Bihar : ದಮನ್ ಮತ್ತು ದಿಯುನಲ್ಲಿ (Daman & Diu) ಜನತಾ ದಳ ಯುನೈಟೆಡ್(JDU) ಘಟಕದ ಹದಿನೈದು ಜಿಲ್ಲಾ ಪಂಚಾಯತ್ ಸದಸ್ಯರು ಬಿಜೆಪಿಗೆ ಸೇರ್ಪಡೆಗೊಂಡಿದ್ದು,
ಸ್ಥಳೀಯ ಜಿಲ್ಲಾ ಪಂಚಾಯಿತಿಯಲ್ಲಿ ಬಿಜೆಪಿ ಅಧಿಕಾರದ ಗದ್ದುಗೆ ಏರಿದೆ. ಈ ಮೂಲಕ ನಿತೀಶ್ ಕುಮಾರ್(Nitish Kumar) ನೇತೃತ್ವದ ಜೆಡಿಯುಗೆ ಬಿಜೆಪಿ ಮತ್ತೊಂದು ಶಾಕ್ ನೀಡಿದೆ.

ಈ ಕುರಿತು ಟ್ವೀಟ್ (Tweet) ಮಾಡಿರುವ ದಮನ್ ಮತ್ತು ದಿಯು ಬಿಜೆಪಿ ಘಟಕ, “ಬಿಹಾರದಲ್ಲಿ ಅಭಿವೃದ್ಧಿಗೆ ಉತ್ತೇಜನ ನೀಡಿದ, ಬಿಜೆಪಿ ತೊರೆದು ಭ್ರಷ್ಟ ಬಾಹುಬಲಿಯನ್ನು ಆಯ್ಕೆ,
ಮಾಡಿಕೊಂಡ ನಿತೀಶ್ ಕುಮಾರ್ ಅವರ ನಿರ್ಧಾರದ ವಿರುದ್ಧ ದಮನ್ ಮತ್ತು ಡಿಯುನ ಜೆಡಿಯು ಘಟಕದ 17 ಜಿಲ್ಲಾ ಪಂಚಾಯಿತಿ ಸದಸ್ಯರಲ್ಲಿ 15 ಮಂದಿ ಬಿಜೆಪಿ ಸೇರಿದ್ದಾರೆ” ಎಂದಿದೆ.
ಕೆಲವು ದಿನಗಳ ಹಿಂದೆ ಮಣಿಪುರ ಮತ್ತು ಅರುಣಾಚಲ ಪ್ರದೇಶದ (Arunachal Pradesh) ಕೆಲವು ಜೆಡಿಯು ಶಾಸಕರು ಪಕ್ಷವನ್ನು ತೊರೆದು ಬಿಜೆಪಿ ಸೇರಿದ ನಂತರ ಈ ಬೆಳವಣಿಗೆ ನಡೆದಿದೆ.
ಆಗಸ್ಟ್ 25 ರಂದು, ಅರುಣಾಚಲ ಪ್ರದೇಶದ ಏಕೈಕ ಜೆಡಿಯು ಶಾಸಕ ಕೂಡ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ (JP Nadda) ಮತ್ತು ಅರುಣಾಚಲ ಸಿಎಂ ಪೆಮಾ ಖಂಡು ಅವರ ಸಮ್ಮುಖದಲ್ಲಿ ಬಿಜೆಪಿ ಸೇರಿದ್ದರು.

ಇನ್ನು ಮಣಿಪುರದಲ್ಲಿ(Manipur) ಆರು ಜೆಡಿಯು ಶಾಸಕರ ಪೈಕಿ ಐವರು ಜೆಡಿಯು ಶಾಸಕರು ಬಿಜೆಪಿ ಸೇರುವ ಮೂಲಕ ಮಣಿಪುರದ ಜೆಡಿಯು ಘಟಕವನ್ನೇ ಬಿಜೆಪಿಯೊಂದಿಗೆ ವಿಲೀನಗೊಳಿಸಿದ್ದರು.
ಇನ್ನು ಜೆಡಿಯುನ ದಮನ್ ಮತ್ತು ದಿಯು ಘಟಕದ ರಾಜ್ಯಾಧ್ಯಕ್ಷ ಶ್ರೀ ಧರ್ಮೇಶ್ ಚೌಹಾಣ್ ಮಾತನಾಡಿ,
ಇದನ್ನೂ ಓದಿ : https://vijayatimes.com/shahid-afridi-statement-goes-viral/
“ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಸಂಯುಕ್ತ ಜನತಾ ದಳ ಬಿಜೆಪಿಯೊಂದಿಗಿನ ಮೈತ್ರಿ ತೊರೆದು, ಭ್ರಷ್ಟ ಹಾಗೂ ಕುಟುಂಬ ಆಧಾರಿತ ಪಕ್ಷವಾಗಿರುವ ಆರ್ಜೆಡಿಯನ್ನು ಆಯ್ಕೆ ಮಾಡಿದ್ದು,
ಈ ನಿರ್ಧಾರದ ವಿರುದ್ಧ ದಾದ್ರಾ ನಗರ ಹವೇಲಿ ಜಿಲ್ಲಾ ಪಂಚಾಯಿತಿ ಸದಸ್ಯರು ನಿರ್ಣಯ ಕೈಗೊಂಡಿದ್ದಾರೆ. ಅದೇ ರೀತಿ ಇತರರು ಕೂಡಾ ಸಂಯುಕ್ತ ಜನತಾ ದಳವನ್ನು ತೊರೆಯಿರಿ” ಎಂದು ಕರೆ ನೀಡಿದ್ದಾರೆ.
ನಿತೀಶ್ ಕುಮಾರ್ ಬಿಜೆಪಿಯನ್ನು ತ್ಯಜಿಸಿ ಮಹಾಮೈತ್ರಿಕೂಟದೊಂದಿಗೆ, ಕೈಜೋಡಿಸಿ ಹೊಸ ಸರ್ಕಾರವನ್ನು ರಚಿಸಿದ ನಂತರದ ಅನೇಕ ರಾಜ್ಯಗಳಲ್ಲಿ ಜೆಡಿಯುಗೆ ಭಾರೀ ಹೊಡೆತ ಬೀಳುತ್ತಿವೆ. ಅನೇಕ ಜೆಡಿಯು ಶಾಸಕರು ಬಿಜೆಪಿ ಸೇರುತ್ತಿದ್ದಾರೆ.
- ಮಹೇಶ್ ಪಿ ಎಚ್