Mysuru : ಮೈಸೂರಿನ(Mysuru) ಪಿಎಫ್ಐ(PFI) ಸಂಘಟನೆಯ ಮಾಜಿ ಜಿಲ್ಲಾಧ್ಯಕ್ಷ ಕಲೀಮುಲ್ಲಾನನ್ನು ಮೈಸೂರಿನ ಸಿಸಿಬಿ ಅಧಿಕಾರಿಗಳು(CCB Officers) ಬಂಧಿಸಿದ್ದಾರೆ. ಈ ಸುದ್ದಿ ತಿಳಿಯುತ್ತಿದ್ದಂತೆ ಮೈಸೂರಿನ ಸಂತ ಫಿಲೋಮಿನಾ ಚರ್ಚ್ ಬಳಿ ಇರುವ ಸಿಸಿಬಿ ಕಚೇರಿಗೆ ಪಿಎಫ್ಐ ಕಾರ್ಯಕರ್ತರು(PFI Workers) ಮುತ್ತಿಗೆ ಹಾಕಿದ್ದಾರೆ.

ಪಿಎಫ್ಐ ಮಾಜಿ ಜಿಲ್ಲಾಧ್ಯಕ್ಷ ಕಲೀಮುಲ್ಲಾ ಅವರನ್ನು ಎನ್ಐಎ(NIA) ನೀಡಿದ ಆದೇಶದ ಮೇಲೆ ಸಿಸಿಬಿ ಬಂಧಿಸಿದ್ದು, ಈ ಸುದ್ದಿ ತಿಳಿಯುತ್ತಿದ್ದಂತೆ ಸಿಸಿಬಿ ಕಚೇರಿಗೆ ಮುಂದೆ ಜಮಾಯಿಸಿದ ಕಲೀಮುಲ್ಲಾ ಬೆಂಬಲಿಗರು ಮತ್ತು ಪಿಎಫ್ಐ ಕಾರ್ಯಕರ್ತರು ಸಿಸಿಬಿ ಕಚೇರಿಗೆ ಮುತ್ತಿಗೆ ಹಾಕಲು ಪ್ರಯತ್ನಿಸಿದರು.
ಈ ವೇಳೆ ಸಿಸಿಬಿ ಪೊಲೀಸರ ವಿರುದ್ದ ಘೋಷಣೆಗಳನ್ನು ಕೂಗಿದ ಪಿಎಫ್ಐ ಕಾರ್ಯಕರ್ತರು, ಕಲೀಮುಲ್ಲಾನನ್ನು ಬಿಡುಗಡೆ ಮಾಡುವಂತೆ ಆಗ್ರಹಿಸಿದರು. ಪಿಎಫ್ಐ ಸಂಘಟನೆಯ ಮಾಜಿ ಜಿಲ್ಲಾಧ್ಯಕ್ಷ ಕಲೀಮುಲ್ಲಾನನ್ನು ಮೈಸೂರಿನಲ್ಲಿ ವಶಕ್ಕೆ ಪಡೆದ ಸಿಸಿಬಿ ಪೊಲೀಸರು ಆರೋಗ್ಯ ತಪಾಸಣೆ ನಡೆಸಿ, ಪೊಲೀಸ್ ಬಿಗಿಭದ್ರತೆಯಲ್ಲಿ ಬೆಂಗಳೂರಿನತ್ತ ಕರದೊಯ್ದರು.
https://youtu.be/OVOJL0PwwtQ ಮರಳು ದಂಧೆಗೆ ಇಲ್ಲಿದೆ ನೋಡಿ ಜ್ವಲಂತ ಸಾಕ್ಷಿ!
ಈ ವೇಳೆ ಪಿಎಫ್ಐ ಕಾರ್ಯಕರ್ತರು ಪೊಲೀಸರನ್ನು ಹಿಂಬಾಲಿಸುತ್ತಿರುವುದು ಕಂಡು ಬಂದಿದೆ. 3-4 ಬಸ್ ಗಳಲ್ಲಿ ನೂರಾರು ಪಿಎಫ್ಐ ಕಾರ್ಯಕರ್ತರು ಬೆಂಗಳೂರಿನತ್ತ ಪಯಣ ಬೆಳೆಸಿದ್ದು, ಬೆಂಗಳೂರಿನಲ್ಲಿರುವ ಎನ್ಐಎ ಕಚೇರಿ ಮುಂದೆ ಪ್ರತಿಭಟನೆ ನಡೆಸಲು ಪಿಎಫ್ಐ ಕಾರ್ಯಕರ್ತರು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಪಿಎಫ್ಐ ಭಯೋತ್ಪಾದಕ ಚಟುವಟಿಕೆಗೆ ಬೆಂಬಲ ನೀಡಿ, ಕೃತ್ಯಗಳಿಗೆ ಸಂಚು ರೂಪಿಸುತ್ತಿದೆ ಮತ್ತು ನಿರ್ದಿಷ್ಟ ಧರ್ಮದ ಜನರನ್ನು ಗುರುತಿಸಿ ಕೊಲ್ಲಲು ಪಿಎಫ್ಐ ಕಾರ್ಯಕರ್ತರಿಗೆ ತರಬೇತಿ ನೀಡುತ್ತಿದೆ ಎಂದು ಎನ್ಐಎ ಆರೋಪಿಸಿದ್ದು, ಭಯೋತ್ಪಾದಕರೊಂದಿಗೆ ಸಂಪರ್ಕ ಹೊಂದಿರುವ ಆರೋಪದ ಮೇಲೆ ಇಂದು 10 ರಾಜ್ಯಗಳ 100ಕ್ಕೂ ಹೆಚ್ಚು ಸ್ಥಳಗಳ ಮೇಲೆ ರಾಷ್ಟ್ರೀಯ ತನಿಖಾ ಸಂಸ್ಥೆ ಮತ್ತು ಜಾರಿ ನಿರ್ದೇಶನಾಲಯ ಜಂಟಿಯಾಗಿ ದಾಳಿ ನಡೆಸಿವೆ.
- ಮಹೇಶ್.ಪಿ.ಎಚ್