ಕೆಲವು ದಿನಗಳ ಹಿಂದಷ್ಟೇ ಚಂದ್ರಯಾನದ ಯಶಸ್ಸಿನ ನಂತರ ಸೂರ್ಯಯಾನ (NIOT Scientist Ready for Samudrayan) ಹಾಗೂ ಗಗನಯಾನಕ್ಕೆ ಇಸ್ರೋ (ISRO) ಸಜ್ಜಾಗುತ್ತಿದೆ.
ಆದರೆ ಇನ್ನೊಂದೆಡೆ ಭಾರತೀಯ ವಿಜ್ಞಾನಿಗಳು ಸಮುದ್ರಯಾನಕ್ಕೂ ಸಜ್ಜಾಗುತ್ತಿದ್ದು, ಸಮುದ್ರದ ಆಳಕ್ಕೆ ಧುಮುಕಲು ‘ಮತ್ಸ್ಯ’ ಜಲಾಂತರ್ಗಾಮಿ ನೌಕೆ ಸಜ್ಜಾಗುತ್ತಿದೆ. ಸಾಗರದ ಆಳದಲ್ಲಿ ಏನಿದೆ
ಅನ್ನುವುದನ್ನು ಈ ಸಬ್ಮರಿನ್ (Submarine) ಹುಡುಕಾಟ ನಡೆಸಲಿದ್ದು, ಈ ಯೋಜನೆ ಉದ್ದೇಶ ಏನು? ಇದರಿಂದ ಭಾರತಕ್ಕೆ ಲಾಭ ಏನು? ಈ ಯೋಜನೆ ಯಾವಾಗ ಆರಂಭ ಆಗಲಿದೆ?
ಈ ಕುರಿತ ವಿಷಯಗಳ ಕುರಿತಾದ ಸಮಗ್ರ (NIOT Scientist Ready for Samudrayan) ಮಾಹಿತಿ ಹೀಗಿದೆ.

ಭಾರತೀಯ ವಿಜ್ಞಾನಿಗಳು ತಯಾರಿ ನಡೆಸುತ್ತಿರುವ ಈ ಸಮುದ್ರಯಾನವನ್ನ ಪಾತಾಳಯಾನ ಅಂತಾನೂ ಕರೆಯಬಹುದಾಗಿದೆ. ಸಮುದ್ರದಲ್ಲಿ ಬರೋಬ್ಬರಿ 6 ಸಾವಿರ ಮೀಟರ್ ಆಳಕ್ಕೆ ನೌಕೆ ಸಾಗಲಿದ್ದು,
ಆಗಸದಲ್ಲಿ ದಿಗ್ವಿಜಯ ಸಾಧಿಸಿದ ಭಾರತ ಇದೀಗ ಸಮುದ್ರದ ತಳವನ್ನೂ ಮುಟ್ಟೋಕೆ ಹೊರಟಿದೆ. ಈ ನೌಕೆಯ ಹೆಸರು ಮತ್ಸ್ಯ (Matsya) ಎಂದು ಹೇಳಲಾಗಿದ್ದು, ಇದನ್ನು ರಾಷ್ಟ್ರೀಯ ಸಾಗರ ತಂತ್ರಜ್ಞಾನ
ಸಂಸ್ಥೆ ಅಭಿವೃದ್ದಿಪಡಿಸಿದೆ. ಹಾಗೂ ವಿಜ್ಞಾನಿಗಳ ತಂಡ ಸತತ 2 ವರ್ಷಗಳ ಕಾಲ ಶ್ರಮ ವಹಿಸಿ ಈ ನೌಕೆಯನ್ನ ಅಭಿವೃದ್ಧಿ ಮಾಡಲಾಗಿದೆ. ಭಾರತೀಯ ನೌಕಾ ಪಡೆ ಬಳಿ ಸಾಕಷ್ಟು ಸಬ್ಮರಿನ್ಗಳಿವೆ.
ಈ ಸಬ್ಮರಿನ್ಗಳು ತುಂಬಾನೇ ದೊಡ್ಡದಾಗಿದ್ದು, ನೌಕಾ ಪಡೆಯ ಸಬ್ಮರಿನ್ಗಳು ಜಾಸ್ತಿ ಎಂದರೆ 4 ಸಾವಿರ ಮೀಟರ್ ಆಳಕ್ಕೆ ಹೋಗಬಲ್ಲ ಸಾಮರ್ಥ್ಯ ಹೊಂದಿದೆ. ಜೊತೆಗೆ ಸೇನೆಯ ಸಬ್ಮರಿನ್ಗಳ
ಕೆಲಸ ಹಾಗೂ ಉದ್ದೇಶವೇ ಬೇರೆಯಾಗಿದ್ದು, ಆದರೆ, ರಾಷ್ಟ್ರೀಯ ಸಾಗರ ತಂತ್ರಜ್ಞಾನ ಸಂಸ್ಥೆ ಅಭಿವೃದ್ದಿಪಡಿಸಿರುವ ಸಬ್ಮರಿನ್ ಸಣ್ಣದಾಗಿದೆ. ಇದರಲ್ಲಿ 3 ಜನರು ಮಾತ್ರ ಸಂಚಾರ ಮಾಡಬಹುದಾಗಿದ್ದು,
ಆದರೆ ಈ ಸಬ್ಮರಿನ್ 6 ಸಾವಿರ ಮೀಟರ್ ಆಳಕ್ಕೆ ಸಮುದ್ರದ ತಳಕ್ಕೆ ಹೋಗಬಲ್ಲದಾಗಿದ್ದು, ಸಮುದ್ರದ ತಳದಲ್ಲಿ ಕನಿಷ್ಟ 12 ರಿಂದ 16 ಗಂಟೆ ಕಾಲ ಈ ಸಬ್ಮರಿನ್ ಇರಬಲ್ಲದು. ಇನ್ನು ಈ ಸಬ್ಮರಿನ್ನಲ್ಲಿ
ಪ್ರಯಾಣ ಮಾಡುವ ಯಾತ್ರಿಗಳಿಗೆ 4 ದಿನಗಳ ಕಾಲ ಉಸಿರಾಡಲು ಬೇಕಾಗುವಷ್ಟು ಆಮ್ಲಜನಕ, ಆಹಾರ ಹಾಗೂ ನೀರಿನ ವ್ಯವಸ್ಥೆ ಇರುತ್ತದೆ.
ನಮಗೆಲ್ಲ ಮತ್ಸ್ಯ ಎಂದ ಕೂಡಲೇ ನೆನಪಾಗೋದು ಮೀನು.. ಆದರೆ, ಸಾಕಷ್ಟು ಮೀನುಗಳು ಸಮುದ್ರದ ತಳಕ್ಕೆ ಹೋಗುವುದೇ ಇಲ್ಲ.. ಹಾಗಾಗಿ ಅಲ್ಲಿ ಜೀವಿಸುವ ಜೀವಿಗಳೇ ಬೇರೆಯಾಗಿದ್ದು, ಮಾನವ ನಿರ್ಮಿತ
ಸಬ್ಮರಿನ್ ‘ಮತ್ಸ್ಯ’, ಸಾಗರ ತಳದ ಜೀವಿಗಳ ಅಧ್ಯಯನ ಮಾಡಲಿದೆ. ಜೊತೆಗೆ ಸಮುದ್ರದ ತಳದಲ್ಲಿ ಇರುವ ಹಲವು ಲೋಹಗಳು, ಖನಿಜಗಳು ಹಾಗೂ ರಾಸಾಯನಿಕಗಳ ಅಧ್ಯಯನವನ್ನೂ ಈ
ಜಲಾಂತರ್ಗಾಮಿ ನೌಕೆ ನಡೆಸಲಿದೆ.

ಸಮುದ್ರದ ತಳದಲ್ಲಿ ಇರಬಹುದಾದ ಖನಿಜಗಳಾದ ಕೋಬಾಲ್ಟ್ (Cobalt), ನಿಕಲ್, ಮ್ಯಾಂಗನೀಸ್ ನಿಕ್ಷೇಪಗಳನ್ನ ಈ ಜಲಾಂತರ್ಗಾಮಿ ಪತ್ತೆ ಹಚ್ಚಲಿದ್ದು, ಹೈಡ್ರೋಥರ್ಮಲ್ ಸಲ್ಫೈಡ್ಸ್, ಗ್ಯಾಸ್ ಹೈಡ್ರೇಟ್ಸ್
(Gas hydrates) ಹಾಗೂ ಹೈಡೋಥರ್ಮಲ್ ವೆಂಟ್ ಗಳನ್ನೂ ಪತ್ತೆ ಮಾಡುವ ಉದ್ದೇಶವನ್ನು ಹೊಂದಿರುವುದಲ್ಲದೆ ಜೊತೆಗೆ ಕೆಮೋಸಿಂಥೆಟಿಕ್ ಜೀವ ವೈವಿಧ್ಯ ಪತ್ತೆ ಮಾಡುವ ಕೆಲಸವನ್ನೂ ಈ ನೌಕೆ ಮಾಡಲಿದೆ.
ಈ ಸಬ್ಮರಿನ್ನ ಸಂಶೋಧನೆಗಳು ಯಶಸ್ವಿಯಾದರೆ ಭಾರತವು ಮುಂದಿನ ದಿನಗಳಲ್ಲಿ ಸಮುದ್ರದ ಆಳದ ಗಣಿಗಾರಿಕೆಯನ್ನೂ ನಡೆಸಬಹುದಾಗಿದ್ದು, ಸಮುದ್ರದ ತಳದಲ್ಲಿ ಇರುವ ಜೀವ ವೈವಿದ್ಯತೆಗಳನ್ನು ಪತ್ತೆ
ಮಾಡುವ ಮೂಲಕ ಜೀವ ವಿಜ್ಞಾನ ರಂಗಕ್ಕೂ ಅಮೂಲ್ಯ ಮಾಹಿತಿ ರವಾನಿಸಲಿದೆ.
ಅಷ್ಟೇ ಅಲ್ಲದೆ ಸಮುದ್ರದ ತಳಕ್ಕೆ ಹೋಗುವುದು ಕೂಡ ತುಂಬಾನೇ ಕಷ್ಟ ಯಾಕೆಂದರೆ ಸಮುದ್ರದ ಆಳಕ್ಕೆ ಇಳಿದಂತೆಲ್ಲಾ ಒತ್ತಡ ಹೆಚ್ಚಾಗುತ್ತಾ ಹೋಗುತ್ತದೆ. ಹಾಗಾಗಿ ಭಾರೀ ಪ್ರಮಾಣದ ಒತ್ತಡವನ್ನು
ತಡೆದುಕೊಳ್ಳುವಂಥಾ ಸುಭದ್ರ ಜಲಾಂತರ್ಗಾಮಿ ನೌಕೆಯನ್ನ ನಿರ್ಮಾಣ ಮಾಡಬೇಕು. ಇಲ್ಲವಾದಲ್ಲಿ ಸಮುದ್ರದ ಆಳದಲ್ಲಿ ನೌಕೆ ಸ್ಫೋಟಗೊಳ್ಳುವ ಸಾಧ್ಯತೆ ಇರುತ್ತದೆ. ಮತ್ತು 2023ರ ಜೂನ್ನಲ್ಲಿ ಒಂದು
ದುರಂತ ಸಂಭವಿಸಿದ್ದ್ಫು, ಅಮೆರಿಕದ (America) ಓಷನ್ ಗೇಟ್ ಸಂಸ್ಥೆ ಟೈಟನ್ ಹೆಸರಿನ ಒಂದು ಸಬ್ಮರಿನ್ ಅಭಿವೃದ್ದಿಪಡಿಸಿತ್ತು. ಈ ನೌಕೆಯು ಟೈಟಾನಿಕ್ (Titanic) ಹಡಗಿನ ಅವಶೇಷವನ್ನ
ನೋಡೋದಕ್ಕೆ ಪ್ರವಾಸಿಗರನ್ನು ಕರೆದೊಯ್ಯುವ ಕೆಲಸ ಮಾಡುತ್ತಿತ್ತು.
ಆದರೆ, ತಾಂತ್ರಿಕ ಕಾರಣದಿಂದ ಈ ನೌಕೆ ಸಮುದ್ರದ ಆಳದಲ್ಲಿ ಸ್ಫೋಟಗೊಂಡಿತ್ತು. ಅಲ್ಲದೆ ಈ ನೌಕೆ ಒಳಗಿದ್ದ ಐವರು ಸಾವನ್ನಪ್ಪಿದ್ದರು. ಹಾಗಾಗಿ ಭಾರತದ ವಿಜ್ಞಾನಿಗಳು ಈ ರೀತಿಯ ಯಾವುದೇ ರೀತಿಯ
ಅನಾಹುತ ಸಂಭವಿಸಿದಂತೆ ನೌಕೆಯನ್ನ ಅಭಿವೃದ್ದಿ ಮಾಡುತ್ತಿದ್ದು, 2024ರ ಆರಂಭದಲ್ಲೇ ಈ ನೌಕೆಯ ಪರೀಕ್ಷೆ ನಡೆಯಲಿದೆ. ಈ ನೌಕೆಯು ಚೆನ್ನೈ (Chennai) ಕಡಲ ತೀರದ ಬಂಗಾಳ ಕೊಲ್ಲಿಯಲ್ಲಿ ಮುಳುಗಲಿದ್ದು,
ಮೊದಲಿಗೆ ಕೇವಲ 500 ಮೀಟರ್ ಆಳಕ್ಕೆ ಹೋಗಲಿದೆ. ಒಂದು ವೇಳೆ ಈ ಪರೀಕ್ಷೆ ಯಶಸ್ವಿಯಾದರೆ ಮುಂದಿನ ದಿನಗಳಲ್ಲಿ 6 ಸಾವಿರ ಮೀಟರ್ ಆಳಕ್ಕೆ ಹೋಗಿ ಸಮುದ್ರದ ತಳವನ್ನು ಸ್ಪರ್ಶ ಮಾಡಲಿದೆ.
ಮೊದಲ ಹಂತದಲ್ಲಿ ಮಾನವ ರಹಿತವಾಗಿ ಸಾಗುವ ನೌಕೆ ನಂತರದ ದಿನಗಳಲ್ಲಿ ಮಾನವ ಸಹಿತ ಯಾನ ಮಾಡಲಿದ್ದು, ಈ ಸಬ್ಮರಿನ್ ಯೋಜನೆ ಯಶಸ್ವಿಯಾದರೆ ಇನ್ನು ಈ ಸಾಧನೆ ಮಾಡಿದ ವಿಶ್ವದ
6ನೇ ದೇಶವಾಗಿ ಭಾರತ ಹೊರಹೊಮ್ಮಲಿದೆ. ಇಲ್ಲಿಯವರೆಗೂ ರಷ್ಯಾ, ಜಪಾನ್ (Japan), ಅಮೆರಿಕ, ಫ್ರಾನ್ಸ್ ಮತ್ತು ಚೀನಾ (China) ದೇಶಗಳು ಮಾತ್ರ ಈ ರೀತಿಯ ಸಾಧನೆಯನ್ನ ಮಾಡಿದೆ.
ಇದನ್ನು ಓದಿ: ಚುನಾವಣೆಯಾಗಿ 100 ದಿನಗಳಾದರೂ ವಿಪಕ್ಷ ನಾಯಕನ ಆಯ್ಕೆ ಮಾಡದ ಬಿಜೆಪಿಗೆ ಲೀಗಲ್ ನೋಟಿಸ್ !
- ಭವ್ಯಶ್ರೀ ಆರ್.ಜೆ