- ಹೊಸೂರು ರಸ್ತೆಯ ಎರಡು ಟೋಲ್ನಲ್ಲೂ ದರ ಹೆಚ್ಚಳ
- ಅತ್ತಿಬೆಲೆ ಮತ್ತು ಎಲೆಕ್ಟ್ರಾನಿಕ್ ಸಿಟಿ ಟೋಲ್ ದರ ಹೆಚ್ಚಳ (Nice road toll rates increase)
- ನೈಸ್ ರಸ್ತೆ ಟೋಲ್ ದರ ಶೇ 15 ರವರೆಗೆ ಏರಿಕೆ
Bengaluru: ಈಗಾಗಲೇ ಕರ್ನಾಟಕದಲ್ಲಿ(Karnataka) ಬೆಲೆ ಏರಿಕೆಯಿಂದ ತತ್ತರಿಸುತ್ತಿರುವ ಬಡ ಹಾಗೂ ಮಧ್ಯಮ ವರ್ಗದ ವಾಹನ ಸವಾರರಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ(National Highways Authority of India) ಶಾಕ್ ಕೊಟ್ಟಿದೆ.
ಇದೀಗ, ಲಕ್ಷಾಂತರ ವಾಹನಗಳ ಓಡಾಟಕ್ಕೆ ರಹದಾರಿಯಾಗಿರುವ ಬೆಂಗಳೂರಿನ ನೈಸ್ ರಸ್ತೆ (NICE Road) ಟೋಲ್ ದರ (NICE Road Toll Price Hike) ಮತ್ತೆ ಏರಿಕೆಯಾಗಿದೆ. ಈ ಕುರಿತಾಗಿ ಸಾರ್ವಜನಿಕ ಪ್ರಕಟಣೆ ಹೊರಡಿಸಿರುವ ನಂದಿ ಎಕನಾಮಿಕಲ್ ಕಾರಿಡಾರ್ ಎಂಟರ್ಪ್ರೈಸಸ್ (NICE), ಪರಿಷ್ಕೃತ ದರ ಇಂದಿನಿಂದ (ಜುಲೈ 1) ಅನ್ವಯ ಆಗಲಿದೆ ಎಂದು ಹೇಳಿದೆ.

ನಂದಿ ಏಕನಾಮಿಕಲ್ ಕಾರಿಡಾರ್ ಎಂಟರ್ಪ್ರೈಸಸ್ ಅಧೀನಕ್ಕೆ ಒಳಪಡುವ ಒಟ್ಟು 8 ಟೋಲ್ ಪ್ಲಾಜಾಗಳಲ್ಲೂ(Toll Plaza) ದರ ಏರಿಕೆ ಅನ್ವಯ ಆಗಲಿದೆ.
ಹೊಸೂರು ರಸ್ತೆ(Hosur Road), ಬನ್ನೇರುಘಟ್ಟ ರಸ್ತೆ(Bannerghatta Road), ಕನಕಪುರ ರಸ್ತೆ(Kanakapura Road), ಕ್ಲೋವರ್ ಲೀಫ್ ಜಂಕ್ಷನ್(Clover Leaf Junction), ಮೈಸೂರು ರಸ್ತೆ(Mysore Road), ತುಮಕೂರು ರಸ್ತೆ(Tumkur Road) ಮತ್ತು ಲಿಂಕ್ ರಸ್ತೆಗಳನ್ನು(Link Road) ಬಳಕೆ ಮಾಡುವ ವಾಹನ ಸವಾರರಿಗೆ ಹೊಸ ಟೋಲ್ ದರದ ಬಿಸಿ ಮುಟ್ಟಲಿದೆ.
ನೈಸ್ ರಸ್ತೆಯಲ್ಲಿ ಬೈಕ್ ಸವಾರರು ಕೂಡ ಟೋಲ್ ಪಾವತಿ ಮಾಡುತ್ತಾ ಇದ್ದು, ದರ ಏರಿಕೆಗೆ ಸವಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದಿನದ ಟೋಲ್ ದರ ಜೊತೆ ಜೊತೆಗೆ ತಿಂಗಳ ಪಾಸ್(Month pass) ಹಾಗೂ ವಾರ್ಷಿಕ ಪಾಸ್(Annual pass) ದರವೂ ಹೆಚ್ಚಳವಾಗುತ್ತಿದೆ. ಕಾರ್, ಜೀಪ್, ಲಘು ವಾಹನ, ಭಾರಿ ವಾಹನಗಳಲ್ಲಿ ಕನಿಷ್ಠ 5 ರೂಪಾಯಿ ಹೆಚ್ಚಳವಾಗಲಿದೆ.
- ನೈಸ್ ರಸ್ತೆ ಟೋಲ್ ದರ ಶೇ 15 ರವರೆಗೆ ಏರಿಕೆ:
ಒಟ್ಟಾರೆಯಾಗಿ ಸರಾಸರಿ ಶೇ 15 ರ ವರೆಗೆ ಟೋಲ್ ಶುಲ್ಕ ಹೆಚ್ಚಳ ಆಗುತ್ತಿದೆ. ದರ ಏರಿಕೆ ವೇಳೆ ಜನಸಾಮಾನ್ಯರ ಹಿತಾಸಕ್ತಿ ಕಡೆಗಣಿಸಲಾಗಿದೆ ಎಂದು ವಾಹನ ಸವಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. - ನೈಸ್ ಟೋಲ್ ದರ ಪಟ್ಟಿ
ತುಮಕೂರು ರಸ್ತೆಗೆ (ಹಳೆ ದರ – ಹೊಸ ದರ ರೂ.ಗಳಲ್ಲಿ)
ಕಾರು – 215 – 233
ಬೈಕ್ – 70 – 78
ಬಸ್ – 570 – 650 - ಕನಕಪುರ ರಸ್ತೆಗೆ (ಹಳೆ ದರ – ಹೊಸ ದರ ರೂ.ಗಳಲ್ಲಿ)
ಕಾರು – 105 – 110
ಬೈಕ್ – 30 – 33
ಬಸ್ – 260 – 295 - ಬನ್ನೇರುಘಟ್ಟ ರಸ್ತೆಗೆ (ಹಳೆ ದರ – ಹೊಸ ದರ ರೂ.ಗಳಲ್ಲಿ)
ಕಾರು – 150 – 158
ಬೈಕ್ – 45 – 48
ಬಸ್ – 395 – 450
ಇದನ್ನು ಓದಿ :ಜುಲೈ 3ರಿಂದ ಅಮರನಾಥ ಯಾತ್ರೆ ಆರಂಭ: ಹೆಜ್ಜೆ ಹೆಜ್ಜೆಗೂ ಪೊಲೀಸರ ಕಣ್ಗಾವಲು
- ಹೊಸೂರು ರಸ್ತೆಗೆ (ಹಳೆ ದರ – ಹೊಸ ದರ ರೂ.ಗಳಲ್ಲಿ)
ಕಾರು – 210 – 223
ಬೈಕ್ – 70 – 78
ಬಸ್ – 568 – 645 (Nice road toll rates increase)