New Delhi : ಚನ್ನಪಟ್ಟಣ ಉಪಚುನಾವಣೆ (Channapatnam by-election) ಸೋಲಿನ ಆಘಾತದಲ್ಲಿರುವ ಜೆಡಿಎಸ್ ನಾಯಕ ನಿಖಿಲ್ ಕುಮಾರಸ್ವಾಮಿಗೆ (JDS leader Nikhil Kumaraswamy) ಪಕ್ಷದ ಪ್ರಮುಖ ಜವಾಬ್ದಾರಿ ವಹಿಸುವ ಬಗ್ಗೆ ಜಾತ್ಯತೀತ ಜನತಾದಳ ವರಿಷ್ಠ ಹೆಚ್ಡಿ ದೇವೇಗೌಡ (HD Deve Gowda) ಸುಳಿವು ನೀಡಿದ್ದಾರೆ. ನಿಖಿಲ್ ಕುಮಾರಸ್ವಾಮಿಗೆ ಜೆಡಿಎಸ್ ರಾಜ್ಯಾಧ್ಯಕ್ಷ (JDS State President) ಸ್ಥಾನ ನೀಡುವ ಬಗ್ಗೆ ಅವರು ಮಾತನಾಡಿದ್ದಾರೆ. ನವದೆಹಲಿಯಲ್ಲಿ ಈ ಕುರಿತಾಗಿ ಹೇಳಿಕೆ ನೀಡಿದ ದೇವೇಗೌಡರು, ನಿಖಿಲ್ ಕುಮಾರಸ್ವಾಮಿ ಜೆಡಿಎಸ್ ಪಕ್ಷವನ್ನು ಮುನ್ನಡೆಸಲಿದ್ದಾರೆ ಎಂದು ತಿಳಿಸಿದ್ದಾರೆ.
ಮುಂದಿನ ದಿನಗಳಲ್ಲಿ ನಿಖಿಲ್ ಮುಂದೆ ಪಕ್ಷದ ಜವಾಬ್ದಾರಿ (Party responsibility) ವಹಿಸಿಕೊಳ್ಳಲಿದ್ದಾರೆ. ಶಾಸಕರಾಗುವುದು ಒಂದೇ ಪ್ರಶ್ನೆಯಲ್ಲ. ಆತನ ವಯಸ್ಸು ಸಣ್ಣದ್ದಿದೆ.ರಾಜ್ಯದ ಜವಾಬ್ದಾರಿ, ಪಕ್ಷವನ್ನು ಬೆಳೆಸುವುದಕ್ಕೆ ಅನುಭವ ಇದೆ, ಕುಟುಂಬದ ಹಿನ್ನೆಲೆ ಇದೆ, ಆತನಿಗೆ ಹೆಚ್ಚು ಹೊಣೆಗಾರಿಕೆ ಕೊಟ್ಟು ಪಕ್ಷವನ್ನು ಉಳಿಸಿ ಬೆಳೆಸುತ್ತೇವೆ ಎಂದು ದೇವೇಗೌಡ (Devegowda) ಹೇಳಿದರು.ಕೇಂದ್ರ ಗೃಹ ಸಚಿವ ಅಮಿತ್ ಶಾರನ್ನು ನಿಖಿಲ್ ಕುಮಾರಸ್ವಾಮಿ (Nikhil Kumaraswamy as Amit Shah) ಭೇಟಿ ಮಾಡಲಿದ್ದಾರಂತೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ದೇವೇಗೌಡರು, ನಾವು ಈಗಾಗಲೇ ಕಾಂಗ್ರೆಸ್ (Congress) ನಿಂದ ದೂರ ಸರಿದಿದ್ದೇವೆ. ಅಮಿತ್ ಶಾ, ಪ್ರಧಾನಿ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಜತೆಗೇ ಮಾತುಕತೆ ನಡೆಸಲಿದ್ದೇವೆ. ಕೊನೆಯ ವರೆಗೂ ಎನ್ಡಿಎ ಜತೆಗೇ ಇರಲಿದ್ದೇವೆ ಎಂದರು
ಇನ್ನು ರಾಮನಗರ (Ramnagar) ಖಾಲಿ ಮಾಡಿಸಿದ್ದೇವೆ, ಹಾಸನ (Hassan) ಖಾಲಿ ಮಾಡಿಸುತ್ತೇವೆ ಎಂಬ ಕಾಂಗ್ರೆಸ್ ನಾಯಕರ ಹೇಳಿಕೆಗಳ ಬಗ್ಗೆ ಪ್ರತಿಕ್ರಿಯಿಸಿದ ದೇವೇಗೌಡರು, ಆ ಹೇಳಿಕೆಗಳಿಗೆ ಬೆಲಯಿಲ್ಲ. ಯಾರನ್ನೂ ಯಾರು ಖಾಲಿ ಮಾಡಿಸಲಾಗದು.ಹಾಸನ ಕಾಂಗ್ರೆಸ್ ಸಮಾವೇಶಕ್ಕೆಂದು ಯಾವ್ಯಾವ ಜಿಲ್ಲೆಯಿಂದ ಜನ ಬಂದಿದ್ದರು ಎಂಬ ಎಲ್ಲ ಮಾಹಿತಿ ಸಂಗ್ರಹಿಸಿದ್ದೇನೆ. ಅದಕ್ಕೆಲ್ಲ ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ (Nikhil Kumaraswamy) , ನಮ್ಮ ಪಕ್ಷ ಉತ್ತರ ಕೊಡಲಿದೆ. ನನಗೆ ವಯಸ್ಸಾಯಿತು ಎಂದು ದೇವೇಗೌಡ ಹೇಳಿದರು. ಹಾಸನದಲ್ಲೇ ಸಮಾವೇಶ (Conference in Hassan) ಮಾಡಿದ್ದಕ್ಕೆ ನನಗೇನೂ ಬೇಸರವಿಲ್ಲ. ಅವರು ದೇವೇಗೌಡರ ಕುಟುಂಬವನ್ನೇ ಮುಗಿಸುತ್ತೇವೆ ಎಂದರು. ಮುಗಿಸುವುದು ಬಿಡುವುದು ಭಗವಂತನ ಇಚ್ಛೆ ಹಾಗೂ ಜನರ ಇಚ್ಛೆ. ಅದು ಯಾರೋ ಒಬ್ಬರ ಕೈಯಲ್ಲಿಲ್ಲ ಎಂದು ದೇವೇಗೌಡ ಅವರು ಕಿಡಿ ಕಾರಿದ್ದಾರೆ.