• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ರಾಜಕೀಯ

ಬಿಜೆಪಿಯ ನೂತನ ರಾಷ್ಟ್ರೀಯ ಅಧ್ಯಕ್ಷರಾಗಿ ನಿತಿನ್ ನಬಿನ್ ಅಧಿಕಾರ ಸ್ವೀಕಾರ

Teju Srinivas by Teju Srinivas
in ರಾಜಕೀಯ, ವಿಜಯ ಟೈಮ್ಸ್‌
ಬಿಜೆಪಿಯ ನೂತನ ರಾಷ್ಟ್ರೀಯ ಅಧ್ಯಕ್ಷರಾಗಿ ನಿತಿನ್ ನಬಿನ್ ಅಧಿಕಾರ ಸ್ವೀಕಾರ
0
SHARES
10
VIEWS
Share on FacebookShare on Twitter
  • ಬಿಜೆಪಿಯ ಕಮಾಂಡ್ ಯುವ (Nitin Nabin BJP national president) ನಾಯಕನ ಕೈಗೆ
  • ಅವಿರೋಧ ಆಯ್ಕೆಯ ಮೂಲಕ ರಾಷ್ಟ್ರೀಯ ಅಧ್ಯಕ್ಷರಾದ ನಿತಿನ್ ನಬಿನ್
  • ಬಿಜೆಪಿಯ 12ನೇ ರಾಷ್ಟ್ರೀಯ ಅಧ್ಯಕ್ಷರಾಗಿ ನಿತಿನ್ ನಬಿನ್:ಪ್ರಧಾನಿ ಮೋದಿ ಸಮ್ಮುಖದಲ್ಲಿ ದೆಹಲಿಯಲ್ಲಿ ಪ್ರಮಾಣವಚನ

New Delhi : ಭಾರತೀಯ ಜನತಾ ಪಕ್ಷದ (ಬಿಜೆಪಿ) ನೂತನ (Nitin Nabin BJP national president) ರಾಷ್ಟ್ರೀಯ ಅಧ್ಯಕ್ಷರಾಗಿ ನಿತಿನ್ ನಬಿನ್ (Nitin Nabin) ಅವರು ಇಂದು ಅಧಿಕೃತವಾಗಿ ಅಧಿಕಾರ ಸ್ವೀಕರಿಸಿದ್ದಾರೆ.

1980ರಲ್ಲಿ ಸ್ಥಾಪನೆಯಾದ ಬಿಜೆಪಿಗೆ 12ನೇ ರಾಷ್ಟ್ರೀಯ ಅಧ್ಯಕ್ಷರಾಗಿ ನೇಮಕಗೊಂಡಿರುವ ನಬಿನ್, ಕೇವಲ 45ನೇ ವಯಸ್ಸಿನಲ್ಲೇ ದೇಶದ ಅತಿದೊಡ್ಡ ರಾಜಕೀಯ ಪಕ್ಷವನ್ನು ಮುನ್ನಡೆಸುವ ಮಹತ್ವದ ಜವಾಬ್ದಾರಿಯನ್ನು ಹೊತ್ತಿದ್ದಾರೆ.

ಪಕ್ಷದ ಸಂಘಟನಾ ಚುನಾವಣೆಯ ಮೂಲಕ ಅವಿರೋಧವಾಗಿ ಆಯ್ಕೆಯಾದ (Nitin Nabin BJP national president) ಅವರು, ಹೊಸ ನಾಯಕತ್ವ, ಶಕ್ತಿ ಹಾಗೂ ದೃಷ್ಟಿಕೋನದೊಂದಿಗೆ ಬಿಜೆಪಿಯನ್ನು ಮುಂದಿನ ಹಂತಕ್ಕೆ ಕರೆದೊಯ್ಯುವ ನಿರೀಕ್ಷೆ ಮೂಡಿಸಿದ್ದಾರೆ.

ಜೆ.ಪಿ.ನಡ್ಡಾ (J.P. Nadda) ಅವರ ಅಧ್ಯಕ್ಷೀಯ ಅವಧಿ ಪೂರ್ಣಗೊಂಡ ಬಳಿಕ ನಡೆದ ಪಕ್ಷದ ಆಂತರಿಕ ಚುನಾವಣೆಯಲ್ಲಿ ನಿತಿನ್ ನಬಿನ್ ಅವರ ಹೆಸರು ಏಕಮತದಿಂದ ಹೊರಹೊಮ್ಮಿತು.

ದೆಹಲಿಯಲ್ಲಿ ನಡೆದ ಭವ್ಯ ಪ್ರಮಾಣ ವಚನ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) , ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh) ಸೇರಿದಂತೆ ಹಲವು ಗಣ್ಯರ ಸಮ್ಮುಖದಲ್ಲಿ ನಬಿನ್ ಅವರು ನೂತನ ಅಧ್ಯಕ್ಷರಾಗಿ ಪ್ರಮಾಣ ಸ್ವೀಕರಿಸಿದರು.

ಈ ಸಂದರ್ಭ ಪಕ್ಷದ ಹಿರಿಯ ನಾಯಕರು, ಸಂಸದರು ಹಾಗೂ ಕಾರ್ಯಕರ್ತರು ಹಾಜರಿದ್ದು, ನಬಿನ್ ಅವರಿಗೆ ಶುಭಾಶಯಗಳನ್ನು ಕೋರಿದರು. ಬಿಜೆಪಿ (BJP)

ಸಂಘಟನಾ ಚುನಾವಣೆಯ ಚುನಾವಣಾಧಿಕಾರಿ ಕೆ. ಲಕ್ಷ್ಮಣ್ ಅವರು ಅಧಿಕೃತವಾಗಿ ಆಯ್ಕೆಯನ್ನು ಘೋಷಿಸಿ, ಪ್ರಮಾಣಪತ್ರವನ್ನು ನಬಿನ್ ಅವರಿಗೆ ವಿತರಿಸಿದರು.

ನೂತನ ಹುದ್ದೆ ಸ್ವೀಕರಿಸುವ ಮುನ್ನ ನಿತಿನ್ ನಬಿನ್ ಅವರು ಬಿಹಾರ ರಾಜ್ಯ ಸರ್ಕಾರದ ಕಾನೂನು ಮತ್ತು ನ್ಯಾಯ, ವಸತಿ ಖಾತೆಗಳ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು.

ಇದಕ್ಕೂ ಮೊದಲು ಅವರನ್ನು ಪಕ್ಷದ ಕಾರ್ಯಾಧ್ಯಕ್ಷರಾಗಿ ಬಿಜೆಪಿ ನೇಮಿಸಿತ್ತು. ಸಂಘಟನಾ ಸಾಮರ್ಥ್ಯ, ತಂತ್ರಜ್ಞಾನ ಜ್ಞಾನ ಹಾಗೂ ಕಾರ್ಯಕರ್ತರೊಂದಿಗೆ ನೇರ ಸಂಪರ್ಕ ಹೊಂದಿರುವ ನಾಯಕನಾಗಿ ನಬಿನ್ ಗುರುತಿಸಿಕೊಂಡಿದ್ದಾರೆ.

ಪಕ್ಷದ ಒಳಸಂಘಟನೆ ಬಲಪಡಿಸುವಲ್ಲಿ, ಯುವ ನಾಯಕತ್ವವನ್ನು ಉತ್ತೇಜಿಸುವಲ್ಲಿ ಮತ್ತು ಮುಂದಿನ ಚುನಾವಣೆಗಳತ್ತ ಸ್ಪಷ್ಟ ಕಾರ್ಯತಂತ್ರ ರೂಪಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸುವ ನಿರೀಕ್ಷೆಯಿದೆ.

ನಿತಿನ್ ನಬಿನ್ ಅವರ ರಾಜಕೀಯ ಹಿನ್ನೆಲೆಯೂ ಗಮನಾರ್ಹವಾಗಿದೆ. ಅವರು ಬಿಹಾರ ಬಿಜೆಪಿಯ ಹಿರಿಯ ನಾಯಕ ಹಾಗೂ ಪಾಟ್ನಾದಿಂದ ನಾಲ್ಕು ಬಾರಿ ಶಾಸಕರಾಗಿದ್ದ ದಿವಂಗತ ನಬಿನ್ ಕಿಶೋರ್ ಪ್ರಸಾದ್ ಸಿಂಹ ಅವರ ಪುತ್ರ.

ತಂದೆಯ ನಿಧನದ ಬಳಿಕ ಬಿಹಾರ ಬಿಜೆಪಿಯಲ್ಲಿ ಸಕ್ರಿಯರಾಗಿದ ನಿತಿನ್, ಹಂತ ಹಂತವಾಗಿ ಪಕ್ಷದೊಳಗೆ ತಮ್ಮ ಸ್ಥಾನವನ್ನು ಗಟ್ಟಿಗೊಳಿಸಿಕೊಂಡರು. ಆರ್‌ಎಸ್‌ಎಸ್‌ನೊಂದಿಗೆ ಆಪ್ತ ಸಂಬಂಧ ಹೊಂದಿರುವ ಅವರು, ಶಿಸ್ತು, ಸಂಘಟನೆ ಮತ್ತು ತತ್ವಾಧಾರಿತ ರಾಜಕಾರಣಕ್ಕೆ ಒತ್ತು ನೀಡುವ ನಾಯಕರಾಗಿ ಹೆಸರು ಮಾಡಿದ್ದಾರೆ.

ಸಂಘಟನಾ ಚಾತುರ್ಯವೇ ಅವರ ದೊಡ್ಡ ಶಕ್ತಿಯಾಗಿದ್ದು, ಅದೇ ಕಾರಣಕ್ಕೆ ಪಕ್ಷದ ಉನ್ನತ ಹುದ್ದೆಗೆ ಆಯ್ಕೆಯಾಗಿದ್ದಾರೆ ಎನ್ನಲಾಗುತ್ತಿದೆ.

ಪ್ರಮಾಣ ವಚನಕ್ಕೂ ಮುನ್ನ ನಿತಿನ್ ನಬಿನ್ ಅವರು ದೆಹಲಿಯ ವಿವಿಧ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.

ಬೆಳಗ್ಗೆಯೇ ಜಂಡೇವಾಲ ದೇವಾಲಯ, ವಾಲ್ಮೀಕಿ ದೇವಾಲಯ, ಕನೌಟ್‌ನಲ್ಲಿರುವ ಪುರಾತನ ಹನುಮಾನ್ ಮಂದಿರ ಹಾಗೂ ಬಾಂಗ್ಲಾ ಸಾಹಿಬ್ ಗುರುದ್ವಾರಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದರು. ಈ ವೇಳೆ ದೆಹಲಿ ಬಿಜೆಪಿ ಘಟಕದ ಅಧ್ಯಕ್ಷ ವೀರೇಂದ್ರ ಸಚ್‌ದೇವ್ (Virendra Sachdev) ಸೇರಿದಂತೆ ಪಕ್ಷದ ನಾಯಕರು ಅವರೊಂದಿಗೆ ಇದ್ದರು.

ಧಾರ್ಮಿಕ ಸೌಹಾರ್ದತೆ ಮತ್ತು ಸಾಂಸ್ಕೃತಿಕ ಮೌಲ್ಯಗಳಿಗೆ ಗೌರವ ಸಲ್ಲಿಸುವ ಈ ನಡೆ, ನಬಿನ್ ಅವರ ನಾಯಕತ್ವ ಶೈಲಿಯನ್ನು ಪ್ರತಿಬಿಂಬಿಸುತ್ತದೆ ಎಂದು ಪಕ್ಷದ ವಲಯಗಳು ಹೇಳುತ್ತಿವೆ.

ನೂತನ ಅಧ್ಯಕ್ಷರಾಗಿ ಅವರು ಪಕ್ಷವನ್ನು ಸಂಘಟನಾ ಬಲ, ರಾಜಕೀಯ ಸ್ಥಿರತೆ ಮತ್ತು ಭವಿಷ್ಯದ ದೃಷ್ಟಿಕೋನದೊಂದಿಗೆ ಮುನ್ನಡೆಸಲಿದ್ದಾರೆ ಎಂಬ ನಿರೀಕ್ಷೆ ಕಾರ್ಯಕರ್ತರಲ್ಲಿ ಮೂಡಿದೆ.

ಇದನ್ನು ಓದಿ : https://vijayatimes.com/ayyappa-temple-gold-theft-ed-raids/

Tags: bjpnationalpresidentNewdelhipolitics

Related News

ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಡಿಜಿಟಲ್ ಕ್ರಾಂತಿ: ಮುಂದಿನ ವರ್ಷದಿಂದ ಫೇಶಿಯಲ್ ಹಾಜರಾತಿ ಕಡ್ಡಾಯ
ಪ್ರಮುಖ ಸುದ್ದಿ

ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಡಿಜಿಟಲ್ ಕ್ರಾಂತಿ: ಮುಂದಿನ ವರ್ಷದಿಂದ ಫೇಶಿಯಲ್ ಹಾಜರಾತಿ ಕಡ್ಡಾಯ

February 17, 2026
ಐಟಿ ವಲಯಕ್ಕೆ ಎಐ ಸವಾಲು:ಐಟಿ ಉದ್ಯೋಗಿಗಳಿಗೆ ಎಚ್ಚರಿಕೆಯ ಘಂಟೆ
ದೇಶ-ವಿದೇಶ

ಐಟಿ ವಲಯಕ್ಕೆ ಎಐ ಸವಾಲು:ಐಟಿ ಉದ್ಯೋಗಿಗಳಿಗೆ ಎಚ್ಚರಿಕೆಯ ಘಂಟೆ

February 17, 2026
ರೈಲು ಪ್ರಯಾಣಿಕರಿಗೆ ಶುಭ ಸುದ್ದಿ: AI ತಂತ್ರಜ್ಞಾನದ ಮೂಲಕ ಸಂಚರಿಸುವಾಗಲೇ ರೈಲು ಕ್ಲೀನ್
ದೇಶ-ವಿದೇಶ

ರೈಲು ಪ್ರಯಾಣಿಕರಿಗೆ ಶುಭ ಸುದ್ದಿ: AI ತಂತ್ರಜ್ಞಾನದ ಮೂಲಕ ಸಂಚರಿಸುವಾಗಲೇ ರೈಲು ಕ್ಲೀನ್

February 17, 2026
ಸ್ಟಾಕ್ ಬ್ರೋಕರ್‌ಗಳ ಸಾಲದ ಮೇಲೆ RBI ಕಣ್ಣು : ಸ್ಟಾಕ್ ಮಾರ್ಕೆಟ್ ನಲ್ಲಿ ಸಂಚಲನ ಮೂಡಿಸಿದ RBI ಹೊಸ ನಿಯಮ
ಪ್ರಮುಖ ಸುದ್ದಿ

ಸ್ಟಾಕ್ ಬ್ರೋಕರ್‌ಗಳ ಸಾಲದ ಮೇಲೆ RBI ಕಣ್ಣು : ಸ್ಟಾಕ್ ಮಾರ್ಕೆಟ್ ನಲ್ಲಿ ಸಂಚಲನ ಮೂಡಿಸಿದ RBI ಹೊಸ ನಿಯಮ

February 17, 2026

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.