Bangalore : ರಾಜ್ಯದಲ್ಲಿ ಸಾಮಾಜಿಕ ಸಾಮರಸ್ಯ ಕದಡದಂತೆ ಪೊಲೀಸ್ ಅಧಿಕಾರಿಗಳು (No more moral policing) ಎಚ್ಚರಿಕೆ ವಹಿಸಬೇಕು. ಶಾಂತಿ ಮತ್ತು ಸುವ್ಯವಸ್ಥೆಯ ಬಗ್ಗೆ ಪರಿಸ್ಥಿತಿ ಹದಗೆಟ್ಟರೆ ಅಧಿಕಾರಿಗಳನ್ನು
ಹೊಣೆಗಾರರನ್ನಾಗಿ ಮಾಡಲಾಗುತ್ತದೆ. ಜತೆಗೆ ರಾಜ್ಯದೆಲ್ಲೆಡೆ ನೈತಿಕ ಪೊಲೀಸ್‌ಗಿರಿಗೆ ಕಡಿವಾಣ ಹಾಕಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ಪೊಲೀಸ್ ಇಲಾಖೆಗೆ ಸ್ಪಷ್ಟ ಸೂಚನೆ ನೀಡಿದ್ದಾರೆ.

ಇತ್ತೀಚೆಗಷ್ಟೇ ವಿಧಾನಸೌಧದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು, ಉಪಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್(DK Sivakumar), ಸಚಿವರ ಜತೆ ಸಭೆ ನಡೆಸಿದ ಅವರು, ಉತ್ತಮ ಬದಲಾವಣೆಯ ನಿರೀಕ್ಷೆಯಲ್ಲಿದ್ದರು.
ಸಾಮಾಜಿಕ ಮಾಧ್ಯಮದಲ್ಲಿ ಯಾವುದೇ ತೇಜೋವಧೆ ಮಾಡುವ, ಪ್ರಚೋದನಕಾರಿ ಪೋಸ್ಟ್ ಗಳ ವಿರುದ್ಧ ಕಠಿಣ ಕಾನೂನು ಕ್ರಮಗಳನ್ನು ತೆಗೆದುಕೊಳ್ಳುವುದು ಅತ್ಯಗತ್ಯ.
ಮಾದಕ ವ್ಯಸನವನ್ನು ತಡೆಗಟ್ಟುವುದು ಸಹ (No more moral policing) ಮುಖ್ಯವಾಗಿದೆ.
ಹೊಯ್ಸಳ ಗಸ್ತು ಪಡೆ ಜಾಗರೂಕರಾಗಿರಬೇಕು ಮತ್ತು ಅಪರಾಧಗಳನ್ನು ತಡೆಯಲು ಅಗತ್ಯ ಮುಂಜಾಗ್ರತೆ ವಹಿಸಬೇಕು ಎಂದು ಮುಖ್ಯಮಂತ್ರಿ ಸೂಚಿಸಿದರು. ರಾಜ್ಯದಲ್ಲಿನ ಯಾವುದೇ ರೀತಿಯ ನೈತಿಕ ಪೊಲೀಸ್‌ಗಿರಿಯನ್ನು ಸಂಪೂರ್ಣವಾಗಿ ತೊಲಗಿಸಬೇಕು ಎಂದು ಸಿದ್ದರಾಮಯ್ಯ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಇದನ್ನೂ ಓದಿ : https://vijayatimes.com/rss-banned-in-kerala-temple/
ತಕ್ಷಣದಿಂದಲೇ ಜಾರಿಯಾಗಿ, ನೈತಿಕ ಪೊಲೀಸ್‌ಗಿರಿಗೆ ಕಡಿವಾಣ ಹಾಕುತ್ತೇವೆ. ರಾಜ್ಯದಲ್ಲಿ ಸಮುದಾಯ ಆಧಾರಿತ ಪೊಲೀಸ್ ಆಡಳಿತವನ್ನು ಜಾರಿಗೊಳಿಸಬೇಕು. ದೂರುದಾರರನ್ನು ಗೌರವ ಮತ್ತು ದಯೆಯಿಂದ
ನಡೆಸಿಕೊಳ್ಳುವುದು ಮುಖ್ಯ. ಯಾವುದೇ ಉಲ್ಲಂಘನೆ ಅಥವಾ ಅಪರಾಧ ನಡೆದರೂ ಸಹ, ಪೊಲೀಸ್ ಮುಖ್ಯಸ್ಥರೊಂದಿಗೆ ಡಿಸಿಪಿ (DCP) ಜವಾಬ್ದಾರರಾಗಿರುತ್ತಾರೆ.
ಕಾನೂನು ಜಾರಿಯಲ್ಲಿ ಎಲ್ಲ ಜನರನ್ನು ಸಮಾನವಾಗಿ ಕಾಣಬೇಕು. ಯಾವುದೇ ಆಧಾರದಲ್ಲಿ ಧರ್ಮ ಅಥವಾ ಜಾತಿಯ ಆಧಾರದ ಮೇಲೆ ತಾರತಮ್ಯ ಮಾಡಬಾರದು ಎಂದು ಸ್ಪಷ್ಟಪಡಿಸಲಾಗಿದೆ ಎಂದು ಅವರು ಹೇಳಿದರು.
ಉತ್ತಮ ಕೆಲಸ ಮಾಡುವವರಿಗೆ ಶಹಬ್ಬಾಸ್ಗಿರಿ ನೀಡಲಾಗುವುದು.

ಯಾವುದೇ ಕರ್ತವ್ಯ ಲೋಪದ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಲಾಗುವುದು. ಹಾಗಾಗಿ ಯಾವುದೇ ಕಾರಣಕ್ಕೂ ಸೊಪ್ಪು ಹಾಕದೇ ದುಡಿಯಬೇಕು ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಎಂದರು.
ಇದಕ್ಕೂ ಮುನ್ನ ಸಭೆಯಲ್ಲಿ ಮಾತನಾಡಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ‘ಕಳೆದ ಸರ್ಕಾರದ ಅವಧಿಯಲ್ಲಿ ನಿಮ್ಮ ಇಲಾಖೆ ಕೆಲಸ ಮಾಡಿರುವುದು ನನ್ನ ಗಮನಕ್ಕೆ ಬಂದಿದೆ,
ಮಂಗಳೂರು, ವಿಜಯಪುರ, ಬಾಗಲಕೋಟೆಯಲ್ಲಿ ಕೇಸರಿ ಬಣ್ಣದ ಬಟ್ಟೆ ಹಾಕಿಕೊಂಡು ಇಲಾಖೆಗೆ ಅವಮಾನ ಮಾಡಿದ್ದೀರಿ, ಪೊಲೀಸ್ ಇಲಾಖೆಯನ್ನು ಕೇಸರೀಕರಣ ಮಾಡಲು ಹೊರಟಿದ್ದಿರಾ?
ನಮ್ಮ ಸರ್ಕಾರದಲ್ಲಿ ಇದಕ್ಕೆ ಅವಕಾಶವಿಲ್ಲ. ದೇಶದ ಬಗ್ಗೆ ಗೌರವವಿದ್ದರೆ ಧ್ವಜ ಹಾರಿಸಿ ಕೆಲಸ ಮಾಡಬೇಕು. ಜತೆಗೆ ಸರಕಾರಿ ಇಲಾಖೆಗಳನ್ನು ಜಾತಿಗೆ ದೂಡುವಂತಿಲ್ಲ.
ಇದನ್ನೂ ಓದಿ : https://vijayatimes.com/hansika-motwani-accused/
ಯಾವುದೇ ಒಬ್ಬ ಪಿಎಸ್‌ಐ (PSI) ಅಥವಾ ಎಡಿಜಿಪಿ (ADJP) ಹಗರಣ ನಡೆಸಿದರೆ ನಂತರ ಅದನ್ನು ಮುಚ್ಚಿ ಹಾಕಲು ಪೇಪರ್ ತಿದ್ದುತ್ತಾರೆ ಹಾಗಾದರೆ ಇಲಾಖೆ ಎಷ್ಟು ಹಾಳಾಗಿರಬೇಕು?
ಈ ವಿಷಯವನ್ನು ಬಯಲಿಗೆಳೆದ ಪ್ರಿಯಾಂಕ್ ಖರ್ಗೆಗೆ (Priyank Kharge) ಕಾಟ ಕೊಡುತ್ತೀರಿ… ಪೊಲೀಸ್ ಇಲಾಖೆಗೆ ಇದ್ದ ಹೆಸರನ್ನು ರಾಜ್ಯದಲ್ಲಿ ಹಾಳು ಮಾಡಿದ್ದೀರ.
ಪಾರದರ್ಶಕ ಆಡಳಿತ ಇನ್ನು ಮುಂದೆ ನಡೆಯಬೇಕು.ಪೊಲೀಸ್ ಇಲಾಖೆಯಿಂದಲೇ ಅದು ಶುರುವಾಗಬೇಕು ಎಂದು ಎಂದು ಹೇಳಿದರು.
ಒಬ್ಬ ಸಚಿವರು ಸಿದ್ದರಾಮಯ್ಯ (Siddaramaiah) ಅವರನ್ನು ಕೂಡ ಟಿಪ್ಪು ಸುಲ್ತಾನ್ (Tipu Sultan) ಅವರನ್ನು ಹೊಡೆದು ಹಾಕಿದಂತೆ ಹೊಡೆದು ಹಾಕಬೇಕು ಎಂದು ಕೊಲೆ ಮಾಡಲು ಕರೆ ನೀಡಿದ್ದರು.
ಯಾವುದೇ ಪ್ರಕರಣ ಅವರ ವಿರುದ್ಧ ಪ್ರಕರಣ ದಾಖಲಿಸಲಿಲ್ಲ. ಪೊಲೀಸರು ಕೆಲಸ ಮಾಡುವ ರೀತಿಯೇ ಇದು ? ಎಂದು ಡಿ ಕೆ ಶಿವಕುಮಾರ್ ಪ್ರಶ್ನಿಸಿದ್ದಾರೆ.
- ರಶ್ಮಿತಾ ಅನೀಶ್