Visit Channel

ನೈಟ್ ಕರ್ಪ್ಯೂ ಹಿನ್ನೆಲೆ: ಮಲೆ ಮಹದೇಶ್ವರ ಸ್ವಾಮಿ ಬೆಟ್ಟಕ್ಕೆ ತೆರಳುವ ಭಕ್ತರಿಗೆ ನಿಯಮ ಪಾಲನೆ ಕಡ್ಡಾಯ

WhatsApp Image 2020-12-24 at 12.01.20 PM

ಚಾಮರಾಜನಗರ, ಡಿ. 24: ರಾಜ್ಯದಲ್ಲಿ ಕೊರೊನಾ ‌ಆತಂಕ ಹೆಚ್ಚಾಗಿರುವ ಪರಿಣಾಮ ವಿಧಿಸಲಾಗಿರುವ ನೈಟ್ ಕರ್ಪ್ಯೂ ಹಿನ್ನೆಲೆಯಲ್ಲಿ ಚಾಮರಾಜನಗರದ ಐತಿಹಾಸಿಕ ಪ್ರವಾಸಿ ತಾಣವಾಗಿರುವ ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳಲು ಭಕ್ತರಿಗೆ ಕೆಲವೊಂದು ನಿಯಮಗಳನ್ನು ವಿಧಿಸಲಾಗಿದೆ.

ಸರ್ಕಾರದ ಆದೇಶದಂತೆ ಡಿ24ರ ರಾತ್ರಿ 11ಗಂಟೆಯಿಂದ 02-01-2021ರ ಬೆಳಗ್ಗೆ 5 ಗಂಟೆಯವರೆಗೆ ‌ರಾತ್ರಿ ಕರ್ಫ್ಯೂ ಜಾರಿಯಲ್ಲಿರುತ್ತದೆ.‌ ಹೀಗಾಗಿ ದೇವಾಲಯಕ್ಕೆ ಬರುವ ಎಲ್ಲ ಭಕ್ತಾದಿಗಳು ತಕ್ಷಣದಿಂದ ಜಾರಿಗೆ ಬರುವಂತೆ ಕೆಳಕಂಡ ಅಂಶಗಳನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ಶ್ರೀ ಮಲೆ‌ ಮಹದೇಶ್ವರ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವ ಸ್ವಾಮಿ ತಿಳಿಸಿದ್ದಾರೆ.

 1. ಕೊಠಡಿ ಆನ್‌ಲೈನಿನಲ್ಲಿ ಕಾಯ್ದಿರಿಸಿರುವ ಭಕ್ತಾದಿಗಳು ರಾತ್ರಿ 10-30ಗಂಟೆಯೊಳಗೆ ಮಹದೇಶ್ವರ ಬೆಟ್ಟಕ್ಕೆ ಬಂದು ಮಾಹಿತಿ ಕೇಂದ್ರದಲ್ಲಿ ನೊಂದಾಯಿಸಿ ಸಂಬಂಧಪಟ್ಟ ವಸತಿ ಗೃಹದೊಳಗೆ ವಾಸ್ತವ್ಯಕ್ಕೆ 10-45ರೊಳಗೆ‌‌ ತಲುಪತಕ್ಕದ್ದು.
 2. ರಾತ್ರಿ 11ರಿಂದ‌ ಬೆಳಿಗ್ಗೆ 5ರವರೆಗೆ ಮಾಹಿತಿ ಕೇಂದ್ರ ಮುಚ್ಚಲಾಗುವುದು ಹಾಗೂ ಯಾವುದೇ ಕೊಠಡಿಗಳನ್ನು ಈ ಸಮಯದಲ್ಲಿ ವಿತರಿಸಲಾಗುವುದಿಲ್ಲ.
 3. ರಾತ್ರಿ 11 ರಿಂದ ಬೆಳಿಗ್ಗೆ 5ರವರೆಗೆ‌ ಸಂಪೂರ್ಣ ಲಾಕ್ಔಟ್ ಪಾಲಿಸಲಾಗುವುದು. ಯಾವುದೇ ಸಂಚಾರಕ್ಕೆ ಅವಕಾಶವಿರುವುದಿಲ್ಲ.
 4. ದೇವಸ್ಥಾನ, ಲಾಡು ಕೌಂಟರ್ ಹಾಗೂ‌ ದಾಸೋಹಕ್ಕೆ ಬರುವವರು ರಾತ್ರಿ 10ರ ಒಳಗಾಗಿ ದರ್ಶನ ಪಡೆಯುವುದು, ದಾಸೋಹ ಸ್ವೀಕರಿಸುವುದು ಹಾಗೂ ಲಾಡು ಖರೀದಿಸುವುದು. ರಾತ್ರಿ 10ರ ನಂತರ ಈ ಮೂರೂ ಸೇವೆಗಳು ಲಭ್ಯವಿರುವುದಿಲ್ಲ.
 5. ಕೊಠಡಿ ಕಾಯ್ದಿರಿಸಿರುವವರು ನಂತರ ಬಂದಲ್ಲಿ ರೀಫಂಡ್ ನೀಡಲಾಗುವುದಿಲ್ಲ. ಈ ಬಗ್ಗೆ ಪತ್ರ ವ್ಯವಹಾರಕ್ಕೆ ಅವಕಾಶವಿರುವುದಿಲ್ಲ.
 6. ಬೆಳಿಗ್ಗೆ 4ಕ್ಕೆ ಪ್ರಾರಂಭವಾಗುವ ಅಭಿಷೇಕಕ್ಕೆ ಭಕ್ತಾದಿಗಳಿಗೆ ಪ್ರವೇಶವಿರುವುದಿಲ್ಲ. ಆದರೆ ಸಂಪ್ರದಾಯಿಕವಾಗಿ ಅಭಿಷೇಕವನ್ನು ಬೇಡಗಂಪಣರು ಹಾಗೂ ದೇವಾಲಯದ ಒಳಾವರಣದ ಸಿಬ್ಬಂದಿ ನಡೆಸಲಿರುವರು. ಬೆಳಿಗ್ಗೆ 5ರ ನಂತರ ದರ್ಶನಕ್ಕೆ ಅನುವು ಮಾಡಿಕೊಡಲಾಗುವುದು.
 7. ದೇವಾಲಯದ ಆವರಣದಲ್ಲಿ ವಸತಿ ಗೃಹಗಳು, ಕಾಟೇಜುಗಳು ಹಾಗೂ ಡಾರ್ಮಿಟರಿ ಹೊರತುಪಡಿಸಿ, ಬೇರೆ ಯಾವುದೇ ತೆರೆದ ಜಾಗಗಳು ಹಾಗೂ ದೇವಾಲಯದ ಪಕ್ಕದಲ್ಲಿರುವ ಭಕ್ತಾದಿಗಳಿಗೆ ನೆರಳಿನ ವ್ಯವಸ್ಥೆಯ ಷೆಡ್‌ನಲ್ಲಿ ಉಳಿದುಕೊಳ್ಳಬಾರದಾಗಿ ಮನವಿ.
 8. ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಿಯೇ ಶ್ರೀ ಕ್ಷೇತ್ರಕ್ಕೆ ಬರುವುದು ಹಾಗೂ ಶ್ರೀ ಕ್ಷೇತ್ರದಿಂದ ತೆರಳುವವರೆಗೆ‌ ಧರಿಸಿರಲು‌ ಕೋರಿದೆ. ವೈಯುಕ್ತಿಕವಾಗಿ ಸ್ಯಾನಿಟೈಸರ್ ಇಟ್ಟುಕೊಳ್ಳಲು ಹಾಗೂ ಆಗ್ಗಾಗ್ಗೆ‌ ಉಪಯೋಗಿಸಲು ಕೋರಿದೆ.
 9. ಸಾಮಾಜಿಕ ಅಂತರ ಕಡ್ಡಾಯವಾಗಿ ಪಾಲಿಸುವುದು. ವಿಶೇಷವಾಗಿ ದೇವಸ್ಥಾನದ ಕ್ಯೂ ಲೈನಿನಲ್ಲಿ ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಯ್ದುಕೊಂಡೇ ದರ್ಶನ ಮಾಡುವುದು.
 10. ದಾಸೋಹದಲ್ಲಿ ಕಡ್ಡಾಯವಾಗಿ ಕ್ಯೂ ಲೈನಿನಲ್ಲಿ ಹಾಗೂ ಕುಳಿತುಕೊಳ್ಳುವ ಮೇಜಿನಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು.
 11. ಯಾವುದೇ ಸಂದೇಹವಿದ್ದಲ್ಲಿ ಮಾಹಿತಿ ಕೇಂದ್ರದಲ್ಲಿ ನಿರ್ವಹಣೆಯಲ್ಲಿರುವ ಸಹಾಯವಾಣಿ ನಂಬರ್‌ 1860 425 4350 ಗೆ ಕರೆ ಮಾಡುವುದು.

ಸರ್ಕಾರದ ಆದೇಶವನ್ನು ಚಾಚೂ ತಪ್ಪದೇ ಪಾಲಿಸುವಲ್ಲಿ ತಮ್ಮೆಲ್ಲರ ಸಹಕಾರ ಅತಿ ಮುಖ್ಯ ಎಂದು ತಿಳಿಸಿದ್ದಾರೆ.

Latest News

Pakistan
ದೇಶ-ವಿದೇಶ

ಪಾಕಿಸ್ತಾನ : ಗರ್ಭಿಣಿ ಮಹಿಳೆ ಮೇಲೆ ಭದ್ರತಾ ಸಿಬ್ಬಂದಿ ಹಲ್ಲೆ ; ಭಾರೀ ಆಕ್ರೋಶ

ನೋಮನ್ ಗ್ರ್ಯಾಂಡ್ ಸಿಟಿ ಅಪಾರ್ಟ್ಮೆಂಟ್ ಕಟ್ಟಡದ ಹೊರಗೆ ಭದ್ರತಾ ಸಿಬ್ಬಂದಿ ಗರ್ಭಿಣಿ ಮಹಿಳೆಯನ್ನು ಥಳಿಸಿದ್ದಾರೆ ಎಂದು ಪಾಕ್ ಮೂಲದ ಜಿಯೋ ನ್ಯೂಸ್ ವರದಿ ಮಾಡಿದೆ.

Culprits
ಪ್ರಮುಖ ಸುದ್ದಿ

ಹಾಲಿನ ವ್ಯಾಪಾರದ ಸೋಗಿನಲ್ಲಿ ಖೋಟಾ ನೋಟು ದಂಧೆ ; ಬಿಜೆಪಿ ಮುಖಂಡ ಸೇರಿ ಮೂವರ ಬಂಧನ

ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಈ ಕುರಿತು ಪೊಲೀಸರು ತನಿಖೆ ಮುಂದುವರೆಸಿದ್ದು, ಕುಂದಗೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

rss
ರಾಜಕೀಯ

RSS ಭಾರತದಲ್ಲಿನ ತಾಲಿಬಾನ್ ಇದ್ದಂತೆ : ಕಾಂಗ್ರೆಸ್‌

ಆರ್‌ಎಸ್‌ಎಸ್‌ ಎಂದಿಗೂ ಭಾರತೀಯತೆಯನ್ನು ಒಪ್ಪಿಲ್ಲ, ಮುಂದೆಯೂ ಒಪ್ಪುವುದಿಲ್ಲ. ಪ್ರತ್ಯೇಕ ಐಡೆಂಟಿಟಿಯಲ್ಲಿ ಇರಲು ಭಯಸುವ ಆರ್‌ಎಸ್‌ಎಸ್‌, ಭಾರತದಲ್ಲಿನ ತಾಲಿಬಾನ್ ಇದ್ದಂತೆ.