ಜನವರಿ 31 ರಿಂದ ನೈಟ್ ಕರ್ಫ್ಯೂ ರದ್ದು!

ಬೆಂಗಳೂರು ಜ 29 : ಕೊರೊನಾ ಸೋಂಕು ಕೊಂಚ ಇಳಿಮುಖ ಕಂಡ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಜನವರಿ 31 ರಿಂದ ನೈಟ್ ಕರ್ಫ್ಯೂವನ್ನು ರದ್ದುಗೊಳಿಸಲಾಗಿದೆ ಜೊತಗೆ ಜನವರಿ 31 (ಸೋಮವಾರದಿಂದ ) ಬೆಂಗಳೂರಿನಲ್ಲಿ ಶಾಲೆಗಳು ಪುನಾರಂಭಗೊಳ್ಳಲಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಸ್ಪಷ್ಟಪಡಿಸಿದ್ದಾರೆ. ಈ ಬಗ್ಗೆ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಹೊಸ ಮಾರ್ಗಸೂಚಿ ಬಿಡುಗಡೆಗೊಳಿಸಿದ್ದು , ದೇವಾಲಯ, ಮಸೀದಿ, ಚರ್ಚ್ ಗಳಲ್ಲಿ ಎಲ್ಲ ಧಾರ್ಮಿಕ ಸೇವೆಗಳಿಗೆ ಅವಕಾಶ ಇರುತ್ತದೆ. ಆದರೆ ಏಕಕಾಲದಲ್ಲಿ 50 ಜನರಷ್ಟೇ ಸೇರಲು ಅವಕಾಶವಿರುತ್ತದೆ.

ಚಿತ್ರಮಂದಿರಗಳಲ್ಲಿ ಶೇ.50ರ ನಿಯಮ ಜಾರಿಗೊಳಿಸಲು ನಿರ್ಧರಿಸಲಾಗಿದೆ. ಆದರೆ ಜಾತ್ರೆಗಳು, ಧರಣಿ, ಪ್ರತಿಭಟನೆಗಳಿಗೆ ನಿರ್ಬಂಧ ಮುಂದುವರಿಯಲಿದೆ. ಕಚೇರಿಗಳಲ್ಲಿ 100 ಶೇ. ಸಿಬ್ಬಂದಿಯೊಂದಿಗೆ ಕಾರ್ಯಾಚರಿಸಲು ಅವಕಾಶ ಇರುತ್ತದೆ. ಸ್ವಿಮ್ಮಿಂಗ್ ಫುಲ್, ಜಿಮ್ ಗಳಲ್ಲಿ ಶೇ.50ರಷ್ಟು ಅವಕಾಶ ನೀಡಲಾಗಿದೆ. ಹೋಟೆಲ್, ಪಬ್, ರೆಸ್ಟೋರೆಂಟ್ ಗಳು ತೆರೆಯಲು ಅವಕಾಶ ನೀಡಲಾಗಿದೆ ಎಂದು ಈ ಹೇಳಿದ್ದಾರೆ.


ಹೊಸ ಮಾರ್ಗಸೂಚಿಗಳು ಇಂತಿದೆ :

• ಸಿನಿಮಾ, ಮಲ್ಟಿಪ್ಲೆಕ್ಸ್ಗಳಲ್ಲಿ ಶೇ 50ರಷ್ಟು ಅನುಮತಿ.

• ಮದುವೆಗಳಿಗೆ ಇನ್ನು ಮುಂದೆ ಹೊರಾಂಗಣದಲ್ಲಿ 300 ಒಳಾಂಗಣದಲ್ಲಿ 200 ಮಂದಿಗೆ ಅವಕಾಶ.

• ಎಲ್ಲ ಕಚೇರಿಗಳಲ್ಲಿ ಶೇ 100 ಹಾಜರಾತಿ.

• ಧಾರ್ಮಿಕ ಸ್ಥಳಗಳಲ್ಲಿ ಎಲ್ಲ ಸೇವೆಗಳಿಗೆ (ಆರ್ಚನೆ, ಮಂಗಳಾರಾತಿ) ಅನುಮತಿ, ಆದರೆ, ಒಮ್ಮೆಗೆ 50 ಜನರಿಗೆ ಮಾತ್ರ ಅವಕಾಶ. ಎಲ್ಲ ಜಾತ್ರೆಗಳು, ಧರಣಿ, ಪ್ರತಿಭಟನೆ, ಸಾಮಾಜಿಕ ಕಾರ್ಯಕ್ರಮಗಳು, ಧಾರ್ಮಿಕ ಸಭೆಗಳಿಗೆ ನಿರ್ಬಂಧ ಮುಂದುವರಿಕೆ.

• ಈಜುಕೊಳ, ಜಿಮ್ಗಳಲ್ಲಿ ಶೇ 50 ಅನುಮತಿ.

• ಕ್ರೀಡಾ ಕಾಂಪ್ಲೆಕ್ಸ್, ಕ್ರೀಡಾಗಂಣಗಳಲ್ಲಿ ಶೇ 50 ಅವಕಾಶ.

• ಮಹಾರಾಷ್ಟ್ರ, ಕೇರಳದಿಂದ ಬರುವವರಿಗೆ ಆರ್ಟಿಪಿಸಿಆರ್ ತಪಾಸಣೆ ವರದಿ ಕಡ್ಡಾಯ.


• ರಾಜ್ಯದಾದ್ಯಂತ ಜ. 31ರಿಂದ ರಾತ್ರಿ ಕರ್ಪ್ಯೂ ರದ್ದು.

• ಸಾರಿಗೆ ವಾಹನಗಳಲ್ಲಿ ಆಸನ ಶೇ 100 ಭರ್ತಿಗೆ ಅನುಮತಿ.

• ಬಾರ್, ಪಬ್, ರೆಸ್ಟೋರೆಂಟ್, ಹೋಟೆಲ್ಗಳಲ್ಲಿ ಶೇ 100ರರಷ್ಟು ಅನುಮತಿ.

Latest News

ದೇಶ-ವಿದೇಶ

ಒಡಿಶಾದಲ್ಲಿ ಆಘಾತಕಾರಿ ಘಟನೆ ; ಹಾಡಹಗಲೇ ವೃದ್ಧನನ್ನು ಕಂಬಕ್ಕೆ ಕಟ್ಟಿ, ಥಳಿಸಿ ಕೊಂದ ಕುಟುಂಬಸ್ಥರು!

ಕೊರಾಪುಟ್ ಜಿಲ್ಲೆಯ ಬುಡಕಟ್ಟು ಪ್ರದೇಶದಲ್ಲಿ ಹಾಡಹಗಲೇ ವೃದ್ಧನನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ತಮ್ಮ ಕುಟುಂಬಸ್ಥರೇ ಥಳಿಸಿ ಕೊಂದಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ!

ಮಾಹಿತಿ

ಕಿಡ್ನಿ ಸ್ಟೋನ್‌ ಸಮಸ್ಯೆಗೆ ಇಲ್ಲಿದೆ ನೈಸರ್ಗಿಕ ಪರಿಹಾರ ; ಈ ಸರಳ ಪರಿಹಾರ ಪಾಲಿಸಿ

ಕೆಲವು ಮನೆಮದ್ದುಗಳು(Home Remedies) ಆರಂಭಿಕ ಹಂತದ ಕಿಡ್ನಿಸ್ಟೋನ್ ಸಮಸ್ಯೆಗೆ ಪರಿಹಾರ ನೀಡುತ್ತವೆ. ಅಂತಹ ಮನೆಮದ್ದುಗಳ ವಿವರ ಇಲ್ಲಿದೆ ನೋಡಿ.

ಮಾಹಿತಿ

ದೇಹಕ್ಕೆ ಪ್ರೋಟಿನ್‌ ಕೊರತೆಯಾದ್ರೆ `ಈ’ 10 ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ

ಯುವಜನರ ದೈಹಿಕ ಬೆಳವಣಿಗೆಯಲ್ಲಿ ಪ್ರೋಟಿನ್‌ ಪ್ರಮುಖ ಪಾತ್ರ ವಹಿಸುತ್ತದೆ. ದೇಹದಲ್ಲಿನ ಸ್ನಾಯುಗಳು, ಕಿಣ್ವಗಳು ಮತ್ತು ಹಾರ್ಮೋನುಗಳಿಗೆ ಪ್ರೋಟಿನ್ ಅತ್ಯಂತ ಅವಶ್ಯಕವಾಗಿದೆ.