• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ದೇಶ-ವಿದೇಶ

ದೆಹಲಿ ವಾಯು ಮಾಲಿನ್ಯ ನಿಯಂತ್ರಣಕ್ಕೆ ಸರ್ಕಾರದಿಂದ ಕಠಿಣ ಕ್ರಮ:ಪಿಯುಸಿ ಪ್ರಮಾಣ ಪತ್ರ ಇದ್ದರಷ್ಟೇ ಇಂಧನ – ಬಿಎಸ್–VI ವಾಹನಗಳಿಗೆ ಮಾತ್ರ ದೆಹಲಿಗೆ ಪ್ರವೇಶ

Teju Srinivas by Teju Srinivas
in ದೇಶ-ವಿದೇಶ, ಪ್ರಮುಖ ಸುದ್ದಿ, ವಿಜಯ ಟೈಮ್ಸ್‌
ದೆಹಲಿ ವಾಯು ಮಾಲಿನ್ಯ ನಿಯಂತ್ರಣಕ್ಕೆ ಸರ್ಕಾರದಿಂದ ಕಠಿಣ ಕ್ರಮ:ಪಿಯುಸಿ ಪ್ರಮಾಣ ಪತ್ರ ಇದ್ದರಷ್ಟೇ ಇಂಧನ – ಬಿಎಸ್–VI ವಾಹನಗಳಿಗೆ ಮಾತ್ರ ದೆಹಲಿಗೆ ಪ್ರವೇಶ
0
SHARES
98
VIEWS
Share on FacebookShare on Twitter
  • ದೆಹಲಿಯ AQI 400ರ ಗಡಿ ದಾಟಿ ಅಪಾಯಕಾರಿ (no fuel without PUC certificate) ಹಂತ ತಲುಪಿದ ಗಾಳಿಯ ಗುಣಮಟ್ಟ
  • ಪಿಯುಸಿ ಪ್ರಮಾಣ ಪತ್ರ ಹಾಗೂ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರವಿಲ್ಲದ ವಾಹನಗಳಿಗೆ ಇಂಧನ ನಿಷೇಧ
  • ಹಳೆಯ ಕಾರುಗಳಿಗೆ ದೆಹಲಿ ಪ್ರವೇಶ ನಿಷೇಧ

New delhi: ದೇಶದ ರಾಜಧಾನಿ ದೆಹಲಿ (Delhi) ಮತ್ತೊಮ್ಮೆ ತೀವ್ರ ವಾಯುಮಾಲಿನ್ಯದ ಭೀತಿಯಲ್ಲಿ (no fuel without PUC certificate) ಸಿಲುಕಿದ್ದು ಪ್ರತಿ ವರ್ಷ ಚಳಿಗಾಲ ಆರಂಭವಾಗುತ್ತಿದ್ದಂತೆ ದಟ್ಟ ಮಂಜು, ವಾಹನಗಳ ಹೊಗೆ, ನಿರ್ಮಾಣ ಕಾರ್ಯಗಳಿಂದ ಉಂಟಾಗುವ ಧೂಳು ಮತ್ತು ಇತರೆ ಕಾರಣಗಳಿಂದ ದೆಹಲಿಯ ವಾಯು ಗುಣಮಟ್ಟ ಅತ್ಯಂತ ಹದಗೆಟ್ಟ ಮಟ್ಟಕ್ಕೆ ತಲುಪುತ್ತಿದೆ.

ಈ ಬಾರಿ ದೆಹಲಿಯ AQI (Air Quality Index) 400ರ ಗಡಿಯನ್ನು ದಾಟಿದ್ದು, ಇದನ್ನು ಅಪಾಯಕಾರಿ ವರ್ಗಕ್ಕೆ ಸೇರಿಸಲಾಗಿದೆ. ಪರಿಣಾಮವಾಗಿ ಸಾರ್ವಜನಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಕಂಡುಬಂದಿದ್ದು, ದೆಹಲಿ ಸರ್ಕಾರ ತಕ್ಷಣವೇ ಕಠಿಣ ನಿಯಮಗಳನ್ನು ಜಾರಿಗೆ ತಂದಿದೆ.

no fuel without PUC certificate

ಈ ಪರಿಸ್ಥಿತಿಯನ್ನು ನಿಯಂತ್ರಿಸುವ ಉದ್ದೇಶದಿಂದ ದೆಹಲಿ ಸರ್ಕಾರ ಹಲವು ಮಹತ್ವದ (no fuel without PUC certificate) ನಿರ್ಧಾರಗಳನ್ನು ಪ್ರಕಟಿಸಿದೆ.

ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳಲ್ಲಿನ ಶೇಕಡಾ 50ರಷ್ಟು ಉದ್ಯೋಗಿಗಳಿಗೆ ವರ್ಕ್ ಫ್ರಂ ಹೋಮ್ (Work From Home) ವ್ಯವಸ್ಥೆ ಜಾರಿಗೆ ತರಲು ಸೂಚಿಸಲಾಗಿದೆ.

ಇದರಿಂದ ವಾಹನ ಸಂಚಾರ ಕಡಿಮೆಯಾಗುವ ನಿರೀಕ್ಷೆಯಿದೆ. ಜೊತೆಗೆ ಶಾಲಾ ಮಕ್ಕಳ, ವೃದ್ಧರ ಹಾಗೂ ಉಸಿರಾಟದ ಸಮಸ್ಯೆ ಹೊಂದಿರುವವರ ಆರೋಗ್ಯ ರಕ್ಷಣೆಗೆ ವಿಶೇಷ ಮಾರ್ಗಸೂಚಿಗಳನ್ನು ನೀಡಲಾಗಿದೆ.

ಮಾಲಿನ್ಯದ ತೀವ್ರತೆಯನ್ನು ಗಮನಿಸಿ ಮುಂದಿನ ದಿನಗಳಲ್ಲಿ ಇನ್ನಷ್ಟು ಕಠಿಣ ಕ್ರಮಗಳನ್ನೂ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಸರ್ಕಾರ ಎಚ್ಚರಿಕೆ ನೀಡಿದೆ.

ಮಾಲಿನ್ಯ ನಿಯಂತ್ರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು ಬಿಎಸ್–VI ಎಂಜಿನ್ (Engine) ಹೊಂದಿರದ ಹಳೆಯ ವಾಹನಗಳಿಗೆ ದೆಹಲಿ ಪ್ರವೇಶ ನಿಷೇಧ ಹೇರಿದೆ .

ಇಂದಿನಿಂದ ಬಿಎಸ್–6 (ಭಾರತ್ ಸ್ಟೇಜ್–6) ಮಾನದಂಡದ ವಾಹನಗಳಿಗೆ ಮಾತ್ರ ರಾಷ್ಟ್ರ ರಾಜಧಾನಿಗೆ ಪ್ರವೇಶಕ್ಕೆ ಅನುಮತಿ ನೀಡಲಾಗಿದೆ.

ಪಿಯುಸಿ (Pollution Under Control) ಪ್ರಮಾಣಪತ್ರ ಮತ್ತು ಮಾನ್ಯ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರವಿಲ್ಲದ ವಾಹನಗಳಿಗೆ ಇಂಧನ ಪೂರೈಕೆ ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ಈ ಕ್ರಮವು ಹಳೆಯ ಹಾಗೂ ಹೆಚ್ಚು ಹೊಗೆ ಹೊರಸೂಸುವ ವಾಹನಗಳಿಂದ ಉಂಟಾಗುವ ಮಾಲಿನ್ಯವನ್ನು ಕಡಿಮೆ ಮಾಡುವ ಉದ್ದೇಶ ಹೊಂದಿದೆ.

ಇನ್ನು ಈ ನಿಯಮದಿಂದ ದೆಹಲಿ ಸುತ್ತಮುತ್ತಲಿನ ಗುರುಗ್ರಾಮ್, ಗಾಜಿಯಾಬಾದ್ (Ghaziabad) , ಫರಿದಾಬಾದ್ ಮತ್ತು ನೋಯ್ಡಾದಿಂದ ಪ್ರತಿದಿನ ದೆಹಲಿಗೆ ಪ್ರವೇಶಿಸುವ ಸುಮಾರು 12 ಲಕ್ಷ ವಾಹನಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.

ಈ ಪ್ರದೇಶಗಳಲ್ಲಿ ಬಿಎಸ್–6 ಎಂಜಿನ್ ಹೊಂದಿರದ ವಾಹನಗಳ ಸಂಖ್ಯೆ ಹೆಚ್ಚು ಇರುವುದರಿಂದ, ನೋಯ್ಡಾದಿಂದ 4 ಲಕ್ಷಕ್ಕೂ ಅಧಿಕ, ಗುರಗಾಂವ್‌ನಿಂದ 2 ಲಕ್ಷ ಮತ್ತು ಗಾಜಿಯಾಬಾದ್‌ನಿಂದ ಸುಮಾರು 5.5 ಲಕ್ಷ ವಾಹನಗಳು ದೆಹಲಿಗೆ ಪ್ರವೇಶಿಸಲು ನಿರ್ಬಂಧಕ್ಕೆ ಒಳಗಾಗಿವೆ.

ಇದರಿಂದ ಸಂಚಾರದ ಮೇಲೆ ಪ್ರಭಾವ ಬೀರುವುದರ ಜೊತೆಗೆ, ಸಾರ್ವಜನಿಕರಲ್ಲಿ ಅಸಮಾಧಾನವೂ ವ್ಯಕ್ತವಾಗುತ್ತಿದೆ.

ಕಠಿಣ ನಿಯಮಗಳ ಅನುಷ್ಠಾನಕ್ಕಾಗಿ ದೆಹಲಿ ಪೊಲೀಸರು ಮತ್ತು ಸಾರಿಗೆ ಇಲಾಖೆ ವ್ಯಾಪಕ ತಪಾಸಣೆ ಆರಂಭಿಸಿದ್ದಾರೆ.

ದೆಹಲಿ ಪ್ರವೇಶಿಸುವ ಪ್ರಮುಖ ರಸ್ತೆಗಳಲ್ಲಿ 126 ಚೆಕ್‌ಪೋಸ್ಟ್‌ಗಳನ್ನು (Checkpost) ಸ್ಥಾಪಿಸಿ, 580 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಸುಮಾರು 37 ಸ್ಪೀಡ್ ಚೆಕ್ ವಾಹನಗಳ ಮೂಲಕ ಸಂಚಾರದ ಮೇಲೆ ನಿಗಾ ವಹಿಸಲಾಗುತ್ತಿದೆ.

ಪೆಟ್ರೋಲ್ ಪಂಪ್‌ಗಳಲ್ಲಿ (Petrol Pump) ಸಾರಿಗೆ ಇಲಾಖೆ, ಮುನ್ಸಿಪಲ್ ಕಾರ್ಪೊರೇಷನ್ (Municipal Corporation) ಹಾಗೂ ಆಹಾರ ಇಲಾಖೆಯ ಸಿಬ್ಬಂದಿಯನ್ನು ನಿಯೋಜಿಸಿ, ನಿಯಮ ಉಲ್ಲಂಘನೆ ಮಾಡುವ ವಾಹನಗಳಿಗೆ ಇಂಧನ ಪೂರೈಕೆ ಆಗದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ.

ಅಲ್ಲದೆ, ಸ್ವಯಂಚಾಲಿತ ನಂಬರ್ ಪ್ಲೇಟ್ ಗುರುತಿಸುವಿಕೆ (ANPR) ಕ್ಯಾಮೆರಾಗಳ ಮೂಲಕ ಪಿಯುಸಿ ಪ್ರಮಾಣಪತ್ರಗಳ ಮಾನ್ಯತೆಯನ್ನು ತಕ್ಷಣವೇ ಪರಿಶೀಲಿಸಲಾಗುತ್ತಿದೆ.

ಈ ಎಲ್ಲ ಕ್ರಮಗಳ ಮೂಲಕ ದೆಹಲಿಯ ವಾಯುಮಾಲಿನ್ಯವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಸರ್ಕಾರ ಗಂಭೀರ ಪ್ರಯತ್ನ ನಡೆಸುತ್ತಿದೆ.

ಇದನ್ನು ಓದಿ : https://vijayatimes.com/dengue-cases-decrease-in-karnataka/

Tags: airAQINewdelhipollutionpu certificatepucvehicle

Related News

ಗೌರಿ-ಗಣೇಶ ಹಬ್ಬಕ್ಕೆ KSRTCಯಿಂದ 2,400 ಹೆಚ್ಚುವರಿ ಬಸ್‌ಗಳ ವ್ಯವಸ್ಥೆ
ಪ್ರಮುಖ ಸುದ್ದಿ

ಗೌರಿ-ಗಣೇಶ ಹಬ್ಬಕ್ಕೆ KSRTCಯಿಂದ 2,400 ಹೆಚ್ಚುವರಿ ಬಸ್‌ಗಳ ವ್ಯವಸ್ಥೆ

September 12, 2026
ಬೆಂಗಳೂರಿನಲ್ಲಿ ಬಾಲಕಾರ್ಮಿಕ ಪದ್ಧತಿ ಇನ್ನೂ ಜೀವಂತ: ಸ್ಪೆಷಲ್ ಡ್ರೈವ್‌ನಲ್ಲಿ 17 ಬಾಲಕರ ರಕ್ಷಣೆ
ಪ್ರಮುಖ ಸುದ್ದಿ

ಬೆಂಗಳೂರಿನಲ್ಲಿ ಬಾಲಕಾರ್ಮಿಕ ಪದ್ಧತಿ ಇನ್ನೂ ಜೀವಂತ: ಸ್ಪೆಷಲ್ ಡ್ರೈವ್‌ನಲ್ಲಿ 17 ಬಾಲಕರ ರಕ್ಷಣೆ

September 12, 2026
80ರ ದಶಕದ ಫೋಟೊಗಳಿಗೆ ಮಾರು ಹೋಗುವ ಮುನ್ನ ಎಚ್ಚರ:ಟ್ರೆಂಡ್ ಹಿಂದೆ ಅಡಗಿದೆ ಸೈಬರ್ ಅಪಾಯ!
ಪ್ರಮುಖ ಸುದ್ದಿ

80ರ ದಶಕದ ಫೋಟೊಗಳಿಗೆ ಮಾರು ಹೋಗುವ ಮುನ್ನ ಎಚ್ಚರ:ಟ್ರೆಂಡ್ ಹಿಂದೆ ಅಡಗಿದೆ ಸೈಬರ್ ಅಪಾಯ!

September 12, 2026
ಬೆಂಗಳೂರಿನ ರಸ್ತೆ ಗುಂಡಿಗಳಿಗೆ ಜೆಟ್ ಪ್ಯಾಚರ್ ಟ್ರೀಟ್‌ಮೆಂಟ್: ₹2 ಕೋಟಿ ಯಂತ್ರದ ಪ್ರಾಯೋಗಿಕ ಕಾರ್ಯಾಚರಣೆ
ಪ್ರಮುಖ ಸುದ್ದಿ

ಬೆಂಗಳೂರಿನ ರಸ್ತೆ ಗುಂಡಿಗಳಿಗೆ ಜೆಟ್ ಪ್ಯಾಚರ್ ಟ್ರೀಟ್‌ಮೆಂಟ್: ₹2 ಕೋಟಿ ಯಂತ್ರದ ಪ್ರಾಯೋಗಿಕ ಕಾರ್ಯಾಚರಣೆ

September 12, 2026

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.