ಇಂದಿನ ದಿನಗಳಲ್ಲಿ ಅನೇಕರು ನಿದ್ರಾಹೀನತೆಯಿಂದ ಬಳಲುತಿದ್ದಾರೆ. ನೀದ್ರಾಹೀನತೆಗೆ ಅನೇಕ ಕಾರಣಗಳಿವೆ. ಅತಿಯಾಗಿ ಮೊಬೈಲ್ ನೋಡುವುದು ಅತಿಯಾಗಿ ಟಿವಿ ನೋಡುವುದು ತಡವಾಗಿ ಮಲಗುವುದು, ದೇಹಕ್ಕೆ ದಣಿವು ಆಗದೆ ಇರುವುದು, ಮಲಗಿದ ತಕ್ಷಣ ಚಿಂತೆ ಮಾಡುವುದು ಇಂತಹ ಹಲವಾರು ಕಾರಣಗಳಿಂದ ನಿದ್ರೆ ನಮ್ಮಿಂದ ದೂರ ಹೋಗಿರುತ್ತದೆ. ಇದರಿಂದ ದೇಹಕ್ಕೆ ಅನೇಕ ಕಾಯಿಲೆಗಳು ಬರುವುದರಲ್ಲಿ ಸಂದೇಹವಿಲ್ಲ, ಇನ್ನು ಅನೇಕ ಜನರು ನಿದ್ದೆಯ ಮಾತ್ರೆಗಳಿಗೆ ಶರಣಾಗಿರುವುದು ಇತ್ತೀಚಿನ ದಿನಗಳಲ್ಲಿ ಕಂಡು ಬರುತ್ತಿದೆ. ಇದರಿಂದ ಇನ್ನೊ ಹಲವಾರು ಕಾಯಿಲೆ ಬರಬಹುದು ಇಲ್ಲವೇ ಮಾತ್ರೆಗಳಿಗೆ ಮನಸ್ಸು ಹೊಂದಿಕೊಂಡು ಸ್ವಾಭಾವಿಕ ನಿದ್ದೆ ದೂರವಾಗಬಹುದು ಅದನ್ನು ತಪ್ಪಿಸಲು ನಮ್ಮಲ್ಲೇ ನಾವು ಔಷದಿಗಳನ್ನು ಕೊಂಡುಕೊಳ್ಳಬೇಕಾಗಿದೆ.
ಇದಕ್ಕೆ ನಮ್ಮಿಂದಲೇ ಕೆಲವು ಪರಿಹಾರಗಳಿವೆ ಅವುಗಳೇನೆಂದರೆ, ಮುಖ್ಯವಾಗಿ ನೀವು ಮಲಗಲು ಹೋಗುವ ಮೊದಲು ಮಾಡಬೇಕಾದ ಕೆಲಸಗಳು
- ರಾತ್ರಿ ಸ್ವಲ್ಪ ಹೊತ್ತು ಪ್ರಾಣಾಯಾಮವನ್ನು ಮಾಡಬೇಕು ಆಮೇಲೆ 15 ನಿಮಿಷಗಳ ಕಾಲ ದ್ಯಾನಾಸಕ್ತರಾಗಿ ಕುಳಿತು ನಿಮ್ಮ ಗಮನವನ್ನು ಶೂನ್ಯಾವಸ್ಥೆಗೆ ಕೊಂಡೊಯ್ಯಬೇಕು ಇಲ್ಲವೇ ದೇವರನ್ನು ಮನಸಲ್ಲಿಟ್ಟುಕೊಂಡು ದ್ಯಾನ ಮಾಡಬೇಕು, ಮನಸ್ಸನ್ನು ಬರೀ ಉಸಿರಾಟದೆಡೆಗೆ ಚಲಿಸಿಕೊಳ್ಳಬೇಕು ಹಾಗೇ ಇದ್ದು ದ್ಯಾನಾಸಕ್ತರಾದಲ್ಲಿ ನಿದ್ದೆಗೆ ಜಾರುವುದಕ್ಕೆ ಸುಲಭವಾಗುವುದು.
- ಮಲಗುವಾದ ಸುಮಧುರವಾದ ಹಾಡುಗಳನ್ನು ಅಥವಾ ಭಕ್ತಿ ಪ್ರಧಾನವಾದ ದೇವರ ನಾಮಗಳನ್ನು ಹಾಕಿಕೊಂಡು ಕೇಳಿದಾಗ ಮನಸ್ಸು ತಾನಾಗಿ ನಿದ್ರೆಯತ್ತ ಜಾರುವುದು
- ಮಲಗುವ ಮೊದಲು ಹದವಾಗಿರುವ ಬಿಸಿನೀರಲ್ಲಿ ಕಾಲುಗಳನ್ನು 15 ನಿಮಿಷಗಳ ಕಾಲ ಇಟ್ಟುಕೊಳ್ಳುವುದು ಬಳಿಕ ಬಂದು ಮಲಗುವುದು ಇದರಿಂದಲೂ ನಿದ್ರೆ ಬರುವುದು.
- ಅಂಗಾಲಿಗೆ ತೆಂಗಿನ ಎಣ್ಣೆಯನ್ನು ಹಚ್ಚಿಕೊಳ್ಳುವುದು ಇಲ್ಲವೇ ಕಣ್ಣಿನ ರೆಪ್ಪೆಯ ಮೇಲಿನ ಭಾಗಕ್ಕೆ ತೆಳುವಾಗಿ ತೆಂಗಿನ ಎಣ್ಣೆಯನ್ನು ಹಚ್ಚಿಕೊಂಡು ಮಲಗುವುದು
- ಮಲಗುವ ಮುನ್ನ ಬಿಸಿನೀರಿನಲ್ಲಿ ಸ್ನಾನ ಮಾಡಿಕೊಂಡು ಬಂದು ಮಲಗುವುದು.
- ಯಾವುದಾದರೂ ಒಳ್ಳೆಯ ಪುಸ್ತಕಗಳನ್ನು ಓದುವುದು,
- ಮನಸ್ಸನ್ನು ಪ್ರಶಾಂತವಾದ ಒಂದು ಹೂತೋಟದೊಳಕ್ಕೆ ಕೊಂಡೊಯ್ಯಬೇಕು ಹೂವಿನ ಮೇಲೆ ಮಲಗಿದಂತೆ ದ್ಯಾನ ಮಗ್ನರಾಗಿಯೇ ಮಲಗಿಕೊಂಡಾಗ ನಿದ್ದೆ ಬರುವುದು,
- ನೆಲ್ಲಿಕಾಯಿಯ ಎಣ್ಣೆಯನ್ನು ಅಥವಾ ತೆಂಗಿನ ಎಣ್ಣೆಯನ್ನು ನೆತ್ತಿಗೆ ಹಚ್ಚಿಕೊಂಡು ಮಲಗುವುದು,
- ರಾತ್ರಿಯ ಊಟವನ್ನು ಮಲಗುವ 2 ಗಂಟೆ ಮೊದಲೇ ಸೇವಿಸಬೇಕು,
- ಮಲಗುವ ಮೊದಲು ಒಂದು ಗ್ಲಾಸ್ ಹಾಲಿಗೆ ಸ್ವಲ್ಪ ಏಲಕ್ಕಿ ಪುಡಿಯನ್ನು ಸೇರಿಸಿ ಕುಡಿಯಬೇಕು ಇಲ್ಲವೇ ಸ್ವಲ್ಪ ಮೊಸರನ್ನು ಕುಡಿಯಬೇಕು
ಹೀಗೆ ಮಾಡಿದಲ್ಲಿ ನಿದ್ರಾಹೀನತೆಯಿಂದ ತಪ್ಪಿಸಿಕೊಳ್ಳಬಹುದು ಮತ್ತು ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.