- ಮಾರಕ ನಿಪಾ ವೈರಸ್ ಮರುಕಳಿಸುವ ಭೀತಿ: ಪಶ್ಚಿಮ ಬಂಗಾಳದಲ್ಲಿ (nipah virus in west bengal) ಕಟ್ಟುನಿಟ್ಟಿನ ನಿಗಾ
- ಎರಡು ಶಂಕಿತ ಪ್ರಕರಣಗಳ ಬಳಿಕ ಪಶ್ಚಿಮ ಬಂಗಾಳ ಹೈ ಅಲರ್ಟ್
- ಬಾವಲಿಗಳಿಂದ ಹರಡುವ ವೈರಸ್ ವಿರುದ್ಧ ಜನರಲ್ಲಿ ಜಾಗೃತಿ ಹೆಚ್ಚಿಸಲು ಆರೋಗ್ಯ ಇಲಾಖೆ ಸೂಚನೆ
Kolkata: ಪಶ್ಚಿಮ ಬಂಗಾಳದಲ್ಲಿ ಮಾರಕ (nipah virus in west bengal) ನಿಪಾ ವೈರಸ್ (Nipah Virus) ಭೀತಿ ಮತ್ತೆ ಚರ್ಚೆಗೆ ಬಂದಿದೆ.
ರಾಜ್ಯದ ಕಲ್ಯಾಣಿ ಪ್ರದೇಶದಲ್ಲಿರುವ ಐಸಿಎಂಆರ್‌ನ ವೈರಸ್ (ICMR Virus) ಸಂಶೋಧನೆ ಮತ್ತು ರೋಗನಿರ್ಣಯ ಪ್ರಯೋಗಾಲಯದಲ್ಲಿ (VRDL) ಎರಡು ಶಂಕಿತ ನಿಪಾ ಪ್ರಕರಣಗಳು ಪತ್ತೆಯಾಗಿರುವುದರಿಂದ ಆತಂಕದ ವಾತಾವರಣ ನಿರ್ಮಾಣವಾಗಿದೆ.
ನಿಪಾ ವೈರಸ್ ಹೆಚ್ಚಿನ ಮರಣ ಪ್ರಮಾಣ ಹೊಂದಿರುವ ಅಪಾಯಕಾರಿ ವೈರಸ್ ಆಗಿದ್ದು, ಅದರ ವೇಗವಾದ ಹರಡುವಿಕೆ ಸಾಮರ್ಥ್ಯವು ಸಾರ್ವಜನಿಕ ಆರೋಗ್ಯ ವ್ಯವಸ್ಥೆಗೆ ಗಂಭೀರ ಸವಾಲಾಗಿ ಪರಿಣಮಿಸಿದೆ.
ಈ ಹಿನ್ನೆಲೆ ಕೇಂದ್ರ ಸರ್ಕಾರ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿ, ಮಮತಾ ಬ್ಯಾನರ್ಜಿ ನೇತೃತ್ವದ ರಾಜ್ಯ ಸರ್ಕಾರಕ್ಕೆ ತಕ್ಷಣ ಎಚ್ಚರಿಕೆ ನೀಡಿದೆ.

ಮುನ್ನೆಚ್ಚರಿಕಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಸೂಚಿಸಲಾಗಿದ್ದು, ಯಾವುದೇ ನಿರ್ಲಕ್ಷ್ಯ ಬೇಡವೆಂದು ಕೇಂದ್ರ ಸ್ಪಷ್ಟ ಸಂದೇಶ ರವಾನಿಸಿದೆ.
ಶಂಕಿತ ಪ್ರಕರಣಗಳು ವರದಿಯಾದ ತಕ್ಷಣವೇ, ಕೇಂದ್ರ ಆರೋಗ್ಯ ಮತ್ತು ಕುಟುಂಬ (nipah virus in west bengal) ಕಾರ್ಯದರ್ಶಿಗಳು ಪಶ್ಚಿಮ ಬಂಗಾಳದ (West Bengal) ಮುಖ್ಯ ಕಾರ್ಯದರ್ಶಿ ಹಾಗೂ ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿದರು.
ಈ ಸಭೆಯಲ್ಲಿ ವೈರಸ್ ಹರಡುವಿಕೆಯ ಸಾಧ್ಯತೆ, ಪ್ರಸ್ತುತ ಆರೋಗ್ಯ ಸಿದ್ಧತೆ, ಆಸ್ಪತ್ರೆಗಳ ತುರ್ತು ವ್ಯವಸ್ಥೆ ಹಾಗೂ ಪರೀಕ್ಷಾ ಸಾಮರ್ಥ್ಯ ಕುರಿತು ಸವಿಸ್ತಾರವಾಗಿ ಚರ್ಚಿಸಲಾಯಿತು.
ಪರಿಸ್ಥಿತಿಯನ್ನು ಪ್ರಾರಂಭಿಕ ಹಂತದಲ್ಲೇ ನಿಯಂತ್ರಿಸುವುದು ಅತ್ಯಂತ ಮುಖ್ಯ ಎಂದು ಕೇಂದ್ರ ಸರ್ಕಾರ ಅಭಿಪ್ರಾಯಪಟ್ಟಿದ್ದು, ತ್ವರಿತ ಮತ್ತು ಸಂಯೋಜಿತ ಕ್ರಮಗಳ ಮೂಲಕ ಜನರಲ್ಲಿ ಆತಂಕ ಹೆಚ್ಚಾಗದಂತೆ ನೋಡಿಕೊಳ್ಳುವಂತೆ ಸೂಚನೆ ನೀಡಿದೆ.
ಜೊತೆಗೆ, ಸೋಂಕಿನ ಮೂಲ ಪತ್ತೆ, ಸಂಪರ್ಕ ಶೋಧನೆ ಮತ್ತು ಐಸೋಲೇಷನ್ ಕ್ರಮಗಳನ್ನು ಬಲಪಡಿಸುವಂತೆ ರಾಜ್ಯಕ್ಕೆ ಸಲಹೆ ನೀಡಲಾಗಿದೆ.
ರಾಜ್ಯ ಸರ್ಕಾರಕ್ಕೆ ತಾಂತ್ರಿಕ ಮತ್ತು ವೈದ್ಯಕೀಯ ನೆರವು ಒದಗಿಸುವ ಉದ್ದೇಶದಿಂದ, ಕೇಂದ್ರವು ನ್ಯಾಷನಲ್ ಜಾಯಿಂಟ್ ಔಟ್‌ಬ್ರೇಕ್ ರೆಸ್ಪಾನ್ಸ್ ಟೀಂ (National Joint Outbreak Response Team) ಅನ್ನು ಸಕ್ರಿಯಗೊಳಿಸಿದೆ.
ಈ ತಂಡದಲ್ಲಿ ಅಖಿಲ ಭಾರತ ನೈರ್ಮಲ್ಯ ಮತ್ತು ಸಾರ್ವಜನಿಕ ಆರೋಗ್ಯ ಸಂಸ್ಥೆ (AIIHPH), ರಾಷ್ಟ್ರೀಯ ವೈರಾಲಜಿ ಸಂಸ್ಥೆ (NIV) ಪುಣೆ, ರಾಷ್ಟ್ರೀಯ ಸಾಂಕ್ರಾಮಿಕ ರೋಗಶಾಸ್ತ್ರ ಸಂಸ್ಥೆ (NIE) ಚೆನ್ನೈ ಸೇರಿದಂತೆ ದೇಶದ ಪ್ರಮುಖ ತಜ್ಞ ಸಂಸ್ಥೆಗಳ ಪರಿಣಿತರು ಸೇರಿದ್ದಾರೆ.
ಅಲ್ಲದೆ, ಪರಿಸರ ಮತ್ತು ಅರಣ್ಯ ಸಚಿವಾಲಯದ ವನ್ಯಜೀವಿ ತಜ್ಞರೂ ತಂಡದ ಭಾಗವಾಗಿದ್ದು, ವೈರಸ್ ಪ್ರಾಣಿಗಳಿಂದ ಮನುಷ್ಯರಿಗೆ ಹರಡುವ ಸಾಧ್ಯತೆ ಕುರಿತು ಅಧ್ಯಯನ ನಡೆಸುತ್ತಿದ್ದಾರೆ.
ದೆಹಲಿಯ ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರದಲ್ಲಿರುವ ಸಾರ್ವಜನಿಕ ಆರೋಗ್ಯ ತುರ್ತು ಕಾರ್ಯಾಚರಣೆ ಕೇಂದ್ರವನ್ನೂ (PHEOC) ಸಕ್ರಿಯಗೊಳಿಸಿ ನಿರಂತರ ನಿಗಾವಹಿಸಲಾಗಿದೆ.
ನಿಪಾ ವೈರಸ್ ಒಂದು ಪ್ರಾಣಿಜನ್ಯ ರೋಗವಾಗಿದ್ದು, ಮುಖ್ಯವಾಗಿ ಹಣ್ಣು ತಿನ್ನುವ ಬಾವಲಿಗಳಿಂದ ಮನುಷ್ಯರಿಗೆ ಹರಡುವುದು ವಿಜ್ಞಾನಿಗಳ ಅಭಿಪ್ರಾಯ.
ಸೋಂಕಿತ ಹಣ್ಣುಗಳು ಅಥವಾ ದೂಷಿತ ದ್ರವಗಳ ಸಂಪರ್ಕದಿಂದ ವೈರಸ್ ಹರಡುವ ಸಾಧ್ಯತೆ ಹೆಚ್ಚಾಗಿದೆ. ಈ ವೈರಸ್‌ನ ಮರಣ ಪ್ರಮಾಣವು ಸುಮಾರು 40ರಿಂದ 75 ಶೇಕಡಾ ವರೆಗೆ ಇರುವುದರಿಂದ ಇದರ ತೀವ್ರತೆ ಎಷ್ಟೊಂದು ಭಯಾನಕ ಎಂಬುದು ಸ್ಪಷ್ಟವಾಗುತ್ತದೆ.
ನಿಪಾ ಸೋಂಕಿನ ಪ್ರಮುಖ ಲಕ್ಷಣಗಳಲ್ಲಿ ಹಠಾತ್ ಜ್ವರ, ತೀವ್ರ ತಲೆನೋವು, ಉಸಿರಾಟದ ತೊಂದರೆ, ಮಾನಸಿಕ ಗೊಂದಲ ಮತ್ತು ತಲೆತಿರುಗುವಿಕೆ ಸೇರಿವೆ.
ಗಂಭೀರ ಸಂದರ್ಭಗಳಲ್ಲಿ ಮೆದುಳಿನ ಊತ (Encephalitis), ಅಚೇತನ ಸ್ಥಿತಿ ಹಾಗೂ ಕೋಮಾಗೆ ರೋಗಿಗಳು ತಲುಪುವ ಸಾಧ್ಯತೆಯೂ ಇದೆ.
ಆದ್ದರಿಂದ ಜನರು ಯಾವುದೇ ಲಕ್ಷಣಗಳನ್ನು ನಿರ್ಲಕ್ಷ್ಯ ಮಾಡದೆ ತಕ್ಷಣ ವೈದ್ಯಕೀಯ ನೆರವು ಪಡೆಯಬೇಕು ಎಂದು ಆರೋಗ್ಯ ಇಲಾಖೆ ಮನವಿ ಮಾಡಿದೆ.
ಈ ನಡುವೆ ಕೇಂದ್ರ ಆರೋಗ್ಯ ಸಚಿವ ಜಗತ್ ಪ್ರಕಾಶ್ ನಡ್ಡಾ ಅವರು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ಅವರಿಗೆ ಅಧಿಕೃತ ಪತ್ರ ಬರೆದು, ಕೇಂದ್ರ ಸರ್ಕಾರದಿಂದ ಸಂಪೂರ್ಣ ಸಹಕಾರ ಮತ್ತು ಬೆಂಬಲ ನೀಡುವುದಾಗಿ ಭರವಸೆ ನೀಡಿದ್ದಾರೆ.
ದೂರವಾಣಿ ಮೂಲಕವೂ ಇಬ್ಬರು ನಾಯಕರ ನಡುವೆ ಮಾತುಕತೆ ನಡೆದಿದ್ದು, ಪರಿಸ್ಥಿತಿಯನ್ನು ಸಮರ್ಥವಾಗಿ ನಿರ್ವಹಿಸಲು ಅಗತ್ಯವಿರುವ ಎಲ್ಲಾ ಸಂಪನ್ಮೂಲಗಳನ್ನು ಒದಗಿಸುವುದಾಗಿ ನಡ್ಡಾ ಸ್ಪಷ್ಟಪಡಿಸಿದ್ದಾರೆ.
ರಾಜ್ಯದಲ್ಲಿ ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಬಲಪಡಿಸುವುದು, ಜನರಲ್ಲಿ ಜಾಗೃತಿ ಮೂಡಿಸುವುದು ಹಾಗೂ ಸುಳ್ಳು ಸುದ್ದಿಗಳಿಗೆ ಅವಕಾಶ ಕೊಡದಿರುವುದು ಅತ್ಯಂತ ಅಗತ್ಯ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಸದ್ಯ ಶಂಕಿತ ಪ್ರಕರಣಗಳ ಕುರಿತು ಅಂತಿಮ ದೃಢೀಕರಣ ನಿರೀಕ್ಷೆಯಲ್ಲಿದ್ದು, ಮುನ್ನೆಚ್ಚರಿಕಾ ಕ್ರಮಗಳೇ ನಿಪಾ ವೈರಸ್ ವಿರುದ್ಧದ ಪ್ರಮುಖ ಅಸ್ತ್ರ ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒತ್ತಿ ಹೇಳಿವೆ.
ಇದನ್ನು ಓದಿ : https://vijayatimes.com/hike-in-metro-ticket/