New Delhi : ಕೇಂದ್ರ ಹಣಕಾಸು (Finance Minister) ಸಚಿವೆ ನಿರ್ಮಲಾ ಸೀತಾರಾಮನ್(Nirmala Sitharaman) ಅವರು ವಾಷಿಂಗ್ಟನ್‌ನಲ್ಲಿರುವ (Washington) ನ್ಯಾಷನಲ್ ಸೈನ್ಸ್ ಫೌಂಡೇಶನ್ ಪ್ರಧಾನ ಕಛೇರಿಗೆ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಖಗೋಳಶಾಸ್ತ್ರ, ರೋಬೋಟಿಕ್ಸ್ ತಂತ್ರಜ್ಞಾನ (Robotics Technology) ಮತ್ತು ಆರೋಗ್ಯ ಬಿಕ್ಕಟ್ಟಿನ ಸಂದರ್ಭದಲ್ಲಿ ಸಾರ್ವಜನಿಕ ಜಾಗೃತಿ ಮೂಡಿಸುವಂತಹ ಪ್ರಮುಖ ವಿಷಯಗಳ ಕುರಿತು ಪ್ರಸ್ತುತಿ ನೀಡಲಾಯಿತು.
ನಿರ್ಮಲಾ ಸೀತಾರಾಮನ್ ಅವರು ಅಂತರಾಷ್ಟ್ರೀಯ ಹಣಕಾಸು ನಿಧಿ ಮತ್ತು ವಿಶ್ವಬ್ಯಾಂಕ್‌ನ (World Bank) ವಾರ್ಷಿಕ ಸಭೆಗಳಲ್ಲಿ ಭಾಗವಹಿಸಲು ಅಮೆರಿಕದ ರಾಜಧಾನಿಗೆ ತೆರಳಿದ್ದಾರೆ.
ಕಳೆದ ಸೋಮವಾರ ಪ್ರತಿಷ್ಠಿತ ಬ್ರೂಕಿಂಗ್ಸ್ ಇನ್‌ಸ್ಟಿಟ್ಯೂಟ್‌ನಲ್ಲಿ ಥಿಂಕ್-ಟ್ಯಾಂಕ್ ಸಮುದಾಯದೊಂದಿಗಿನ ಸಂವಾದದ ಮೂಲಕ, ತಮ್ಮ ಆರು ದಿನಗಳ ಪ್ರವಾಸವನ್ನು ಪ್ರಾರಂಭಿಸಿದರು. ಭಾನುವಾರ ಎನ್‌ಎಸ್‌ಎಫ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ, ನಿರ್ಮಲಾ ಸೀತಾರಾಮನ್ ಅವರಿಗೆ ಖಗೋಳ ವಿಜ್ಞಾನ,
ಇದನ್ನೂ ಓದಿ : https://vijayatimes.com/congress-is-not-only-a-party/
COVID-19 ನಂತಹ ಆರೋಗ್ಯ ಬಿಕ್ಕಟ್ಟಿನ ಸಮಯದಲ್ಲಿ ಸಾರ್ವಜನಿಕ ಸಂದೇಶ ಕಳುಹಿಸುವಿಕೆ ಮತ್ತು ರೊಬೊಟಿಕ್ಸ್‌ಗಾಗಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ನಂತಹ ವಿಷಯಗಳ ಕುರಿತು ವರ್ಚುವಲ್ ಪ್ರಸ್ತುತಿಗಳನ್ನು ನೀಡಲಾಯಿತು,
ಜೊತೆಗೆ ಕೃಷಿ ಮತ್ತು ಪರಿಸರ ಸುಸ್ಥಿರತೆಗೆ ಸಂಬಂಧಿಸಿದ ಅಪ್ಲಿಕೇಶನ್‌ಗಳ ಬಗ್ಗೆ ಪ್ರತಿಷ್ಟಿತ ಪ್ರಾಧ್ಯಾಪಕರು ಮಾಹಿತಿ ನೀಡಿದರು.
ಪ್ರೆಸೆಂಟೇಷನ್ ಮೂಲಕ ಸಂವಾದ ನಡೆಸಿದವರಲ್ಲಿ, ಡಾ. ಕ್ಯಾಥರೀನ್ ಬೌಮನ್ (ಕಪ್ಪು ಕುಳಿಗಳ ಬಗೆಗಿನ ಸಂಶೋಧಕರಲ್ಲಿ ಪ್ರಮುಖರು), ನೊಬೆಲ್ ಪ್ರಶಸ್ತಿ ವಿಜೇತ ಮತ್ತು MIT ಅರ್ಥಶಾಸ್ತ್ರದ ಪ್ರಾಧ್ಯಾಪಕ ಡಾ. ಅಭಿಜಿತ್ ಬ್ಯಾನರ್ಜಿ,
ಮತ್ತು ಡಾ ಗಿರೀಶ್ ಚೌಧರಿ (ಸಹ ಸಂಸ್ಥಾಪಕ ಮತ್ತು ಅರ್ಥ್ ಸೆನ್ಸ್ ಮುಖ್ಯ ತಂತ್ರಜ್ಞಾನ ಅಧಿಕಾರಿ), ಮುಂತಾದವರು ಭಾಗವಹಿಸಿದವರು.
ಎನ್‌ಎಸ್‌ಎಫ್(NSF) ನಿರ್ದೇಶಕ ಡಾ.ಸೇತುರಾಮನ್ ಪಂಚನಾಥನ್ ಅವರು, ನಿರ್ಮಲಾ ಸೀತಾರಾಮನ್ ಅವರಿಗೆ ಪ್ರತಿಷ್ಠಾನದ ಕಾರ್ಯವನ್ನು ವಿವರಿಸಿದರು ಮತ್ತು ಎನ್‌ಎಸ್‌ಎಫ್ ಗ್ಯಾಲರಿಯನ್ನು ಪರಿಚಯಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪಂಚನಾಥನ್, “ಸಮಾಜವನ್ನು ಮುನ್ನಡೆಸಲು ವರ್ಷಗಳಿಂದ ಭಾರತ ಮತ್ತು ಯುಎಸ್ ಬೆಳೆಸಿದ ಪಾಲುದಾರಿಕೆಗಳ ಬಗ್ಗೆ NSF ಹೆಮ್ಮೆಪಡುತ್ತದೆ.
ಇದನ್ನೂ ಓದಿ : https://vijayatimes.com/health-tips-of-banana-flower/
ಜಾಗತಿಕ ಸಹಯೋಗವು ಕಪ್ಪು ಕುಳಿಯ ಮೊದಲ ಚಿತ್ರಗಳನ್ನು ಸೆರೆಹಿಡಿಯುವುದರಿಂದ ಹಿಡಿದು ಸಾಂಕ್ರಾಮಿಕ ರೋಗಗಳ ವಿರುದ್ಧ ಹೋರಾಡುವವರೆಗೂ ಅದ್ಭುತವಾದ ವಿವರಗಳನ್ನು ನೀಡಿದೆ” ಎಂದು ಪಂಚನಾಥನ್ ಹೇಳಿದರು.
ನಂತರ, ಸಂಜೆ ನಿರ್ಮಲಾ ಸೀತಾರಾಮನ್ ಅವರು ಭಾರತಕ್ಕೆ ಹಿಂತಿರುಗಿದರು.