• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಪ್ರಮುಖ ಸುದ್ದಿ

ಇನ್ಮುಂದೆ ಲಾಲ್‍ಬಾಗ್‌ನಲ್ಲಿ ಚಿತ್ರೀಕರಣಕ್ಕೆ ಬ್ರೇಕ್: ಪ್ರೀ-ವೆಡ್ಡಿಂಗ್, ರೀಲ್ಸ್ ಶೂಟ್ ನಿಯಂತ್ರಣಕ್ಕೆ ಮುಂದಾದ ಆಡಳಿತ ಮಂಡಳಿ

Teju Srinivas by Teju Srinivas
in ಪ್ರಮುಖ ಸುದ್ದಿ, ರಾಜ್ಯ, ವಿಜಯ ಟೈಮ್ಸ್‌
ಇನ್ಮುಂದೆ ಲಾಲ್‍ಬಾಗ್‌ನಲ್ಲಿ ಚಿತ್ರೀಕರಣಕ್ಕೆ ಬ್ರೇಕ್: ಪ್ರೀ-ವೆಡ್ಡಿಂಗ್, ರೀಲ್ಸ್ ಶೂಟ್ ನಿಯಂತ್ರಣಕ್ಕೆ ಮುಂದಾದ ಆಡಳಿತ ಮಂಡಳಿ
0
SHARES
30
VIEWS
Share on FacebookShare on Twitter
  • ಸಸ್ಯಕಾಶಿಯಲ್ಲಿ ರೀಲ್ಸ್‌ಗೆ (no photoshoot in lalbagh ) ರೆಡ್ ಸಿಗ್ನಲ್
  • ಮರಗಳ ಮೇಲೆ ಹತ್ತುವುದು, ಗಿಡಗಳಿಗೆ ಹಾನಿ ಮಾಡುವ ಚಿತ್ರೀಕರಣಕ್ಕೆ ಕಟ್ಟುನಿಟ್ಟಿನ ನಿಷೇಧ
  • ಚಿತ್ರೀಕರಣ ನಿಷೇಧಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ

Bengaluru: ಬೆಂಗಳೂರು ನಗರದ ಸಸ್ಯಕಾಶಿ ಎಂದೇ ಹೆಸರಾಗಿರುವ (no photoshoot in lalbagh) ಲಾಲ್‍ಬಾಗ್‌ ಬೋಟಾನಿಕಲ್ ಗಾರ್ಡನ್‌ಗೆ ಇನ್ನು ಮುಂದೆ ಭೇಟಿ ನೀಡುವವರಿಗೆ ಕೆಲವು ಹೊಸ ನಿಯಮಗಳು ಜಾರಿಯಾಗಲಿವೆ.

ಕಳೆದ ಕೆಲವು ತಿಂಗಳಿನಿಂದ ಲಾಲ್‍ಬಾಗ್‌ನಲ್ಲಿ ರೀಲ್ಸ್, ಪ್ರೀ-ವೆಡ್ಡಿಂಗ್ ಹಾಗೂ ಪೋಸ್ಟ್-ವೆಡ್ಡಿಂಗ್ ಶೂಟ್‌ಗಳ ಸಂಖ್ಯೆ ಅತಿಯಾಗಿ ಹೆಚ್ಚಾಗಿತ್ತು.

ಬೆಳಿಗ್ಗೆ ಯೋಗ ಮಾಡಲು ಬರುವ ಹಿರಿಯರು, ವಾಕಿಂಗ್‌ಗೆ ಬರುವ ನಾಗರಿಕರು, ಪ್ರವಾಸಿಗರು – ಇವರೆಲ್ಲರೂ ಈ ಛಾಯಾಗ್ರಹಣದ ಹಾವಳಿಯಿಂದಾಗಿ ತೊಂದರೆಗಳನ್ನು ಎದುರಿಸುತ್ತಿದ್ದಾರೆ.

no photoshoot in lalbagh

ಸಾರ್ವಜನಿಕ ಸ್ಥಳದಲ್ಲಿ ನಿಯಮ-ಶಿಸ್ತಿನ ಕೊರತೆ, ಫ್ಲ್ಯಾಶ್ ಲೈಟ್‌ಗಳಿಂದ ಪಕ್ಷಿಗಳಿಗೆ (no photoshoot in lalbagh) ಆಗುವ ತೊಂದರೆ, ಗಿಡ-ಮರಗಳ ಮೇಲೆ ಹತ್ತಿ ರೀಲ್ಸ್ ಮಾಡುವವರ ವರ್ತನೆ ಈ ಎಲ್ಲವು ಆಡಳಿತ ಕ್ರಮ ಕೈಗೊಳ್ಳುವಂತೆ ಮಾಡಿದೆ.

ಈಗಾಗಲೇ ಕಬ್ಬನ್ ಪಾರ್ಕ್‌ನಲ್ಲಿ ಚಿತ್ರೀಕರಣವನ್ನು ನಿಷೇಧಿಸಿದ ನಂತರ, ಈಗ ಲಾಲ್‍ಬಾಗ್‌ನಲ್ಲಿಯೂ ಇದೇ ಮಾದರಿಯ ಕ್ರಮ ಕೈಗೊಳ್ಳಲು ಆಡಳಿತ ಮಂಡಳಿ ಸಿದ್ಧತೆ ಆರಂಭಿಸಿದೆ.

ಒಂದು ವಾರದೊಳಗೆ ತಜ್ಞ ಸಮಿತಿ ಸಭೆ ಕೂಡಿ, ಪೂರ್ಣ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸುವ ಸಾಧ್ಯತೆ ಇದೆ.

ಲಾಲ್‍ಬಾಗ್‌ನಲ್ಲಿ ಹಲವು ಪ್ರದೇಶಗಳು ಪರಿಸರ ವೈವಿಧ್ಯತೆಯ ಕೇಂದ್ರಗಳಾಗಿವೆ. ವಿಶೇಷವಾಗಿ ಕಳೆದ ಕೆಲವು ತಿಂಗಳಿನಿಂದ ಹೆಜ್ಜೇನುಗಳು ಗೂಡು ಕಟ್ಟಿರುವುದು ಗಮನಕ್ಕೆ ಬಂದಿದೆ.

ಫ್ಲ್ಯಾಶ್ ಲೈಟ್‌ಗಳು ಹಾಕಿದಾಗ ಅವು ದಾಳಿ ಮಾಡುವ ಅಪಾಯ ಹೆಚ್ಚಾಗುತ್ತದೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ.

ಇವುಗಳ ಜೊತೆಗೆ, ಪ್ರೀ ವೆಡ್ಡಿಂಗ್‌ ಶೂಟ್ ವೇಳೆ ಕೆಲವು ದಂಪತಿಗಳು ಸಾರ್ವಜನಿಕ ಸ್ಥಳದಲ್ಲಿ ಶಿಸ್ತು ಪಾಲಿಸದೇ ವರ್ತಿಸುವುದು, ಪ್ರವಾಸಿಗರು ಮತ್ತು ಹಿರಿಯ ನಾಗರಿಕರಿಗೆ ಮುಜುಗರ ಉಂಟುಮಾಡುವುದು, ಗಿಡಗಳ ಮೇಲೆ ಕುಳಿತು ಫೋಟೋ ತೆಗೆಯುವ ಮೂಲಕ ಹಾನಿ ಮಾಡುವುದು ಈ ಅಸಮಂಜಸ ಘಟನೆಗಳು ದಿನನಿತ್ಯ ಹೆಚ್ಚುತ್ತಿವೆ.

ಇದೇ ಕಾರಣಕ್ಕೆ ಲಾಲ್‍ಬಾಗ್‌ನಲ್ಲಿ ಚಿತ್ರೀಕರಣಕ್ಕೆ ಸಂಪೂರ್ಣ ನಿಷೇಧ ಹೇರಲಾಗಬೇಕು ಎಂಬ ಅಭಿಪ್ರಾಯ ಆಡಳಿತದಲ್ಲಿ ಬಲವಾಗಿ ಕೇಳಿಬಂದಿದೆ.

ಇಲ್ಲಿನ ಪ್ರಕೃತಿಯನ್ನು ರಕ್ಷಿಸುವುದು ಪ್ರಥಮ ಕರ್ತವ್ಯ,ಎಂದು ಅಧಿಕಾರಿಗಳು ಹೇಳಿದ್ದಾರೆ.

ಇನ್ನು ಸಾಮಾನ್ಯ ಜನರಿಂದಲೂ ಈ ಕ್ರಮಕ್ಕೆ ಉತ್ತಮ ಪ್ರತಿಕ್ರಿಯೆ ಬರುತ್ತಿದ್ದು ನಾವು ನೆಮ್ಮದಿಗಾಗಿ ಪಾರ್ಕ್‌ಗೆ ಬರುತ್ತೇವೆ.

ಆದರೆ ರೀಲ್ಸ್ ಶೂಟ್ ಮಾಡುವವರಿಂದ ಪಾರ್ಕ್‌ ಕೂಡ ಸ್ಟುಡಿಯೋ ಆಗಿಬಿಟ್ಟಿತ್ತು ಎಂದು ವಾಕಿಂಗ್‌ಗೆ ಬರುವವರು ಹೇಳುತ್ತಾರೆ.

ಪ್ರವಾಸಿಗರು ಸಹ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮಕ್ಕಳೊಡನೆ ಬರುವ ಕುಟುಂಬಗಳು, ಯೋಗ ಮಾಡಲು ಬರುವ ಗುಂಪುಗಳು ಎಲ್ಲರೂ ಈ ಕ್ರಮಕ್ಕೆ ಸ್ವಾಗತ ಸೂಚಿಸಿದ್ದಾರೆ.

ಕೆಲವು ವರ್ಷಗಳಿಂದ ನಗರ ಪಾರ್ಕ್‌ಗಳಲ್ಲಿ ಸಾಮಾಜಿಕ ಮಾಧ್ಯಮಕ್ಕಾಗಿ ಮಾಡುವ ಅತಿಯಾದ ಚಿತ್ರೀಕರಣ ಸಮಸ್ಯೆಯಾಗಿದ್ದು, ಇದು ಪರಿಸರ ಸಂರಕ್ಷಣೆಗೂ ಹಾನಿ ಆಗುತ್ತಿದೆ ಎಂದು ಪರಿಸರ ತಜ್ಞರು ಹೇಳಿದ್ದಾರೆ.

ಹಾಗಾಗಿ ಲಾಲ್‍ಬಾಗ್ ತೆಗೆದುಕೊಂಡಿರುವ ಈ ನಿಷೇಧ ಕ್ರಮವನ್ನು ಅವರು ಸಮರ್ಥಿಸಿದ್ದಾರೆ. ಪಾರ್ಕ್‌ಗಳು ಕೇವಲ ರೀಲ್ಸ್ ಮಾಡುವ ಸ್ಥಳಗಳಲ್ಲ; ಅವು ಜೀವ ವೈವಿಧ್ಯತೆಯ ತಾಣಗಳು, ಹಾಗಾಗಿ ನಗರದ ಇತರ ಪಾರ್ಕ್‌ಗಳಲ್ಲಿಯೂ ಇದೇ ರೀತಿಯ ನಿಯಮಗಳನ್ನು ಜಾರಿಗೆ ತರಲು BBMP ಮತ್ತು ಅರಣ್ಯ ಇಲಾಖೆ ಚರ್ಚೆ ನಡೆಸುತ್ತಿದೆ.

ಮರಗಳ ಮೇಲೆ ಹತ್ತುವ, ಗಿಡಗಳೊಂದಿಗೆ ಕಾನ್ಸೆಪ್ಟ್ ವೀಡಿಯೋ ಮಾಡುವ, ಸಾರ್ವಜನಿಕರಿಗೆ ಅಡ್ಡಿಯಾಗುವ ರೀತಿಯಲ್ಲಿ ವರ್ತಿಸುವವರಿಗೆ ಕಟ್ಟುನಿಟ್ಟಾಗಿ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.

ಲಾಲ್‌ಬಾಗ್‌ನ ಶಾಂತತೆ ಮತ್ತು ಪರಿಸರ ಸಂರಕ್ಷಣೆ ನಗರಕ್ಕೇ ಆಭರಣವಾದ್ದರಿಂದ, ಈ ಹೊಸ ನಿಯಮಗಳನ್ನು ಜನರು ಪಾಲಿಸಬೇಕು ಎಂದು ಆಡಳಿತ ಮನವಿ ಮಾಡಿದೆ.

ಇದನ್ನು ಓದಿ : ಪ್ರಾಥಮಿಕ ಶಿಕ್ಷಣ ಬಲಪಡಿಸುವತ್ತ ಸರ್ಕಾರದ ಮಹತ್ವದ ಹೆಜ್ಜೆ: ರಾಜ್ಯದ 5000 ಅಂಗನವಾಡಿಗಳಲ್ಲಿ LKG, UKG ತರಗತಿಗಳು ಆರಂಭ
Tags: lalbaghshooting

Related News

ಬೆಂಗಳೂರು ಜನತೆಗೆ ಜಲಮಂಡಳಿಯಿಂದ ಗುಡ್ ನ್ಯೂಸ್: ಜನವರಿಯಿಂದ ಒನ್ ಟೈಮ್ ಸೆಟಲ್‌ಮೆಂಟ್ ಜಾರಿ, ಫೈನ್ ಸಂಪೂರ್ಣ ಮನ್ನಾ
ಪ್ರಮುಖ ಸುದ್ದಿ

ಬೆಂಗಳೂರು ಜನತೆಗೆ ಜಲಮಂಡಳಿಯಿಂದ ಗುಡ್ ನ್ಯೂಸ್: ಜನವರಿಯಿಂದ ಒನ್ ಟೈಮ್ ಸೆಟಲ್‌ಮೆಂಟ್ ಜಾರಿ, ಫೈನ್ ಸಂಪೂರ್ಣ ಮನ್ನಾ

December 15, 2025
ಕೋಲ್ಕತ್ತಾ ಸ್ಟೇಡಿಯಂನಲ್ಲಿ ಮೆಸ್ಸಿ ಫ್ಯಾನ್ಸ್ ದಾಂಧಲೆ:ಮೆಸ್ಸಿ ಮೇನಿಯಾ ಅವ್ಯವಸ್ಥೆಯಿಂದ ಅಂತ್ಯ
ದೇಶ-ವಿದೇಶ

ಕೋಲ್ಕತ್ತಾ ಸ್ಟೇಡಿಯಂನಲ್ಲಿ ಮೆಸ್ಸಿ ಫ್ಯಾನ್ಸ್ ದಾಂಧಲೆ:ಮೆಸ್ಸಿ ಮೇನಿಯಾ ಅವ್ಯವಸ್ಥೆಯಿಂದ ಅಂತ್ಯ

December 13, 2025
ಪ್ರತಿ ತಿಂಗಳು ಹೂಡಿಕೆ ಮಾಡುವ SIP ನ ಅಸಲಿ ಸತ್ಯ
ಪ್ರಮುಖ ಸುದ್ದಿ

ಪ್ರತಿ ತಿಂಗಳು ಹೂಡಿಕೆ ಮಾಡುವ SIP ನ ಅಸಲಿ ಸತ್ಯ

December 13, 2025
2027ರ ಜನಗಣತಿಗೆ ಕೇಂದ್ರದಿಂದ ಹಸಿರು ನಿಶಾನೆ: ಎರಡು ಹಂತಗಳಲ್ಲಿ ಜನಗಣತಿ, ಮೊಬೈಲ್ ಆಪ್ ಮೂಲಕ ಡೇಟಾ ಸಂಗ್ರಹ
ದೇಶ-ವಿದೇಶ

2027ರ ಜನಗಣತಿಗೆ ಕೇಂದ್ರದಿಂದ ಹಸಿರು ನಿಶಾನೆ: ಎರಡು ಹಂತಗಳಲ್ಲಿ ಜನಗಣತಿ, ಮೊಬೈಲ್ ಆಪ್ ಮೂಲಕ ಡೇಟಾ ಸಂಗ್ರಹ

December 13, 2025

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.