Bengaluru: ಬೆಂಗಳೂರಿನ ಚಂದಾಪುರದಲ್ಲಿರುವ ಪುರಸಭೆಯಲ್ಲಿ (no basic amenities for civil worker) ಕಾರ್ಯ ನಿರ್ವಹಿಸುತ್ತಿರುವ ಪೌರ ಕಾರ್ಮಿಕರನ್ನು ಪುರಸಭೆ ಅಧಿಕಾರಿಗಳು
ಪ್ರಾಣಿಗಳಿಗಿಂತ ಕಡೆಯಾಗಿ ನಡೆಸಿಕೊಳ್ಳುತ್ತಿದ್ದಾರೆ ಎಂದು ಪೌರ ಕಾರ್ಮಿಕರು ನೋವನ್ನು ವ್ಯಕ್ತಪಡಿಸುತ್ತಿದ್ದಾರೆ. ಹೌದು, ಇಲ್ಲಿಯ ಪೌರ ಕಾರ್ಮಿಕರು ಮಾರುಕಟ್ಟೆಗಳನ್ನು ಸ್ವಚ್ಛ ಮಾಡಲು ರಾತ್ರಿ,
ಹಗಲೆನ್ನದೆ ದುಡಿಯುತ್ತಿದ್ದು, ದುರ್ನಾತದಿಂದ ತುಂಬಿದ ಕೊಳಕು ವಾತಾವರಣದಲ್ಲಿ ತಮ್ಮ ಪ್ರಾಣವನ್ನೂ ಲೆಕ್ಕಿಸದೆ ಸ್ವಚ್ಛತಾ ಕಾರ್ಯ ಮಾಡುತ್ತಿದ್ದಾರೆ. ಆದರೆ ಈ ಪುರಸಭೆಯಲ್ಲಿ ಕಾರ್ಮಿಕರ
ದುಡಿಮೆಗೆ ಆಗಲಿ ಅಥವಾ ಜೀವಕ್ಕೆ ಆಗಲಿ ಯಾವುದೇ (no basic amenities for civil worker) ಬೆಲೆ ಇಲ್ಲದೆ ಇರುವುದು ಎದ್ದು ಕಾಣುತ್ತಿದೆ.

ಇನ್ನು ಇವರಿಗೆ ಕನಿಷ್ಠ ಸೌಕರ್ಯ ಸೌಲಭ್ಯವನ್ನು ಕೊಡದೆ ವಂಚನೆ ಮಾಡುತ್ತಿದ್ದು, ಇವರು ಅತ್ಯಂತ ಅಪಾಯಕಾರಿ ವಾತಾವರಣದಲ್ಲಿ ಕೆಲಸ ಮಾಡುವಂತಹ ಪರಿಸ್ಥಿತಿ ಬಂದಿದೆ. ಮತ್ತು ಇವರ ಆರೋಗ್ಯ
ರಕ್ಷಣೆಗೆ ಬೇಕಾದ ಎಲ್ಲಾ ಸೌಲಭ್ಯಗಳನ್ನು ಕೊಡಬೇಕು ಎಂದು ಕಾನೂನಿನಲ್ಲಿ ಹೇಳಿದ್ದರು ಚಂದಾಪುರ (Chandapura) ಪುರಸಭೆ ಅಧಿಕಾರಿಗಳು ಮಾತ್ರ ಇದನ್ನೆಲ್ಲಾ ಮರೆತ್ತಿದ್ದಾರೆ.
ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ದಸರಾ ಉದ್ಘಾಟಕರು: ಸಿಎಂ ಸಿದ್ದರಾಮಯ್ಯ ಘೋಷಣೆ
ಅಷ್ಟಲ್ಲದೇ ಪೌರಕಾರ್ಮಿಕರು ಕೂಡ ಮನುಷ್ಯರು ಅನ್ನುವುದನ್ನು ಮರೆತು ಅವರಿಗೆ ಶೂ (Shoe), ಗ್ಲೌಸ್ (Gloves), ಮಾಸ್ಕ್ (Mask) ಮುಂತಾದ ಕನಿಷ್ಠ ಸೌಲಭ್ಯವನ್ನೂ ಕೊಡದೆ ಶೋಷಿಸುತ್ತಿದ್ದಾರೆ.
ಕೋವಿಡ್ (Covid) ಸಮಯದಲ್ಲಿ ಪೌರಕಾರ್ಮಿಕರು ಪ್ರಾಣದ ಭಯವನ್ನು ತೊರೆದು ಅಂತಹ ಸಮಯದಲ್ಲೂ ದುಡಿದು ಉಳಿದವರ ಪ್ರಾಣವನ್ನು ಕಾಪಾಡಿದ್ದರು. ಆಗ ಅಧಿಕಾರಿಗಳು, ಜನಪ್ರತಿನಿಧಿಗಳು
ಇವರಿಗೆ ಸಾಲು ಸಾಲು ಸನ್ಮಾನವನ್ನಷ್ಟೇ ಮಾಡಿ ಕೈತೊಳೆದುಕೊಂಡಿದ್ದರು. ಆದರೆ ಈಗ ಎಲ್ಲವೂ ಸಹಜ ಸ್ಥಿತಿಗೆ ಮರಳಿದ್ದು, ಪೌರ ಕಾರ್ಮಿಕರನ್ನ ಹೇಳೋರು ಇಲ್ಲ, ಕೇಳೋರು ಇಲ್ಲ, ಅನ್ನುವಂತಹ
ಪರಿಸ್ಥಿತಿ ಇವರದ್ದಾಗಿದೆ.

ಪುರಸಭೆಯಲ್ಲಿ ಪೌರಕಾರ್ಮಿಕರ ಕಲ್ಯಾಣಕ್ಕೆ ಅಂತಾನೆ ಬಹಳಷ್ಟು ಅನುದಾನವಿದ್ದರೂ ಅದನ್ನು ಪೌರ ಕಾರ್ಮಿಕರಿಗೆ ನೀಡದೆ ಇವರ ಅನುದಾನವನ್ನು ಜನಪ್ರತಿನಿಧಿಗಳು, ಅಧಿಕಾರಿಗಳು ಗುಳುಂ ಮಾಡುತ್ತಿದ್ದಾರೆ.
ಅಲ್ಲದೆ ಪೌರಕಾರ್ಮಿಕರ ಹಣವನ್ನು ತಿಂದು ಮಜಾ ಮಾಡುತ್ತಿರುವ ಅಧಿಕಾರಿಗಳು, ಬಡವರ ಜೀವದ ಜೊತೆ ಚೆಲ್ಲಾಟ ಆಡುತ್ತಿದ್ದಾರೆ. ಹಾಗಾಗಿ ಇದನ್ನು ಚಂದಾಪುರ ಅಧಿಕಾರಿಗಳಿಂದ ನಡೆಯಿತ್ತಿರುವ
ಕರ್ಮಕಾಂಡ ಅಂತಾನೆ ಹೇಳಬಹುದು.
ಈ ಕುರಿತು ಸಾಕಷ್ಟು ಬಾರಿ ಪೌರ ಕಾರ್ಮಿಕರಿಗೆ ಸೌಲಭ್ಯಗಳನ್ನೂ ಕೋರಿ ಪುರಸಭೆಗೆ ಮನವಿ ಸಲ್ಲಿಸಿದ್ದರು, ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಮಾತ್ರ ಯಾವುದೇ ಯೋಚನೆ ಮಾಡುತ್ತಿಲ್ಲ.
ಇದರಿಂದ ಬೇಸರಗೊಂಡಿರುವ ಪೌರ ಕಾರ್ಮಿಕರು ನಮ್ಮ ಕಷ್ಟಗಳನ್ನು ಕೇಳುವವರು ಯಾರು ಇಲ್ಲ ಅನ್ನುವ ಪರಿಸ್ಥಿತಿಗೆ ಬಂದಿದ್ದಾರೆ. ಇನ್ನಾದರೂ ಅಧಿಕಾರಿಗಳು ಇವರ ಸ್ಥಿತಿ ಗತಿಯ ಬಗ್ಗೆ
ಎಚ್ಚೆತ್ತುಕೊಂಡು ಇವರಿಗೆ ಬೇಕಾದ ಮೂಲಭೂತ ಸೌಕರ್ಯ ಒದಗಿಸಬೇಕಾಗಿದೆ.
ಭವ್ಯಶ್ರೀ ಆರ್.ಜೆ