Bengaluru: ನೂತನ ಕಾಂಗ್ರೆಸ್ ಸರ್ಕಾರ ರಾಜ್ಯದ ಎಲ್ಲ ಮಹಿಳೆಯರಿಗೆ ಜೂನ್ 11ರಿಂದ ಶಕ್ತಿ ಯೋಜನೆಯ (nine days hundred crore) ಅಡಿಯಲ್ಲಿ ಉಚಿತ ಬಸ್ ಸೇವೆ ಒದಗಿಸಿರುವುದರಿಂದ
ಕೇವಲ 9 ದಿನಗಳಲ್ಲಿ ರಾಜ್ಯ ಸರ್ಕಾರ 100 ಕೋಟಿಗಳನ್ನು ಈ ಯೋಜನೆಗಾಗಿ ವೆಚ್ಚ ಮಾಡಿದೆ.

ಮೂಲಗಳ ಪ್ರಕಾರ, ಈಗಾಗಲೇ ರಾಜ್ಯ ಸಾರಿಗೆ ಇಲಾಖೆ ತೀವ್ರ ನಷ್ಟದಲ್ಲಿತ್ತು. ಇದೀಗ ರಾಜ್ಯ ಸರ್ಕಾರದ ಈ ನೂತನ ಯೋಜನೆಯಿಂದಾಗಿ ಸಾರಿಗೆ ಇಲಾಖೆಯ ಮೇಲೆ ಮತ್ತಷ್ಟು ಹೊರೆಬೀಳಲಿದೆ.
ರಾಜ್ಯ ಸರ್ಕಾರ ಸಾರಿಗೆ ನಿಗಮಗಳಿಗೆ ಹಣ ಪಾವತಿ ಮಾಡಿದರೂ, ಸೇವೆಯಲ್ಲಿ ಉಂಟಾಗುತ್ತಿರುವ ಸಮಸ್ಯೆಗಳಿಂದಾಗಿ ಬಸ್ಗಳ ನಿರ್ವಹಣೆ ವೆಚ್ಚ ಹೆಚ್ಚಾಗುತ್ತಿದೆ ಎನ್ನುತ್ತಿದ್ದಾರೆ ಸಾರಿಗೆ ಅಧಿಕಾರಿಗಳು.
ಇದನ್ನು ಓದಿ: ವಾಟ್ಸ್ಆ್ಯಪ್ನಲ್ಲಿ ಬಂದಿದೆ ಹೊಸ ಅಪ್ಡೇಟ್ : ಸ್ಕ್ಯಾಮ್ ಕರೆಗಳನ್ನು ತಪ್ಪಿಸಲು ಮ್ಯೂಟ್ ಮಾಡಬಹುದು… ಇಲ್ಲಿದೆ ಮಾಹಿತಿ
ಇನ್ನೊಂದೆಡೆ ರಾಜ್ಯ ಸರ್ಕಾರ ಹೀಗೆ ಉಚಿತ ಸೇವೆಗಳನ್ನು ನೀಡಿ, ಜನರ ತೆರಿಗೆ ಹಣವನ್ನು ವ್ಯರ್ಥ ಮಾಡುವ ಬದಲು, ಇದೇ ಹಣವನ್ನು ಶಿಕ್ಷಣ ಅಥವಾ ಆರೋಗ್ಯ ಕ್ಷೇತ್ರಕ್ಕೆ ಮೀಸಲಿಟ್ಟಿದ್ದರೆ ರಾಜ್ಯದ
ಅಭಿವೃದ್ದಿಯಾಗುತ್ತಿತ್ತು. ಕೇವಲ 9 ದಿನಗಳಲ್ಲಿ 100 ಕೋಟಿ ರೂಪಾಯಿ ವೆಚ್ಚ ಮಾಡಿರುವುದು ಒಳ್ಳೆಯದಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ (nine days hundred crore) ಚರ್ಚೆ ನಡೆಯುತ್ತಿದೆ.

ಇನ್ನು ಪ್ರತಿದಿನ ರಾಜ್ಯದಲ್ಲಿ ನಾಲ್ಕು ಸಾರಿಗೆ ಸಂಸ್ಥೆಗಳ ಬಸ್ಗಳಲ್ಲಿ 82 ಲಕ್ಷ ಜನ ಪ್ರಯಾಣಿಸುತ್ತಾರೆ. ಅದರಲ್ಲಿ ಶೇ.50ರಷ್ಟು ಮಹಿಳೆಯರು ಬಸ್ಗಳಲ್ಲಿ ಪ್ರಯಾಣಿಸುತ್ತಾರೆ. ಬಿಎಂಟಿಸಿಯಲ್ಲಿ 28 ಲಕ್ಷ, ಕೆಎಸ್ಆರ್ಟಿಸಿಯಲ್ಲಿ
22 ಲಕ್ಷ, ಎನ್ಡಬ್ಲ್ಯೂಕೆಆರ್ಟಿಸಿಯಲ್ಲಿ 17 ಲಕ್ಷ ಹಾಗೂ ಕೆಕೆಆರ್ಟಿಸಿಯಲ್ಲಿ 15 ಲಕ್ಷ ಜನ ಪ್ರತಿದಿನ ಪ್ರಯಾಣ ಮಾಡುತ್ತಾರೆ. ರಾಜ್ಯದ ನಾಲ್ಕು ಸಾರಿಗೆ ಸಂಸ್ಥೆಗಳಲ್ಲಿ 23,978 ಬಸ್ಗಳಿದ್ದು, ಅದರಲ್ಲಿ 21,574 ಬಸ್ಗಳು ಬಳಕೆಯಾಗುತ್ತಿವೆ.
ಬಸ್ಗಳ ನಿರ್ವಹಣೆಗಾಗಿ 12,750 ಕೋಟಿ ರೂ. ವೆಚ್ಚವಾಗುತ್ತಿದೆ.
ರಾಜ್ಯದ ನಾಲ್ಕು ಸಾರಿಗೆ ಸಂಸ್ಥೆಗಳು ಪ್ರತಿದಿನ ಸುಮಾರು 24 ಕೋಟಿ ರೂ.ಪಾಯಿ ಆದಾಯ ಇದೆ. ಜಿಲ್ಲಾ ಮತ್ತು ಅಂತರ್ ರಾಜ್ಯ ಬಸ್ಗಳು ಸೇರಿ 10 ಕೋಟಿ ರೂಪಾಯಿ ಪ್ರತಿ ದಿನ ಗಳಿಸುತ್ತದೆ. ಇನ್ನು,
ಎನ್ಡಬ್ಲ್ಯೂಕೆಆರ್ಟಿಸಿ 5 ಕೋಟಿ, ಬಿಎಂಟಿಸಿ 4 ಕೋಟಿ ರೂ, ಕೆಕೆಆರ್ಟಿಸಿಯಲ್ಲಿ 4 ಕೋಟಿ ರೂ. ಸಂಗ್ರಹವಾಗುತ್ತದೆ. 2022-23ರ ಆರ್ಥಿಕ ವರ್ಷದಲ್ಲಿ ನಾಲ್ಕು ಸಾರಿಗೆ ಸಂಸ್ಥೆಗಳು 8,946 ಕೋಟಿ ರೂ.
ಆದಾಯವನ್ನು ತೋರಿಸಿದ್ದವು. ಆದರೆ ಆದಾಯಕ್ಕಿಂತ ನಷ್ಟವೇ ಅಧಿಕವಾಗಿದೆ.