎನ್ಐಎ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.