ಬಿಡದಿ ಆಶ್ರಮ(Bidadi Ashram) ಎಂದೇ ಖ್ಯಾತಿ ಪಡೆದಿರುವ ನಿತ್ಯಾನಂದ(Nityananda) ವಿರುದ್ಧ ಈಗ ಮತ್ತೆ ಸದ್ದು ಕೇಳಿಬಂದಿದ್ದು, ಮುಚ್ಚಿಹೋಗಿದ್ದ ಕೇಸ್ ಈಗ ಮತ್ತೆ ಪುನರಂಭವಾಗಿದೆ!
ಹೌದು, ನಿತ್ಯಾನಂದ ಮತ್ತು ತಮಿಳು ನಟಿಯೊಬ್ಬರ ಜೊತೆಗಿದ್ದ ಖಾಸಗಿ ದೃಶ್ಯಗಳ ಜೊತೆಗೆ ನಟಿ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂಬ ಆರೋಪ ಕುರಿತು ಮತ್ತೆ ಕೇಸ್ ತೆರೆಕಂಡಿದೆ. ನಿತ್ಯಾನಂದನ ಬಂಧನಕ್ಕೆ ಜಾಮೀನು ರಹಿತ ವಾರೆಂಟ್ ಈಗಾಗಲೇ ಜಾರಿಯಾಗಿದೆ. ರಾಮನಗರ ಜಿಲ್ಲಾ ನ್ಯಾಯಲಯ(Ramanagar District Court) ಈ ಕೇಸ್‍ಗೆ ಸಂಬಂಧಿಸಿದಂತೆ ನಿತ್ಯಾನಂದ ವಿರುದ್ಧ ಬಂಧನ ಆದೇಶ ಹೊರಡಿಸಿದೆ. ಅತ್ಯಾಚಾರ(Rape) ಪ್ರಕರಣ ಸಂಬಂಧಿಸಿದಂತೆ ಈಗಾಗಲೇ ನ್ಯಾಯಲಯ ಪ್ರಯೋಗ ಶುರುಮಾಡಿದೆ.
ಈ ಕೇಸ್‍ಗೆ ಸಂಬಂಧಿಸಿದ 4ನೇ ಮತ್ತು 6ನೇ ಆರೋಪಿ ಮಾತ್ರ ಸದ್ಯ ನ್ಯಾಯಲಯಕ್ಕೆ ಹಾಜರಾಗಿದ್ದಾರೆ ಎನ್ನಲಾಗಿದೆ. ಈ ಕೇಸ್‍ನ ಪ್ರಮುಖ ಆರೋಪಿ ನಿತ್ಯಾನಂದ ಮಾತ್ರ ಹಾಜರಾಗಿಲ್ಲ ¨ದಲಾಗಿ ತಪ್ಪಿಸಿಕೊಂಡಿದ್ದಾರೆ. ಈ ಹಿನ್ನಲೆ ರಾಮನಗರ ಜಿಲ್ಲಾ ನ್ಯಾಯಲಯ ಸದ್ಯದ ವದಂತಿ ಪ್ರಕಾರ ನಿತ್ಯಾನಂದ ತನ್ನದೇ ಆದ ಕೈಲಾಸ ಎಂಬ ಸ್ಥಳವನ್ನು ಕಟ್ಟಿಕೊಂಡಿರುವ ಸಂಗತಿಯನ್ನು ಗಮನದಲ್ಲಿಟ್ಟುಕೊಂಡು ಆತ ಯಾವ ಕೈಲಾಸದಲ್ಲಿದ್ದರೂ ಬಿಡದೇ ಬಂಧಿಸಿ ಕರೆತನ್ನಿ ಎಂದು ಸಿಐಡಿಗೆ ಆದೇಶ ಬನೀಡಿದೆ.