ಅಂಗನವಾಡಿ ಆಹಾರ ರಹಸ್ಯ ಬಯಲು ! ಆಹಾರ ಸುರಕ್ಷತಾ ಸರ್ಟಿಫಿಕೇಟ್‌ ಇಲ್ಲದೆಯೇ ಮಕ್ಕಳ ಆಹಾರ ತಯಾರಿಕೆ. ವಿಜಯಟೈಮ್ಸ್‌ ರಿಯಾಲಿಟಿ ಚೆಕ್‌ನಲ್ಲಿ ಬಯಲಾಯ್ತು ಆಹಾರ ಸೀಕ್ರೆಟ್ಸ್.

ಈ ಬಾರಿ ವಿಜಯಟೈಮ್ಸ್‌ ಕವರ್‌ಸ್ಟೋರಿ ತಂಡ ನುಗ್ಗಿದ್ದು ಅಂಗನವಾಡಿ ಮಕ್ಕಳ ಆಹಾರ ತಯಾರಿಸೋ ಘಟಕಗಳ ಒಳಗೆ. ಯಾಕಂದ್ರೆ ನಮ್ಮ ಅಂಗನವಾಡಿಯಲ್ಲಿ ಸರಬರಾಜಾಗೋ ಕೆಲ ಆಹಾರ ಪದಾರ್ಥಗಳು ತಿನ್ನಲು ಯೋಗ್ಯ ಇಲ್ಲ ಅಂತ ಮಕ್ಕಳ ಹೆತ್ತವರು ಪದೇ ಪದೇ ದೂರು ನೀಡುತ್ತಿದ್ದಾರೆ.

ಅದ್ರಲ್ಲೂ ಹಾಸನ ಭಾಗದ ಮಂದಿ ಅಂಗನವಾಡಿಯಲ್ಲಿ ಸರಬರಾಜಾಗೋ ಪೌಷ್ಟಿಕ ಆಹಾರ  ಪುಡಿಯನ್ನು ಹಸುಗಳಿಗೆ ಹಾಕ್ತಿದ್ದಾರೆ ಅನ್ನೋ ದೂರು ಕೂಡ ಬರುತ್ತಿದೆ. ಇದಕ್ಕೆ ಇಲ್ಲಿನ ಮಕ್ಕಳ ಮತ್ತು ಮಹಿಳಾ ಕಲ್ಯಾಣ ಇಲಾಖೆಯಲ್ಲಿ ಮೂವತ್ತು ವರ್ಷಗಳಿಂದ ಝಾಂಡಾ ಊರಿರುವ ಕೆಲ  ಅಧಿಕಾರಿಗಳ ಕಮಿಷನ್ ದಂಧೆ, ಅರ್ಹತೆಯೇ ಇಲ್ಲದೆ ನಿಯಮಮೀರಿ ಉಪನಿರ್ದೇಶಕ ಸ್ಥಾನದಲ್ಲಿ ಕೂತಿರುವ ಅಧಿಕಾರಿ ಲಂಚಕ್ಕಾಗಿ ಮಾಡ್ತಿರೋ ಲಜ್ಜೆಗೆಟ್ಟ ವ್ಯವಹಾರಗಳೇ ಕಾರಣ ಅನ್ನೋ ಆರೋಪ ಬಲವಾಗಿ ಕೇಳಿ ಬರುತ್ತಿದೆ.

ಈ  ದೂರಿನ ಸತ್ಯಾಸತ್ಯತೆ ಏನು? ನಮ್ಮ ಕರುನಾಡಿನ ಕಂದಮ್ಮಗಳು ತಿನ್ನೋ ಆಹಾರ ಎಷ್ಟು ಸ್ವಚ್ಫವಾಗಿ, ಸುರಕ್ಷಿತವಾಗಿ ತಯಾರಾಗುತ್ತವೆ ಅನ್ನೋದನ್ನ ಪತ್ತೆ ಹಚ್ಚಲು ಕವರ್‌ಸ್ಟೋರಿ ತಂಡ ಹಾಸನ ಜಿಲ್ಲೆಗೆ ಹೊರಟಿತು. ಜಿಲ್ಲೆಯಲ್ಲಿ ಅಂಗನವಾಡಿ ಆಹಾರ ತಯಾರಿಸೋ ಪ್ರಮುಖ ಎಂಎಸ್‌ಪಿಟಿಸಿ ಘಟಕಗಳಲ್ಲಿ ರಿಯಾಲಿಟಿ ಚೆಕ್‌ ಮಾಡಿದೆವು. ಮೊದಲಿಗೆ ನಾವು ನಮ್ಮ ರಿಯಾಲಿಟಿ ಚೆಕ್‌ ಪ್ರಾರಂಭ ಮಾಡಿದ್ದು ಅರಕಲಗೂಡು ಎಂಎಸ್‌ಪಿಟಿಸಿಯಿಂದ

ಅರಕಲಗೂಡಿನ ಎಂಎಸ್‌ಪಿಟಿಸಿಯಲ್ಲಿ ರಿಯಾಲಿಟಿ ಚೆಕ್‌ ಮಾಡಲು ಹೋದಾಗ ಅಲ್ಲಿ ಮಕ್ಕಳ ಮತ್ತು ಮಹಿಳಾ ಕಲ್ಯಾಣ ಇಲಾಖೆ ಅಧಿಕಾರಿ ಕೃಷ್ಣಮೂರ್ತಿಯವರು ಇದ್ರು. ನಮ್ಮನ್ನು ನೋಡಿ ಅಲ್ಲಿಂದ ಕಳ್ಳರಂತೆ ಕಾಲ್ಕಿತ್ರು. ಯಾಕೆ ಅಂತ ನಮಗೆ ಗೊತ್ತಾಗಿಲ್ಲ.

ಇಲ್ಲಿಂದ ನಾವು ನೇರವಾಗಿ ಹೊಳೆನರಸೀಪುರದ ಎಂಎಸ್‌ಪಿಟಿಸಿಗೆ ರಿಯಾಲಿಟಿ ಚೆಕ್ ಮಾಡ್ತಾ ಎಂಟ್ರಿ ಕೊಟ್ಟೆವು. ಈ ಕೇಂದ್ರದಲ್ಲಿ ಅದೇ ಕತೆ. ಮಾಸ್ಕ್‌ ಇಲ್ಲ, ಗ್ಲೌಸ್‌ ಇಲ್ಲ. ಸ್ವಚ್ಫತೆ, ಶುಭ್ರತೆಗೆ ಮಾನ್ಯತೆಯೇ ಇಲ್ಲ. ಯಾಕೆ ಹೀಗೆ ಅಂತ ಕೇಳಿದ್ರೆ ನೂರಾರು ಕಾರಣಗಳನ್ನ ಕೊಟ್ರು.

ಮುಂದೆ ನಮ್ಮ ತಂಡದ ಸದಸ್ಯ ಶ್ರೀನಿವಾಸ್‌ ಅವರು ಬಾಳ್ಳುಪೇಟೆಯ ಎಂಎಸ್‌ಪಿಟಿಸಿಯಲ್ಲೂ ರಿಯಾಲಿಟಿ ಚೆಕ್‌ ಮಾಡಿದ್ರು. ಆಗ ಕಂಡಂಥಾ ಸತ್ಯ ಚಿತ್ರಣ ಇಲ್ಲಿದೆ

ಹಾಸನದ ಮಕ್ಕಳ ಮತ್ತು ಮಹಿಳಾ ಕಲ್ಯಾಣ ಇಲಾಖೆಯಲ್ಲಿ ಮಕ್ಕಳಿಗೆ ಕಳಪೆ  ಆಹಾರ ಸರಬರಾಜು,  ಕಮಿಷನ್‌ ದಂಧೆ ಮಾತ್ರ ನಡೀತಿಲ್ಲ ಬದಲಾಗಿ ಅಂಗನವಾಡಿಗೆ ಸಾಮಾಗ್ರಿ ಖರೀದಿಸುವ ವ್ಯವಹಾರದಲ್ಲೂ ಭಾರೀ ಅವವ್ಯವಹಾರ ಮಾಡಿದೆ. ಇಲಾಖೆ ಡಿಡಿ ಆಗಿರುವ ದಿಲೀಪ್ ಕಾನೂನು ನಿಯಮಗಳನ್ನ ಮೀರಿ ಕಿಯೋನಿಕ್ಸ್‌ ಎಂಸಿಎಯಿಂದ ವಸ್ತುಗಳನ್ನು ಖರೀದಿಸಿ ಭಾರೀ ಬಿಲ್‌ ಗೋಲ್ಮಾಲ್ ಮಾಡಿರುವುದಕ್ಕೆ ಸ್ಪಷ್ಟ ದಾಖಲೆಗಳಿವೆ. ಕೆಲ ವಸ್ತುಗಳು ಬರೀ ಬಿಲ್ಲಲ್ಲಿ ಮಾತ್ರ ಇವೆ ಅಂಗನವಾಡಿಗೆ ತಲುಪಲೇ ಇಲ್ಲ. ಇವರ ಆರೋಪ ನಿಜನಾ ಸುಳ್ಳಾ ಅಂತ ತಿಳಿದುಕೊಳ್ಳಲು ನಾವು ನಾನಾ ಅಂಗನವಾಡಿಗಳಿಗೆ ಹೋಗಿ ರಿಯಾಲಿಟಿ ಚೆಕ್‌ ಮಾಡಿದೆವು. ಆಗ ಇವರ ಆರೋಪಕ್ಕೆ ತಕ್ಕುದಾದ ಪ್ರೂಫ್‌ ಸಿಕ್ಕಿದವು.

ಈ ರೀತಿ ಒಂದಲ್ಲ ಎರಡಲ್ಲ ಸಾಕಷ್ಟು ಹಗರಣಗಳು ಹಾಸನದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ನಡೆಯುತ್ತಿದೆ. ಆದ್ರೆ ಹಾಸನ ಜಿಲ್ಲಾಧಿಕಾರಿಗಳು ಮಾತ್ರ ಈ ಇಲಾಖೆಯನ್ನು ಭ್ರಷ್ಟಾಚಾರದ ಕೂಪವನ್ನಾಗಿಸಿರುವ ಅಧಿಕಾರಿಗಳ ವಿರುದ್ಧ ಯಾವ ಕ್ರಮವನ್ನು ಕೈಗೊಳ್ಳದೇ ಇರುವುದು ಹಲವು ಅನುಮಾನಗಳನ್ನ ಮೂಡಿಸಿವೆ. ಅಲ್ಲದೆ ಶಾಸಕ ಪ್ರೀತಮ್ ಗೌಡ ಅವರ ಹೆಸರನ್ನು ಬಳಸಿ ಇಲ್ಲಿನ ಅಧಿಕಾರಿಗಳು ದಂಧೆ ಮಾಡುತ್ತಿರುವುದು ಶಾಸಕರ ಗಮನಕ್ಕೆ ಯಾಕೆ ಬಂದಿಲ್ಲ ಅನ್ನೋದು ಸಾರ್ವಜನಿಕರ ಪ್ರಶ್ನೆಯಾಗಿದೆ. ಹಾಗಾಗಿ ತಕ್ಷಣ ಈ ಭ್ರಷ್ಟ ಅಧಿಕಾರಿಗಳ ವಿರುದ್ಧ ಕ್ರಮಕೈಗೊಂಡು ಅಂಗನವಾಡಿ ಕಂದಮ್ಮಗಳನ್ನು ರಕ್ಷಿಸಬೇಕಾಗಿ ವಿಜಯಟೈಮ್ಸ್ ಮನವಿ ಮಾಡುತ್ತಿದೆ.

Latest News

ದೇಶ-ವಿದೇಶ

ಒಡಿಶಾದಲ್ಲಿ ಆಘಾತಕಾರಿ ಘಟನೆ ; ಹಾಡಹಗಲೇ ವೃದ್ಧನನ್ನು ಕಂಬಕ್ಕೆ ಕಟ್ಟಿ, ಥಳಿಸಿ ಕೊಂದ ಕುಟುಂಬಸ್ಥರು!

ಕೊರಾಪುಟ್ ಜಿಲ್ಲೆಯ ಬುಡಕಟ್ಟು ಪ್ರದೇಶದಲ್ಲಿ ಹಾಡಹಗಲೇ ವೃದ್ಧನನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ತಮ್ಮ ಕುಟುಂಬಸ್ಥರೇ ಥಳಿಸಿ ಕೊಂದಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ!

ಮಾಹಿತಿ

ಕಿಡ್ನಿ ಸ್ಟೋನ್‌ ಸಮಸ್ಯೆಗೆ ಇಲ್ಲಿದೆ ನೈಸರ್ಗಿಕ ಪರಿಹಾರ ; ಈ ಸರಳ ಪರಿಹಾರ ಪಾಲಿಸಿ

ಕೆಲವು ಮನೆಮದ್ದುಗಳು(Home Remedies) ಆರಂಭಿಕ ಹಂತದ ಕಿಡ್ನಿಸ್ಟೋನ್ ಸಮಸ್ಯೆಗೆ ಪರಿಹಾರ ನೀಡುತ್ತವೆ. ಅಂತಹ ಮನೆಮದ್ದುಗಳ ವಿವರ ಇಲ್ಲಿದೆ ನೋಡಿ.

ಮಾಹಿತಿ

ದೇಹಕ್ಕೆ ಪ್ರೋಟಿನ್‌ ಕೊರತೆಯಾದ್ರೆ `ಈ’ 10 ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ

ಯುವಜನರ ದೈಹಿಕ ಬೆಳವಣಿಗೆಯಲ್ಲಿ ಪ್ರೋಟಿನ್‌ ಪ್ರಮುಖ ಪಾತ್ರ ವಹಿಸುತ್ತದೆ. ದೇಹದಲ್ಲಿನ ಸ್ನಾಯುಗಳು, ಕಿಣ್ವಗಳು ಮತ್ತು ಹಾರ್ಮೋನುಗಳಿಗೆ ಪ್ರೋಟಿನ್ ಅತ್ಯಂತ ಅವಶ್ಯಕವಾಗಿದೆ.