Bengaluru: ವ್ಯವಸ್ಥೆ ಯಾವ ಹಂತಕ್ಕೆ ಬಂದಿದೆ ಎಂದರೆ ಶಾಸಕರ ಭವನದಲ್ಲೇ ಪಿಎಸ್ಐ (PSI) ಅಕ್ರಮದ ಡೀಲ್ ನಡೆದಿದೆ. ಹಾಗಾಗಿ ‘ಲಂಚ ಕೊಡಬೇಕಾಗಿಲ್ಲ’ ಅಭಿಯಾನವನ್ನು ವಿಧಾನಸೌಧದಲ್ಲೂ ಮಾಡಿ.

ತಾವು ನಿಜಕ್ಕೂ ಪ್ರಾಮಾಣಿಕರಿದ್ದರೆ, ಈ ಹಾಸ್ಯಾಸ್ಪದ ಅಭಿಯಾನ (No bribe campaign) ಕೈಬಿಟ್ಟು, ನಿಮ್ಮ ಮೇಲಿನ ಭ್ರಷ್ಟಾಚಾರ ಪ್ರಕರಣಗಳನ್ನು ನ್ಯಾಯಾಂಗ ತನಿಖೆಗೆ ನೀಡಿ ಎಂದು ಕಾಂಗ್ರೆಸ್ಶಾಸಕ ಪ್ರಿಯಾಂಕಾ ಖರ್ಗೆ ಆಗ್ರಹಿಸಿದ್ದಾರೆ.
ಈ ಕುರಿತು ಮಾದ್ಯಮಗಳೊಂದಿಗೆ ಮಾತನಾಡಿರುವ ಅವರು, ಸರ್ಕಾರಕ್ಕೆ ನಿಜಕ್ಕೂ ಇಚ್ಛಾಶಕ್ತಿ ಇದ್ದಿದ್ದರೆ ತಮ್ಮ ಮೇಲಿನ ಹಗರಣ ಆರೋಪಗಳನ್ನು ನ್ಯಾಯಾಂಗ ತನಿಖೆಗೆ ವಹಿಸುತ್ತಿದ್ದರು.
https://vijayatimes.com/raid-on-pfi/
ಆದರೆ ಇಂತಹ ಸುತ್ತೋಲೆಗಳ ಮೂಲಕ ಜನರ ಕಣ್ಣಿಗೆ ಮಣ್ಣೆರೆಚುವ ಪ್ರಯತ್ನ ಮಾಡುತ್ತಿದ್ದಾರೆ.
ಸುತ್ತೋಲೆಯ ಪ್ರಕಾರ ನಾಮಫಲಕ ಹಾಕಿಕೊಳ್ಳುವವರು ಪ್ರಮಾಣಿಕರು, ಹಾಕದವರು ಭ್ರಷ್ಟರು ಎಂದು ಭಾವಿಸಬೇಕೆ? ‘ನನಗೆ ಯಾರೂ ಲಂಚ ಕೊಡಬೇಕಾಗಿಲ್ಲ’
ಎಂದು ಸರ್ಕಾರಿ ಕಚೇರಿಗಳಲ್ಲಿ ಹಾಕಬೇಕು ಎಂದಿದ್ದಾರೆ. ಆ ಮೂಲಕ ಈ ಸರ್ಕಾರದಲ್ಲಿ ಸರ್ವ ವ್ಯಾಪಿ ಸರ್ವ ಸ್ಪರ್ಶಿ ಎಂದರೆ ಅದು ಭ್ರಷ್ಟಾಚಾರ ಮಾತ್ರ ಎಂದು ಸಾಬೀತಾಗಿದೆ.

ಅಭಿಯಾನಕ್ಕೆ ಕಾಲಾವಧಿ ನಿಗದಿ ಮಾಡಿದ್ದಾರೆ. ಅಂದರೆ ಅಭಿಯಾನದ ಮುನ್ನ (No Bribe Campaign) ಹಾಗೂ ಅಭಿಯಾನದ ನಂತರ ಭ್ರಷ್ಟಾಚಾರ ಮಾಡಬಹುದೇ? ಎಂದು ಪ್ರಶ್ನಿಸಿದ್ದಾರೆ.
ಇದೇ ವೇಳೆ ರಾಜ್ಯ ಬಿಜೆಪಿ (BJP) ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ಶಾಸಕ ರಾಮಲಿಂಗಾ ರೆಡ್ಡಿ, ಕಮಿಷನ್ ಇಲ್ಲದೆ ಕಾರ್ಮಿಕ ಇಲಾಖೆಯಲ್ಲಿ ಫೈಲ್ ಮುಂದಕ್ಕೆ ಹೋಗುವುದಿಲ್ಲ ಎಂದು ಮಾಧ್ಯಮಗಳಲ್ಲಿ ವರದಿ ಬಂದಿದೆ. https://vijayatimes.com/russia-replies-to-narendra-modi/
ಆರೋಗ್ಯ ಇಲಾಖೆಯಲ್ಲಿ ಅಕ್ರಮಗಳ ಬಗ್ಗೆ ವರದಿಗಳು ಬಂದಿವೆ. ಮಠಾಧೀಶರು ಅನುದಾನದಲ್ಲಿ ಕಮಿಷನ್ ಕೇಳುವ ಆರೋಪ ಮಾಡಿದ್ದಾರೆ. ಕರ್ನಾಟಕ ರಾಜ್ಯವನ್ನು ಭಾರತದ ಭ್ರಷ್ಟಾಚಾರದ ರಾಜಧಾನಿಯನ್ನಾಗಿ ಮಾಡಿರುವುದೇ ಬಿಜೆಪಿ ಸಾಧನೆ.
ಮುಖ್ಯಮಂತ್ರಿಗಳಿಗೆ ಭ್ರಷ್ಟಾಚಾರ ನಿಗ್ರಹಿಸುವ ಆಸಕ್ತಿ ಇದ್ದಿದ್ದರೆ ಸರ್ಕಾರಿ ಹುದ್ದೆಗಳ ನೇಮಕಾತಿ ಅಕ್ರಮವನ್ನು ನ್ಯಾಯಾಂಗ ತನಿಖೆಗೆ ವಹಿಸಬಹುದಿತ್ತು.
ತನಿಖೆ ಮಾಡಿದರೆ ತಮ್ಮವರ ಹೆಸರುಗಳು ಹೊರ ಬರುತ್ತವೆ ಎಂದು ಮಾಡುತ್ತಿಲ್ಲ. ಈಗ PAYCM ಅಭಿಯಾನದ ಸಂಚಲನದಿಂದ ಜನರ ಗಮನ ಬೇರೆಡೆ ಸೆಳೆಯಲು ತಾತ್ಕಾಲಿಕ ಅಭಿಯಾನ ಘೋಷಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ರಾಜ್ಯದಲ್ಲಿ 2.58 ಲಕ್ಷ ಹುದ್ದೆಗಳು ಖಾಲಿ ಇದ್ದು, ಈಗ ಆಗಿರುವ ನೇಮಕಾತಿ ಪ್ರಕ್ರಿಯೆಗಳಲ್ಲಿ ಅಕ್ರಮ ತಾಂಡವವಾಡುತ್ತಿದೆ. ಪಿಎಸ್ಐ ಅಕ್ರಮದಲ್ಲಿ ನೂರಕ್ಕೂ ಹೆಚ್ಚು ಅಧಿಕಾರಿಗಳು ಹಾಗೂ ಅಭ್ಯರ್ಥಿಗಳ ಬಂಧನವಾಗಿದೆ.
ಬೇರೆ ಇಲಾಖೆಗಳಲ್ಲೂ ಲಂಚ ಮೇರೆ ಮೀರಿರುವುದು ‘ನನಗೆ ಯಾರು ಲಂಚ ಕೊಡಬೇಕಾಗಿಲ್ಲ’ ಅಭಿಯಾನದಿಂದ ಸಾಬೀತಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
-ಮಹೇಶ್.ಪಿ.ಎಚ್