Bihar : ಮಹಾರಾಷ್ಟ್ರದ(Maharashtra) ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್(Nitish Kumar criticized Modi) ಅವರ ಪತ್ನಿ ಅಮೃತಾ ಫಡ್ನವಿಸ್ ಈ ಹಿಂದೆ ನಮ್ಮ ರಾಷ್ಟ್ರಕ್ಕೆ ಇಬ್ಬರು ಪಿತಾಮಹರು ಇದ್ದಾರೆ. ಒಬ್ಬರು ಮಹಾತ್ಮ ಗಾಂಧಿ, ಮತ್ತೊಬ್ಬರು ಇಂದಿನ ಪ್ರಧಾನಿ ನರೇಂದ್ರ ಮೋದಿ ಅವರು ಎಂದು ಹೇಳಿದ್ದರು.
ಈ ಹೇಳಿಕೆಯನ್ನು ನೆನಪಿಸಿದ ನಿತೀಶ್ ಕುಮಾರ್, ನಿಮ್ಮ ಹೊಸ ರಾಷ್ಟ್ರಪಿತ ಭಾರತಕ್ಕಾಗಿ ಏನು ಮಾಡಿದ್ದಾರೆ? ಎಂದು ಪ್ರಶ್ನಿಸಿದ್ದಾರೆ.
ಅಮೃತಾ ಫಡ್ನವಿಸ್(Amrita fadnavis), ಪ್ರಧಾನಿ ನರೇಂದ್ರ ಮೋದಿ ಅವರನ್ನು ಭಾರತದ ಹೊಸ ಪಿತಾಮಹ ಎಂದು ಕರೆದ ಕೆಲವು ದಿನಗಳ ನಂತರ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್(Nithish kumar) ಶನಿವಾರ ಪ್ರಧಾನಿ ನರೇಂದ್ರ ಮೋದಿ(Nitish Kumar criticized Modi) ಅವರನ್ನು ಗುರಿಯಾಗಿಸಿ,
ಈ ರೀತಿ ಟೀಕಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೊಸ ರಾಷ್ಟ್ರಪಿತ ಎಂದು ಕರೆದವರು ಹೇಳಿ, ಸ್ವಾತಂತ್ರ್ಯಕ್ಕಾಗಿ ಅವರು ಏನು ಮಾಡಿದ್ದಾರೆ? ಸ್ವಾತಂತ್ರ್ಯ ಹೋರಾಟದಲ್ಲಿ ಆರ್‌ಎಸ್‌ಎಸ್(RSS) ಕೊಡುಗೆ ಇಲ್ಲ ಎಂದು ಕುಟುಕಿದ್ದಾರೆ.
https://vijayatimes.com/limbavalis-name-in-death-note/
ಮಹಾತ್ಮ ಗಾಂಧಿಯವರ(Mahatma gandhi) ಕೊಡುಗೆಯನ್ನು ನಾವು ಎಂದಿಗೂ ಮರೆಯಬಹುದೇ? ಅವರ ಹೋರಾಟದ ಸಮಯದಲ್ಲಿ ನಾನು ಹುಟ್ಟದೇ ಇದ್ದರೂ, ನಾನು ಎಲ್ಲವನ್ನೂ ಅರ್ಥಮಾಡಿಕೊಂಡಿದ್ದೇನೆ ಎಂದು ಹೇಳಿರುವ ನಿತೀಶ್ ಕುಮಾರ್ , ರಾಷ್ಟ್ರದ ಹೊಸ ಪಿತಾಮಹ ಅವರೇ ರಾಷ್ಟ್ರಕ್ಕಾಗಿ ಏನು ಮಾಡಿದ್ದೀರಿ? ಗಮನಾರ್ಹವಾದ ಕೆಲಸ ಏನಾದರೂ ಮಾಡಿದ್ದೀರಾ? ಭಾರತ ಹೇಗೆ ಪ್ರಗತಿ ಸಾಧಿಸಿದೆ? ಇಂದು ನವ ಭಾರತದಲ್ಲಿ ಹಸಿವು,
ಬಡತನ, ನಿರುದ್ಯೋಗ, ಭಯೋತ್ಪಾದನೆ ಎಂಬ ಭೂತಗಳು ತಲೆ ಎತ್ತುತ್ತಿವೆ. ಮೋದಿಯವರನ್ನು ನವ ಭಾರತದ ಪಿತಾಮಹನನ್ನಾಗಿ ಮಾಡುವುದು ರಾಷ್ಟ್ರಪಿತ ಶಬ್ದಕ್ಕೆ ಮಾಡಿದ ಅವಮಾನ ಎಂದು ಕಟುವಾಗಿ ಟೀಕಿಸಿದ್ದಾರೆ.