• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಮಾಹಿತಿ

ಬೆಂಗಳೂರು, ಕೋಲಾರದಲ್ಲಿ NIA ದಾಳಿ: ಮೂವರು ಶಂಕಿತ ಉಗ್ರರ ಬಂಧನ

Shwetha Mohan by Shwetha Mohan
in ಮಾಹಿತಿ, ರಾಜ್ಯ, ವಿಜಯ ಟೈಮ್ಸ್‌
ಬೆಂಗಳೂರು, ಕೋಲಾರದಲ್ಲಿ NIA ದಾಳಿ: ಮೂವರು ಶಂಕಿತ ಉಗ್ರರ ಬಂಧನ
0
SHARES
14
VIEWS
Share on FacebookShare on Twitter
  • NIAನಿಂದ ಭರ್ಜರಿ ಕಾರ್ಯಾಚರಣೆ ಒಟ್ಟು 5 ಕಡೆ ದಾಳಿ
  • ಜೈಲಿನ ಮನೋವೈದ್ಯ ಹಾಗೂ ASI ಸೇರಿ ಮೂವರು ವಶಕ್ಕೆ (NIA raids Bengaluru Kolar)
  • ಜೈಲಿನಲ್ಲಿದ್ದುಕೊಂಡೇ ವಿದ್ವಂಸಕ ಕೃತ್ಯಕ್ಕೆ ನಡೆದಿತ್ತು ಪ್ಲಾನ್

Bengaluru: ರಾಜ್ಯದಲ್ಲಿ ಎನ್​ಐಎ (NIA) ಅಧಿಕಾರಿಗಳು ಭಾರೀ ದೊಡ್ಡ ಪ್ರಮಾಣದಲ್ಲಿ ದಾಳಿ ಮಾಡಿದ್ದಾರೆ.

ದುರಂತ ಏನಂದ್ರೆ ದೇಶ ಕಾಯ್ತೀವಿ ಅಂತ ಸಂವಿಧಾನದ (Constitution) ಮೇಲೆ ಪ್ರಮಾಣ ಮಾಡಿದ ಪೊಲೀಸ್ ಅಧಿಕಾರಿಯೇ ತಾಯ್ನೆಲಕ್ಕೆ ದ್ರೋಹವೆಸಗಿರುವ ಆರೋಪ ಕೇಳಿಬಂದಿದೆ.

ಈ ಅಧಿಕಾರಿಯ ಜೊತೆಗೆ ಭಯೋತ್ಪಾದನೆಗೆ (terrorism) ಸಹಾಯ ಮಾಡೋ ಕೆಲ ಶಂಕಿತರನ್ನ ಎನ್​ಐಎ ಅರೆಸ್ಟ್​ ಮಾಡಿದೆ.ರಾಜ್ಯದಲ್ಲಿ ಉಗ್ರವಾದಿಗಳನ್ನು (Extremists) ಹೆಡೆಮುರಿಕಟ್ಟುವ ಕಾರ್ಯ ಭರ್ಜರಿಯಾಗಿ ನಡೆಯುತ್ತಿದೆ.

2008ರ ಜುಲೈ 25ರಂದು ಬೆಂಗಳೂರಲ್ಲಿ 9 (Bangalore) ಸರಣಿ ಬಾಂಬ್ ಸ್ಫೋಟದ​ ಹಿಂದೆ ಎನ್​ಐಎ ಅಧಿಕಾರಿಗಳು ಬಿದ್ದಿದ್ದಾರೆ. ಅವತ್ತಿನಿಂದ ಇವತ್ತಿನವರೆಗೂ ಒಬ್ಬರಾದ್ನೇಲೆ ಒಬ್ಬರನ್ನು ಲಾಕ್ ಮಾಡ್ತಿರುವ ಎನ್​ಐಎ ವಿಚಾರಣೆ ಮಾಡ್ತಾ ಬಂದಿದೆ.

NIA raids BANGALURU
NIA raids Bengaluru Kolar Three suspected terrorists arrested

ಪರಪ್ಪನ ಅಗ್ರಹಾರ ಜೈಲಿನ ಮನೋವೈದ್ಯ ಡಾ. ನಾಗರಾಜ್‌, (Dr Nagaraj) ಎಎಸ್‌ಐ ಚಾನ್‌ಪಾಷಾ, ಕೋಲಾರದ ಅನೀಸಾ ಫಾತೀಮಾ ಬಂಧಿತರು.

ಆರೋಪಿ ಅನಿಸಾ, ತಲೆಮರೆಸಿಕೊಂಡಿರುವ ಉಗ್ರ ಜುನೈದ್‌ ಅಹಮ್ಮದ್‌ನ ತಾಯಿ.

ಈ ಮೂವರು ಶಂಕಿತರು ಜೈಲಿನಲ್ಲಿರುವ ಎಲ್‌ಇಟಿ ಉಗ್ರ ಟಿ.ನಾಸೀರ್‌ನ ಉಗ್ರ ಚಟುವಟಿಕೆಗಳಿಗೆ ಸಹಕಾರ (cooperation) ನೀಡುತ್ತಿದ್ದರು ಎಂಬುದಕ್ಕೆ ಸಾಕಷ್ಟು ಪುರಾವೆಗಳು ಸಿಕ್ಕಿವೆ.

ಕೋಲಾರ (Kolar) ಹಾಗೂ ಬೆಂಗಳೂರು ಸೇರಿದಂತೆ ಐದು ಸ್ಥಳಗಳಲ್ಲಿ ನಡೆಸಿದ ಶೋಧ ಕಾರ್ಯಾಚರಣೆ ವೇಳೆ ಉಗ್ರ ಚಟುವಟಿಕೆಗಳಿಗೆ ಸಂಬಂಧಿಸಿದ ಹಣ, ಚಿನ್ನಾಭರಣ, ಎರಡು ವಾಕಿಟಾಕಿ, ಡಿಜಿಟಲ್‌ ಪರಿಕರಗಳು ಸಿಕ್ಕಿವೆ ಎಂದು ಎನ್‌ಐಎ ತಿಳಿಸಿದೆ.

ಕೆಲ ವರ್ಷಗಳಿಂದ ಜೈಲಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ವೈದ್ಯ ಡಾ.ನಾಗರಾಜ್‌, ಉಗ್ರ ನಾಸೀರ್‌ ಸೇರಿ ಇತರರಿಗೆ ಕಳ್ಳ ಮಾರ್ಗದ ಮೂಲಕ ಮೊಬೈಲ್‌ ತಲುಪಿಸುತ್ತಿದ್ದರು.

ಈ ಕೃತ್ಯಕ್ಕಾಗಿ ಪವಿತ್ರಾ ಎಂಬಾಕೆ ಸಹಾಯ ಮಾಡುತ್ತಿದ್ದರು. ಸಶಸ್ತ್ರ ಮೀಸಲು ಪಡೆಯ ಎಎಸ್‌ಐ (ASI) ಚಾನ್‌ ಪಾಷಾ, 2022ರಿಂದ ಉಗ್ರ ನಾಸೀರ್‌ಗೆ ಮಾಹಿತಿ ರವಾನಿಸುವುದು,

ಬೇರೆ ಕೋರ್ಟ್‌ಗಳಿಗೆ ಕರೆದುಕೊಂಡು ಹೋದಾಗ ಸಹಕಾರ ನೀಡುವುದು, ಎಲ್‌ಇಟಿ ಸಂಘಟನೆ (LeT organization) ಬಲಪಡಿಸಲು ದೇಣಿಗೆ ಸಂಗ್ರಹಿಸಲು ನೆರವಾಗುತ್ತಿದ್ದರು.

ಇದನ್ನು ಓದಿ :ಬೆಂಗಳೂರಿನಲ್ಲಿ 600 ಜನರಿಗೆ ಚೀಟಿ ಹೆಸರಲ್ಲಿ ಚೀಟಿಂಗ್: 40 ಕೋಟಿ ರೂ ಹಣದೊಂದಿಗೆ ದಂಪತಿ ಪರಾರಿ!

ಬೆಂಗಳೂರು ಸೇರಿ ವಿವಿಧೆಡೆ ಎಲ್‌ಇಟಿ ಸಂಘಟನೆ ಬಲಪಡಿಸುವಿಕೆ ಹಾಗೂ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸುವಲ್ಲಿ ಪ್ರಧಾನ ಪಾತ್ರ ವಹಿಸಿ ತಲೆಮರೆಸಿಕೊಂಡ ಉಗ್ರ ಜುನೈದ್‌ ಅಹಮದ್‌ನ್‌ ತಾಯಿಯಾಗಿರುವ ಅನಿಸಾ ಕೂಡ ನಾಸೀರ್‌ಗೆ ಸಹಕಾರ ನೀಡಿದ್ದಾಳೆ ಎಂದು ಎನ್‌ಐಎ ತಿಳಿಸಿದೆ. (NIA raids Bengaluru Kolar)

Tags: "Karnataka"police"bengaluruconstitutionDr NagarajNIAvijayatimes

Related News

ಗ್ರಾಹಕರ ಜೇಬಿಗೆ ಬ್ಯಾಂಕುಗಳ ಕತ್ತರಿ: ಕನಿಷ್ಠ ಬ್ಯಾಲೆನ್ಸ್ ದಂಡವಾಗಿ ₹4,818 ಕೋಟಿ ವಸೂಲಿ
ಪ್ರಮುಖ ಸುದ್ದಿ

ಗ್ರಾಹಕರ ಜೇಬಿಗೆ ಬ್ಯಾಂಕುಗಳ ಕತ್ತರಿ: ಕನಿಷ್ಠ ಬ್ಯಾಲೆನ್ಸ್ ದಂಡವಾಗಿ ₹4,818 ಕೋಟಿ ವಸೂಲಿ

February 14, 2026
ಮಂಗಳೂರಿನ ತಲಪಾಡಿಯಲ್ಲಿ 11.90 ಲಕ್ಷ ಮೌಲ್ಯದ MDMA ವಶ: ಬೆಂಗಳೂರಿನಿಂದ ಸಾಗಾಟ ಮಾಡುತ್ತಿದ್ದ ಮೂವರು ಬಂಧನ
ಪ್ರಮುಖ ಸುದ್ದಿ

ಮಂಗಳೂರಿನ ತಲಪಾಡಿಯಲ್ಲಿ 11.90 ಲಕ್ಷ ಮೌಲ್ಯದ MDMA ವಶ: ಬೆಂಗಳೂರಿನಿಂದ ಸಾಗಾಟ ಮಾಡುತ್ತಿದ್ದ ಮೂವರು ಬಂಧನ

February 14, 2026
ಗ್ಯಾರಂಟಿ ಯೋಜನೆಗಳಿಂದ ಬಡ ಕುಟುಂಬಗಳಿಗೆ ವಾರ್ಷಿಕ ₹60 ಸಾವಿರದ ಆರ್ಥಿಕ ಬೆಂಬಲ: ಸಿಎಂ ಸಿದ್ದರಾಮಯ್ಯ
ಪ್ರಮುಖ ಸುದ್ದಿ

ಗ್ಯಾರಂಟಿ ಯೋಜನೆಗಳಿಂದ ಬಡ ಕುಟುಂಬಗಳಿಗೆ ವಾರ್ಷಿಕ ₹60 ಸಾವಿರದ ಆರ್ಥಿಕ ಬೆಂಬಲ: ಸಿಎಂ ಸಿದ್ದರಾಮಯ್ಯ

February 14, 2026
ಸ್ವಿಗ್ಗಿ, ಜೊಮ್ಯಾಟೊಗೆ ಪೈಪೋಟಿ ನೀಡಲು ಮುಂದಾದ Flipkart: ಬೆಂಗಳೂರಲ್ಲಿ ಫುಡ್ ಡೆಲಿವರಿ ಸೇವೆ ಆರಂಭಿಸಲು ಪ್ಲಾನ್
ಪ್ರಮುಖ ಸುದ್ದಿ

ಸ್ವಿಗ್ಗಿ, ಜೊಮ್ಯಾಟೊಗೆ ಪೈಪೋಟಿ ನೀಡಲು ಮುಂದಾದ Flipkart: ಬೆಂಗಳೂರಲ್ಲಿ ಫುಡ್ ಡೆಲಿವರಿ ಸೇವೆ ಆರಂಭಿಸಲು ಪ್ಲಾನ್

February 13, 2026

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.