- ಸಾರಿಗೆ ನೌಕರರ ಮುಷ್ಕರವನ್ನು ಒಂದು ದಿನ ಮುಂದೂಡಿದ ನ್ಯಾಯಾಲಯ
- ನಾಳೆ ಹೈಕೋರ್ಟ್ ಅಂಗಳದಲ್ಲಿ ಸಾರಿಗೆ ನೌಕರರ ಭವಿಷ್ಯ (No transport workers strike tomorrow)
- ನಾಳೆ ಪ್ರಾಯಾಣಿಕರಿಗೆ ಬಸ್ ಲಭ್ಯ
Bengaluru: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ನಾಳೆ (ಆ.05) ಮುಷ್ಕರ ನಡೆಸಲು ಸಜ್ಜಾಗಿದ್ದ ಸಾರಿಗೆ ನೌಕರರಿಗೆ(transport employees) ಹೈಕೋರ್ಟ್(High Court) ವಿಭಾಗೀಯ ಪೀಠ ಶಾಕ್ ನೀಡಿದೆ.
ಈ ಸಂಬಂಧ ದಾಖಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ಕುರಿತು ಹೈಕೋರ್ಟ್ ಪೀಠದ ನ್ಯಾಯಮೂರ್ತಿಗಳು ವಿಚಾರಣೆ ನಡೆಸಿದ್ದು, ಮುಷ್ಕರವನ್ನು ಒಂದು ದಿನ ಮುಂದೂಡುವಂತೆ ಸೂಚನೆ ನೀಡಿದ್ದಾರೆ.
ಸಾರಿಗೆ ನೌಕರರು ತಮ್ಮ ಬೇಡಿಕೆಗಳನ್ನು ಈಡೇರಿಸದ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಮುಷ್ಕರಕ್ಕೆ ಕರೆ ನೀಡಿದ್ದರು.
ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ(CM Siddaramaiah) ಅವರು ಇಂದು (ಆ.04) ಸಂಧಾನ ಸಭೆ ನಡೆಸಿದರೂ ಯಾವುದೇ ಗತಿ ಕಂಡುಬಂದಿಲ್ಲ.

ಇದರ ಹಿನ್ನೆಲೆಯಲ್ಲಿ ನೌಕರರು ನಾಳೆ ಮುಷ್ಕರ ಮಾಡುವ ನಿರ್ಧಾರ ಪ್ರಕಟಿಸಿದ್ದರು. ಆದರೆ, ಈ ಮುಷ್ಕರದ ವಿರುದ್ಧ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದ್ದು, ಹೈಕೋರ್ಟ್ ವೀಕ್ಷಣೆ ಮುಂದಾಗಿದೆ.
ಇಂದು ಹೈಕೋರ್ಟ್ ಪೀಠದಲ್ಲಿದ್ದ ನ್ಯಾಯಮೂರ್ತಿ ಕೆ.ಎಸ್. ಮುದಗಲ್(K.S. Mudgal) ಹಾಗೂ ಎಂ.ಜಿ.ಎಸ್. ಕಮಲ್(M.G.S. Kamal) ಅವರ ಜಂಟಿ ಪೀಠವು ರಾಜ್ಯ ಸರ್ಕಾರ(State Govt),
ಸಾರಿಗೆ ನಿಗಮಗಳು ಹಾಗೂ ಜಂಟಿ ಕ್ರಿಯಾ ಸಮಿತಿಗೆ ನೋಟಿಸ್ ಜಾರಿ ಮಾಡಿ, ಮುಷ್ಕರವನ್ನು ತಾತ್ಕಾಲಿಕವಾಗಿ ಮುಂದೂಡಬೇಕೆಂದು ಸೂಚನೆ ನೀಡಿದೆ.
ಪಿಐಎಲ್ ವಿಚಾರಣೆಗೆ ಮುಖ್ಯ ನ್ಯಾಯಮೂರ್ತಿಗಳ ಪೀಠದಲ್ಲಿ (ಆ.05) ಮತ್ತೆ ವಿಚಾರಣೆ ನಡೆಯಲಿದೆ.ಅರ್ಜಿದಾರರ ಪರ ವಕೀಲೆ ದೀಕ್ಷಾ ಅಮೃತೇಶ್(Deeksha Amritesh) ವಾದಿಸುತ್ತಾ,
ಮುಷ್ಕರದಿಂದ ಸಾಮಾನ್ಯ ಜನರ ಸಂಚಾರಕ್ಕೆ ತೊಂದರೆಯಾಗಲಿದ್ದು, ಶಾಲಾ ಮಕ್ಕಳಿಂದ ಹಿಡಿದು ಕೆಲಸಕ್ಕೆ ಹೋಗುವವರಿಗೂ ತೀವ್ರ ಅಡಚಣೆ ಉಂಟಾಗಲಿದೆ ಎಂದು ಕೋರಿದ್ದಾರೆ.
ಮುಷ್ಕರದಿಂದಾಗಿ ಸರಕಾರದ ಮೇಲೆ 2200 ಕೋಟಿ ರೂಪಾಯಿ ಹಣದ ಹೆಚ್ಚುವರಿ ಹೊರೆ ಬೀಳಲಿದೆ ಎಂದು ಅವರು ತಿಳಿಸಿದರು. ಜುಲೈ 28 ಮತ್ತು ಆಗಸ್ಟ್ 2ರಂದು ನಡೆದ ಮಾತುಕತೆಗೆ ಯಾವುದೇ ಪರಿಹಾರ ಕಂಡುಬಂದಿಲ್ಲ, ಆದರೆ ಇನ್ನೊಂದು ಸಭೆ ಆಗಸ್ಟ್ 7ಕ್ಕೆ ನಿಗದಿಯಾಗಿರುವುದನ್ನು ಪೀಠಕ್ಕೆ ವಿವರಿಸಿದರು.
ಇನ್ನು ಕಾರ್ಮಿಕ ಸಂಘಟನೆಗಳ(Labor organization) ಪ್ರತಿಕ್ರಿಯೆ ತೀವ್ರವಾಗಿತ್ತು .“ಇನ್ನೂ ಹೈಕೋರ್ಟ್ ಆದೇಶದ ನಕಲು ನಮಗೆ ತಲುಪಿಲ್ಲ.
ಅದು ಬಂದ ಬಳಿಕ ಮುಂದಿನ ಹೆಜ್ಜೆ ಬಗ್ಗೆ ನಿರ್ಧಾರ ಕೈಗೊಳ್ಳುತ್ತೇವೆ” ಎಂದಿರುವ ಸಮಿತಿ ಅಧ್ಯಕ್ಷ ಅನಂತ ಸುಬ್ಬರಾವ್(Anantha Subbarao), “ಹೈಕೋರ್ಟ್ ಸರ್ಕಾರಕ್ಕೆ ನಮ್ಮ ಬೇಡಿಕೆ ಈಡೇರಿಸಲು ಸೂಚನೆ ನೀಡಿದ್ರೆ ಇನ್ನೂ ಸಕಾರಾತ್ಮಕವಾಗುತ್ತಿತ್ತು.
ಒಂದು ದಿನ ಮುಷ್ಕರ ಮುಂದೂಡಿದರೂ ನಂತರದ ದಿನದಲ್ಲಿ ಮತ್ತೆ ಪ್ರತಿಭಟನೆ ಮಾಡಿದರೆ ಬೇರೆನೂ ಬದಲಾವಣೆ ಆಗಲ್ಲ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಇದನ್ನು ಓದಿ : ಆಗಸ್ಟ್ 5ರಿಂದ ಸಾರಿಗೆ ನೌಕರರ ಮುಷ್ಕರ: ಸರ್ಕಾರದ ನಿರ್ಲಕ್ಷ್ಯದ ವಿರುದ್ಧ ಹೋರಾಟ
ಈಗ ಎಲ್ಲರ ಕಣ್ಣೂ ಮಂಗಳವಾರದ (ಆ.05) ವಿಚಾರಣೆಯ ಮೇಲೆ ನೆಟ್ಟಿದೆ. ಸರ್ಕಾರ ಹಾಗೂ ಕಾರ್ಮಿಕ ಸಂಘಟನೆಗಳು ಯಾವುದೇ ಹತ್ತಿರದ ನಿರ್ಧಾರಕ್ಕೆ ಬಗ್ಗಬಹುದೇ ಎಂಬ ನಿರೀಕ್ಷೆಯಿದೆ. ಆದರೆ ತಾತ್ಕಾಲಿಕವಾಗಿ ನಾಳೆಯ ಮುಷ್ಕರ ನಡೆಯುವುದಿಲ್ಲ ಎನ್ನುವುದು ಖಾತ್ರಿಯಾಗಿದೆ. (No transport workers strike tomorrow)